ಈಗಿನ ಕಾಲದಲ್ಲಿ ಪ್ರತಿಯೊಂದು ಕುಟುಂಬಕ್ಕೂ ಕೂಡ ಒಂದು ವಾಹನದ ಅವಶ್ಯಕತೆ ಇದ್ದೇ ಇದೆ. ಅದರಲ್ಲೂ ದ್ವಿಚಕ್ರ ವಾಹನವನ್ನು (two wheeler) ಬೇಕೇ ಬೇಕು ಎನ್ನಬಹುದು. ಆದರೆ ಅದೇ ಸಮಯದಲ್ಲಿ ಇಂಧನಗಳ ಬೆಲೆ ಏರಿಕೆ, ವಾಯುಮಾಲಿನ್ಯ ಈ ರೀತಿ ಸಮಸ್ಯೆಗಳು ವಾಹನಗಳನ್ನು ಖರೀದಿಸುವುದಕ್ಕೆ ಯೋಚನೆ ಮಾಡುವಂತೆ ಮಾಡಿಬಿಡುತ್ತದೆ.
ಆದರೆ ಅದಕ್ಕೂ ಕೂಡ ಪರಿಹಾರವಿದ್ದು ಈ ರೀತಿ ಪರಿಸರ ಕಾಳಜಿ ಹೊಂದಿರುವವರು ಮತ್ತು ತಮ್ಮ ಹಣದ ಪೋಲಾಗುವಿಕೆ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ಎಲೆಕ್ಟ್ರಿಕಲ್ ವಾಹನಗಳ ಮೊರೆ ಹೋಗಬಹುದು ಅದರಲ್ಲೂ ಭಾರತದಂತಹ ಬೃಹತ್ ದೇಶದಲ್ಲಿ ಹತ್ತಾರು ಎಲೆಕ್ಟ್ರಿಕಲ್ ಬೈಕ್ ತಯಾರಿಕಾ ಕಂಪನಿಗಳು (electrical bike) ಇದ್ದು ಒಂದಕ್ಕಿಂತ ಒಂದು ತನ್ನ ವೈಶಿಷ್ಟಗಳಲ್ಲಿ ವಿಭಿನ್ನತೆ ತೋರಿ ಗ್ರಾಹಕನನ್ನು ಆಕರ್ಷಿಸುತ್ತಿದೆ.
ಬೆಲೆ, ಡಿಸೈನ್, ಮೈಲೇಜ್ ಯಾವುದರಲ್ಲೂ ಕಾಂಪ್ರಮೈಸ್ ಇಲ್ಲದಂತೆ ಸುಲಭವಾಗಿ ಎಲೆಕ್ಟ್ರಿಕಲ್ ವಾಹನವನ್ನು ಖರೀದಿಸಬಹುದು ಈಗ ಇವುಗಳ ಪಟ್ಟಿಗೆ ಮತ್ತೊಂದು ಕಂಪನಿಯ ಸ್ಕೂಟರ್ ಹೊಸದೊಂದು ಸೇರ್ಪಡೆ ಆಗಿದ್ದು ಅದರಲ್ಲೂ ಈ ಬಾರಿ ದೀಪಾವಳಿ ಸಮಯದಲ್ಲಿ ಈ ಕಂಪನಿಯು ಭರ್ಜರಿ ಆಫರ್ ಸಹ ನೀಡಿದೆ ಇದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಝಿಲಿಯೋ ಈವಾ ಎಲೆಕ್ಟ್ರಿಕಲ್ ಸ್ಕೂಟರ್ (Zelio Eeva electrical scooter) ಎನ್ನುವ ಹೆಸರಿನ ಈಗ ಸ್ಕೂಟರ್ ಮೈಲೇಜ್ ಹಾಗೂ ತನ್ನ ಬೆಲೆ ವಿಚಾರವಾಗಿ ಸುದ್ದಿಯಲ್ಲಿದೆ. ಮಾರುಕಟ್ಟೆಯಲ್ಲಿರುವ ಎಲ್ಲಾ ಇತರೆ ಬೈಕ್ ಗಳ ಮತ್ತು ಎಲ್ಲಾ ಎಲೆಕ್ಟ್ರಿಕಲ್ ಸ್ಕೂಟರ್ ಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನೀವು ಈ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಖರೀದಿಸಬಹುದಾಗಿದ್ದು.
ಇದರ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ ಈ ಸ್ಕೂಟರ್ ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್, ಕಂಟ್ರೋಲ್ ಸ್ಪೀಡೋಮೀಟರ್, ಪುಷ್ ಬಟನ್ ಕಂಟ್ರೋಲ್, ಡಿಜಿಟಲ್ ಟ್ರಿಪ್ ಮೀಟರ್, USB ಚಾರ್ಜಿಂಗ್ ಪಾಯಿಂಟ್, ಆಂಟಿ ತೆಫ್ಟ್ ಅಲಾರಾಂ, ಸೆಂಟ್ರಲ್ ಲಾಕಿಂಗ್ ಪಾರ್ಕಿಂಗ್ ಗೇರ್, ರಿವರ್ಸ್ ಪಾರ್ಕಿಂಗ್, LED ಲೈಟಿಂಗ್, LED ಟೇಲ್ ಲೈಟ್, LED ಟರ್ನ್, ಸಿಗ್ನಲ್ ಲ್ಯಾಂಪ್ ಹಾಗೂ DLRS ವಿಶೇಷತೆಗಳು ಹೆಚ್ಚು ಆಕರ್ಷಕವಾಗಿವೆ.
ಇದರ ಬೆಲೆ ವಿಚಾರಕ್ಕೆ ಬರುವುದಾದರೆ ಕಂಪನಿಯು ಈ ಸ್ಕೂಟರ್ ಅನ್ನು ಎರಡು ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ನ ಆರಂಭಿಕ ಎಕ್ಸ್ ಶೋ ರೂಮ್ ಬೆಲೆಯನ್ನು 54,575 ರೂ. ಗಳಿಗೆ ನಿಗದಿಯಾಗಿದ್ದು, ಇನ್ನು ಎಲೆಕ್ಟ್ರಿಕ್ ಸ್ಕೂಟರ್ ನ ಟಾಪ್ ವೇರಿಯಂಟ್ ಗೆ ರೂ. 57,475 ಇದೆ.
ಝಿಲಿಯೋ ಈವಾ ಎಲೆಕ್ಟ್ರಿಕ್ ಸ್ಕೂಟರ್ 28 Ah ಜೆಲ್ ಬ್ಯಾಟರಿ ಪ್ಯಾಕ್ ಅನ್ನು ಸಾಮರ್ಥ್ಯವಿದ್ದು, ಶಕ್ತಿಯುತ ಎಲೆಕ್ಟ್ರಿಕ್ ಮೋಟರ್ ಅನ್ನು ಸಂಯೋಜನೆಯನ್ನೊಳಗೊಂಡಿದೆ. ಈ ಮೋಟಾರ್ ತಯಾರಿಸಲು BLDC ತಂತ್ರಜ್ಞಾನವನ್ನು ಬಳಸಲಾಗಿದ್ದು ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದನೆಗೆ ಕಾರಣವಾಗಿದೆ.
ಸ್ಟ್ಯಾಂಡರ್ಡ್ ಚಾರ್ಜರ್ ಬಳಸಿ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತದೆ ಹಾಗೆಯೇ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 90 ಕಿ.ಮೀ ವರೆಗೂ ರೈಡ್ ಮಾಡಬಹುದಾಗಿದೆ. 25km ಮೈಲೇಜ್ ಅನ್ನು ಈ ಎಲೆಕ್ಟ್ರಿಕ ಸ್ಕೂಟರ್ ನೀಡುತ್ತಿದೆ. ಆಸಕ್ತಿ ಇದ್ದವರು ತಪ್ಪದೆ ಇಂದೇ ಖರೀದಿಸಿ.