ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಚಾರ ನಿಮಗೆ ತಿಳಿದೇ ಇದೆ. ಹೌದು ಪುನೀತ್ ರಾಜಕುಮಾರ್(Puneeth Rajkumar) ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ “ಪ್ರೇಮದ ಕಾಣಿಕೆ” ಎಂಬ ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಅಂತಾನೆ ಹೇಳಬಹುದು. ಅಷ್ಟಕ್ಕೂ ಇದೇನು ಫ್ರೀ ಪ್ಲಾನ್ ಅಲ್ಲ ಡಾಕ್ಟರ್ ರಾಜಕುಮಾರ್(Dr Rajkumar) ಅವರ ಪ್ರೇಮದ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವಾಗ ಸಿನಿಮಾದಲ್ಲಿ ಎಳೆ ಮಗುವಿನ ಪಾತ್ರ ಒಂದು ನಿರ್ಮಾಣವಾಗಿರುತ್ತದೆ.
ಈ ಪಾತ್ರಕ್ಕೆ ಬೇರೆ ಮಗುವನ್ನು ಕರೆತರುವಂಥಹ ಯೋಚನೆ ಇರುತ್ತದೆ ಅಂದುಕೊಂಡ ಹಾಗೆ ಬೇರೆ ಮಗು ಕೂಡ ಬರಬೇಕಾಗುತ್ತದೆ ಆದರೆ ಕೆಲವು ಅನಿವಾರ್ಯದ ಪರಿಸ್ಥಿತಿಯಿಂದಾಗಿ ಶೂಟಿಂಗ್ ಗೆ ಮಗುವನ್ನು ಕರೆತರಲು ಸಾಧ್ಯವಾಗುವುದಿಲ್ಲ. ಆಗ ಪಾರ್ವತಮ್ಮನವರು ತಮ್ಮ ಮಗು ಆದಂತಹ ಅಂದರೆ ಪುನೀತ್ ರಾಜಕುಮಾರ್ ಅವರು ಚಿಕ್ಕವರು ಆಗಿರುವುದರಿಂದ ಬೇರೆ ಮಗುವನ್ನು ಶೂಟಿಂಗ್ ಗೆ ಕರೆ ತರಲು ಸಾಧ್ಯವಾಗದಿದ್ದರೆ ಏನಂತೆ ಅಪ್ಪುನೇ ಈ ಸಿನಿಮಾದಲ್ಲಿ ಹಾಕಿಕೊಳ್ಳಿ ಎಂದು ದೊಡ್ಡತನವನ್ನು ಮೆರೆದರೂ.
ಅಲ್ಲಿಂದ ಶುರು ಆಯ್ತು ನೋಡಿ ನಮ್ಮ ಅಪ್ಪು ಅವರ ಸಿನಿ ಜರ್ನಿ ತದನಂತರ ಭಾಗ್ಯವಂತರು, ಬೆಟ್ಟದ ಹೂವು, ಎರಡು ನಕ್ಷತ್ರ, ಚಲಿಸುವ ಮೋಡಗಳು, ಪರಶುರಾಮ್, ಭಕ್ತ ಪ್ರಹ್ಲಾದ, ಹೀಗೆ ಸಾಕಷ್ಟು ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಸೈ ಎನಿಸಿಕೊಂಡರು ಅಷ್ಟೇ ಯಾಕೆ ಬಾಲ್ಯದಲ್ಲಿಯೇ ರಾಷ್ಟ್ರಪ್ರಶಸ್ತಿಯನ್ನು ಕೂಡ ತಮ್ಮ ಮುಡುಗೇರಿಸಿಕೊಂಡರು. ಇದರಿಂದಲೇ ನಮಗೆ ತಿಳಿಯುತ್ತದೆ ಕಲಾದೇವತೆ ಅಪ್ಪುವನ್ನು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ಆವರಿಸಿದಳು ಎಂದು.
ಇದಾದ ನಂತರ ಪುನೀತ್ ರಾಜಕುಮಾರ್ ಅವರು ಒಂದಷ್ಟು ವರ್ಷ ಬ್ರೇಕ್ ತೆಗೆದುಕೊಳ್ಳುತ್ತಾರೆ ಹೌದು ಬಾಲ್ಯದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟಿಸಿದಂತಹ ಅಪ್ಪು ದೊಡ್ಡವರಾದ ನಂತರ ಚಿತ್ರರಂಗದಿಂದ ದೂರ ಉಳಿಯುತ್ತಾರೆ. ಬಿಸಿನೆಸ್ ನಲ್ಲಿ ಕೈಗೊಳ್ಳಬೇಕು ಸ್ವಂತ ಉದ್ಯಮ ನಡೆಸಬೇಕು ಎಂಬ ಯೋಚನೆಯಲ್ಲಿ ತೊಡಗುತ್ತಾರೆ, ಅದರಂತೆ ಗ್ರಾನೆಟ್ ಬಿಸಿನೆಸ್ ಅನ್ನು ಕೂಡ ಮಾಡುತ್ತಾರೆ. ಆದರೆ ಕೆಲವು ಕಾರಣಾಂತರಗಳಿಂದ ಅದು ಕೂಡ ಅರ್ಧಕ್ಕೆ ನಿಂತು ಹೋಗುತ್ತದೆ ಆಗ ಪಾರ್ವತಮ್ಮ ರಾಜಕುಮಾರ್ ಅವರು ಮಗನನ್ನು ಮತ್ತೆ ಚಿತ್ರರಂಗಕ್ಕೆ ಕರೆತರುವಂತಹ ಯೋಚನೆ ಮಾಡುತ್ತಾರೆ.
ವಜ್ರೇಶ್ವರಿ ಮೂಲಕ 2000ನೇ ಇಸವಿಯಲ್ಲಿ ಪುನೀತ್ ರಾಜಕುಮಾರ್ ಅವರು ಅಪ್ಪು ಎಂಬ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾಗೆ ರಕ್ಷಿತಾ(Rakshitha) ಅವರು ನಾಯಕ ನಟಿಯಾಗಿ ಆಯ್ಕೆಯಾಗುತ್ತಾರೆ. ಮೊದಲ ಸಿನಿಮಾ ಸೂಪರ್ ಹಿಟ್ ಆಗುತ್ತದೆ ತದನಂತರ ಅಭಿ ನಮ್ಮ ಬಸವ ವೀರ ಕನ್ನಡಿಗ ಹೀಗೆಉಳಿಯುತ್ತಾರೆ. ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಳ್ಳುತ್ತಾರೆ ಅತಿದೊಡ್ಡ ಫ್ಯಾನ್ಸ್ ಫಾಲೋವರ್ಸ್ ಅನ್ನು ಕೂಡ ಒಳಗೊಂಡಿದ್ದಾರೆ.
ಇನ್ನು ಪುನೀತ್ ರಾಜಕುಮಾರ್ ಅವರು ಹುಟ್ಟುತ್ತ ಅಗರ್ಬ ಶ್ರೀಮಂತರು ಏಕೆಂದರೆ ಅಣ್ಣಾವ್ರು ಅದಾಗಲೇ 200 ಸಿನಿಮಾಗಳನ್ನು ಮಾಡಿದರೂ ಒಂದಷ್ಟು ಆಸ್ತಿಯನ್ನು ಸಂಪಾದನೆ ಮಾಡಿದರು. ತಮ್ಮದೇ ಆದಂತಹ ಸ್ವಂತ ಪ್ರೊಡಕ್ಷನ್ ಹೌಸ್ ಅನ್ನು ಕೂಡ ಹೊಂದಿದ್ದರು ಇಷ್ಟೆಲ್ಲ ಆಸ್ತಿ ಸಿರಿ ಸಂಪತ್ತು ಇದ್ದರೂ ಕೂಡ ಅಪ್ಪು ಅವರು ದುಂದು ವ್ಯರ್ಥ ಮಾಡದೆ ತಮ್ಮ ಸ್ವಂತ ದುಡಿಮೆಯಿಂದಲೇ ತಾವು ಬದುಕಬೇಕು ಎಂಬ ನಿರ್ಧಾರವನ್ನು ಮಾಡಿರುತ್ತಾರೆ. ಇನ್ನು ಅಪ್ಪು ಅವರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಬರೋಬ್ಬರಿ 5 ಕೋಟಿಯಿಂದ 8 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ.
ಎಷ್ಟಿದ್ದರೇನಂತೆ ಈಗ ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ನಮ್ಮ ಜೊತೆ ಇಲ್ಲ ಎಂಬುವುದೇ ಬಹಳ ನೋವಿದಾ ಸಂಗತಿ ಅದೇನೆ ಆಗಲಿ ಈ ನೋವನ್ನು ಬರಿಸುವಂತಹ ಶಕ್ತಿ ದೊಡ್ಮನೆ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ನೀಡಲಿ ಎಂಬುವುದು ಅಷ್ಟೇ ನಮ್ಮ ಆಶಯ. ಅಪ್ಪು ಅವರ ಕನಸಿನ ಕೂಸು ಆದಂತಹ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಅನ್ನು ಸದ್ಯಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಒಂದು ನಿರ್ಮಾಣ ಸಂಸ್ಥೆಯ ಮೂಲಕ ಪ್ರತಿಭೆ ಇರುವಂತಹ ಯುವ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿ ಕೊಡುತ್ತಿದ್ದಾರೆ.
ಒಂದು ವೇಳೆ ಅಪ್ಪು ಅವರು ಇದ್ದಿದ್ದರೆ ಈ ಒಂದು ಸಂಸ್ಥೆಯ ಮೂಲಕ ಇನ್ನಷ್ಟು ಪ್ರತಿಭೆಗಳು ಹೊರ ಬರುತ್ತಿದ್ದರು ಆದರೆ ವಿಧಿ ಬರಹವೋ ಅಥವಾ ಹಣೆ ಬರಹವೋ ಏನೋ ಗೊತ್ತಿಲ್ಲ ಅಪ್ಪು ಅವರ ಒಳ್ಳೆಯ ಸತ್ಕಾರ್ಯಗಳು ಮುನ್ನುಗ್ಗುವುದು ಆ ದೇವರಿಗೂ ಕೂಡ ಇಷ್ಟ ಇರಲಿಲ್ಲವೇನು? ಈ ಕಾರಣಕ್ಕಾಗಿಯೇ ಅಪ್ಪು ಅವರನ್ನು ನಮ್ಮೆಲ್ಲರಿಂದ ದೂರ ಮಾಡಿದ್ದಾನೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ರೀತಿಯಾಗಿ ಅಪ್ಪು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಮಾನಸಿಕವಾಗಿ ಜೊತೆಗಿದ್ದಾರೆ. ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಕೂಡ ಅವರು ನಮ್ಮೊಟ್ಟಿಗೆ ಇದ್ದಾರೆ ಎಂಬ ಆಶಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಮುಂದೆ ಸಾಗುವುದಷ್ಟೇ ನಮಗುಳಿದಿರುವ ಒಂದೇ ದಾರಿ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಈ ಲೇಖನಕ್ಕೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ.