Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಡಿ ಬಾಸ್ ಅಬ್ಬರಕ್ಕೆ ಬಾಕ್ಸ್ ಫೀಸಿನಲ್ಲಿ ಕಲೆಕ್ಷನ್ ಸುನಾಮಿ, ಹೊಸ ದಾಖಲೆಯತ್ತ ಕಾಟೇರ.!

Posted on January 20, 2024 By Admin No Comments on ಡಿ ಬಾಸ್ ಅಬ್ಬರಕ್ಕೆ ಬಾಕ್ಸ್ ಫೀಸಿನಲ್ಲಿ ಕಲೆಕ್ಷನ್ ಸುನಾಮಿ, ಹೊಸ ದಾಖಲೆಯತ್ತ ಕಾಟೇರ.!

 

ಡಿಸೆಂಬರ್ 29 ರಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರ ನಟನೆಯ ಕಾಟೇರ ಸಿನಿಮಾವು (Katera Cinema) ಈ ವರ್ಷದ ಮೊದಲ ಬ್ಲಾಕ್ ಬ್ಲಾಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ. ರಾಜ್ಯದಾದ್ಯಂತ ಕಾಟೇರನ ಅಬ್ಬರ ಜೋರಾಗಿದ್ದು ಬಾಕ್ಸ್ ಆಫೀಸ್ ಧೂಳೆಬ್ಬಿಸಿ ಮತ್ತೊಮ್ಮೆ ಡಿ ಬಾಸ್ (D Boss) ತಾವು ಬಾಕ್ಸ್ ಆಫೀಸ್ ಸುಲ್ತಾನ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಚಿತ್ರದಲ್ಲಿ ಮುಖ್ಯವಾಗಿ ಚಿತ್ರಕಥೆಯು ಸಿನಿಮಾದ ಶಕ್ತಿಯಾಗಿದ್ದು, ಅದಕ್ಕೆ ತಕ್ಕಂತೆ ಎರಡು ಶೇಡ್ ಪಾತ್ರಗಳಿಗೆ ಜೀವ ತುಂಬಿರುವ ದರ್ಶನ್ ಅವರ ನಟನೆಯು ಚಿತ್ರ ಗೆಲ್ಲುವುದರ ಮತ್ತೊಂದು ಬಹುದೊಡ್ಡ ಸಂಗತಿಯಾಗಿದೆ ಎನ್ನಬಹುದು. ದಚ್ಚು ಅಭಿಮಾನಿಗಳು ಈ ಗೆಲುವನ್ನು ಬಹಳ ಸಂಭ್ರಮಿಸುತಿದ್ದಾರೆ, ಇದರ ಬೆನ್ನೆಲ್ಲೇ ಚಿತ್ರದ ಕಲೆಕ್ಷನ್ (Collection) ವಿಚಾರ ಕೂಡ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದು 25 ದಿನಗಳ ಹತ್ತಿರದಲ್ಲಿ ಇರುವ ಸಿನಿಮಾ ಗಳಿಸಿರುವುದೆಷ್ಟು ಎನ್ನುವ ಲೆಕ್ಕಾಚಾರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಶೃತಿ, ಕುಮಾರ್ ಗೋವಿಂದ್, ದರ್ಶನ್, ಮಾಲಾಶ್ರೀ ಪುತ್ರಿ ಆರಾಧನಾ, ಅವಿನಾಶ್ ಮುಂತಾದ ಬಹುತಾರಾಗಣ ಹೊಂದಿದ್ದ ಚಿತ್ರ ಕಾಟೇರ. ಇದು ಕರ್ನಾಟಕದ ಮಟ್ಟಿಗೆ ತಯಾರಾಗಿರುವ ನಮ್ಮ ನೆಲೆದ ಚಿತ್ರವೆನ್ನಬಹುದು. ಯಜಮಾನ ಮತ್ತು ಕ್ರಾಂತಿ ರೀತಿಯ ಸಾಮಾಜಿಕ ಕಳಕಳಿಯ ಚಿತ್ರಗಳನ್ನು ಮಾಡಿ ಆ ಮೂಲಕ ಬದಲಾವಣೆ ತರಲು ಯತ್ನಿಸಿದ್ದ ದರ್ಶನ್ ರವರು ಈ ಸಿನಿಮಾದಲ್ಲೂ ಕೂಡ ಮತ್ತೆ ಅದೇ ಪ್ರಯತ್ನಕ್ಕೆ ಕೈ ಹಾಕಿದ್ದರು.

ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!

ಕಾಟೇರ ಚಿತ್ರಕ್ಕೆ ತರುಣ್ ಸುಧೀರ್ ಅವರು ಆಕ್ಷನ್ ಕಟ್ ಹೇಳಿದ್ದರೆ ರಾಕ್ ಲೈನ್ ವೆಂಕಟೇಶ್ ಅವರು ಹೂಡಿಕೆ ಮಾಡಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ಸಿನಿಮಾ ಲಾಂಛನದಿಂದ ಬಿಡುಗಡೆ ಆಗಿದ್ದ ಈ ಸಿನಿಮಾ ಪ್ರತಿಯೊಬ್ಬರ ಮನಸ್ಸನ್ನು ಮುಟ್ಟಿದೆ ಆದ ಕಾರಣಕ್ಕಾಗಿ ಸಿನಿಮಾ ಗಳಿಕೆಯಲ್ಲೂ ಮುನ್ನುಗ್ಗಿದ್ದು ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ರೆಕಾರ್ಡ್ ಮಾಡುವ ಮುನ್ಸೂಚನೆಯನ್ನು ನೀಡುತ್ತಿದೆ.

2023ರ ಅಂತ್ಯದಲ್ಲಿ ಡಿಸೆಂಬರ್ 29ರಂದು ಸಿನಿಮಾ ರಿಲೀಸ್ ಆದಾಗ ಒಂದೇ ದಿನದಲ್ಲಿ 20 ಕೋಟಿ ಬಾಚಿಕೊಂಡಿತ್ತು, ಅನೇಕ ಥಿಯೇಟರ್ ಗಳು ಮುಂಚೆಯೇ ಬುಕ್ಕಿಂಗ್ ಆಗಿ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ನಡೆಯುತ್ತಿತ್ತು. ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾಸ ದಕ್ಕಿದ ಮೇಲೆ ಸಿನಿಮಾ ತಂಡ ಸೆಲೆಬ್ರಿಟಿ ಶೋ ಕೂಡ ಏರ್ಪಡಿಸಿತ್ತು ಸಾಮಾನ್ಯನಿಂದ ಸೆಲೆಬ್ರಿಟಿವರೆಗೆ ಇಡೀ ಕರ್ನಾಟಕದ ಎಲ್ಲರೂ ಈಗ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ.

ಸಿನಿಮಾ ಮೂರೇ ದಿನಕ್ಕೆ 50 ಕೋಟಿ ಗಳಿಸುವ ಮೂಲಕ ಮತ್ತೊಂದು ರೆಕಾರ್ಡ್ ಸೃಷ್ಟಿಸಿತ್ತು ಮತ್ತು ಎರಡು ವಾರಗಳ ಗಳಿಗೆ 129 ಕೋಟಿ ಆಗಿತ್ತು. ಈಗ ಇನ್ನೆರಡು ದಿನಗಳಲ್ಲಿ 25 ವಾರಗಳ ಸಿನಿಮಾ ಪೂರೈಸುತ್ತಿದೆ 25 ವಾರಗಳ ಯಶಸ್ವಿ ಪ್ರದರ್ಶನವು ಸದ್ಯದ ಮಟ್ಟಿಗೆ ದೊಡ್ಡ ಬ್ರೇಕಿಂಗ್ ಆಗಿದ್ದು ಈವರೆಗಿನ ಕಲೆಕ್ಷನ್ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿದೆ.

ಒಂದು ಮಗು ಆದ್ಮೇಲೆ ನಾನು ಸೂಪರ್ ಸ್ಟಾರ್ ಆಗಿದ್ದು ಎಂದು ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡ ಹಿರಿಯ ನಟಿ ಲಕ್ಷ್ಮಿ.!

ಇವತ್ತಿನವರೆಗೆ ಸಿನಿಮಾ 199 ಕೋಟಿ ತಲುಪಿದ್ದು 25ನೇ ವಾರಕ್ಕೆ 200 ಕೋಟಿ ದಾಟಲಿದೆ ಎಂದು ಸಿನಿ ತಜ್ಞರು ಭವಿಷ್ಯ ನುಡಿಯುತ್ತಿದ್ದಾರೆ. ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರೇ ಈ ಬಗ್ಗೆ ಅಧಿಕೃತವಾಗಿ ವಿಷಯ ಹಂಚಿಕೊಳ್ಳಬೇಕಿತ್ತು, ಆದರೆ ಅವರು ಸಿನಿಮಾ ಗೆಲುವಿನ ಬಗ್ಗೆ ಪ್ರಸ್ತಾಪಿಸಿದ್ದರೆ.

ಅವರ ರಾಕ್ ಲೈನ್ ಪ್ರೊಟೆಕ್ಷನ್ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಿಂದ ಸಿನಿಮಾ ಕುರಿತಾದ ಅಪ್ಡೇಟ್ ಗಳು ಹೊರ ಬಿದ್ದಿದ್ದು, ಆ ಆಧಾರದ ಮೇಲೆ ಆ ಲೆಕ್ಕಾಚಾರವನ್ನು ತಿಳಿಸುತ್ತಿದ್ದೇವೆ. ಸಿನಿಮಾ ಇನ್ನು ದೊಡ್ಡ ಮಟ್ಟದ ಹಿಟ್ ಕಾಣಲಿ ಎಂದು ನಾವು ಸಹ ಹರಸೋಣ.

cinema news

Post navigation

Previous Post: ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!
Next Post: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಸಾಗರ್ ಬಿಳಿಗೌಡ ದಂಪತಿ, ವರ್ಷ ತುಂಬುವುದರ ಒಳಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme