Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಬಿಗ್ಬಾಸ್ ನಿಂದ ಆಚೆ ಬಂದ್ಮೇಲೆ ಜೀವ್ನ ತುಂಬಾ ಕಷ್ಟ ಆಗೋಗಿದೆ ನನ್ ಹೆಂಡ್ತಿಗೆ ಆಟೋಗೆ ದುಡ್ಡು ಕೋಡೋಕು ನನ್ ಅತ್ರ ಹಣ ಇಲ್ಲ ಎಂದು ಕಣ್ಣಿರಿಟ್ಟ ಆರ್ಯವರ್ಧನ್ ಗುರೂಜಿ.

Posted on February 21, 2023 By Admin No Comments on ಬಿಗ್ಬಾಸ್ ನಿಂದ ಆಚೆ ಬಂದ್ಮೇಲೆ ಜೀವ್ನ ತುಂಬಾ ಕಷ್ಟ ಆಗೋಗಿದೆ ನನ್ ಹೆಂಡ್ತಿಗೆ ಆಟೋಗೆ ದುಡ್ಡು ಕೋಡೋಕು ನನ್ ಅತ್ರ ಹಣ ಇಲ್ಲ ಎಂದು ಕಣ್ಣಿರಿಟ್ಟ ಆರ್ಯವರ್ಧನ್ ಗುರೂಜಿ.

 

ಕರ್ನಾಟಕದಲ್ಲಿ ನಂಬರ್ ಗುರೂಜೀ (Number Guruji) ಎಂದೇ ಖ್ಯಾತರಾಗಿರುವ ಜನ್ಮ ದಿನಾಂಕ ಆಧಾರಿತವಾಗಿ ಸಂಖ್ಯಾಶಾಸ್ತ್ರ ಹೇಳುವ ಮೂಲಕ ಫೇಮಸ್ ಆಗಿದ್ದ ಆರ್ಯವರ್ಧನ್ (Aryavardan) ಇವರು ಸಿಸಿಎಲ್ ಮತ್ತು ಟಿ ಟ್ವೆಂಟಿ ವರ್ಲ್ಡ್ ಕಪ್ ಮುಂತಾದ ಕ್ರಿಕೆಟ್ ಮ್ಯಾಚ್ ಇದ್ದಾಗಲೂ ಕೂಡ ಸಂಖ್ಯಾಶಾಸ್ತ್ರದ ಮೂಲಕ ಯಾರು ಯಾವ ಮ್ಯಾಚ್ ಗೆಲ್ಲುತ್ತಾರೆ ಎಂದು ಲೆಕ್ಕಚಾರ ಹಾಕಿ ಹೇಳುತ್ತಿದ್ದರು. ಬಹುತೇಕ ಕನ್ನಡದ ಎಲ್ಲ ಚಾನಲ್ ಗಳನ್ನು ಕೂಡ ಇವರ ಕಾರ್ಯಕ್ರಮ ಕೊಟ್ಟಿದ್ದಾರೆ.

ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಹಾ ಟ್ರೋಲ್ ಗೆ ಒಳಗಾಗುತ್ತಿದ್ದ ಆರ್ಯವರ್ಧನ್ ಅವರು ಈಗ ಬಿಗ್ ಬಾಸ್ ಆರ್ಯವರ್ಧನ್ ಎಂದು ಹೆಸರು ಪಡೆದಿದ್ದಾರೆ. ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿ ಮನೆಗೆ ಹೋಗಿದ್ಧ ಇವರು ಆ ಮೂಲಕ ತಮ್ಮ ಚಾರ್ಮ್ ಬದಲಾಯಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಆರ್ಯವರ್ಧನ್ ಬಗ್ಗೆ ಬಹುಶಃ ಎಲ್ಲರೂ ತಪ್ಪು ತಿಳಿದುಕೊಂಡಿದ್ದರು ಎಂದು ಹೇಳಬಹುದು. ಯಾಕೆಂದರೆ ಹೊರಗೆ ಇದ್ದಾಗ ಬಹಳ ಒರಟು ಮಾತುಗಳಿಂದ ಕಟು ಮನಸಿನವರಂತೆ ಬಿಂಬಿತರಾಗಿದ್ದ ಇವರು ಬಿಗ್ ಬಾಸ್ (Bigboss) ಮನೆಗೆ ಹೋದಮೇಲೆ ಆ ಅಭಿಪ್ರಾಯವನ್ನು ಬದಲಾಯಿಸಿದ್ದಾರೆ.

ಮನೆ ಒಳಗೆ ಹೋದ ಮೊದಲ ದಿನದಿಂದಲೂ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡು ಬಿಟ್ಟಿದ್ದಾರೆ. ಅಡುಗೆಮನೆಯನ್ನು ಚಾಣಕ್ಷನಾಗಿ ನಿಭಾಯಿಸಿದ ಬಗೆ, ಟಾಸ್ಕ್ ಗಳಲ್ಲಿ ತನ್ನ ಕೈಲಾದಷ್ಟು ತಾನು ತೊಡಗಿಕೊಂಡ ಪರಿ, ಜೊತೆಗೆ ಇತರ ಕಂಟೆಸ್ಟಂಟ್ ಗಳನ್ನು ಜೊತೆ ಹೊಂದಿಕೊಂಡು ಹೋಗುವ ರೀತಿ, ಅವರು ದುಃಖದಲ್ಲಿದ್ದಾಗ ಬೇಸರದಲ್ಲಿದ್ದಾಗ ಸಂತೈಸಿ ಅವರಿಗೆ ಸ್ಪೂರ್ತಿ ತುಂಬುವ ಆ ಶಕ್ತಿ ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲದೆ ಹೊರಗಿನ ಜನಕ್ಕೂ ಹಿಡಿಸಿತ್ತು. ಜೊತೆಗೆ ಮುದ್ದು ಪೆದ್ದು ಮಾತನಾಡಿ ಎಲ್ಲರನ್ನು ನಕ್ಕು ನಗಿಸುವ ಅವರ ಮುಗ್ಧತೆಯಿಂದ ಒಂದು ಪುಟ್ಟ ಮಗುವಿನಂತೆ ಬಿಗ್ ಬಾಸ್ ಮನೆ ಒಳಗಡೆ ಆರ್ಯವರ್ಧನ್ ಅವರು ಕಾಣಿಸಿಕೊಂಡಿದ್ದರು.

ಮನರಂಜನೆ ವಿಷಯದಲ್ಲಿ ಇವರೇ ಮೇಲುಗೈ ಏಕೆಂದರೆ ಇವರು ಆಡುತ್ತಿದ್ದ ಮಾತುಗಳು, ಮಾಡುತ್ತಿದ್ದ ಎಡವಟ್ಟುಗಳು ಎಲ್ಲರೂ ಹೊಟ್ಟೆ ಹಿಡಿದು ನಗುವಂತೆ ಮಾಡುತ್ತಿತ್ತು .ಮನೆ ಮಂದಿ ಕೂಡ ಇವರನ್ನು ಬಹಳ ಚೆನ್ನಾಗಿ ಹಚ್ಚಿಕೊಂಡಿದ್ದರು, ಮನೆ ಯಾವ ಸದಸ್ಯರು ಕೂಡ ಇವರ ಮೇಲೆ ಕೋಪ ಮಾಡಿಕೊಳ್ಳದೆ ದ್ವೇಷವನ್ನು ಸಾಧಿಸದೆ ಪ್ರೀತಿಸುತ್ತಿದ್ದರು. ಎಷ್ಟು ಸೀಸನ್ ಗಳಲ್ಲಿ ಬಹುಶಃ ಇವರನ್ನೇ ಎಷ್ಟು ಚೆನ್ನಾಗಿ ಸಹಕಂಟೆಸ್ಟೆಂಟ್ ಗಳು ಪ್ಯಾಂಪರ್ ಮಾಡಿರುವುದು ಎಂದು ಹೇಳಬಹುದು ಆಷ್ಟಮಟ್ಟಿಗೆ ಎಲ್ಲರ ಪ್ರೀತಿಗೂ ಪಾತ್ರರಾಗಿದ್ದರು.

ಈಗ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಸಾಲು ಸಾಲು ಸಂದರ್ಶನಗಳನ್ನು ಎದುರಿಸುತ್ತಿರುವ ಇವರು ಸುದ್ದಿಮನೆ ಎನ್ನುವ ಯೂಟ್ಯೂಬ್ ಚಾನೆಲ್ (Suddimane YouTube channel) ಜೊತೆ ಅವರ ಬಿಗ್ ಬಾಸ್ ಮನೆ ಅನುಭವಗಳು ಹಾಗೂ ಅದರಿಂದ ಹೊರಬಂದ ಮೇಲೆ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರಿಗೆ ಏನೋ ಒಂದು ರೀತಿ ಖಿನ್ನತೆ ಕಾಡುತ್ತಿದೆಯಂತೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಬಹಳ ಧೈರ್ಯವಾಗಿದ್ದೆ ಹೊರಬಂದ ಮೇಲೆ ಯಾವುದೋ ಒಂದು ರೀತಿ ಭಯ ಆವರಿಸಿಕೊಂಡಿದೆ.

ನಾನು ನಿಜವಾಗಲೂ ಬದುಕುತ್ತೇನಾ ಎನ್ನುವಷ್ಟರ ಮಟ್ಟಿಗೂ ನನ್ನ ಯೋಚನೆಗಳು ಹಾಳಾಗಿದೆ, ಇದರಿಂದ ಆಚೆ ಬರಲು ನನಗೆ ಕನಿಷ್ಠ ಮೂರರಿಂದ ಆರು ತಿಂಗಳಾದರೂ ಬೇಕು. ಅಲ್ಲಿಯವರೆಗೂ ಕೂಡ ನಾನು ಆಫೀಸ್ ತೆಗೆಯುವ ಯೋಚನೆ ಮಾಡಿಲ್ಲ. ಬಿಗ್ ಬಾಸ್ ಮನೆ ನನಗೆ ಚೆನ್ನಾಗಿ ಅಡ್ಜಸ್ಟ್ ಆಗುತ್ತು, ಅಡ್ಜಸ್ಟ್ ಮಾಡಿ ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಿದ್ದೆ, ಆ ಟೇಸ್ಟ್ ಅಡಿಕ್ಟ್ ಆಗಿತ್ತು ಈಗ ಹೊರಗೆ ಏನು ಕೊಟ್ಟರು ರುಚಿಸುತ್ತಿಲ್ಲ. ಜೊತೆಗೆ ಬಿಗ್ ಬಾಸ್ ಮನೆ ಒಳಗಡೆ ಕೆಲವೇ ಕೆಲವು ಜನರ ಜೊತೆಗಿದ್ದು ಈಗ ಸಮಾಜವನ್ನು ಎದುರಿಸಲು ಯಾವುದೋ ಒಂದು ರೀತಿ ಭಯ ಆಗುತ್ತಿದೆ.

ಗೆಲ್ಲಬೇಕು ಎನ್ನುವ ಆಸೆ ಖಂಡಿತ ನನಗೆ ಇತ್ತು. ಆದರೆ ಮನೆ ಒಳಗೆ ಹೋದ ಎರಡೇ ವಾರಕ್ಕೆ ಮದ್ಯ ರಾತ್ರಿ ಆಚೆ ಬರುತ್ತೇನೆ ಎನ್ನುವ ಸೂಚನೆ ಸಿಕ್ಕಿತು. ನಾನು ಬಿಗ್ ಬಾಸ್ ಗೆ ಪ್ರಿಪೇರ್ ಆಗಿ ಹೋಗಿರಲಿಲ್ಲ. ಯಾಕೆಂದರೆ ಈ ಹಿಂದೆ ಯಾವ ಸೀಸನ್ ಕೂಡ ನಾನು ನೋಡಿಲ್ಲ, ಕೆಲವು ಬೈಟ್ ಗಳನ್ನು ನೋಡಿದ್ದೆ ಅಷ್ಟೇ. ನನ್ನಿಂದ ಆದಷ್ಟು ಮಾಡಿದ್ದೇನೆ. ಜ್ಯೋತಿಷ್ಯ ಕೈಹಿಡಿತ್ತದೆ, ನನ್ನ ಕ್ಲೈಂಟ್ ಜೊತೆಗಿರುತ್ತಾರೆ ಎನ್ನುವ ನಂಬಿಕೆ ನನಗೆ ಇದೆ.

ಆದರೆ ಈಗ ಸದ್ಯಕ್ಕೆ ಬಹಳ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇನೆ. ನನ್ನ ಆಫೀಸ್ ಬಾಡಿಗೆ ಕಟ್ಟಲೂ ಕೂಡ ನನ್ನ ಬಳಿ ಹಣ ಇಲ್ಲ. ನನ್ನ ಕಾರ್ ಅನ್ನು ಲೋನಲ್ಲಿ ತೆಗೆದುಕೊಂಡಿರುವುದು. ಅದರ ಇಎಂಐ ಕೂಡ ಪೇ ಮಾಡಿಲ್ಲ. ಹೆಂಡತಿ ಆಟೋಗೆ ಹಣ ಕೇಳಿದರೆ ಅವರಿಗೆ ಆಟೋ ಹಣ ಕೊಡಲು ಕೂಡ ನನ್ನಿಂದ ಆಗುತ್ತಿಲ್ಲ. ಮುಂದೆ ನಾನು ಏನು ಆಗುತ್ತೇನೋ ಎನ್ನುವ ಕಲ್ಪನೆಯೂ ನನಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರ ಈ ಎಲ್ಲ ಮಾತುಗಳನ್ನು ಪೂರ್ತಿಯಾಗಿ ಕೇಳಲು ಈ ವಿಡಿಯೋವನ್ನು ನೋಡಿ.

Viral News

Post navigation

Previous Post: ಪ್ರಾಣಕ್ಕಿಂತಲೂ ಹೆಚ್ಚಾಗಿ ಸೌಂದರ್ಯ ಅವರನ್ನು ಪ್ರೀತಿಸುತ್ತಿದ್ದ ನಟ ಜಗಪತಿ ಸೌಂದರ್ಯ ಅವರನ್ನು ಬಿಟ್ಟು ಬೇರೆ ಅವರನ್ನು ಮದುವೆ ಆಗಲು ಕಾರಣವೇನು ಗೊತ್ತ.?
Next Post: ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಲು ಮಾಲಾಶ್ರೀ ಪುತ್ರಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme