ಸ್ನೇಹಿತರೆ ಇಂದು ನಾವು ನಿಮ್ಮ ಬಳಿ ಹಂಚಿಕೊಳ್ಳುತ್ತಿರುವ ವಿಷಯವು ಬಹಳ ಉಪಯುಕ್ತವಾದ ವಿಷಯವಾಗಿದೆ ನಾವು ಯಾವುದಾದರೂ ಒಂದು ಕೆಲಸಕ್ಕೂ ಅಥವಾ ಯಾವುದಾದರೂ ಭಾರತ ದೇಶದ ಅಥವಾ ನಮ್ಮ ರಾಜ್ಯದ ಸೇವೆಯನ್ನು ಸ್ವೀಕರಿಸಲು ನಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅತಿ ಅವಶ್ಯಕ ಎಲ್ಲರಿಗೂ ತಿಳಿದಂತೆ ಒಂದು ಮಗು ಶಾಲೆಗೆ ಸೇರುವ ಮುನ್ನ ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿ ಶಾಲೆಯ ಕಡೆಯಿಂದ ಕೇಳುತ್ತಾರೆ.
ಒಬ್ಬ ವ್ಯಕ್ತಿ ಯಾವುದಾದರೂ ಒಂದು ಸರ್ಕಾರ ಸೇವೆಯನ್ನು ಪಡೆಯಲು ಕೂಡ ಇದು ಕಡ್ಡಾಯವಾಗಿದೆ. ಅದರೊಂದಿಗೆ ಯಾವುದಾದರೂ ಉದ್ಯೋಗ ಅದು ಸೂಚನೆಯಾದಾಗ ಜಾತಿ ಮತ್ತೆ ಪ್ರಮಾಣ ಪತ್ರ ಕಡ್ಡಾಯವಾಗಿ ಅವಶ್ಯಕತೆ ಹಾಗೂ ಅದಕ್ಕಾಗಿ ಮೀಸಲಾತಿಯು ನಮ್ಮ ಸರ್ಕಾರದ ವತಿಯಿಂದ ಇದ್ದೇ ಇದೆ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ವಾರಂಗಟ್ಟಲೆ ತಿಂಗಳಗಟ್ಟಲೆ ಬೇಕಾಗುತ್ತದೆ, ಅಲ್ಲದೆ ಅದನ್ನು ಸ್ವೀಕರಿಸಲು ನಾಡಕಚೇರಿಗೆ ಅಲೆದಾಡಿ ಅಲಿದಾರಿ ನಮ್ಮ ಚಪ್ಪಲಿಗಳ ಸವಿದು ಹೋಗಿರುತ್ತದೆ.
ಅದಕ್ಕಾಗಿ ಸ್ನೇಹಿತರೆ ಇಂದು ನಮ್ಮ ಪುಟದಲ್ಲಿ ಜಾತಿ ಮತ್ತೆ ಆದಾಯ ಪ್ರಮಾಣ ಪತ್ರವನ್ನು ನಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಪಡೆಯುವುದರ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ. ಹಾಗಾದರೆ ಬನ್ನಿ ಸ್ನೇಹಿತರೆ ಇದರ ಬಗ್ಗೆ ಕೆಳಗಿನ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸಿ ಕೊಡುತ್ತೇವೆ. ಸರ್ಕಾರವು ಮಧ್ಯಮ ವರ್ಗದವರಿಗಾಗಿ ಅಲೆದಾಡುವ ಕಷ್ಟವನ್ನು ತಪ್ಪಿಸುವುದಾಗಿ ಆನ್ಲೈನ್ ಸೌಲಭ್ಯವನ್ನು ಒದಗಿಸಿದೆ ನಾಡಕಚೇರಿಯ ಮೂಲತಃ ವೆಬ್ಸೈಟ್ ಗೆ nadakacheri.karnataka.gov.in ಭೇಟಿ ನೀಡಿ ಅಲ್ಲಿನ ಹೋಂ ಎಂಬ ಆಯ್ಕೆಯನ್ನು ಒತ್ತಬೇಕು.
ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಆನ್ಲೈನ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ, ಮೇಲೆ ಕಾಣಿಸುವ ನವ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ ಆಗ ಆಯ್ಕೆಗಳು ಬರುತ್ತವೆ. ಜಾತಿ ಮತ್ತು ಆದಾಯ ಪತ್ರದ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅಲ್ಲಿ ಕೇಳುತ್ತದೆ, ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಬೇಕು, ಅಲ್ಲಿ ಕೇಳುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
ಇನ್ನು ರೇಷನ್ ಕಾರ್ಡ್ನಲ್ಲಿ ಇರುವಂತಹ ಸದಸ್ಯರ ವಿವರವು ತೋರಿಸುತ್ತದೆ ಯಾರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಅಂತವರ ಸದಸ್ಯರ ಮೇಲೆ ಕ್ಲಿಕ್ ಮಾಡಿ, ನಂತರ ಪೇಜಿನಲ್ಲಿ ಕೆಳ ಬಾಗದಲ್ಲಿ ತೋರಿಸುವ ಸರ್ವಿಸ್ ಫ್ರೀ ಎಂಬ ಆಯ್ಕೆಯ ಮೇಲೆ ಒತ್ತಬೇಕು ಹಾಗೂ ಪೇಮೆಂಟ್ ಆಯ್ಕೆಯನ್ನು ತೋರಿಸಿದಾಗ ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ ಆನ್ಲೈನ್ ಪೇಮೆಂಟ್ ಮಾಡಬೇಕು ಹಾಗೂ ಪ್ರಿಂಟೌಟ್ ಪಡೆಯಬೇಕು.
ಕೇವಲ ಐದರಿಂದ ಹತ್ತು ನಿಮಿಷದ ಒಳಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಬಳಸಿ ನಿಮ್ಮ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಸರ್ಕಾರದಿಂದ ನಿಗದಿಪಡಿಸಿರುವಂತಹ 25 ರೂಪಾಯಿ ಶುಲ್ಕವನ್ನು ನಾವು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. ಆದ್ದರಿಂದ ನಾವು ಪ್ರಿಂಟರ್ ಇರುವಂತಹ ಗಣಕಯಂತ್ರವನ್ನು ಆರಿಸಿದರೆ ಒಳಿತು. ಸರ್ಕಾರದಿಂದ ಬಂದಂತಹ ಇಂತಹ ಒಳ್ಳೆಯ ಹಾಗೂ ಮಧ್ಯಮ ವರ್ಗದವರಿಗಾಗಿ ಬಿಟ್ಟಿರುವಂತಹ ಆನ್ಲೈನ್ ಸೇವೆಗಳನ್ನು ಬಳಸುವುದು ಹೇಗೆ ಎಂದು ತಿಳಿದಿರುವುದಿಲ್ಲ ಹಾಗಾಗಿ ನಮ್ಮ ಈ ಮಾಹಿತಿ ಎಲ್ಲರಿಗೂ ಉಪಯುಕ್ತವಾಗಿದೆ ಎಂದು ಬಯಸುತ್ತೇವೆ.