ರೈತರು ಭೂಮಿತಾಯಿಯನ್ನು ನಂಬಿ ಬಿತ್ತನೆ ಮಾಡಿ ಬೆಳೆ ಕೈ ಸೇರುವ ತನಕ ಬಿಗಿ ಮನಸ್ಸಿನಿಂದ ಕಾಯುತ್ತಾ ಕುಳಿತಿರುತ್ತಾರೆ. ಕೆಲವೊಮ್ಮೆ ರೈತರು ಪಟ್ಟ ಪರಿಶ್ರಮಕ್ಕೆ ಪ್ರತಿಫಲ ದೊರಕಿದರೆ ಇನ್ನೂ ಕೆಲವು ಬಾರಿ ಪ್ರಕೃತಿ ವಿಕೋಪ ಅಥವಾ ಬೆಳೆ ನಷ್ಟದಿಂದಾಗಿ ರೈತರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇದೀಗ ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವುದಾಗಿ ಅನೇಕ ಯೋಜನೆಗಳನ್ನು ಪ್ರಾರಂಭ ಮಾಡಿದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿಗಾಗಿ ರಸಗೊಬ್ಬರ ಬಿತ್ತನೆ ಬೀಜಗಳು ಮತ್ತು ಔಷಧಿಗಳನ್ನು ಖರೀದಿಸಲು ಸಹಕಾರಿಯಾಗಬೇಕು ಎಂಬಂತಹ ದೃಷ್ಟಿಯಿಂದ ಬ್ಯಾಂಕಗಳಲ್ಲಿ ಸಾಲ ಯೋಜನೆಗಳನ್ನು ಸರ್ಕಾರ ಪ್ರಾರಂಭ ಮಾಡಿದೆ.
ರೈತರು ಬ್ಯಾಂಕ್ ಗಳಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಲು ಆಗದೇ ಇದ್ದರೆ ಸರ್ಕಾರವು ಮನ್ನಾ ಮಾಡುವುದಾಗಿ ತೀರ್ಮಾನವನ್ನು ಕೈಗೊಂಡಿದೆ ಬೆಳೆ ನಷ್ಟವಾದಂತಹ ಸಂದರ್ಭದಲ್ಲಿ ಅಥವಾ ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟ ಉಂಟಾದಾಗ ರೈತರು ತಾವು ಮಾಡಿದಂತಹ ಸಾಲವನ್ನು ಬ್ಯಾಂಕ್ ಗಳಲ್ಲಿ ತಿಳಿಸಲು ಆಗುವುದಿಲ್ಲ ಅಂತಹ ರೈತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ. ಸುಮಾರು 2.37 ಲಕ್ಷ ರೈತರ ಸಾಲವನ್ನು ಬ್ಯಾಂಕ್ ಗಳಿಂದ ಮನ್ನ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ನೀವು ಯಾವ ಬ್ಯಾಂಕ್ ಗಳಲ್ಲಿ ಸಾಲ ಮಾಡಿದರೆ ಮನ್ನಾ ವಾಗುತ್ತದೆ ಮತ್ತು ಇದರ ಪೂರ್ಣ ಮಾಹಿತಿ ನಾವಿಲ್ಲಿ ತಿಳಿಸುತ್ತಿದ್ದೇವೆ.
2023 ಕಿಸಾನ್ ಸಾಲ ಮನ್ನಾ ಯೋಜನೆಯ ಪ್ರಯೋಜನಗಳು.
1. ಕಿಸಾನ್ ಯೋಜನೆಯ ಅಡಿಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಬ್ಯಾಂಕ್ ಗಳಿಂದ ಪಡೆದಂತಹ ಸಾಲದಿಂದ ಪರಿಹಾರವನ್ನು ಪಡೆಯುತ್ತಾರೆ.
2. ಬ್ಯಾಂಕ್ ಗಳಿಂದ 2 ಲಕ್ಷದ ವರೆಗೆ ಸಾಲ ಪಡೆದಂತಹ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ.
3. ರಾಜ್ಯದ ಸುಮಾರು 2.37 ಲಕ್ಷ ರೈತರ ಬ್ಯಾಂಕ್ ಸಾಲಗಳನ್ನು ಕಿಸಾನ್ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಮನ್ನಾ ಮಾಡಲಾಗುತ್ತದೆ.
4. ಇತ್ತೀಚಿಗಷ್ಟೇ ರಾಜ್ಯ ಸರ್ಕಾರವು ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಈ ಯೋಜನೆ ಅಡಿಯಲ್ಲಿ ಸಾಲಮನ್ನಾ ಮಾಡಲಾಗಿದೆ.
5. ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕಿಸಾನ್ ಕರ್ಜ್ ಮಾಫಿ ಯೋಜನೆ ಪಟ್ಟಿ 2023 ರನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳ ಬಹುದು. ಬ್ಯಾಂಕ್ ಸಾಲ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
2023 ರೈತರ ಸಾಲ ಮನ್ನಾ ಪಟ್ಟಿ ಇದನ್ನು ಚೆಕ್ ಮಾಡುವ ವಿಧಾನ.
1. ಅರ್ಜಿ ಸಲ್ಲಿಸುವವರು ರೈತರ ಕಲ್ಯಾಣ ಮತ್ತು ಕೃಷಿ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://upagripardarshi.gov.in/
2. ಈ ವೆಬ್ ಸೈಟ್ ನಲ್ಲಿ ಮುಖಪುಟ ತೆರೆಯುತ್ತದೆ.
3. ಮುಖಪುಟದಲ್ಲಿ ಜೈ ಕಿಸಾನ್ ಬೆಳೆ ಸಾಲ ಮನ್ನಾ ಯೋಜನೆಗಾಗಿ ನೀಡಲಾದ ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಂತರ ಜಿಲ್ಲೆಗಳ ಪಟ್ಟಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
4. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ
5. ನಂತರ ಸಾಲ ಮನ್ನಾ ಪಟ್ಟಿಯು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು.
ರೈತರ ಸಾಲ ಮನ್ನಾ ಯೋಜನೆಯು ಇದೀಗ ಉತ್ತರ ಪ್ರದೇಶದಲ್ಲಿ ಜಾರಿಯಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಸಹ ಈ ಯೋಜನೆಯ ಲಾಭವನ್ನು ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾರೆಲ್ಲ ರೈತರು ಬ್ಯಾಂಕ್ ಗಳಲ್ಲಿ ಮಾಡಿರುವಂತಹ ಸಾಲವನ್ನು ತೀರಿಸಲು ಆಗದೆ ಕಷ್ಟ ಪಡುತ್ತಿರುತ್ತಾರೋ ಅಂತಹವರಿಗೆ ಕೆಲವೇ ದಿನಗಳಲ್ಲಿ ಸಂತಸದ ಸುದ್ದಿ ಉಂಟಾಗುತ್ತದೆ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾರೆ ಖುದ್ದಾಗಿ ಸರ್ಕಾರವೇ ರೈತರ ಸಾಲವನ್ನು ಮನ್ನಾ ಮಾಡುತ್ತದೆ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಸಹ ಶೇರ್ ಮಾಡಿ.