ಇದೊಂದು ಗೆಟಪ್ ಗಾಗಿ ದರ್ಶನ್ ಮಧ್ಯಾಹ್ನದ ಸಮಯ ಊಟನೇ ಮಾಡ್ತ ಇರ್ಲಿಲ್ಲ.! ಕಾಟೇರ ಸಕ್ಸಸ್ ಬಿಚ್ಚಿಟ್ಟ ನಿರ್ದೇಶಕ ತರುಣ್.!
ದರ್ಶನ್ (Darshan) ಅವರ ಕಾಟೇರ(Katera) ಸಿನಿಮಾವು ತುಂಬಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಎರಡು ವಾರಗಳಲ್ಲಿ 150 ಕೋಟಿ ಗಳಿಕೆ ಮಾಡುವ ಮೂಲಕ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸ್ವತಃ ದರ್ಶನ್ ಗಿಂತ ಅವರ ಸೆಲೆಬ್ರಿಸ್ ಗಳಿಗೆ ಈ ಗೆಲುವು ಅಪಾರ ಸಂತೋಷವನ್ನುಂಟು ಮಾಡಿದ್ದು ಡಿ ಬಾಸ್ ಅಭಿಮಾನಿಗಳಂತೂ ಎಲ್ಲೆಡೆ ಕಾಲರ್ ಎತ್ತಿ ಓಡಾಡುತ್ತಿದ್ದಾರೆ. ದರ್ಶನ್ ಅವರು ಇತ್ತೀಚೆಗೆ ಸಾಮಾಜಿಕ ಕಳಕಳಿ (Social awareness) ಹೊಂದಿರುವ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಯಜಮಾನ (Yajamana) ಮೂಲಕ ಎಣ್ಣೆ ಕ್ರಾಂತಿ…