Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಪ್ಪು ಆಸೆ ಕೊನೆಗೂ ನೆರವೇರಲೇ ಇಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ. ಅಷ್ಟಕ್ಕೂ ಅಪ್ಪು ಅವರ ಆಸೆ ಏನಾಗಿತ್ತು ಗೊತ್ತ.?

Posted on February 14, 2023 By Admin No Comments on ಅಪ್ಪು ಆಸೆ ಕೊನೆಗೂ ನೆರವೇರಲೇ ಇಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ. ಅಷ್ಟಕ್ಕೂ ಅಪ್ಪು ಅವರ ಆಸೆ ಏನಾಗಿತ್ತು ಗೊತ್ತ.?

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power star Puneeth rajkumar) ಕರ್ನಾಟಕ ಕಂಡ ಶ್ರೇಷ್ಠ ನಟ ಹಾಗೂ ಅಂತಹ ಮೇರು ವ್ಯಕ್ತಿತ್ವ. ಇದುವರೆಗೂ ಅಣ್ಣಾವ್ರ ಮಗ ಅಥವಾ ಸ್ಟಾರ್ ಹೀರೋ ಎನ್ನುವ ಕಾರಣಕ್ಕೆ ಅಪ್ಪುವನ್ನು ಪ್ರೀತಿಸುತ್ತಿದ್ದ ಜನರಿಗೆ ಅವರ ಮ.ರ.ಣ.ದ ನಂತರ ಅವರು ಎಂತಹ ದೇವತಾ ಮನುಷ್ಯ ಎನ್ನುವುದು ತಿಳಿದಿದೆ. ಇಂದು ಇಡೀ ಕರುನಾಡ ಜನತೆ ಇಂತಹ ಒಬ್ಬ ದೇವತಾ ಮಾನವನನ್ನು ಕಳೆದು ಕೊಂಡುಬಿಟ್ಟವಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.

ಅದರಲ್ಲೂ ಅಪ್ಪು ಅಭಿಮಾನಿಗಳ ಪಾಲಿಗೆ ಈ ದುಃಖ ಎಂದಿಗೂ ತೀರದು, ಆರದ ಗಾಯದಂತೆ ಅಪ್ಪುವಿನ ಅ.ಕಾ.ಲಿ.ಕ ಮೃ.ತ್ಯು ಎಲ್ಲರನ್ನೂ ಬಾಧಿಸುತ್ತಿದೆ. ಅಪ್ಪು ಅವರು ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವರು ಎಂದರೆ ತಪ್ಪಾಗಲಾರದು. ಯಾಕೆಂದರೆ ಆ ವೇಳೆಗಾಗಲೇ ವರನಟ ಡಾಕ್ಟರ್ ರಾಜಕುಮಾರ್ ಅವರು ಕರ್ನಾಟಕ ಮಾತ್ರವಲ್ಲದ್ದೇ ಇಡಿ ಭಾರತದಲ್ಲಿ ಗುರುತಿಸಿಕೊಳ್ಳುವಷ್ಟು ದೊಡ್ಡ ನಟರಾಗಿದ್ದರು.

ಅಣ್ಣಾವರಿಗೆ ಇಡೀ ಕರ್ನಾಟಕದ ತುಂಬಾ ಅಪಾರ ಅಭಿಮಾನಿ ಬಳಗ, ಹೆಸರು, ಹಣ ಎಲ್ಲವೂ ಇತ್ತು. ಹೆಸರಿಗೆ ತಕ್ಕ ಹಾಗೆ ಅಕ್ಷರಶಃ ರಾಜಕುಮಾರನಂತೆಯೇ ಬದುಕುವ ಅನುಕೂಲ ಇತ್ತು. ಆದರೆ ಅಣ್ಣಾವ್ರು ಒಂದು ಹಂತಕ್ಕೆ ಬರುತ್ತಿದ್ದಂತೆ ಬದುಕನ್ನು ಬಹಳ ಸರಳವಾಗಿಸಿ ಕೊಂಡು ಬಿಟ್ಟರು ಇಂದಿಗೂ ಸಹ ಸರಳತೆಗೆ ಎಲ್ಲರೂ ಅಣ್ಣಾವ್ರನ್ನೇ ಉದಾಹರಣೆಯಾಗಿ ಕೊಡುತ್ತೇವೆ. ಅಂತಹ ಘನ ನಟನ ಪುತ್ರನಾಗಿ ಅಪ್ಪು ಅವರು ಜನಿಸಿದರು ಅಪ್ಪು ಅವರಿಗೆ ಬಾಲ್ಯದಿಂದಲೂ ಯಾವುದಕ್ಕೂ ಕೊರತೆ ಇರಲಿಲ್ಲ ವಿದ್ಯಾಭ್ಯಾಸಕ್ಕಿಂತ ಸಿನಿಮಾ ಇಂಡಸ್ಟ್ರಿಯೇ ಅವರನ್ನು ಕೈಬೀಸಿ ಕರೆದಿತ್ತು.

ಈ ಕಾರಣಕ್ಕಾಗಿ ಅಪ್ಪನ ಜೊತೆ ಸೆಟ್ಟಿಗೆ ಹೋಗುತ್ತಿದ್ದವರು ಬಾಲ ನಟನಾಗಿಯೇ ಹೆಸರುವಾಸಿಯಾದರು. ಆಡುವ ವಯಸ್ಸಿನಲ್ಲಿ ಹೋಗಿ ಬೆಟ್ಟದ ಹೂವು (Bettada hoovu) ಸಿನಿಮಾಗೆ ರಾಷ್ಟ್ರಪತಿಗಳಿಂದ ರಾಷ್ಟ್ರಪ್ರಶಸ್ತಿಯನ್ನು (Award) ಗಳಿಸಿಕೊಂಡು ಬಂದರು. ಈ ರೀತಿ ಯುವರಾಜನಂತೆ ಬೆಳೆಯುತ್ತಿದ್ದ ಅಪ್ಪು ಸಹ ಕಡೆ ದಿನಗಳಲ್ಲಿ ವಿನಯದ ಮೂರ್ತಿಯಾಗಿ ಹೋದರು. ಇಂದು ಜನ ಅಪ್ಪು ಸ್ಟಾರ್ ನಟ ಎನ್ನುವುದಕ್ಕಿಂತಲೂ ಹೆಚ್ಚಾಗಿ ಇಂತಹ ವಿಶಾಲ ಹೃದಯದ ವ್ಯಕ್ತಿಯನ್ನು ದೇವರು ಕಿತ್ತುಕೊಂಡುಬಿಟ್ಟನಲ್ಲ ಎಂದು ರೋಧಿಸುತ್ತಿದ್ದಾರೆ.

ಯಾಕೆಂದರೆ ಅಪ್ಪು ಇತ್ತೀಚೆಗೆ ಮಾಡುತ್ತಿದ್ದ ಎಲ್ಲ ಸಿನಿಮಾಗಳು ಕೂಡ ಸಮಾಜಕ್ಕೆ ಸಂದೇಶ ಕೊಡುವ ರೀತಿ ಇತ್ತು. ಬೆಳೆಯುತ್ತಿದ್ದಂತೆ ಅಪ್ಪು ತಮ್ಮ ಸಿನಿಮಾದ ಆಯ್ಕೆಯನ್ನು ಬದಲಾಯಿಸಿಕೊಂಡರು ಹಾಗೂ ಬದುಕುವ ರೀತಿಯನ್ನು ಸಹಾ ಬದಲಾಯಿಸಿಕೊಂಡರು. ಸದಾ ಜನಸೇವೆಗಾಗಿ ತಮ್ಮ ಜೀವನವನ್ನು ಮುಡಿಪುಟ್ಟ ಇವರು ಬಲಗೈಗೆ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎನ್ನುವಂತೆ ಎಲ್ಲ ವಿಷಯವನ್ನು ಕೂಡ ಗುಟ್ಟಾಗಿ ಇಟ್ಟಿದ್ದರು.

ಮೈಸೂರಿನ ಶಕ್ತಿಧಾಮದ 1500 ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ವಸತಿ ಹಾಗೂ ಆಹಾರದ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಮಾತ್ರವಲ್ಲದೇ ಎಷ್ಟೋ ವೃದ್ಧಾಶ್ರಮ ಅನಾಥಾಶ್ರಮ ಗೋಶಾಲೆ ಇವುಗಳಿಗೆ ಹಣವನ್ನು ಕೊಡುತ್ತಿದ್ದರು. ಕರ್ನಾಟಕದ ರೈತರಿಗೆ ಉಪಯೋಗವಾಗಲಿ ಎಂದು ಉಚಿತವಾಗಿ ನಂದಿನಿ ಹಾಲಿನ ಜಾಹಿರಾತಿನಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಕೂಡ ಆಗಿದ್ದರು.

ಈ ರೀತಿ ಅಪ್ಪು ಜನಸೇವೆಯನ್ನು ಉಸಿರಾಗಿಸಿಕೊಂಡು ಬದುಕ ತೊಡಗಿದರು. ಅಪ್ಪು ಅವರಿಗೆ ಬಹುಶಃ ಸಾ.ವಿ.ನ ಸೂಚನೆ ಸಿಕ್ಕಿತ್ತೋ ಏನೋ, ಅಪ್ಪು ಅವರು ಅಭಿಮಾನಿಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಡಬೇಕು ಎಂದು ನಿರ್ಧಾರ ಮಾಡಿ ತಮ್ಮಿಂದ ಆದಷ್ಟು ಕರುನಾಡಿಗೆ ಸಹಾಯ ಮಾಡಲು ಟೊಂಕ ಕಟ್ಟಿ ನಿಂತಿದ್ದರು. ಆದರೆ ಆ ದೇವರು ಅವರ ಒಳ್ಳೆತನವನ್ನು ನೋಡಿ ಭೂಮಿ ಮೇಲೆ ಇರಲು ಯೋಗ್ಯನೆಲ್ಲ ಸ್ವರ್ಗ ವಾಸಿಯಾಗಿ ಬಿಡು ಎಂದು ಕರೆದುಕೊಂಡು ಬಿಟ್ಟರೆ ಎನಿಸುತ್ತದೆ.

ಅಪ್ಪು ಅವರಿಗೆ ಇನ್ನು ಅನೇಕ ಸಿನಿಮಾಗಳನ್ನು ಮಾಡುವ ಆಸೆ ಇತ್ತು, ಅದರಲ್ಲೂ ಅವರ ಸಾ.ವಿ.ನ ನಂತರ ರಿಲೀಸ್ ಆದ ಗಂಧದಗುಡಿಯೆನ್ನುವ (Gandada Gudi) ಡಾಕ್ಯುಮೆಂಟರಿ ಚಿತ್ರ ಕರ್ನಾಟಕದ ಸೊಬಗು ಸೌಂದರ್ಯವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಹೊಂದಿತ್ತು. ಅವರದ್ದೇ ಪ್ರೊಡಕ್ಷನ್ ಹೌಸ್ ಅಲ್ಲಿ ಈ ಸಿನಿಮಾವನ್ನು ಅಪ್ಪು ಮಾಡಿದ್ದರು. ಆದರೆ ಅದು ರಿಲೀಸ್ ಆಗುವ ಮುನ್ನವೇ ಕಣ್ಮುಚ್ಚಿಕೊಂಡು ಬಿಟ್ಟರು.

ಇದರೊಂದಿಗೆ ಅಪ್ಪು ಅವರಿಗೆ ಇನ್ನೊಂದು ಕನಸು ಕೂಡ ನನಸಾಗದೆ ಹಾಗೆ ಉಳಿದಿತ್ತು. ಅದೇನೆಂದರೆ ಅಪ್ಪು ಅವರು ಜೇಮ್ಸ್ (James) ಸಿನಿಮಾ ಶೂಟಿಂಗ್ ವೇಳೆಗೆ ಹೇಳಿಕೊಂಡಿದ್ದರಂತೆ, ಈ ಸಿನಿಮಾ ಆದಮೇಲೆ ನಾನು ನನ್ನ ಎದೆ ಮೇಲೆ “ಅಭಿಮಾನಿಗಳೇ ನಮ್ಮನೆ ದೇವರು” ಎಂದು ಹಚ್ಚೆ (tattoo)ಹಾಕಿಸಿಕೊಳ್ಳಬೇಕು ಎಂದಿದ್ದೇನೆ ಎಂದು. ಆದರೆ ಜೇಮ್ಸ್ ಚಿತ್ರ ರಿಲೀಸ್ ಆಗುವ ಮುನ್ನವೇ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿ ಬಿಟ್ಟರು ಹಾಗಾಗಿ ಇದು ಕನಸಾಗಿಯೇ ಉಳಿದು ಹೋಯಿತು. ಈಗ ದರ್ಶನ್ ಅವರು ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ ಹಾಕಿಸಿಕೊಂಡಿರುವ ಬೆನ್ನಲ್ಲೇ ಪುನೀತ್ ಅವರ ಹಚ್ಚೆ ಆಸೆಯ ಬಗ್ಗೆ ಜೇಮ್ಸ್ ನಿರ್ಮಾಪಕರ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral News Tags:Appu, Puneeth

Post navigation

Previous Post: ಅಪ್ಪು ಅಭಿನಯದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ
Next Post: ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme