ನಮಸ್ಕಾರ ಸ್ನೇಹಿತರೇ ಇಂದಿನ ವಿಶೇಷವಾದ ಲೇಖನಕ್ಕೆ ಸ್ವಾಗತ ಸಾಮಾನ್ಯವಾಗಿ ನಮ್ಮ ದೇಶದ ಜನರು ಅಥವಾ ಪ್ರಪಂಚದ ಯಾವುದೇ ಜನರು ಕೂಡ ತಮ್ಮ ಹಣವನ್ನು ಕೂಡಿಸಲು ಬ್ಯಾಂಕ್ ನ ಮೊರೆ ಹೋಗುತ್ತಾರೆ. ಇನ್ನು ಕೆಲವರು ಅವರು ಇಟ್ಟ ಹಣಕ್ಕೆ ಬಡ್ಡಿ ಸಿಗಲೆಂದು ಹಾಗೂ ಅವರ ಹಣಕ್ಕೆ ರಕ್ಷಣೆ ಸಿಗಲಿ ಎಂದು ಕೂಡ ಬ್ಯಾಂಕ್ ನಲ್ಲಿ ಇಟ್ಟು ಬಿಡುತ್ತಾರೆ. ಸದ್ಯ ಈಗ ನಮ್ಮ ದೇಶದಲ್ಲಿ ನಮ್ಮ ದೇಶದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಗ್ರಾಹಕರಿಗಾಗಿ ವಿಶೇಷವಾದ ಕೊಡುಗೆಯೊಂದನ್ನು ನೀಡಿದೆ.
ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಆರ್ ಬಿ ಐ ರವರು ರೆಪೋ ದರವನ್ನು ಹೆಚ್ಚಿಸಿದೆ. ರೆಪೋ ದರ ಹೆಚ್ಚಳ ಆದಂತೆ ಹಲವು ಬ್ಯಾಂಕ್‌ಗಳು ತಮ್ಮ ನಿಶ್ಚಿತ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದೆ. ಇದರಲ್ಲಿ ಸರ್ಕಾರದ ಬ್ಯಾಂಕ್ ಗಳು ಅಲ್ಲದೆ ಖಾಸಗಿ ವಲಯದ ಬ್ಯಾಂಕ್ ಗಳು ಸೇರಿದೆ ಎಂದು ಹೇಳಬಹುದು. ಸದ್ಯ ಎಸ್ ಬಿ ಐ ರವರು ತನ್ನ ಗ್ರಾಹಕರಿಗೆ ಹಣವನ್ನು ಹೂಡಲು ವಿಶೇಷವಾದ ದರದಲ್ಲಿ ಕೊಡುಗೆಯನ್ನು ನೀಡಿರುತ್ತಾರೆ.
ತನ್ನ ಗ್ರಾಹಕರು ಏಳು ದಿನದಿಂದ 10 ವರ್ಷಗಳವರೆಗೂ ತಮ್ಮ ಹಣವನ್ನು ಎಸ್‌ಬಿಐ ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಇನ್ನು ವಿಶೇಷ ಎಂದರೆ ಎಸ್ ಬಿ ಐ ರವರು ಆರ್ ಬಿ ಐ ನವರ ರೆಪೊ ದರ ಹೆಚ್ಚಳ ಮಾಡುವುದರಿಂದ ಫಿಕ್ಸೆಡ್ ಡಿಪಾಸಿಟ್ ನ ಬಡ್ಡಿ ದರವನ್ನು ಹೆಚ್ಚು ಮಾಡಿದೆ. ಇನ್ನು ಗ್ರಾಹಕರು ಇಲ್ಲಿ ಹೂಡಿಕೆ ಮಾಡುವುದರಿಂದ ಅವರಿಗೆ ಖಂಡಿತವಾಗಿಯೂ ಲಾಭವಿದೆ.
ಸದ್ಯ ಬ್ಯಾಂಕ್ ನ ಅಮೃತ್ ಕಲಶ ಠೇವಣಿ ಯೋಜನೆ ಅಡಿಯಲ್ಲಿ ಎಫ್ ಡಿಯಲ್ಲಿ ಶೇಕಡಾ 7.6 ಬಡ್ಡಿದರವನ್ನು ಪಡೆಯಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿದರವನ್ನು ಕೆಲವು ದಿನಗಳ ಹಿಂದೆಯೇ ಹೆಚ್ಚಿಸಿದೆ ಎಂದು ಸ್ಪಷ್ಟ ಪಡಿಸಿದೆ. ಹಿಂದಿನ ಮಾಹಿತಿಯ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಒಂದೆರಡು ವರ್ಷದಿಂದ ಮೇಲೆ ಬಡ್ಡಿಯ ದರವನ್ನು ಏರಿಸಿಲ್ಲ. ಸದ್ಯ ಸ್ವಲ್ಪ ದಿನಗಳ ಹಿಂದೆ ಎವರಿ ಬಡ್ಡಿ ದರವನ್ನು ಹೆಚ್ಚಿಸಿರುವುದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಿದ ಅಲ್ಲವೇ ಗ್ರಾಹಕರನ್ನು ತಮ್ಮತ್ತ ಸೆಳಯುತ್ತಿದೇ.
ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶೇಖಡ 6.80 ರಷ್ಟು ಬಡ್ಡಿದರವನ್ನು ನೀಡುತ್ತಿತ್ತು. ಅದೇ ಅವಧಿಗೆ ಹಿರಿಯ ನಾಗರಿಕರು 7.30 % ಬಡ್ಡಿದರವನ್ನು ಪಡೆಯುತ್ತಾರೆ. ಸದ್ಯ ಅದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಸಾಮಾನ್ಯ ನಾಗರಿಕರು 2 ವರ್ಷದಿಂದ 3 ವರ್ಷಗಳಿಂದ ಎಫ್ ಡಿ ಗಳ ಮೇಲೆ 7.00% ಬಡ್ಡಿದರವನ್ನು ಪಡೆಯುತ್ತಿದ್ದಾರೆ, ಅದೇ ಹಿರಿಯ ನಾಗರಿಕರಿಗೆ 0.50% ಹೆಚ್ಚಿನ ಬಡ್ಡಿ ಸಿಗುತ್ತದೆ, ಅಂದರೆ ಶೇ.7.50 ಬಡ್ಡಿದರ ನೀಡಲಾಗುತ್ತದೆ.
ಇನ್ನು ಇದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸದ್ಯ ಈಗ 3 ವರ್ಷದಿಂದ 5 ವರ್ಷಗಳ ಠೇವಣಿ ಅವಧಿಯ ಮೇಲೆ ಸಾಮಾನ್ಯ ನಾಗರಿಕರಿಗೆ 6.50% ಮತ್ತು ಹಿರಿಯ ನಾಗರಿಕರಿಗೆ 7% ಬಡ್ಡಿಯ ಲಾಭವನ್ನು ನೀಡುತ್ತಿದೆ. ಇನ್ನು ಯಾರಾದರೂ 5 ವರ್ಷದಿಂದ 10 ವರ್ಷಗಳವರೆಗೆ ಎಫ್‌ಡಿ ಪಡೆದರೆ, ಸಾಮಾನ್ಯ ನಾಗರಿಕರು 6.50% ಬಡ್ಡಿದರವನ್ನು ಪಡೆಯುತ್ತಾರೆ, ಈ ಅವಧಿಗೆ ಹಿರಿಯ ನಾಗರಿಕರಿಗೆ ಶೇ.7.50 ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಅದಕ್ಕಾಗಿ ಬ್ಯಾಂಕ್ನಲ್ಲಿ ಹಣವನ್ನು ಹೂಡಿಕೆ ಮಾಡಲು ಜನರು ನಾ ಮುಂದೆ ಹಾಗೆ ತಾ ಮುಂದು ಎಂದು ಹೋಗುತ್ತಿದ್ದಾರೆ.