80 ಮತ್ತು 90ರ ದಶಕದಲ್ಲಿ ಕನ್ನಡದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಟಿ ಮಾಧವಿ ಕನ್ನಡಿಗರೆಲ್ಲರಿಗೂ ಚಿರಪಚಿತರು. ಅಣ್ಣಾವಾರೊಂದಿಗೆ ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಜೀವನ ಚೈತ್ರ, ಒಡಹುಟ್ಟಿದವರು ಹೀಗೆ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಹಿಟ್ ಆದ ಈ ನಟಿ ಮೂಲತಃ ಆಂದ್ರ ಪ್ರದೇಶದವರು.
ಕನ್ನಡದಲ್ಲಿ ಇವರ ಮತ್ತು ರಾಜಕುಮಾರ್ ಅವರ ಕಾಂಬಿನೇಷನ್ ಸೂಪರ್ ಹಿಟ್ ಆಗುತ್ತಿದ್ದ ರೀತಿ ತೆಲುಗಿನಲ್ಲಿ ಕೂಡ ನಟ ಚಿರಂಜೀವಿ ಹಾಗೂ ಮಾಧವಿ ಅವರ ಕೆಮಿಸ್ಟ್ರಿ ತೆರೆ ಮೇಲೆ ಸಕ್ಕತ್ತಾಗಿ ವರ್ಕ್ ಆಗುತ್ತಿತ್ತು. ಇಂಟ್ಲೋ ರಾಮಯ್ಯ ವೀಡಿಲೋ ಕೃಷ್ಣಯ್ಯ, ಕೊತ್ತಲ ರಾಯುಡು, ಪ್ರಣಾಮ್ ಖರಿದು, ಕುಕ್ಕ ಕಟುಕು ಪದಲ್ ದಭಾಯಿ, ಖೈದಿ ಮುಂತಾದ ಹಿಟ್ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು.
ಮಾತೃದೇವೋಭವ ಸಿನಿಮಾದ ಮಾಧವಿ ಅಭಿನಯ ಜನ ಮಾನಸದಲ್ಲಿ ಸದಾ ಶಾಶ್ವತ ತೆಲುಗಿನಲ್ಲಿ ಬಿಗ್ ಬಾಸ್ ಎನ್ನುವ ಸಿನಿಮಾದಲ್ಲಿ ನಟಿಸಿದ ನಟಿ ಇದ್ದಕ್ಕಿದ್ದಂತೆ ಬಣ್ಣದ ಲೋಕದಿಂದ ದೂರ ಉಳಿದು ಬಿಟ್ಟರು. ಆರಂಭದಲ್ಲಿ ಅವರಿಗೆ ಅವಕಾಶಗಳು ಕಡಿಮೆ ಅದಕ್ಕಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದಾದರೂ ಇದು ಅಪ್ಪಟ ಸುಳ್ಳು ಎನ್ನಬಹುದೇ.
ಯಾಕೆಂದರೆ ಬಾಲ್ಯದಿಂದಲೇ ಭರತನಾಟ್ಯ ಹಾಗೂ ನಟನೆಯನ್ನು ಖರಗತ ಮಾಡಿಕೊಂಡಿದ್ದ ಈಕೆಯ ಕಲೆ ಹಾಗೂ ಸೌಂದರ್ಯಕ್ಕೆ ಸಾಲು ಸಾಲು ಅವಕಾಶಗಳು ಮನೆ ಬಾಗಿಲಿಗೆ ಹುಡಿಕಿ ಬರುತ್ತಿತ್ತು. ಆದರೆ ನಟಿಯು ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಇಂಡಸ್ಟ್ರಿ ಯಿಂದ ದೂರಾಗಿ ವೈಯಕ್ತಿಕ ಜೀವನದತ್ತ ಮುಖ ಮಾಡಿದ್ದರು. ಸಾಮಾನ್ಯವಾಗಿ ಈ ರೀತಿ ಖ್ಯಾತ ಸೆಲೆಬ್ರಿಟಿಗಳ ಲೈಫ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ.
ಅದರಲ್ಲೂ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾಗಿರುವ ಈ ದಿನದಲ್ಲಿ ಅದಕ್ಕಾಗಿ ಸರ್ಚ್ ಹಾಗೂ ರಿಸರ್ಚ್ ಗಳು ಹೆಚ್ಚಾಗಿಯೇ ನಡೆಯುತ್ತಿರುತ್ತವೆ. ಕೊನೆಗೂ ಅಭಿಮಾನಿಗಳಿಗೆ ಮಾಧವಿಯವರ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿನಿಮಾ ಇಂಡಸ್ಟ್ರಿ ತೊರೆದ ನಂತರ ನಟಿ ಜೀವನಕ್ಕಾಗಿ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅನೇಕರಿಗೆ ಇತ್ತು ಆದರೆ ಈಗ ಆಕೆ ಸಾವಿರಾರು ಕೋಟಿಯ ಒಡತಿಯಾಗಿದ್ದಾರೆ.
ನಟಿ ಭಾರತ ಮತ್ತು ಜರ್ಮನ್ ಮೂಲದ ಬಿಸಿನೆಸ್ ಮ್ಯಾನ್ ರಾಲ್ಫ್ ಶರ್ಮಾ ರೊಂದಿಗೆ ವಿವಾಹವಾದರು. ಆರಂಭದಲ್ಲಿ ಉದ್ಯಮಿ ಆಗಿದ್ದ ಇವರು ಈಗ ಈ ಕ್ಷೇತ್ರದಲ್ಲೀಗ ಯಶಸ್ವಿ ಪುರುಷನಾಗಿದ್ದಾರೆ. ನಟಿ ಮಾಧವಿ ಅವರು ಕೂಡ ಕಂಪನಿಯನ್ನು ಕಟ್ಟಿ ಬೆಳೆಸಲು ಹಗಲಿರುಳು ಶ್ರಮ ಪಟ್ಟಿರುವ ಕಾರಣ ಇಂದು ಸಾವಿರಾರು ಕುಟುಂಬಗಳಿಗೆ ದಂಪತಿಗಳು ಉದ್ಯೋಗದಾತರಾಗಿದ್ದಾರೆ.
ಸದ್ಯಕ್ಕೆ ಅಮೆರಿಕದಲ್ಲಿ ನೆಲೆಸಿರುವ ದಂಪತಿಗಳಿಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇವರ ಫ್ಯಾಮಿಲಿ ಫೋಟೋಗಳು ವೈರಲ್ ಆಗುತ್ತಿದ್ದು ವಿದೇಶದಲ್ಲಿದ್ದರು ಕೂಡ ನಟಿ ಭಾರತೀಯ ಸಂಸ್ಕೃತಿಯನ್ನು ಮರೆತಿಲ್ಲ ಎನ್ನುವುದನ್ನು ಅವು ತೋರಿಸುತ್ತವೆ.
ತನ್ನ 13ನೇ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಆ ಕಾಲದ ಹೆಸರಾಂತ ನಾಯಕರೊಂದಿಗೆ ತೆರೆ ಹಂಚಿಕೊಂಡು ಅಪಾರ ಅಭಿಮಾನಿ ಬಳಗವನ್ನು ಪಡೆದಿದ್ದ ಮೋಹಕ ಕಣ್ಣಿನ ಈ ಚೆಲುವೆ ಈಗ ವೈಯಕ್ತಿಕ ಜೀವನದಲ್ಲೂ ಕೂಡ ಯಶಸ್ವಿ ಮಹಿಳೆಯಾಗಿದ್ದಾರೆ. ನಟಿಯ ಈ ಕಥೆ ಇನ್ನಷ್ಟು ಮಹಿಳೆಯರಿಗೆ ಸ್ಪೂರ್ತಿಯಾಗಲಿ ಎನ್ನುವುದಷ್ಟೇ ನಮ್ಮ ಈ ಅಂಕಣದ ಆಶಯ, ನೀವು ಕೂಡ ನಟಿ ಮಾಧವಿ ಅಭಿಮಾನಿಯಾಗಿದ್ದರೆ ಅವರ ಯಾವ ಸಿನಿಮಾ ಇಷ್ಟ ಎಂದು ಕಾಮೆಂಟ್ ಮಾಡಿ…