ಸಾಮಾನ್ಯವಾಗಿ ಚಿತ್ರರಂಗ ಎನ್ನುವುದು ಎಲ್ಲರನ್ನು ಆಕರ್ಷಿಸಿಬಿಡುತ್ತದೆ, ಅದಕ್ಕೆ ಇರುವ ಶಕ್ತಿಯೇ ಅಂತಹದ್ದು. ತೆರೆ ಮೇಲೆ ಹೀರೋ ಆಗಿ ಹೀರೋಯಿನ್ ಆಗಿ ಮಿಂಚಬೇಕು ಎಂದು ಸಾಮಾನ್ಯರಿಗೂ ಸಹಾ ಆಸೆ ಇರುತ್ತದೆ. ಕೆಲವರು ಬಾಲ್ಯದಿಂದಲೇ ಇದರ ಬಗ್ಗೆ ಕನಸು ಕಂಡುಕೊಂಡು ಇದಕ್ಕಾಗಿ ತಯಾರಿ ಪಟ್ಟಿಕೊಂಡು ಇಂಡಸ್ಟ್ರಿಗೆ ಬಂದವರು ಇದ್ದಾರೆ, ಕೆಲವರು ಮಧ್ಯದಲ್ಲೆಲ್ಲೋ ಸಿನಿಮಾದವರ ಕಣ್ಣಿಗೆ ಬಿದ್ದು ಅವರನ್ನು ಒಪ್ಪಿಸಿ ಕರೆದುಕೊಂಡು ಬಂದು ಕಾರಣ ಇಲ್ಲಿ ಸೇರಿದವರು ಇದ್ದಾರೆ.
ಇನ್ನೊಂದು ಬಳಗವಿದೆ ಇಲ್ಲಿ ಅವರಿಗೆ ಎಂಟ್ರಿ ಆಗುವುದಕ್ಕೆ ಯಾವುದೇ ಸರ್ಕಸ್ ಮಾಡುವ ಅಗತ್ಯವೇ ಇರುವುದಿಲ್ಲ. ತಮ್ಮ ಕುಟುಂಬದವರೇ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದ ಕಾರಣ ಸುಲಭವಾಗಿ ಅವಕಾಶಗಳು ಸಿಕ್ಕಿರುತ್ತದೆ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಅನೇಕ ಕಲಾವಿದರನ್ನೇ ಗಮನಿಸಿದರೆ ಅವರ ಕುಟುಂಬದಲ್ಲೇ ಇನ್ನಷ್ಟು ಸದಸ್ಯರು ಕಲಾವಿದರಾಗಿ ಇಲ್ಲಿರುವುದು ನಮಗೆ ತಿಳಿದು ಬರುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ನೇರ ಮೇರುನಟ ಡಾ. ರಾಜಕುಮಾರ್ ಅವರ ದೊಡ್ಮನೆಯಿಂದಲೇ ಸಾಕಷ್ಟು ತಾರೆಗಳು ನಮ್ಮ ಚಿತ್ರರಂಗದಲ್ಲಿ ಇದ್ದಾರೆ.
ಈಗ ಸದ್ಯದಲ್ಲೇ ಮತ್ತೊಬ್ಬರು ಅದಕ್ಕೆ ಎಂಟ್ರಿ ಆಗುವ ಸಾಧ್ಯತೆ ಕೂಡ ಇದೆ. ಅಣ್ಣಾವ್ರ ತಂದೆ ಸಹ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹೀಗಾಗಿ ಬಣ್ಣದ ಆಸಕ್ತಿ ಬಾಲ್ಯದಿಂದಲೇ ರಾಜಣ್ಣನಿಗೆ ಬಂದಿತ್ತು. ನಂತರ ಹೊಟ್ಟೆಪಾಡಿಗಾಗಿ ನಾಟಕಗಳನ್ನು ಮಾಡುತ್ತಿದ್ದವರು ಸಿನಿಮಾ ಮಾಡಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಭದ್ರವಾದ ಬುನಾದಿ ಹಾಕಿಕೊಟ್ಟರು. ಅವರು ಅಂದು ಹಾಕಿದ ಅಡಿಪಾಯದಿಂದಲೇ ಈಗ ಇಂಟರ್ನ್ಯಾಷನಲ್ ಮಟ್ಟಕ್ಕೆ ನಮ್ಮ ಕನ್ನಡ ಚಿತ್ರರಂಗ ಹೆಸರು ಮಾಡುತ್ತಿರುವುದು. ಅಣ್ಣಾವ್ರ ಐದು ಜನ ಮಕ್ಕಳಲ್ಲಿ ಮೂರು ಜನ ಗಂಡು ಮಕ್ಕಳು ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಗಳು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಹೀರೋಗಳಾಗಿ ಅಭಿನಯಿಸಿ ನಮ್ಮನ್ನು ಮನೋರಂಜಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮಕ್ಕಳು ಕೂಡ ಇಂಡಸ್ಟ್ರಿಗೆ ಬರುತ್ತಿದ್ದಾರೆ. ಪೂರ್ಣಿಮಾ ಅವರ ಪತಿ ರಾಮ್ ಕುಮಾರ್ ಅವರು ಸಹ 90ರ ದಶಕದ ಚಾಕಲೇಟ್ ಹೀರೋ ಮತ್ತು ಇವರ ಮಕ್ಕಳಾದ ಮತ್ತು ಧೀರಜ್ ರಾಮಕುಮಾರ್ ಅವರು ಹೀರೋ ಆಗಿ ಹಾಗೂ ಮಗಳು ಧನ್ಯ ರಾಮ್ ಕುಮಾರ್ ಹೀರೋಯಿನ್ ಆಗಿ ಪಾದಾರ್ಪಣೆ ಮಾಡಿದ್ದಾರೆ.
ಲಕ್ಷ್ಮಿ ಅವರ ಪುತ್ರನೂ ನಿಂಬಿಯ ಬನಾದ ಮೇಲೆ ಚಿತ್ರದಿಂದ ಲಾಂಚ್ ಆಗುತ್ತಿದ್ದಾರೆ. ಮತ್ತು ಶಿವರಾಜ್ ಕುಮಾರ್ ಅವರ ಇಬ್ಬರ ಪುತ್ರಿಯರಲ್ಲಿ ನಿರೂಪಮ ಅವರು ನಿರ್ಮಾಪಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಇಬ್ಬರ ಮಕ್ಕಳು ಸಹ ಹೀರೋಗಳಾಗಿದ್ದು ಮೊದಲ ಮಗ ವಿನಯ್ ರಾಜಕುಮಾರ್ ಅವರು ಈಗಾಗಲೇ ರನ್ ಆಂಟೋನಿ ಸಿದ್ದಾರ್ಥ್ ಅನಂತ ವರ್ಸಸ್ ನುಸ್ರತ್ ಮುಂತಾದ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಯುವರಾಜ್ ಕುಮಾರ್ ಅವರ ರಂಗ ಪ್ರವೇಶಕ್ಕೆ ಸಕಲ ಸಿದ್ಧತೆಯು ನಡೆಯುತ್ತಿದೆ. ಇನ್ನು ಪುನೀತ್ ರಾಜಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಬಹಳ ಚಿಕ್ಕವರಾಗಿದ್ದು ಇನ್ನು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೊದಲ ಮಗಳು ಧೃತಿ ಬಹಳ ಬುದ್ಧಿವಂತೆ ಆಗಿದ್ದು ತಮ್ಮದೇ ಸ್ಕಾಲರ್ಶಿಪ್ ಇಂದ ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಂದಿತಾ ಈಗಿನ್ನೂ ಪಿಯುಸಿ ಓದುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಧೃತಿ ಅವರು ವಿದೇಶದಿಂದ ವಿದ್ಯಾಭ್ಯಾಸ ಮುಗಿಸಿ ಬಂದ ಬಳಿಕ ಪುನೀತ್ ರಾಜಕುಮಾರ್ ಅವರ ಕನಸಾಗಿದ್ದ ಪಿಆರ್ಕೆ ಪ್ರೊಡಕ್ಷನ್ ಅಲ್ಲಿ ಕೆಲಸ ಮಾಡಲಿದ್ದರಂತೆ.
ಈಗಾಗಲೇ ಪಿ ಆರ್ ಕೆ ಪ್ರೊಡಕ್ಷನ್ ಜವಾಬ್ದಾರಿ ಹೊತ್ತಿರುವ ಅಶ್ವಿನಿ ಅವರಿಗೆ ಧೃತಿ ಪುನೀತ್ ರಾಜಕುಮಾರ್ ಅವರು ಜೊತೆ ಆಗಲಿದ್ದು ನಿರ್ಮಾಣ ಮಾಡುವ ಮೂಲಕ ಅಥವಾ ನಾಯಕಿ ಆಗಿಯೂ ಕೂಡ ಇಂಡಸ್ಟ್ರಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇದೆಯಂತೆ. ಈ ಬಗ್ಗೆ ಅಶ್ವಿನಿ ಅವರ ಕಡೆಯಿಂದಾಗಲಿ ಅಥವಾ ದೊಡ್ಮನೆ ಕಡೆಯಿಂದಲಾಗಲಿ ಯಾವುದೇ ಸ್ಪಷ್ಟನೆ ಸಿಗದಿದ್ದರೂ ಕೂಡ ಕೆಲವು ಗಾಳಿ ಮಾತುಗಳು ಈ ರೀತಿ ಹರಿದಾಡುತ್ತಿವೆ. ನಮ್ಮ ಕರ್ನಾಟಕದ ಜನತೆ ಪುನೀತ್ ರಾಜಕುಮಾರ್ ಅವರನ್ನು ದೇವರಂತೆ ಕಾಣುತ್ತಿದ್ದಾರೆ ಅವರ ಅಕಾಲಿಕ ಸಾ.ವು ಎಲ್ಲರನ್ನೂ ನೋವಿನ ಸಾಗರದಲ್ಲಿ ಮುಳುಗಿಸಿದೆ.
ಪುನೀತ್ ರಾಜಕುಮಾರ್ ಅವರಿಗೆ ತಮ್ಮ ಎರಡು ಮಕ್ಕಳು ಸಹ ಅವರ ತಾಯಿಯಂತೆ ಸ್ಟ್ರಾಂಗ್ ವುಮೆನ್ ಆಗಬೇಕು ಚೆನ್ನಾಗಿ ಓದಬೇಕು ಚೆನ್ನಾಗಿ ದುಡಿದು ಸಂಪಾದನೆ ಮಾಡಿ ಧೈರ್ಯಶಾಲಿಗಳಾಗಿ ಬದುಕಬೇಕು ಅವರು ಆರ್ಥಿಕವಾಗಿ ಸದೃಢರಾಗಬೇಕು ವಿದ್ಯಾವಂತರಾಗಬೇಕು ಎನ್ನುವ ಆಸೆ ಇತ್ತು. ಅನೇಕ ವೇದಿಕೆಗಳಲ್ಲಿ ಅವರು ಈ ಮಾತುಗಳನ್ನು ಹೇಳಿಕೊಂಡಿದ್ದಾರೆ. ಹಾಗೂ ಉಳಿದ ಹೆಣ್ಣು ಮಕ್ಕಳಿಗೂ ಇದೇ ರೀತಿ ಬುದ್ಧಿ ಮಾತು ಹೇಳಿ ಶಕ್ತಿ ತುಂಬಿದ್ದಾರೆ. ಅಪ್ಪನ ಆಸೆಯಂತೆ ಅವರು ಅವರ ಅಜ್ಜಿಯಂತೆ ಇಂಡಸ್ಟ್ರಿಯನ್ನು ಆಳುವ ಒಬ್ಬ ಯಶಸ್ವಿ ನಿರ್ಮಾಪಕಿ ಆಗುತ್ತಾರೋ ಅಥವಾ ನಾಯಕಿ ಆಗಿ ಲಾಂಚ್ ಆಗುತ್ತಾರೋ ಎಂದು ನೋಡುವ ಕುತೂಹಲ ಇಡೀ ಕರ್ನಾಟಕಕ್ಕೆ ಇದೆ. ಅವರ ಆಸೆ ಏನೇ ಇದ್ದರೂ ಎಲ್ಲಕ್ಕೂ ಶುಭವಾಗಲಿ ಎಂದು ಹರಿಸೋಣ.