ಮುಂಗಾರು ಮಳೆ ಕೈ ಕೊಟ್ಟ ಪರಿಣಾಮವಾಗಿ ರಾಜ್ಯದ ರೈತರ ಸ್ಥಿತಿ ಅಸಹನೀಯವಾಗಿದೆ. ರಾಜ್ಯದಲ್ಲಿ ಬರದ ವಾತಾವರಣ ಸೃಷ್ಟಿಯಾಗಿರುವುದರಿಂದ ಮತ್ತೆ ಕಾವೇರಿ ವಿವಾದ (Cauvery contreversy) ಬುಗಿಲೆದ್ದಿದೆ. ರೈತ ಪರ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟಗಾರರು ಕಾವೇರಿ ನಿಯಂತ್ರಣ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶವನ್ನು ವಿರೋಧಿಸಿ ಮತ್ತು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ತಮಿಳುನಾಡಿಗೆ ಬಿಡಬಾರದು ಎಂದು ಒತ್ತಾಯಿಸುತ್ತಾ ಹೋರಾಟ ಮಾಡುತ್ತಿದ್ದಾರೆ.
ದಿನೇ ದಿನೇ ಪ್ರತಿಭಟನೆಯ ಕಾವು ಕಾವೇರುತ್ತಿದ್ದು ಈಗ ಚಿತ್ರಕಲೆ ರಂಗದ ಗಣ್ಯರು ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಹಿರಿಯ ನಟಿ ಲೀಲಾವತಿ (Senior actress Leelavathi) ಅವರು ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗಂಭೀರವಾದ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಬಾರದು ಎನ್ನುವ ಕಾರಣಕ್ಕಾಗಿ ಚಿತ್ರರಂಗದ ಪರವಾಗಿ ಹೋರಾಟಕ್ಕೆ ಇಳಿದಿದ್ದಾರೆ.
ಒಂದೇ ಆವಾರ್ಡ್ ಫಂಕ್ಷನ್ ನಲ್ಲಿ ಬರೋಬ್ಬರಿ 10 SIIMA ಅವಾರ್ಡ್ ಪಡೆದುಕೊಂಡ ಕಾಂತರಾ ಸಿನಿಮಾ.!
ಬೆಂಗಳೂರಿನ ನೆಲಮಂಗಲ ಸಮೀಪ ಇರುವ ಸೋಲದೇವನಹಳ್ಳಿ ತೋಟದಿಂದ ಮಗ ವಿನೋದ್ ರಾಜ್ (Son vinod raj) ಜೊತೆಗೆ ಕಾವೇರಿ ನೀರಿನ ಹೋರಾಟದಲ್ಲಿ ಪಾಲ್ಕೊಳ್ಳುವ ಕಾರಣಕ್ಕಾಗಿ ಮಂಡ್ಯಕ್ಕೆ (Mandya V.V Circle) ಪ್ರಯಾಣ ಬೆಳೆಸಿದ ಲೀಲಾವತಿಯವರು ಮಂಡ್ಯದ ವಿ.ವಿ ಸರ್ಕಲ್ ಮುಂದೆ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರ ಅಭಿಮಾನ ನನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ನಮ್ಮ ಜನರು ಯಾವಾಗಲು ನಗುನಗುತ್ತಾ ಇರಬೇಕು, ಕಾವೇರಿ ಕಣ್ಣೀರು ಆಗಬಾರದು, ನಮ್ಮ ಜನ ನೀರು ನೀರು ಅಂತ ಕಣ್ಣೀರು ಹಾಕಬಾರದು, ನೀರಿಗೆ ಎಂದು ಸಹಾ ಬರ ಬರಬಾರದು,
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಹಕ್ಕು ಇರುವುದು ಎಂದ ನಟಿ ನಾನು ಸಹ ನಮ್ಮವರಿಗಾಗಿ ನಾಡಿನ ರೈತರಿಗಾಗಿ ಕಾವೇರಿ ಹೋರಾಟಕ್ಕೆ ಹೊರಡುವೆ.
BJP ಮತ್ತು JDS ಮೈತ್ರಿ ಬೆನ್ನೆಲ್ಲೇ ಬೆಂಗಳೂರಿನಲ್ಲಿ ಯಡಿಯೂರಪ್ಪ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ.!
ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ, ನಮ್ಮ ಕನ್ನಡಕೋಸ್ಕರ ನಾನು ಎಂದೂ ಹೋರಾಡುವೆ, ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ. ಈ ವಿಚಾರದಲ್ಲಿ ಪ್ರತಿಕ್ರಿಸಿದ ಮಗ ವಿನೋದ್ ರಾಜ್ ಅವರೂ ನಾನು ಒಬ್ಬ ರೈತನೇ. ರೈತನಾದ ಮೇಲೆ ನನಗೆ ಪ್ರತಿ ಹನಿಯ ನೀರಿನ ಬೆಲೆ ಕೂಡ ಗೊತ್ತಾಗಿದೆ. ಕಾವೇರಿ ಎಂದಿಗೂ ನಮ್ಮದೇ, ನಮ್ಮ ನೀರಿಗಾಗಿ ನಾವೇ ಹೋರಾಟ ಮಾಡುವ ಪರಿಸ್ಥಿತಿ ಬರಬಾರದು, ಮೊದಲು ನಮ್ಮ ರೈತರು ನಮ್ಮ ರಾಜ್ಯದ ಪರಿಸ್ಥಿತಿ ಚೆನ್ನಾಗಿರಬೇಕು ನಾವು ಕ್ಷೇಮವಾಗಿದ್ದಾಗ ಮಾತ್ರ ಮತ್ತೊಬ್ಬರ ಕ್ಷೇಮದ ಬಗ್ಗೆ ವಿಚಾರಣೆ ಮಾಡಲು ಆಗುತ್ತದೆ.
ನಾವೇ ಕ್ಷಾಮದ ಪರಿಸ್ಥಿತಿಯಲ್ಲಿ ಇರುವಾಗ ನಮ್ಮ ಪರಿಸ್ಥಿತಿಯನ್ನು ಮೊದಲು ಸುಧಾರಿಸಿಕೊಳ್ಳಬೇಕು ಹಾಗಾಗಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಹರಿಸಬಾರದು, ರಾಜ್ಯದ ರೈತರಿಗೆ ಅನ್ಯಾಯ ಮಾಡಬಾರದು ಎಂದು ಅವರು ಸಹ ಆಗ್ರಹಿಸಿದ್ದಾರೆ. ಚಿತ್ರರಂಗದಿಂದ ಹೋರಾಟಕ್ಕೆ ಬೆಂಬಲ ಇಲ್ಲ ಎನ್ನುವುದು ರೈತರ, ಹೋರಾಟಗಾರರ ಅಳಲಾಗಿತ್ತು.
ನಿಮ್ಮ ಮನೆಯಲ್ಲೂ ಪ್ರತಿದಿನ ಪ್ಯಾಕೆಟ್ ಹಾಲು ತರುತ್ತಿದ್ದೀರಾ.? ಆಗಿದ್ರೆ ಈ ವಿಷಯ ತಿಳಿದುಕೊಂಡಿರಲೇಬೇಕು.!
ಶಿವಣ್ಣ ಹಾಗೂ ದರ್ಶನ್ ಅವರು ಚಿತ್ರರಂಗದ ಪರವಾಗಿ ಪ್ರತಿಭಟನೆಯ ಸ್ಥಳಕ್ಕೆ ಹೋಗಿ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಸುದೀಪ್, ಧ್ರುವ ಇನ್ನೂ ಮತ್ತಿತರರು ಸಹ ಸಾಮಾಜಿಕ ಜಾಲತಾಣದಲ್ಲಿ ಕಾವೇರಿ ಪರವಾಗಿ ಧ್ವನಿ ಎತ್ತುವುದರ ಮೂಲಕ ತಾವು ಸಹ ಸಂಪೂರ್ಣ ಬೆಂಬಲವನ್ನು ಹೋರಾಟಕ್ಕೆ ಕೊಡುತ್ತಿದ್ದೇವೆ, ಎಂದೂ ನಮ್ಮ ರೈತರ ಪರವಾಗಿರಲಿದ್ದೇವೆ, ನಾಡಿನ ನೆಲ ಜಲ ಭಾಷೆ ಗಡಿ ವಿಚಾರದ ಹೋರಾಟಗಳಿಗೆ ಬದ್ಧವಾಗಿದ್ದೇವೆ ಎಂದು ಹೇಳುವ ಮೂಲಕ ನೈತಿಕ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ.