ಪ್ರತಿಯೊಂದು ಊರನಲ್ಲೂ ದೇವಸ್ಥಾನ ಇರುತ್ತದೆ ಆ ದೇವರ ಪೂಜೆಯನ್ನು ಮೊದಲು ಮಾಡುವವರು ಅರ್ಚಕರು. ಮೊದಲು ನದಿ ಅಥವಾ ಹೊಳೆಯಲ್ಲಿ ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಹಾಕಿಕೊಂಡು ದೇವಸ್ಥಾನದ ಬಾಗಿಲನ್ನು ತೆಗೆದು ಮೊದಲ ದೇವರ ದರ್ಶನ ಮಾಡುತ್ತಾರೆ ನಂತರ ದೇವಸ್ಥಾನಕ್ಕೆ ಬಂದ ಭಕ್ತರು ದರ್ಶನ ಮಾಡುತ್ತಾರೆ.
ತಿರುಪತಿ ವೆಂಕಟೇಶ್ವರನ ದೇವಸ್ಥಾನದಲ್ಲಿ ಒಬ್ಬರಲ್ಲ ಇಬ್ಬರಲ್ಲ ನೂರಾರು ಜನರು ಅರ್ಚಕರು ಇರುತ್ತಾರೆ ಆದರೆ ಪ್ರತಿದಿನ ಮೊಟ್ಟಮೊದಲು ದೇವರ ದರ್ಶನ ಮಾಡುವ ಭಾಗ್ಯ ಅವರಿಗೆ ಇಲ್ಲ. ಭಕ್ತಾದಿಗಳು ಕೆಲವರು ಮೆಟ್ಟಿಲನ್ನು ಹತ್ತಿಕೊಂಡು ಹೋದರೆ ಇನ್ನು ಕೆಲವರು ತಮ್ಮ ವಾಹನಗಳಯಲ್ಲಿ ಹೋಗುತ್ತಾರೆ ಇನ್ನು ಕೆಲವರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಿಮ್ಮಪ್ಪನ ದರ್ಶನ ಮಾಡುತ್ತಾರೆ ಅವರು ಹೇಗೆ ಹೋದರು ಕೂಡ ದೇವರ ದರ್ಶನ ಪಡೆಯುವುದು 10ರಿಂದ 15 ಸೆಕೆಂಡುಗಳು ಮಾತ್ರ ಅಷ್ಟು ಮಾತ್ರ ನೀವು ದೇವರನ್ನು ಕಣ್ತುಂಬ ನೋಡಿಕೊಳ್ಳಲು ಸಾಧ್ಯವಾಗುತ್ತದೆ.
ಮೊಟ್ಟ ಮೊದಲು ತಿರುಪತಿ ತಿಮ್ಮಪ್ಪನ ದರ್ಶನ ಮಾಡುವವರು ಯಾರು ಗೊತ್ತಾ.?
ತಿರುಪತಿ ತಿರುಮಲ ವೆಂಕಟೇಶ್ವರ ಸನ್ನಿಧಾನದಲ್ಲಿ ನಿತ್ಯ ಪೂಜೆ ಮಾಡುವ ಅರ್ಚಕರು ದೇವರ ದರ್ಶನವನ್ನು ಮೊಟ್ಟಮೊದಲು ಮಾಡುವುದಿಲ್ಲ ತಿರುಪತಿ ತಿಮ್ಮಪ್ಪನ ನಿತ್ಯ ಮೊಟ್ಟ ಮೊದಲ ದರ್ಶನ ಮಾಡುವವರು ಸನ್ನಿಧಿ ಗೊಲ್ಲರು ಎನ್ನುವ ಜನಾಂಗ ಅಂದರೆ ತಿರುಪತಿಯಲ್ಲಿ ಸನ್ನಿಧಿ ಗೊಲ್ಲ ಎಂಬ ಕುಟುಂಬ ಇದೆ ಅವರೇ ಪ್ರತಿನಿತ್ಯ ಶ್ರೀನಿವಾಸನ ಮೊಟ್ಟ ಮೊದಲ ದರ್ಶನ ಮಾಡುವವರು
ಆದರೆ ಇವರೇ ಏಕೆ ಮೊದಲು ದರ್ಶನವನ್ನು ಮಾಡಬೇಕು ಎಂದು ನೋಡುವುದಾದರೆ ಈ ದೇವಸ್ಥಾನದಲ್ಲಿ ಮೊದಲಿನಿಂದಲೂ ಕೆಲವು ಪದ್ಧತಿಗಳು ಇವೆ ಅವುಗಳ ಪ್ರಕಾರವೇ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ನಡೆಯುತ್ತದೆ. ತಿರುಪತಿಯಲ್ಲಿ ಇರುವಂತಹ ಒಂದೊಂದು ಜನಾಂಗದವರು ಒಂದೊಂದು ಕಾರ್ಯಗಳನ್ನು ವಹಿಸಿಕೊಂಡಿರುತ್ತಾರೆ ಕೆಲವರು ಪೂಜಾ ಕಾರ್ಯಕ್ರಮಗಳನ್ನು ಮಾಡುತ್ತಾರೆ, ಕೆಲವರು ಪ್ರಸಾದ ವಿತರಣೆ ಮಾಡುತ್ತಾರೆ, ಕೆಲವರು ತಿರುಪತಿ ಲಡ್ಡುಗಳನ್ನು ಮಾಡುತ್ತಾರೆ, ಇನ್ನು ಕೆಲವರು ತಿರುಪತಿ ಅಡುಗೆಗಳನ್ನು ಮಾಡುತ್ತಾರೆ ಹೀಗೆ ಒಂದೊಂದು ಕೆಲಸವನ್ನು ಒಬ್ಬೊಬ್ಬರು ವಹಿಸಿಕೊಂಡಿದ್ದಾರೆ.
ಇದನ್ನು ಓದಿ:-ಸಂಜೆಯ ಸಮಯದಲ್ಲಿ ಉಗರನ್ನು ಏಕೆ ಕತ್ತರಿಸಬಾರದು ಗೊತ್ತಾ.? ಸತ್ಯಾಂಶ ತಿಳಿದರೆ ನಿಜಕ್ಕೂ ಶಾ’ಕ್ ಆಗುತ್ತೀರಾ.!
ಸನ್ನಿದಿ ಗೊಲ್ಲ ಕುಟುಂಬದ ಕೆಲಸ ಬೆಳಗ್ಗೆ ಗರ್ಭಗುಡಿಯ ಬಾಗಿಲು ತೆಗೆಯುವುದು ಹಾಗೆ ರಾತ್ರಿ ಆದನು ಮುಚ್ಚುವುದು ಹೀಗಾಗಿ ಈ ಕುಟುಂಬ ಮೊಟ್ಟಮೊದಲ ಬಾರಿಗೆ ತಿಮ್ಮಪ್ಪನ ದರ್ಶನವನ್ನು ಮಾಡುತ್ತಾರೆ ಹಾಗೂ ಕೊನೆಯ ದರ್ಶನವನ್ನು ಕೂಡ ಮಾಡುವ ಭಾಗ್ಯ ಅವರಿಗೆ ಮಾತ್ರ ಇದೆ ಅದು ಸಹ ಅವರು ಬಾಗಿಲು ತೆಗೆಯಲು ಕೆಲವೊಂದು ಕಟಿನುಟ್ಟು ಪದ್ಧತಿಗಳಿವೆ
ಮೊದಲು ತಿಮ್ಮಪ್ಪನ ಪೂಜೆ ಮಾಡುವ ಅರ್ಚಕರು ಸನ್ನಿಧಿ ಗೊಲ್ಲರ ಮನೆ ಬಾಗಿಲಿಗೆ ಹೋಗಿ ಅವರನ್ನು ಆಹ್ವಾನಿಸುತ್ತಾರೆ ಆನಂತರ ಕುಟುಂಬದ ವ್ಯಕ್ತಿ ಒಬ್ಬ ಮಡಿ ತೊಟ್ಟು ದೇವರ ಬಾಗಿಲ ಬಳಿ ಹೋಗುತ್ತಾರೆ ಆಗ ಅರ್ಚಕರು ಬಾಗಿಲ ಎರಡು ಬಳಿ ನಿಂತು ಸುಪ್ರಭಾತ ಹೇಳುತ್ತಾರೆ ಆಗ ಗೊಲ್ಲನ್ನು ಗರ್ಭಗುಡಿಯ ಬಾಗಿಲನ್ನು ತೆಗೆದು ದೇವರ ದರ್ಶನ ಮೊದಲು ಪಡೆಯುತ್ತಾನೆ.
ಇದನ್ನು ಓದಿ:- ದೇಹದಲ್ಲಿ ಕ್ಯಾನ್ಸರ್ ಹೇಗೆ ಉತ್ಪತ್ತಿಯಾಗುತ್ತದೆ ಗೊತ್ತಾ.? ನಿಜಕ್ಕೂ ಶಾಕ್ ಆಗ್ತೀರಾ.
ಆನಂತರ ಅರ್ಚಕರನ್ನು ಆಹ್ವಾನಿಸಿ ದೇವರ ದರ್ಶನವನ್ನು ಪಡೆಯಲು ಹೇಳುತ್ತಾನೆ ಹೀಗೆ ಮೊಟ್ಟಮೊದಲ ದರ್ಶನ ಪಡೆಯುವ ಸನ್ನಿಧಿಗೊಲ್ಲ ರಾತ್ರಿ ಮಹಾ ಮಂಗಳಾರತಿಯ ನಂತರ ಬಾಗಿಲು ಮುಚ್ಚುವುದು ಕೂಡ ಈ ಗೊಲ್ಲ ಕುಟುಂಬದವರು ಈ ಒಂದು ಆಚಾರ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಶ್ರೀ ವೆಂಕಟೇಶ್ವರ ಮೂರ್ತಿಯನ್ನು ಒಂದು ಅದ್ಭುತವಾದ ಗರ್ಭಗುಡಿಯಲ್ಲಿ ಇಡಲಾಗಿದೆ ಈ ವಿಗ್ರಹಕ್ಕೆ ಒಂದು ದೊಡ್ಡ ಪಚ್ಚೆ ಹೊಂದಿರುವ ಚಿನ್ನದ ಕಿರೀಟವನ್ನು ಧರಿಸುತ್ತಾರೆ ವಿಶೇಷ ಸಂದರ್ಭಗಳಲ್ಲಿ ಈ ಚಿನ್ನದ ಕಿರೀಟವನ್ನು ವಜ್ರದ ಕಿರೀಟಕ್ಕೆ ಬದಲಾಯಿಸಲಾಗುತ್ತದೆ ತಿರುಪತಿ ತಿಮ್ಮಪ್ಪನ ಹಣೆಯಲ್ಲಿ ಸಂಸ್ಕರಿಸ್ಕರಿಸಿದ ಕರ್ಪೂರ ಎಳೆಯಲಾಗಿದೆ ಎರಡು ಬಿಳಿ ತುಣುಕುಗಳ ನಡುವೆ ಕೇಸರಿಯಿಂದ ಮಾಡಿದ ಕಸ್ತೂರಿ ತಿಲಕವನ್ನು ಕೂಡ ಹಾಕಲಾಗುತ್ತದೆ.