ದೀಪಿಕಾ ದಾಸ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಅದ್ಬುತವಾಗಿ ಅಭಿನಯಿಸುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ನಾಗಿಣಿ ಧಾರಾವಾಹಿಯಿಂದ ಹೊರ ಬಂದ ಬಳಿಕ ಇವರು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದರು, ಬಿಗ್ ಬಾಸ್ ಮನೆ ಒಳಗಿದ್ದ ಇವರ ವ್ಯಕ್ತಿತ್ವವನ್ನು ನೋಡಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 9ರ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ ಇವರು ಕಳೆದ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದರು.
ಮತ್ತೆ ಅಚ್ಚರಿ ಆಗುವಂತೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಮನೆ ಸೇರಿದ್ದಾರೆ. ಈ ರೀತಿ ಮೂರು ಬಾರಿ ಬಿಗ್ ಬಾಸ್ ಮನೆಗೆ ಹೋಗಿದ್ದವರು ದೀಪಿಕ ದಾಸ್ ಅವರು ಮಾತ್ರ ಸದಾ ಗಾಂಭೀರ್ಯದಿಂದ ಇರುವ ಎಲ್ಲೂ ಕೂಡ ಬೇಕಾಬಿಟ್ಟಿ ಮಾತನಾಡದೆ ಬೇಕಾದದ್ದಷ್ಟು ಮಾತ್ರ ಸ್ಪಷ್ಟವಾಗಿ ಚಿಕ್ಕದಾಗಿ ನೇರವಾಗಿ ಹೇಳಿ ಮುಗಿಸುವ ಸದಾ ಶಾಂತವಾಗಿರುವ ಯಾರ ಜೊತೆಗೂ ಕೂಡ ಅತಿ ಹೆಚ್ಚು ಸಲಿಗೆ ಬೆಳೆಸದೆ ಒಂದು ಅಂತರ ಕಾಯ್ದುಕೊಂಡೆ ಎಲ್ಲರ ಜೊತೆಗೂ ಸ್ನೇಹದಿಂದ ಇರುವ ದಿಪಿಕಾ ನೋಡುವುದಕ್ಕೆ ಆಟಿಟ್ಯೂಡ್ ಗರ್ಲ್ ಎನಿಸಿದರೂ ಒಬ್ಬ ಸ್ಟ್ಯಾಂಡರ್ಡ್ ವುಮೆನ್ ಆಗಿರುವ ಇವರ ಇಂತಹ ವ್ಯಕ್ತಿತ್ವವೇ ಅನೇಕ ಜನರಿಗೆ ಸ್ಪೂರ್ತಿ ಕೂಡ ಆಗಿದೆ.
ದೀಪಿಕಾ ದಾಸ್ ಅವರು ಎಲ್ಲೂ ಕೂಡ ತಮ್ಮ ಕಥೆಯ ಬಗ್ಗೆ ಹೆಚ್ಚು ಹೇಳಿಕೊಳ್ಳುವುದಿಲ್ಲ ಸದಾ ಪ್ರಾಕ್ಟಿಕಲ್ ಆಗಿ ಮಾತನಾಡುವ ಇವರು ಇತರರಂತೆ ಹಳೆ ಕಥೆಗಳನ್ನು ಹೇಳಿಕೊಳ್ಳುವುದು ಬಹಳ ಕಡಿಮೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಬಿಗ್ ಬಾಸ್ ಕಡೆಯಿಂದ ಬಂದ ಟಾಸ್ಕ್ ಒಂದರ ಕಾರಣ ಎಲ್ಲರೂ ಸಹ ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳಿಕೊಳ್ಳಲೇ ಬೇಕಾಗಿತ್ತು. ಈ ಸಂದರ್ಭದಲ್ಲಿ ದೀಪಿಕ ದಾಸ್ ಅವರು ಸಹ ಅನಿವಾರ್ಯವಾಗಿ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರಾಮಾಣಿಕವಾಗಿ ತಮ್ಮ ಜೀವನದಲ್ಲಿ ತಮಗಾದ ಅತ್ಯಂತ ಕಹಿಯ ನೋವು ಯಾವುದು ಎನ್ನುವುದನ್ನು ಹೇಳಿಕೊಂಡು ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ.
ದೀಪಿಕಾ ದಾಸ್ ಅವರು ತಮ್ಮಜೀವನಸಲ್ಲಿಮರೆಯಲಾಗದ ಇನ್ನೂ ಸಹ ನೊಂದುಕೊಳ್ಳುತ್ತಿರುವ ಆ ಕಹಿ ಘಟನೆ ಯಾವುದು ಎಂದರೆ ಅವರ ಅಣ್ಣ ಮದುವೆ ಆದ ತಕ್ಷಣ ಬದಲಾಗಿದ್ದಾರೆ ಎಂಬುದು. ದೀಪಿಕಾ ದಾಸ್ ಅವರಿಗೆ ಒಬ್ಬ ಅಣ್ಣನಿದ್ದು, ದೀಪಿಕಾ ದಾಸ್ ಅವರು ಅವರ ಜೀವನದಲ್ಲಿ ಬಹಳ ಇಷ್ಟಪಡುತ್ತಿದ್ದ ಅವರ ತಂದೆ ಲಿವರ್ ಜಾಂಡಿಸ್ಸಿನಿಂದ ತೀರಿ ಹೋಗುತ್ತಾರೆ. ಅವರ ತಂದೆ ಮ.ರ.ಣ ಹೊಂದಿದ ನಂತರದ ಸಂದರ್ಭದಲ್ಲಿ ಸಂಬಂಧಿಕರು ವರ್ಷದೊಳಗೆ ಶುಭ ಕಾರ್ಯ ಮಾಡಬೇಕು ಎಂದು ಹೇಳಿದರು. ಆ ಸಂದರ್ಭದಲ್ಲಿ ದೀಪಿಕಾ ದಾಸ್ ಅವರು ಆಗಷ್ಟೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದರಿಂದ ತಾನಿನ್ನು ಚಿಕ್ಕವಳು ಈಗಲೇ ಮದುವೆಯಾಗುವುದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿ ಬಿಟ್ಟರಂತೆ.
ಈ ಕಾರಣದಿಂದ ದೀಪಿಕಾ ಬದಲು ಅವರ ಅಣ್ಣನಿಗೆ ಮದುವೆ ಮಾಡಲು ನಿರ್ಧರಿಸಿ, ತಂದೆ ಮರಣ ಹೊಂದಿದ್ದಂತಹ ಕಷ್ಟದ ಸಂದರ್ಭದಲ್ಲೂ ಅದ್ದೂರಿಯಾಗಿ ಮದುವೆ ಮಾಡುತ್ತಾರೆ. ಅಲ್ಲದೆ ಆ ಮದುವೆ ನಡೆಸಲು ಸಾಲ ಕೂಡ ಮಾಡಬೇಕಾಗುತ್ತದೆ. ಆದರೆ ಅವರ ಅಣ್ಣ ಮಾತ್ರ ಮದುವೆ ಆದ ಎರಡೇ ದಿನಕ್ಕೆ ಮನೆಯಲ್ಲಿ ನಡೆದ ಒಂದು ಸಣ್ಣ ವಿಷಯಕ್ಕೆ ದೊಡ್ಡದಾಗಿ ಜಗಳ ಮಾಡಿ ಅತ್ತಿಗೆ ಎದುರೇ ತಟ್ಟೆ ಎಸೆದು ರಂಪ ಮಾಡಿದ್ದರಂತೆ. ಅದಾದ ಬಳಿಕ ಮನೆ ಬಿಟ್ಟು ಹೋಗಿ ಬೇರೆ ಮನೆಯಲ್ಲಿ ನೆಲೆಸಿಬಿಟ್ಟ. ನಂತರ ಇವರು ತಂಗಿ ಹಾಗೂ ಅಮ್ಮನನ್ನು ಹಲವು ದಿನಗಳವರೆಗೆ ದೂರ ಇಟ್ಟಿದ್ದರಂತೆ. ಹೀಗೆ ಅವರ ಜೀವನದ ಅತಿ ಕಹಿಯಾದ ಘಟನೆ ಹಾಗೂ ಮರೆಯಲಾಗದ ನೋವನ್ನು ಹಂಚಿಕೊಂಡಿದ್ದಾರೆ.