ಈಗ ಪ್ಯಾನ್ ಇಂಡಿಯಾ ಕಾಲ ಅಂದರೆ ಒಂದು ಸಿನಿಮಾವನ್ನು ಆ ಭಾಷೆಯಿಂದ ಇತರೆ ಭಾಷೆಗಳಿಗೆ ಡಬ್ ಮಾಡುತ್ತಾರೆ, ಒಂದೇ ಬಾರಿಗೆ ಶೂಟಿಂಗ್ ಆಗಿದ್ದರು ಬೇರೆ ಬೇರೆ ಭಾಷೆಗಳಿಗೆ ವಾಯ್ಸ್ ಡಬ್ ಆಗುತ್ತದೆ. ಈಗಿನ ಕೆಲವು ವರ್ಷದ ಹಿಂದಿನವರೆಗೂ ಕೂಡ ಇದಕ್ಕೆ ಅವಕಾಶವಿರಲಿಲ್ಲ. ಆಗ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದರು. ಅಂದರೆ ಕಥೆ ಚೆನ್ನಾಗಿ ಹಿಟ್ ಆದ ಸಿನಿಮಾಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡುತ್ತಿದ್ದರು ಅಂದರೆ ಅದೇ ಕಥೆಯ ಸಿನಿಮಾಗೆ ಆಯಾ ಭಾಷೆಯ ನಟರು ಆಕ್ಟ್ ಮಾಡುತ್ತಿದ್ದರು.
ಕನ್ನಡದಲ್ಲಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಅನೇಕ ಭಾಷೆಗಳಿಂದ ರಿಮೇಕ್ ಆದ ಸಿನಿಮಾಗಳು ಸಿನಿಮಾ ಇಂಡಸ್ಟ್ರಿ ಶುರುವಾದಾಗಲಿಂದಲೂ ಸಾಕಷ್ಟಿವೆ ಹಾಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಯಾವ ಇಂಡಸ್ಟ್ರಿಗೂ ಕಡಿಮೆ ಇಲ್ಲ, ಚಂದನವನದಿಂದಲೂ ನೂರಾರು ಸಿನಿಮಾಗಳು ದೇಶದ ಪ್ರಮುಖ ಭಾಷೆಗಳಿಗೆ ರಿಮೇಕ್ ಆಗಿದೆ. ಅವುಗಳ ಪ್ರಮುಖ ಕೆಲಸ ಸಿನಿಮಾಗಳ ಮಾಹಿತಿಯನ್ನು ಈ ಅಂಕಣದಲ್ಲಿ ನೀಡುತ್ತಿದ್ದೇವೆ.
ವಂಶಿಕ ಇಷ್ಟು ದೊಡ್ಡ ಹೆಸರು ಮಾಡಿದ್ದರೂ ಯಾವ ದೊಡ್ಡ ಹೀರೋನು ವಿಶ್ ಮಾಡಿಲ್ಲಾ.!
* 1954 ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಿತ್ರವು ರಾಜಕುಮಾರ್ ಅವರು ಅಭಿನಯಿಸಿದ ಮೊದಲ ಚಲನಚಿತ್ರವಾಗಿತ್ತು. ಅದೇ ವರ್ಷ ಕಾಳಹಸ್ತಿ ಮಹಾತ್ಯಮ್ ಎಂದು ಈ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಿದೆ. ವಿಶೇಷ ಏನೆಂದರೆ ಇದರಲ್ಲೂ ಕೂಡ ನಟಸಾರ್ವಭೌಮ ಡಾ.ರಾಜಕುಮಾರ್ ಅವರೇ ಅಭಿನಯಿಸಿದ್ದಾರೆ, 1955ರಲ್ಲಿ ಶಿವಭಕ್ತ ಎನ್ನುವ ಹೆಸರಿನಲ್ಲಿ ರಿಮೇಕ್ ಆಗಿದೆ, 1976ರಲ್ಲಿ ಮತ್ತೊಮ್ಮೆ ತೆಲುಗಿನಲ್ಲಿ ಕಲರ್ ನಲ್ಲಿ ಭಕ್ತ ಕಣ್ಣಪ್ಪ ಎಂದು ರಿಮೇಕ್ ಮಾಡಿದ್ದಾರೆ.
* ಶ್ರೀ ಕೃಷ್ಣ ಗಾರುಡಿ ಎನ್ನುವ ಕನ್ನಡ ಚಿತ್ರವು 1958 ರಲ್ಲಿ ರಿಲೀಸ್ ಆಗಿತ್ತು, ಅದೇ ವರ್ಷ ತೆಲುಗಿನಲ್ಲಿ ಸಿನಿಮಾ ರಿಮೇಕ್ ಆಯಿತು.
* 1961ರಲ್ಲಿ ಡಾ.ರಾಜ್ ಕುಮಾರ್ ಅವರು ಅಭಿನಯಿಸಿದ ಕಣ್ತೆರೆದು ನೋಡು ಸಿನಿಮಾವು 1965 ರಲ್ಲಿ ಕಾವ್ಯ ಮೇಳ ಹೆಸರಿನಲ್ಲಿ ಮಲಯಾಳಂ ಭಾಷೆಗೆ ರಿಮೇಕ್ ಆಯಿತು, 1968ರಲ್ಲಿ ತಮಿಳಿನಲ್ಲಿ ದೇವಿ ಎನ್ನುವ ಹೆಸರಿನಲ್ಲಿ ಇದೇ ಚಿತ್ರ ರಿಮೇಕ್ ಆಗಿ ತೆರೆಕಂಡಿತ್ತು.
ರವಿಚಂದ್ರನ್ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.!
* 1962ರಲ್ಲಿ ಅಣ್ಣಾವ್ರು ಅಭಿನಯಿಸಿದ್ದ ಗಾಳಿಗೋಪುರ ಸಿನಿಮಾವನ್ನು ಕಲಾಜುಕಿಟ್ಟಿಯ ತಂಕಂಮ್ ಎನ್ನುವ ಹೆಸರಿನಲ್ಲಿ ಮಲಯಾಳಂ ಭಾಷೆಯಲ್ಲಿ 1964ರಲ್ಲಿ ರಿಮೇಕ್ ಮಾಡಲಾಗಿತ್ತು.
* 1962 ರಲ್ಲಿ ತೆರೆಕಂಡಿದ್ದ ಭೂದಾನ ಎನ್ನುವ ಕನ್ನಡ ಸಿನಿಮಾವು ಪಳನಿ ಹೆಸರಿನಲ್ಲಿ 3 ವರ್ಷಗಳ ನಂತರ ತಮಿಳಿನಲ್ಲಿ ರಿಮೇಕ್ ಆಯಿತು.
* 1963ರಲ್ಲಿ ರಿಲೀಸ್ ಆದ ಕನ್ನಡದ ನಂದಾದೀಪ ಸಿನಿಮಾವು 1964 ರಲ್ಲಿ ಗುಜರಾತಿ ಭಾಷೆಗೆ ರಮತ್ ರಮಾದೇ ರಾಮ್ ಹೆಸರಿನಲ್ಲಿ ರಿಮೇಕ್ ಆಯಿತು.
* 1963ರಲ್ಲಿ ತೆರೆಕಂಡಿದ್ದ ಮನಮೆಚ್ಚಿದ ಹುಡುಗಿ ಎನ್ನುವ ಸಿನಿಮಾವು 1965ರಲ್ಲಿ ತೆಲುಗಿನಲ್ಲಿ ವಿಶಾಲ ಹೃದಯಾಲು ಎನ್ನುವ ಹೆಸರಿನಲ್ಲಿ ರಿಮೇಕ್ ಆಯಿತು.
* 1963ರಲ್ಲಿ ಕನ್ನಡದಲ್ಲಿ ರಿಲೀಸ್ ಆಗಿದ್ದ ಶ್ರೀ ರಾಮಾಂಜನೇಯ ಯುದ್ಧಂ ಚಿತ್ರದ ಇದೇ ಕಥೆಯು 1975ರಲ್ಲಿ ಶ್ರೀ ರಾಮಾಂಜನೇಯ ಯುದ್ಧಂ ಎನ್ನುವ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ತಯಾರಾಯಿತು.
* ಎಮ್ಮೆ ತಮ್ಮಣ್ಣ ಎನ್ನುವ ಕನ್ನಡದ ಚಿತ್ರವು 1966ರಲ್ಲಿ ಕನ್ನಡದಲ್ಲಿ ರಿಲೀಸ್ ಆಗಿತ್ತು, ಇದೇ ಕಥೆಯು ತೆಲುಗಿನಲ್ಲಿ 1968ರಲ್ಲಿ ಗಾವುಲ ಗೋಪನ್ನ ಎನ್ನುವ ಹೆಸರಿನಲ್ಲಿ ರಿಮೇಕ್ ಆಯಿತು ನಂತರ 1969ರಲ್ಲಿ ಜಿಗರಿ ದೋಸ್ತಿ ಎನ್ನುವ ಹೆಸರಿನಲ್ಲಿ ಹಿಂದಿಯಲ್ಲಿ, 1970ರಲ್ಲಿ ತಮಿಳಿಗೆ ಮತ್ತು ಮತ್ತುಕಾರ ವೇಳ ಹೆಸರಿನಲ್ಲಿ ರಿಮೇಕ್ ಆಗಿದೆ.
ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.
* 1967ರಲ್ಲಿ ತೆರೆಕಂಡ ಗಂಗೆ ಗೌರಿ ಪೌರಾಣಿಕ ಸಿನಿಮಾವು 1973ರಲ್ಲಿ ಗಂಗಾ ಗೌರಿ ಎಂದು ತಮಿಳಿನಲ್ಲಿ ರಿಮೇಕ್ ಆಗಿದೆ.
ಈ ರೀತಿ ಅಣ್ಣಾವ್ರ ಇನ್ನಷ್ಟು ಸಿನಿಮಾಗಳು ರಿಮೇಕ್ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.