ಕಾವೇರಿ ವಿವಾದದ (Cauvery) ವಿಚಾರದಲ್ಲಿ BJP ನಾಯಕರ ನಡೆಯನ್ನು ಖಂಡಿಸಿದ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಿ.ವಿ ಶ್ರೀನಿವಾಸ್ (President of Indian youth congress P.V Shreenivas) ಅವರು ನವದೆಹಲಿಯಲ್ಲಿ ಸುದ್ದಿಗಾರರೊಡನೆ ಮಾತನಾಡುವಾಗ BJP ಯ 25 ಸಂಸದರು ಕೂಡ ದಂಡಪಿಂಡಗಳು ಎಂದು ಹೇಳಿ ಆ’ಕ್ರೋ’ಶ ಹೊರ ಹಾಕಿದ್ದಾರೆ.
ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ರಾಜ್ಯದ ಜನರಿಗೆ BJP ನಿರಂತರವಾಗಿ ದ್ರೋಹವೆಸಗಿದೆ. ಆದರೆ ಕಾವೇರಿ ವಿಚಾರದಲ್ಲಿ ಮಾತ್ರ ಮೊಸಳೆ ಕಣ್ಣೀರು ಹಾಕುತ್ತಾ ಜನತೆ ಎದುರು ನಾಟಕ ಮಾಡುತ್ತಿದೆ ಎಂದು ಚುಚ್ಚಿದ್ದಾರೆ. ರಾಜ್ಯದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವ ಸ್ಥಾನದಲ್ಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ರಾಜ್ಯದ ಜನತೆಗೆ ಕಾವೇರಿ ವಿಚಾರದಲ್ಲಿ ಅನ್ಯಾಯ ಆಗದಂತೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ನಡೆದ ಸರ್ವಪಕ್ಷದ ಸಂಸದರು ಮತ್ತು ಸದಸ್ಯರ ಸಭೆಗೆ ನೆಪಕ್ಕಾದರೂ ಭಾಗವಹಿಸಿಲ್ಲ ಎಂದು ಕಿಡಿ ಕಾರಿದ್ದಾರೆ.
ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್.!
ಇದೇ ರೀತಿ ಕೇಂದ್ರವು ರಾಜ್ಯದ ವಿಷಯದಲ್ಲಿ ಸಾಕಷ್ಟು ಅನ್ಯಾಯ ಮಾಡಿಕೊಂಡೇ ಬರುತ್ತಿದೆ. ಮಂಡ್ಯದಲ್ಲಿ ನಡೆದ ಕಾವೇರಿ ಕುರಿತ ಹೋರಾಟದಲ್ಲಿ BJP ಕಾರ್ಯಕರ್ತರೊಬ್ಬರು ಬಾಯಿಗೆ ಮಣ್ಣು ಹಾಕಿಕೊಂಡು ಪ್ರತಿಭಟನೆಗೆ ಇಳಿದಿದ್ದರು ಇದು ನೇರವಾಗಿ ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಕಳೆದ 9 ವರ್ಷಗಳಿಂದಲೂ ಕರ್ನಾಟಕದ ಜನರ ಕಣ್ಣಿಗೆ ಮಣ್ಣು ಎರಚುತ್ತಾ, ಬಾಯಿಗೆ ಮಣ್ಣು ಹಾಕಿಕೊಂಡು ಬಂದಿರುವುದನ್ನು ಸಾಂಕೇತಿಕವಾಗಿ ತೋರಿಸಿದ ರೀತಿ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯಕ್ಕೆ ಬರಬೇಕಾದ GST ಪಾಲಿನ ಹಣ ಸರಿಯಾಗಿ ಬರದೆ ಪದೇಪದೇ ಕನ್ನಡ ನಾಡಿನ ಜನರಿಗೆ ಅನ್ಯಾಯ ಆಗುತ್ತಿದೆ, 15ನೇ ಆರ್ಥಿಕ ಹಣಕಾಸಿನ ಆಯೋಗದಲ್ಲೂ ಕೂಡ ಇದು ಮುಂದುವರೆದಿದೆ. ಆದರೆ ಈ ರೀತಿಯ ಅನ್ಯಾಯಗಳು ನಡೆದಾಗ ರಾಜ್ಯವನ್ನು ಪ್ರತಿನಿಧಿಸುವ 25 ಮಂದಿ BJP ಸಂಸದರು ಬಾಯಿ ಬಿಡುವುದಿಲ್ಲ. ಹಿಂದಿ ಭಾಷೆ ಹೇರಿಕೆ ಪ್ರಯತ್ನ ಪಟ್ಟಾಗಲು, ಕನ್ನಡಿಗರ ಪಾಲಿನ ಉದ್ಯೋಗಗಳನ್ನು ಕಿತ್ತುಕೊಂಡಾಗಲೂ ಇವರ್ಯಾರು ಧ್ವನಿ ಎತ್ತಲಿಲ್ಲ.
ಮಾಕಳಿ ಬೇರು ಇದ್ರೆ ಸಾಕು ನಿಮ್ಮ ಎಲ್ಲ ಕೆಲಸಗಳು 100% ಸಕ್ಸಸ್ ಆಗುತ್ತೆ.!
ಹೀಗೆ ಕನ್ನಡ ಭಾಷೆಯ ನೆಲದ ನೀರಿನ ವಿಚಾರ ಬಂದಾಗ ಸುಮ್ಮನಿದ್ದವರು ಈಗ ಪ್ರತಿಭಟನೆಗೆ ಇಳಿದು ಮಾತನಾಡುತ್ತಿರುವುದು ಅವರ ಆತ್ಮ ವಂಚನೆಯ ವಿಷಯವಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ನಮ್ಮ ಸರ್ಕಾರವು ಎಂದಿಗೂ ಕೂಡ ನಾಡಿನ ರೈತರ ಪರವಾಗಿಯೇ ಇದೆ, ರೈತರ ಹಿತ ಕಾಯುವ ಸಲುವಾಗಿಯೇ ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರಕ್ಕೆ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ಮನ ಓಲೈಸುವ ಕೆಲಸ ಮಾಡುತ್ತಿದೆ.
ರಾಜ್ಯದ ಮೇಲೆ ತಪ್ಪು ಅಭಿಪ್ರಾಯ ಬರಬಾರದು ಎಂದು ಸುಪ್ರೀಂ ಆಜ್ಞೆಯನ್ನು ಕೂಡ ಪಾಲಿಸುತ್ತಿದೆ ಇಂತಹ ಸಮಯದಲ್ಲಿ ಪ್ರತಿಪಕ್ಷಗಳು ಸರ್ಕಾರದ ಜೊತೆ ನಿಲ್ಲಬೇಕಿತ್ತು. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ಕಾವೇರಿ ವಿಚಾರವನ್ನು ಇಟ್ಟುಕೊಂಡು BJP ಪಕ್ಷ ರಾಜಕೀಯಕ್ಕೆ ಇಳಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ರಾಜ್ಯಕ್ಕೆ ಬರ ಬಂದಾಗ, ಅತಿವೃಷ್ಠಿ-ಪ್ರವಾಹದಿಂದ ಸಂಕಷ್ಟ ಎದುರಾದಾಗ ಈ ಸಂಸದರಾಗಲಿ, ರಾಜ್ಯದವರೇ ಆದ ಕೇಂದ್ರ ಸಚಿವರಾಗಲೀ ಕರ್ನಾಟಕ ರಾಜ್ಯದ ನೆರವಿಗೆ ಎಂದೂ ಬರಲೇ ಇಲ್ಲ.
ಗೃಹಲಕ್ಷ್ಮಿ ಯೋಜನೆ ಎರಡು ಕಂತಿನ ಹಣ ಬಿಡುಗಡೆ, ಯಾವ ದಿನ ಹಣ ಸಿಗುತ್ತದೆ ಗೊತ್ತಾ.?
ನೆಪಕ್ಕೂ ಕೂಡ ಪ್ರಧಾನಿಗಳ ಬಳಿ ನಮ್ಮ ಪಾಲಿನ ಹಕ್ಕನ್ನು ಕೇಳುವ ಧೈರ್ಯವನ್ನು ಮಾಡಲಿಲ್ಲ. ಪಾರ್ಲಿಮೆಂಟ್ ಚರ್ಚೆಗಳಲ್ಲೂ ಗಟ್ಟಿಯಾಗಿ ಕೇಳಿರುವ ಉದಾಹರಣೆಗಳಿಲ್ಲ. ಈ ರೀತಿ ನಿರಂತರವಾಗಿ ಜ’ನ’ದ್ರೋ’ಹ, ಹೊ’ಣೆ’ಗೇ’ಡಿ’ತನವನ್ನು ಆಚರಿಸುತ್ತಾ ಬರುತ್ತಿರುವ BJP ಪಕ್ಷದ ಸಂಸದರು ಮತ್ತು ನಾಯಕರು ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಕಾವೇರಿ ವಿಚಾರದಲ್ಲಿ ಮಾತ್ರ ಪ್ರತಿಭಟನೆಯ ಸೋಗು ಹಾಕುತ್ತಿದ್ದಾರೆ ಎಂದು ಖಂಡಿಸಿದ್ದಾರೆ.