ಕನ್ನಡದಲ್ಲಿ ಮತ್ತೊಂದು ಗ್ರಾಮೀಣ ಸೊಗಡಿನ ಸಿನಿಮಾ ಈ ವಾರ ತೆರೆ ಕಂಡಿದೆ. ಹತ್ತಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಟಗರು ಪಲ್ಯ ಸಿನಿಮಾ (Tagaru palya) ಇದೇ 27ರಂದು ರಿಲೀಸ್ ಆಗಿ ಕನ್ನಡಿಗರನ್ನು ನಕ್ಕು ನಗಿಸುತ್ತಿದೆ. ಡಾಲಿ ಧನಂಜಯ್ ಅವರ ಪ್ರೊಡಕ್ಷನ್ ನಿಂದ (Dolly Pictures) ಮೂರನೇ ಸಿನಿಮಾವಾಗಿ ತಯಾರಾಗಿರುವ ಈ ಸಿನಿಮಾದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ನಾಯಕ ನಟಿಯಾಗಿ (Prem daughter Amrutha launch) ಕನ್ನಡ ಸಿನಿಮಾ ಇಂಡಸ್ಟಿಗೆ ಲಾಂಚ್ ಆಗಿದ್ದಾರೆ.
ಹಾಗೂ ಇದೇ ಮೊದಲ ಬಾರಿಗೆ ಹಾಸ್ಯನಟ ನಾಗಭೂಷಣ್ (Naghabushan) ಅವರು ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಟಗರು ಪಲ್ಯ ಹೆಸರೇ ಹೇಳುವಂತೆ ಸಿನಿಮಾ ಪೂರ್ತಿ ಟಗರಿನ ಹಿಂದೆ ಸುತ್ತಲಿದ್ದು ರಂಗಾಯಣ ರಘು, ತಾರ ಅನುರಾಧ, ಚಿತ್ರ ಶೆಣೈ, ವಾಸುಕಿ ವೈಭವ್ ಮುಂತಾದ ಕಲಾವಿದರೂ ಕೂಡ ಸಿನಿಮಾದಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ.
ಈ ಸಿನಿಮಾ ಸಂಬಂಧಿತ ಪ್ರಮೋಷನ್ ಗಾಗಿ ಸುದ್ದಿ ವಾಹಿನಿ ಯೊಂದಕ್ಕೆ ಸಂದರ್ಶನ ಕೊಟ್ಟ ನಾಯಕ ನಟ ನಾಗಭೂಷಣ್ ಅವರು ಸಿನಿಮಾಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಇದರೊಂದಿಗೆ ದರ್ಶನ್ ಅವರು ಟ್ರೈಲರ್ ರಿಲೀಸ್ ಮಾಡಿದ್ದು (trailer released by Darshan) ಸಿನಿಮಾಗೆ ಬಹುದೊಡ್ಡ ಶಕ್ತಿಯಾಯಿತು ಎಂದು ಆ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.
ಟಗರು ಪಲ್ಯ ಸಿನಿಮಾ ಈ ಮೊದಲೇ ಹೇಳಿದಂತೆ ಒಂದು ಹಳ್ಳಿ ಭಾಗದಲ್ಲಿ ನಡೆಯುವ ಜನಜೀವನವನ್ನು ಆಧರಿಸಿದ ಹಾಗೂ ಹಳ್ಳಿ ಭಾಗದ ಸಮಸ್ಯೆಯನ್ನು ತೋರಿಸುವ ಸಿನಿಮಾ ಆಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ರೈತ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ಸಿನಿಮಾ ಕೂಡ ಈ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುತ್ತದೆ ಎನ್ನುವುದನ್ನು ನಾಯಕ ನಟ ಬಿಟ್ಟುಕೊಟ್ಟಿದ್ದಾರೆ. ಆದರೆ ಸಿನಿಮಾದಲ್ಲಿ ಸಂದೇಶದ ಜೊತೆ ಬರಪೂರ ನಗುವಿನ ಅಲೆಯೂ ಇದೆ ಅದೇ ಸಿನಿಮಾದ ಪ್ರಮುಖ ಆಕರ್ಷಣೆ ಎಂದು ಹೇಳಿದ್ದಾರೆ. ಸಿನಿಮಾದ ಟ್ರೈಲರ್ ರಿಲೀಸ್ ಮಾಡಲು ದರ್ಶನ್ ಅವರು ಒಪ್ಪಿಕೊಂಡಿದ್ದರ ಬಗ್ಗೆ ಕೇಳಿದ್ದಕ್ಕಾಗಿ ಧನಂಜಯ್ ಅವರು ದರ್ಶನ್ ಅವರಿಗೆ ಈ ಬಗ್ಗೆ ಕೇಳಿಕೊಂಡಾಗ.
ಮೊದಲು ದರ್ಶನ್ ಅವರು ಟೈಲರ್ ನೋಡಿದರು ಅವರಿಗೂ ಇಷ್ಟವಾಯಿತು ಹಾಗಾಗಿ ಪ್ರಮೋಷನ್ ಗೆ ಒಪ್ಪಿಕೊಂಡರು. ನಮ್ಮ ಸಿನಿಮಾ ಹತ್ತು ತಿಂಗಳು ಪ್ರಮೋಷನ್ ಮಾಡುವುದನ್ನು ದರ್ಶನ್ ಸರ್ ಒಂದೇ ದಿನದಲ್ಲಿ ತಲುಪಿಸಿದ್ದಾರೆ, ಸಿನಿಮಾ ತಯಾರಿಸುವುದು ಕ’ಷ್ಟ ಎನಿಸುವುದಿಲ್ಲ ಜನರಿಗೆ ತಲುಪಿಸುವುದು ಅಷ್ಟು ಸುಲಭವಲ್ಲ. ನಿಮ್ಮ ಚೆನ್ನಾಗಿ ಮಾಡಿ ರೀಚ್ ಮಾಡಲು ಆಗದೆ ಹೋದರೆ ಅನೇಕ ಭರವಸೆಗಳು ಮುಳುಗಿ ಹೋಗುತ್ತವೆ.
ಯಾಕೆಂದರೆ ಈ ಸಿನಿಮಾ ಗೆದ್ದರೆ ನಮ್ಮಲ್ಲಿ ಇಂಥದೇ ಅನೇಕ ಕಥೆಗಳಿವೆ ಅವುಗಳ ಪ್ರಯೋಗವು ಕೂಡ ನಡೆಯುತ್ತದೆ, ಹಾಗಾಗಿ ನಮ್ಮ ಪ್ರಯತ್ನವನ್ನು ಒಪ್ಪಿಕೊಂಡು ಮೆಚ್ಚಿಕೊಂಡು ಒಬ್ಬ ದೊಡ್ಡ ಸ್ಟಾರ್ ಪ್ರಮೋಟ್ ಮಾಡಿದಾಗ ನಮಗೂ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಈ ವಿಚಾರದಲ್ಲಿ ದರ್ಶನ್ ಸರ್ ಇಂದ ನಮ್ಮ ಸಿನಿಮಾಗೆ ಹೊಸ ಕಿಕ್ ಸಿಕ್ಕಿತ್ತು ಅಲ್ಲಿಯವರೆಗೂ ಕೂಡ ಏನೋ ಕಡಿಮೆಯಾಗಿದೆ ಎನ್ನುವ ಭಯ ಕಾಡುತ್ತಿತ್ತು ಈಗ ಸಮಾಧಾನವಾಗಿದೆ ಎಂದಿದ್ದಾರೆ.
ಊರನ್ನು ಬಿಟ್ಟು ದೂರದ ಊರುಗಳಿಗೆ ಬಂದು ಅನೇಕರು ಕಷ್ಟಪಡುತ್ತಿದ್ದಾರೆ, ಈ ಸಿನಿಮಾ ಅವರಿಗೂ ಕೂಡ ಕನೆಕ್ಟ್ ಆಗುತ್ತದೆ. ಚಿತ್ರ ನೋಡಿದ ಮೇಲೆ ಪ್ರತಿಯೊಬ್ಬರಿಗೂ ಕೂಡ ಸಿನಿಮಾದಲ್ಲಿ ಒಂದು ಹಾಡಿನ ಸಾಲಿನಂತೆ ಒಂದು ಸಲ ನಮ್ಮೂರಿಗೆ ಬರೋಣ ಎಂದು ಎನಿಸುತ್ತದೆ ಎಂದು ಸಿನಿಮಾ ಬಗ್ಗೆ ಮಾತನಾಡಿ ಅದರ ಜೊತೆಗೆ ಡಾಲಿ ಧನಂಜಯ್ ಅವರ ಜೊತೆಗಿನ ಫ್ರೆಂಡ್ ಶಿಪ್ ಹಾಗೂ ಇಷ್ಟು ವರ್ಷದ ಸಿನಿಮಾ ಜರ್ನಿಯ ಏಳು ಬೀಳುಗಳ ನೆನಪಿನ ಬುತ್ತಿ ಬಿಚ್ಚಿದ್ದಾರೆ.