ಕೇಂದ್ರ ಸರ್ಕಾರವು ಈಗಾಗಲೇ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸಾಕಷ್ಟ ಬದಲಾವಣೆಗಳನ್ನು ನಡೆಸಿದೆ ಇದರ ಬೆನ್ನಲ್ಲೇ ಅತಿ ಶೀಘ್ರದಲ್ಲಿಯೇ ಮಹತ್ವದ ನಿರ್ಧಾರವನ್ನು ಕೈಗೊಂಡು ಜಾರಿಗೆ ತರುವುದಾಗಿ ಸೂಚನೆಯನ್ನು ನೀಡಿದೆ ಸದ್ಯದಲ್ಲಿಯೇ ದೇಶದ ಲಕ್ಷಾಂತರ ಜನರ ಪಡಿತರ ಚೀಟಿಗಳು ರದ್ದಾಗಲಿವೆ. ಭಾರತ ದೇಶದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಉಚಿತಪಡಿತರ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಸರ್ಕಾರದ ಪ್ರಕಾರ ವಂಚನೆಯಿಂದ ಉಚಿತ ಪಡಿತರ ಯೋಜನೆಯ ಲಾಭವನ್ನು ಪಡೆಯುತ್ತಿರುವ ಸಲುವಾಗಿ ಈ ಒಂದು ಯೋಜನೆಯನ್ನು ರೂಪಿಸಲಾಗುತ್ತಿದೆ ಕೇಂದ್ರ ಸರ್ಕಾರವು ಇಂತಹವರ ಪಟ್ಟಿಯನ್ನು ಸಹ ಸಿದ್ಧಪಡಿಸಿದೆ ಮತ್ತು ಪಡಿತರ ಚೀಟಿಯನ್ನು ರದ್ದು ಪಡಿಸುವುದಾಗಿ ಘೋಷಣೆಯನ್ನು ನಡೆಸಿದೆ.
ಈ ಯೋಜನೆಯ ಪ್ರಕಾರ ಆದಾಯ ತೆರಿಗೆ ಪಾವತಿದಾರರು ಅಥವಾ 10 ಎಕರೆಗಿಂತ ಹೆಚ್ಚು ಜಮೀನನ್ನು ಹೊಂದಿರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗುತ್ತಿದೆ ಇವರಿಗೆ ಉಚಿತ ಪಡಿತರ ನೀಡುವುದನ್ನು ರದ್ದು ಮಾಡುವುದಾಗಿ ಸರ್ಕಾರ ಮಹತ್ವದ ಘೋಷಣೆಯನ್ನು ನೀಡಿದೆ ಉಚಿತ ಪಡಿತರದೊಂದಿಗೆ ವ್ಯಾಪಾರ ಮಾಡುವವರನ್ನು ಸಹ ಗುರುತಿಸಿದೆ ಯಾರೆಲ್ಲಾ ನಾಲ್ಕು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇರುತ್ತಾರೋ ಅಂತಹವರ ಕಾರ್ಡ್ ಕೂಡ ರದ್ದಾಗಲು ಸಿದ್ಧವಾಗಿದೆ.
ಈ ಎಲ್ಲಾ ವಿವರಗಳನ್ನು ಒಟ್ಟುಗೂಡಿಸಿ ಕೇಂದ್ರ ಸರ್ಕಾರವು ಒಂದು ಪಟ್ಟಿಯನ್ನು ಸಿದ್ಧಪಡಿಸಿ ಪಡಿತರ ವಿತರಕರಿಗೆ ಕಳಿಸಲಾಗುವುದು ಎಂದು ಘೋಷಣೆಯನ್ನು ಮಾಡಿದೆ ಸರ್ಕಾರದ ನಿಯಮಾನುಸಾರವಾಗಿ ಅನರ್ಹರ ಸಂಪೂರ್ಣ ಪಟ್ಟಿಯನ್ನು ವಿತರಿಕರಿಗೆ ಅಂದರೆ ಪಡಿತರ ನೀಡುವಂತಹ ಅಭ್ಯರ್ಥಿಗಳಿಗೆ ಕಳುಹಿಸಲಾಗುತ್ತದೆ ಈ ಪಟ್ಟಿಯನ್ನು ಆಧರಿಸಿ ಹೆಸರು ತೆಗೆದವರಿಗೆ ಡೀಲರ್ ಗಳು ಪಡಿತರವನ್ನು ವಿತರಿಸುವುದಿಲ್ಲ. ವಿತರಕರು ಅನರ್ಹರ ಹೆಸರನ್ನು ಗುರುತಿಸಿ ಅವರ ವರದಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತದೆ.ಬನಂತರ ಈ ವ್ಯಕ್ತಿಗಳ ಪಡಿತರ ಕಾರ್ಡನ್ನು ರದ್ದುಗೊಳಿಸಲಾಗುತ್ತದೆ.
ಹಲವಾರು ವರ್ಷಗಳಿಂದಲೂ ಸಹ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಜನರು ಮಣ್ಣೆರುಚಿಕೊಂಡು ಬರುತ್ತಿದ್ದಾರೆ ಅಂದರೆ ಪಡಿತರವನ್ನು ತೆಗೆದುಕೊಳ್ಳಲು ಅರ್ಹತೆ ಇಲ್ಲದೆ ಇದ್ದರೂ ಸಹ ಪಡಿತರವನ್ನು ಪಡೆದುಕೊಂಡು ಸರ್ಕಾರದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಈ ಮೂಲವಾಗಿ ನೋಡಿದರೆ ವಿಶೇಷವಾಗಿ ದೇಶದ ಸುಮಾರು 80 ಕೋಟಿಗೂ ಹೆಚ್ಚು ಜನರು ಸರ್ಕಾರದ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ ಆದರೆ ಕೆಲವರು ಈ ಯೋಜನೆಯ ಅಡಿ ನಕಲಿ ಪಡಿತರ ಪಡೆಯುತ್ತಿದ್ದಾರೆ ಅಂತಹವರ ವಿರುದ್ಧ ಕೇಂದ್ರ ಸರ್ಕಾರ ಈಗ ಕಠಿಣ ಕ್ರಮವನ್ನು ಕೈಗೊಳ್ಳುತ್ತಿದೆ.
ನಕಲಿ ಪಡಿತರ ಪಡೆಯುತ್ತಿರುವಂತಹವರಿಗೆ ಸದ್ಯದಲ್ಲಿಯೇ ಅವರ ಪಡಿತರ ಕಾರ್ಡ್ ರದ್ದಾಗುತ್ತದೆ ಅವರ ಕಾಡುಗಳನ್ನು ರದ್ದುಗೊಳಿಸುವುದಲ್ಲದೆ ಇದುವರೆಗೆ ಪಡೆದಿರುವ ಪಡಿತರವನ್ನು ಮರುಪಡೆಯಲು ನಿರ್ಧರಿಸಿದೆ. ಅದರಲ್ಲಿಯು ಉತ್ತರ ಪ್ರದೇಶದಲ್ಲಿ ನಕಲಿ ಪಡಿತರ ಪಡೆಯುತ್ತಿರುವಂತಹವರ ಸಂಖ್ಯೆ ಅಧಿಕವಾಗಿದೆ ಈ ಎಲ್ಲದರ ಬಗ್ಗೆ ವರದಿಗಳು ರೂಪಿಸಿದ್ದು ಸರ್ಕಾರ ಸದ್ಯದಲ್ಲಿಯೇ ಯಾರೆಲ್ಲ ನಕಲಿ ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ ಅಂತಹವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗುತ್ತಿದೆ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.