Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅರ್ಜುನ್ ಸರ್ಜಾ ಪುತ್ರಿ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಗೊತ್ತ.?

Posted on October 31, 2023 By Admin No Comments on ಅರ್ಜುನ್ ಸರ್ಜಾ ಪುತ್ರಿ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಗೊತ್ತ.?

 

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ (Action king Arjun Sarja) ಕನ್ನಡ ಮತ್ತು ತಮಿಳು ಚಿತ್ರರಂಗದ ಹೆಸರಾಂತ ನಟ. ಹಲವು ದಶಕಗಳಿಂದ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಅವರ ಪುತ್ರಿ ಕೂಡ ತಂದೆಯ ಹಾದಿಯನ್ನೇ ತುಳಿದಿದ್ದಾರೆ. ಕಲಾವಿದರ ಕುಟುಂಬಧ ಕುಡಿ ಐಶ್ವರ್ ಸರ್ಜಾ (Aishwarya Sarja ) ಕೂಡ ಇದೇ ವೃತ್ತಿಯನ್ನು ಆಯ್ದುಕೊಂಡಿದ್ದಾರೆ.

ತಮಿಳುನಲ್ಲಿ ವಿಶಾಲ್ ಅವರ ಜೊತೆ ಸಿನಿಮಾ ಮಾಡಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಪ್ರೇಮ ಬರಹ ಸಿನಿಮಾ (Premabaraha movie) ಕೂಡ ಸ್ಯಾಂಡಲ್ವುಡ್ ಗೂ ಎಂಟ್ರಿ ಕೊಟ್ಟರು. ಅಭಿನಯವನ್ನು ರಕ್ತಕತವಾಗಿ ಪಡೆದಿರುವ ಇವರು ಯಾವುದೇ ಇಂಗ್ಲಿಷ್ ಹೀರೋಯಿನ್ ಗೂ ಕಮ್ಮಿ ಇರದಂತೆ ಗ್ಲಾಮರ್ ಹೊಂದಿದ್ದಾರೆ. ಸಿನಿಮಾ ಅವಕಾಶಗಳು ಸಾಕಷ್ಟು ಬರುತ್ತಿದ್ದರೂ ಕೂಡ ಅಳೆದು ತೂಗಿ ಪಾತ್ರವನ್ನು ಆಯ್ದುಕೊಳ್ಳುತ್ತಿದ್ದಾರೆ.

ಐಶ್ವರ್ಯ ಸರ್ಜಾ ಅವರ ಸಿನಿಮಾ ವಿಚಾರದಂತೆ ಅವರ ಮದುವೆ ವಿಚಾರ ಕೂಡ ಸಾಕಷ್ಟು ಸುದ್ದಿಯಲ್ಲಿತ್ತು. ಕಳೆದ ವರ್ಷದಿಂದ ಅರ್ಜುನ್ ಸರ್ಜಾ ಪುತ್ರಿಯ ಪ್ರೀತಿ ವಿಚಾರದ ಬಗ್ಗೆ ಗಾಸಿಪ್ ಹರಿದಾಡುತ್ತಿತ್ತು. ತಮಿಳು ನಟರೊಬ್ಬರ ಜೊತೆ ಐಶ್ವರ್ಯ ಪ್ರೀತಿಯಲ್ಲಿದ್ದಾರೆ ಎಂದು ಗಾಳಿ ಸುದ್ದಿ ಹರಡಿತ್ತು.

ತನ್ನ ಪ್ರೀತಿ ಬಗ್ಗೆ ಎಲ್ಲೂ ಕೂಡ ಹೇಳಿಕೊಳ್ಳದ ನಟಿ ಐಶ್ವರ್ಯ ದಿಢೀರ್ ಎಂದು ಎಂಗೇಜ್ಮೆಂಟ್ (Aishwarya engagement with Thabi Ramaih son Umapathy) ಮಾಡಿಕೊಂಡು ಎಲ್ಲರಿಗೂ ಶಾ’ಕ್ ನೀಡಿದ್ದಾರೆ. ಕಾಲಿವುಡ್ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯ ನಿಶ್ಚಿತಾರ್ಥ ನಡೆದಿದೆ. ಅರ್ಜುನ್ ಕುಟುಂಬ ತಮಿಳುನಾಡಿನಲ್ಲಿ ನಿರ್ಮಿಸಿರುವ ಆಂಜನೇಯನ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ.

ಆದರೆ ಈ ಕಾರ್ಯಕ್ರಮಕ್ಕೆ ಕುಟುಂಬದ ಸದಸ್ಯರು ಹಾಗೂ ಕೆಲ ಸ್ನೇಹಿತರಷ್ಟೇ ಭಾಗಿಯಾಗಿದ್ದಾರೆ. ಐಶ್ವರ್ಯ ಸರ್ಜಾ ಎಂಗೇಜ್ಮೆಂಟ್ ಫೋಟೋ ಹಾಗೂ ವಿಡಿಯೋಗಳ ವೈರಲ್ ಆಗುತ್ತಿದ್ದಂತೆ ಕನ್ನಡಿಗರಿಗೆ ಅರ್ಜುನ್ ಸರ್ಜಾ ರ ಭಾವಿ ಅಳಿಯನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿದೆ. ಉಮಾಪತಿ ತಂಬಿ ರಾಮಯ್ಯ ಅವರ ಕೊನೆಯ ಪುತ್ರರಾಗಿದ್ದಾರೆ.

ತಂಬಿ ರಾಮಯ್ಯ ಅವರು ಸಹ ಹಾಸ್ಯನಟನಾಗಿ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದು, ಕೆಲ ಚಿತ್ರಗಳಿಗೆ ನಿರ್ದೇಶನ ಕೂಡ ಮಾಡಿದ್ದಾರೆ ಮತ್ತು ಸ್ಕ್ರಿಪ್ ರೈಟರ್ ಆಗಿದ್ದಾರೆ. ತಂದೆಯಂತೆ ಉಮಾಪತಿ ರಾಮಯ್ಯ ಕೂಡ ಇಂಡಸ್ಟ್ರಿಯಲ್ಲೇ ಭವಿಷ್ಯ ಕಂಡುಕೊಳ್ಳಲು ಇಚ್ಛಿಸಿ ಈಗಾಗಲೇ ನಾಲ್ಕು ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ನಿರೂಪಿಸಿದ್ದಾರೆ.

ಡ್ಯಾನ್ಸಿಂಗ್ ಹಾಗೂ ಸ್ಟಂಟ್ ಗಳಲ್ಲಿ ವಿಶೇಷ ಪ್ರಯೋಗಗಳನ್ನು ಮಾಡುವ ಇವರು ಹಲವು ಹಾಡುಗಳಿಗೆ ಕೊರಿಯೋಗ್ರಾಫ್ ಕೂಡ ಮಾಡಿದ್ದಾರೆ. ಪ್ರೀತಿ ಎಲ್ಲಿ ಶುರುವಾಯಿತು ಎಂದು ನೋಡುವುದಾದರೆ ಅಡ್ವೆಂಚರಸ್ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಳ್ಳುತ್ತಿದ್ದ ಉಮಾಪತಿ ರಾಮಯ್ಯ ಅರ್ಜುನ್ ಸರ್ಜಾ ಅವರೇ ನಡೆಸಿಕೊಡುತ್ತಿದ್ದ ಸರ್ವೈವರ್ ಎನ್ನುವ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

ಆ ಕಾರ್ಯಕ್ರಮದ ತಮ್ಮ ಪರ್ಫಾರ್ಮೆನ್ಸ್ ಗೆ ಶಭಾಷ್ ಗಿರಿ ಕೂಡ ಪಡೆದಿದ್ದರು ಆಗಿನಿಂದಲೇ ಅರ್ಜುನ್ ಸರ್ಜಾ ಕುಟುಂಬದೊಂದಿಗೆ ಕನೆಕ್ಟ್ ಆಗಿದ್ದ ಇವರು ನಿಧಾನವಾಗಿ ಐಶ್ವರ್ಯ ಅವರ ಪ್ರೀತಿಯಲ್ಲಿ ಬಿದ್ದರು. ಅಂತಿಮವಾಗಿ ಎರಡು ಕುಟುಂಬದ ಒಪ್ಪಿಗೆ ಮೇಲೆ ನಿಶ್ಚಿತಾರ್ಥ ಕೂಡ ಮಾಡಿಕೊಂಡು ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಬಲವಾದ ಮೂಲಗಳ ಮಾಹಿತಿ ಪ್ರಕಾರ ಈ ಮದುವೆ ಬಹಳ ಅದ್ದೂರಿಯಾಗಿ ನಡೆಯುತ್ತಿದ್ದು ದಕ್ಷಿಣ ಸಿನಿಮಾ ಇಂಡಸ್ಟ್ರಿಯ ಖ್ಯಾತರು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ. ಇದೆ ಜನವರಿ ತಿಂಗಳಲ್ಲಿ ಜೋಡಿ ಮದುವೆ ಆಗಲಿದೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ ಶುಭವಾಗಲಿ ಎಂದು ನಾವು ಹರಸೋಣ.

cinema news

Post navigation

Previous Post: ಶಿವಣ್ಣ ಹಾಕೋ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.!
Next Post: ಒಂದ್ ಕಡೆ ಇಸ್ಲಾಂ ನವರು ಲವ್ ಜಿಹಾದ್‌ಗೆ ಉತ್ತೇಜನ ಕೊಡುತ್ತಿದ್ದರೆ, ಇತ್ತ ಮಾತ್ರ ಖಾನ್ ಗಳ ತಂಗಿಯರು ಮಾತ್ರ ಹಿಂದುಗಳನ್ನ ಮದ್ವೆಯಾಗಿ ಸನಾತನ ಧರ್ಮ ಒಪ್ಪಿಕೊಂಡಿದ್ದಾರೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme