ಕುಂಭಕರ್ಣ ರಾಮಾಯಣದಲ್ಲಿ ಬರುವಂತಹ ಒಂದು ಪ್ರಮುಖ ಪಾತ್ರ ಈ ಕುಂಭಕರ್ಣ ವಿಷವ ಮತ್ತು ಕೈಕಸಿ ಎಂಬ ತಂದೆ ತಾಯಿಗೆ ಜನಿಸಿದನು ಜೊತೆಗೆ ಇವನು ರಾವಣನ ತಮ್ಮ ಕೂಡ ಹೌದು ಈ ಕುಂಭಕರ್ಣ ಹುಟ್ಟಿದಾಗಿನಿಂದ ಅವನ ಹಸಿನವನ್ನು ತಾಳಲಾಗದೆ ಕಣ್ಣಿಗೆ ಕಂಡ ಪ್ರಾಣಿಗಳು ಮತ್ತು ಮನುಷ್ಯರನ್ನು ತಿಂದು ಹಾಕುತ್ತಿದ್ದನು. ಕುಂಭಕರ್ಣನಿಂದ ಹೇಗಾದರೂ ಪಾರು ಮಾಡು ಎಂದು ಸಕಲಜೀವಿಗಳು ಇಂದ್ರದೇವನನ್ನು ಕೇಳಿಕೊಳ್ಳುತ್ತಾರೆ ಆಗ ಇಂದ್ರ ದೇವ ಕುಂಭಕರ್ಣನ ಮುಂದೆ ಪ್ರತ್ಯಕ್ಷವಾಗಿ ತನ್ನ ವಜ್ರಾಯುಧದಿಂದ ಕುಂಭಕರ್ಣನಿಗೆ ಹೊಡೆಯುತ್ತಾರೆ.
ಇದರಿಂದ ಕೋಪಗೊಂಡ ಕುಂಭಕರ್ಣ ಇಂದ್ರನ ವಾಹನವಾದ ಐರಾವತದ ಒಂದು ದಂತವನ್ನು ಮುರಿದು ಆದ್ದರಿಂದ ಇಂದ್ರನನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾನೆ. ತನ್ನ ಅಣ್ಣ ರಾವಣ ಹೇಗೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಮಾಡಿ ಅನೇಕ ವರಗಳನ್ನು ಪಡೆಯುತ್ತಾನೋ ಹಾಗೆ ಕುಂಭಕರ್ಣನೂ ಕೂಡ ಬ್ರಹ್ಮನನ್ನು ಒಲಿಸಿಕೊಂಡು ಬ್ರಹ್ಮನಿಂದ ವರಗಳನ್ನು ಪಡೆಯಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಘೋರವಾದ ತಪಸ್ಸನ್ನು ಮಾಡುತ್ತಾನೆ.
ಸಾಧಾರಣವಾಗಿ ಯಾವುದೇ ವರವಿಲ್ಲದೆ ಕುಂಭ ಕರ್ಣನನ್ನು ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ ಇನ್ನು ಬ್ರಹ್ಮದೇವನಿಂದ ವರವನ್ನು ಪಡೆದರೆ ಕುಂಭಕರ್ಣನನ್ನು ಸೋಲಿಸುವುದು ಅಸಾಧ್ಯ ಎಂದು ಅರಿತಂತಹ ಇಂದ್ರದೇವ ಬ್ರಹ್ಮದೇವನನ್ನು ವರ ನೀಡದಂತೆ ಕೇಳುತ್ತಾನೆ ಆದರೆ ಬ್ರಹ್ಮದೇವ ಇದಕ್ಕೆ ಒಪ್ಪದೇ ಇಲ್ಲ ಅವನು ನನಗಾಗಿ ಘೋರ ತಪಸ್ಸನ್ನು ಮಾಡಿದ್ದಾನೆ ಅವನು ಯಾವ ವರವನ್ನು ಕೇಳಿದರು ನಾನು ಕೊಡಲೇಬೇಕು ಆದರೆ ಅವನ ಶಕ್ತಿಯುಳ್ಳ ವರವನ್ನು ಕೇಳದೆ ಇರುವ ಹಾಗೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಹೇಳಿ ಕುಂಭಕರ್ಣನ ಮುಂದೆ ಪ್ರತ್ಯಕ್ಷನಾಗುತ್ತಾನೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ನಮ್ಮ Facebook ಪೇಜ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ನಿನ್ನ ವರವನ್ನು ಕೇಳು ಎಂದು ಕುಂಭಕರ್ಣನಿಗೆ ಹೇಳುತ್ತಾನೆ ಆಗ ಸರಸ್ವತಿ ಕುಂಭಕರ್ಣನ ಬಾಯಲ್ಲಿ ಕುಳಿತು ಅವನ ನಾಲಿಗೆಯನ್ನು ತೊದಲುವಂತೆ ಮಾಡುತ್ತಾಳೆ, ಕುಂಭಕರ್ಣ ಬ್ರಹ್ಮನನ್ನು ಇಂದ್ರಾಸನವನ್ನು ಅಂದರೆ ಇಂದ್ರನ ಸಿಂಹಾಸನವನ್ನು ಕೇಳಲು ಇಚ್ಛೆಪಟ್ಟಿರುತ್ತಾನೆ ಆದರೆ ಅದರ ಬದಲು ನಿದ್ರಾಸನವನ್ನು ಅಂದರೆ ಮಲಗುವ ಹಾಸಿಗೆಯನ್ನು ಕೇಳುವ ಹಾಗೆ ನಾಲಿಗೆಯನ್ನು ಬದಲಿಸುತ್ತಾಳೆ.
ನಿರ್ದೈವತ್ವವನ್ನ ಅಂದರೆ ದೇವತೆಗಳ ವಿನಾಶವನ್ನು ಕೇಳಲು ಇಚ್ಛೆಪಟ್ಟಿರುತ್ತಾನೆ. ಅದರ ಬದಲಾಗಿ ನಿದ್ರಾವತ್ವವನ್ನು ಅಂದರೆ ನಿದ್ರೆಯನ್ನು ಕೇಳುವ ಹಾಗೆ ಅವನ ನಾಲಿಗೆಯನ್ನು ಸರಸ್ವತಿ ಬದಲಿಸುತ್ತಾಳೆ. ಹೀಗೆ ಕುಂಭಕರ್ಣ ಕೇಳಿದಂತಹ ವರವನ್ನು ಕೊಟ್ಟಂತಹ ಬ್ರಹ್ಮ ತಕ್ಷಣವೇ ಮಾಯವಾಗಿ ಬಿಡುತ್ತಾರೆ ಇದರಿಂದ ಗೊಂದಲಕೊಂಡ ಕುಂಭಕರ್ಣ ನಡೆದಿದ್ದನ್ನೆಲ್ಲ ರಾವಣಗೆ ಹೇಳಿದಾಗ ರಾವಣ ಬ್ರಹ್ಮದೇವನನ್ನು ಪ್ರಾರ್ಥಿಸಿ ಕುಂಭಕರ್ಣನನ್ನು ಜೀವನಪೂರ್ತಿ ನಿದ್ದೆ ಮಾಡುವುದನ್ನು ಕಡಿತಗೊಳಿಸಬೇಕು ಎಂದು ಹೇಳಿದಾಗ ಬ್ರಹ್ಮದೇವನು ಈ ರೀತಿಯಾಗಿ ಹೇಳುತ್ತಾರೆ.
ಕುಂಭಕರ್ಣನೂ ವರ್ಷದಲ್ಲಿ ಆರು ತಿಂಗಳು ನಿದ್ರೆ ಮಾಡುತ್ತಾನೆ ಆದರೆ ಅವನಿಗೆ ಹಸಿವು ತೃಪ್ತಿಗೊಂಡ ತಕ್ಷಣ ಅವನು ಮಲಗಿಬಿಡುತ್ತಾನೆ ಎಂದು ವರವನ್ನು ಕೊಡುತ್ತಾರೆ. ಈ ರೀತಿಯಾಗಿ ಅವರು ಕೇಳಿದ ವರದಿಂದಲೇ ಕುಂಭಕರ್ಣ ಹೆಚ್ಚಾಗಿ ನಿದ್ರೆ ಮಾಡಲು ಕಾರಣವಾಗುತ್ತದೆ ಕುಂಭಕರ್ಣ ಮಲಗಿದ್ದಾಗ ಅವನನ್ನು ನಿದ್ರೆಯಿಂದ ಎಚ್ಚರಗೊಳಿಸಲು ಎಷ್ಟೆಲ್ಲ ಹರಸಾಹಸ ಮಾಡಿದ್ದರು ಅಷ್ಟು ಪರಾಕ್ರಮಿಯಾದ ಕುಂಭಕರ್ಣ ಯಾವ ರೀತಿ ಮ’ ರ’ ಣ’ ವನ್ನು ಹೊಂದುತ್ತಾನೆ ಎಂದು ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ.
ರಾವಣ ಸೀತೆಯನ್ನು ಅಪಹರಣ ಮಾಡಿದ್ದಕ್ಕಾಗಿ ರಾಮ ಲಕ್ಷ್ಮಣರು ಮತ್ತು ಇಡೀ ಕಪಿ ಸೈನ್ಯವೇ ರಾವಣನ ವಿರುದ್ಧ ಯುದ್ಧಕ್ಕೆ ನಿಂತಿರುತ್ತದೆ ಹೀಗಿರುವಾಗ ಯುದ್ಧ ಶುರುವಾಗುತ್ತದೆ ವಾನರ ಸೈನ್ಯದ ಯುದ್ಧ ಬಲವನ್ನು ನೋಡಿ ಹಿಂಜರಿದ ರಾವಣ ಬೇರೆ ದಾರಿ ಇಲ್ಲ ಎಂದು ತನ್ನ ತಮ್ಮನಾದ ಕುಂಭಕರ್ಣನನ್ನು ನಿದ್ರೆಯಿಂದ ಎಚ್ಚರಗೊಳಿಸಿ ಎಂದು ತನ್ನ ಸೈನಿಕರಿಗೆ ಆದೇಶ ಮಾಡುತ್ತಾನೆ ನಂತರ ಆ ಸೈನಿಕರೆಲ್ಲ ಕುಂಭಕರ್ಣನನ್ನು ಎಚ್ಚಗರಿ ಗೊಳಿಸಬೇಕು ಎಂದು ಕೋಟೆ ಬಳಿ ಹೋಗುತ್ತಾರೆ ಕುಂಭಕರ್ಣ ತುಂಬಾ ಗಾಢವಾದ ನಿದ್ರೆಯಲ್ಲಿ ಜಾರಿರುತ್ತಾನೆ.
ನಿದ್ರೆಯಿಂದ ಅವನನ್ನು ಎಚ್ಚರಗೊಳಿಸಲು ತುಂಬಾ ಜೋರಾಗಿ ಶಬ್ದಗಳನ್ನು ಮಾಡುತ್ತಾರೆ ಆದರೆ ಕುಂಭಕರ್ಣ ಉಸಿರು ಬಿಡುತ್ತಿದ್ದ ರಭಸಕ್ಕೆ ಸೈನಿಕರು ತೂರಿಕೊಂಡು ಹೋಗುತ್ತಿದ್ದರು ಅಷ್ಟೇ ಅಲ್ಲದೆ ಅವನ ಮೇಲೆ ಹತ್ತಿ ಆಯುಧಗಳನ್ನು ಬಳಸಿ ಅವನಿಗೆ ಚುಚ್ಚುತ್ತಿದ್ದರು. ರಾವಣ ರಾಮನೊಂದಿಗೆ ಯುದ್ಧ ಶುರು ಮಾಡಿದ್ದಾನೆ ಎಂದು ತಿಳಿದಾಗ ಕುಂಭಕರ್ಣ ತಾವು ಮಾಡುತ್ತಿರುವುದು ತಪ್ಪು ಎಂದು ಹೇಳಿ ರಾಮ ವಿಷ್ಣುವಿನ ಅವತಾರ ಸೀತಾ ಮಾತೆಯು ಲಕ್ಷ್ಮಿ ಅವತಾರ ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಾನೆ ಆದರೆ ರಾವಣ ಒಪ್ಪದ ಕಾರಣ ಅಣ್ಣನ ಪರವಾಗಿ ಯುದ್ಧಕ್ಕೆ ಬರುತ್ತಾನೆ, ವಾನರ ಸೈನ್ಯವೆನ್ನೆಲ್ಲಾ ಕುಂಭಕರ್ಣ ನಾಶ ಮಾಡುತ್ತಾನೆ ಕೊನೆಯದಾಗಿ ಶ್ರೀ ರಾಮನು ಕುಂಭಕರ್ಣನ ಎರಡು ಕೈಗಳು ಹಾಗೆ ಶಿರವನ್ನು ವಾಯು ಅಸ್ತ್ರದಿಂದ ಕತ್ತರಿಸುತ್ತಾನೆ ನಂತರ ಕುಂಭಕರ್ಣ ರಾಮನ ದೈವತ್ವವನ್ನು ಮೆಚ್ಚಿಕೊಂಡು ತಾನು ಮಾಡಿರುವುದು ತಪ್ಪು ಎಂದು ರಾಮರಲ್ಲಿ ಕ್ಷಮೆಯಾಚಿಸುತ್ತಾನೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ನಮ್ಮ Facebook ಪೇಜ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |