Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಪ್ಪು & ಡಿ ಬಾಸ್ ಇಬ್ಬರು ಒಟ್ಟಾಗಿ ಕಾಣಿಸಿಕೊಂಡ ಕೊನೆಯ ನಾಟಕದ ವಿಡಿಯೋ. ಈ ಅದ್ಭುತ ದೃಶ್ಯನ ಅಭಿಮಾನಿಗಳು ಒಮ್ಮೆ ಆದ್ರೂ ನೋಡ್ಲೇಬೇಕು.

Posted on March 11, 2023 By Admin No Comments on ಅಪ್ಪು & ಡಿ ಬಾಸ್ ಇಬ್ಬರು ಒಟ್ಟಾಗಿ ಕಾಣಿಸಿಕೊಂಡ ಕೊನೆಯ ನಾಟಕದ ವಿಡಿಯೋ. ಈ ಅದ್ಭುತ ದೃಶ್ಯನ ಅಭಿಮಾನಿಗಳು ಒಮ್ಮೆ ಆದ್ರೂ ನೋಡ್ಲೇಬೇಕು.

 

ಡಿ ಬಾಸ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಒಂದೇ ಸ್ಟೇಜಿನ ಮೇಲೆ ನೋಡಲು ಭಾಗ್ಯ ಬೇಕು. ಎಲ್ಲರಿಗೂ ಈ ಭಾಗ್ಯ ದೊರೆಯುವುದಿಲ್ಲ ಆದರೆ ಈಗ ಸಿಕ್ಕಿರುವ ವಿಡಿಯೋದಿಂದ ಎಲ್ಲರೂ ಇವರಿಬ್ಬರನ್ನು ಒಂದೇ ವೇದಿಕೆಯ ಮೇಲೆ ನೋಡಬಹುದು. ಹೌದು. ಪೌರಾಣಿಕ ಕಥೆಗಳ ಪಾತ್ರಧಾರಿಯಾಗಿ ಪುನೀತ್ ಹಾಗೂ ದರ್ಶನ್ ಇಬ್ಬರು ಒಂದೇ ವೇದಿಕೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ.

ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡುವುದು ಅಭಿಮಾನಿಗಳಿಗೆ ಅದೆಂತಹದೋ ಖುಷಿಯನ್ನು ನೀಡುತ್ತದೆ. ವೈಯಕ್ತಿಕ ಕಾರಣಕ್ಕೆ ವೈರತ್ವವನ್ನು ಬೆಳೆಸಿಕೊಂಡಿರುವಂತಹ ಇಬ್ಬರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಾಗ ಸ್ನೇಹಿತರಾದ ಉದಾಹರಣೆಗಳು ಸಾಕಷ್ಟಸಾಕಷ್ಟುವಿವೆ. ಅಂದರೆ ಅಷ್ಟರ ಮಟ್ಟಿಗೆ ಮೋಡಿ ಮಾಡುತ್ತದೆ ಸ್ಟಾರ್ ನಟರ ಜೋಡಿ.

ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮನಸ್ಸಿನಲ್ಲಿ ಎಂದಿಗೂ ಅಳಿಯದೆ ಉಳಿದುಕೊಳ್ಳುವ ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೇ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡು ಭೇಷ್ ಎನಿಸಿಕೊಂಡವರು. ಪುನೀತ್ ಅವರ ಸುಮಧುರ ಕಂಠ, ದೊಡ್ಡ ದೊಡ್ಡ ಡೈಲಾಗ್ ಗಳನ್ನು ಸಾರಾಗವಾಗಿ ಹೇಳುವ ರೀತಿ, ಡಾನ್ಸ್ ಮಾಡುವ ಕಲೆ ಎಲ್ಲವನ್ನು ನೋಡಿದಾಗ ಡಾಕ್ಟರ್ ರಾಜಕುಮಾರ್ ಅವರ ಅಂಶವೇ ಅಪ್ಪು ಅವರಲ್ಲಿ ಇದ್ದಂತೆ ಭಾಸವಾಗುತ್ತದೆ.

ಗುಣ, ನಡತೆಯ ವಿಚಾರಕ್ಕೆ ಬಂದರೆ ಇವರನ್ನು ಮೀರಿಸುವವರು ಯಾರು ಇಲ್ಲವೆಂದು ಅನಿಸುತ್ತದೆ. ಪುನೀತ್ ಅವರು ಅದೆಷ್ಟೋ ಮಂದಿ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಕೂಲಿಗಾರರ ಆಹಾರ ಬಟ್ಟೆಗೆ ಸಹಾಯ ಮಾಡಿದ್ದಾರೆ ಹೊಸದಾಗಿ ಸಿನಿಮಾ ರಂಗವನ್ನು ಸೇರಲು ಇಚ್ಚಿಸಿದವರಿಗೆ ಪ್ರೋತ್ಸಾಹಿಸುತ್ತಾ, ಅವಕಾಶಗಳ ದಾರಿಯನ್ನು ತೋರಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಸಾಧನೆಗೈದು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವುದು ಶ್ಲಾಘನೀಯ.

ತಲೆಯೆತ್ತಿ ನೋಡಬೇಕಾದ ಎತ್ತರ. ಎತ್ತರಕ್ಕೆ ತಕ್ಕನಾದ ತೂಕ. ದೇಹಕ್ಕೆ ತಕ್ಕನಾದ ಗಾಂಭೀರ್ಯ ಧ್ವನಿ. ಇಷ್ಟನ್ನು ಹೇಳಿದರೆ ಸಾಕು ಅಭಿಮಾನಿಗಳು ಡಿ ಬಾಸ್ ದರ್ಶನ್ ಎಂದು ಕಂಡುಹಿಡಿಯುತ್ತಾರೆ. ಹೌದು ತಮ್ಮ ಅಭಿನಯದ ಮೂಲಕ ಕರ್ನಾಟಕ ಜನತೆಯ ಮನ ಗೆದ್ದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಲು ಸಾಲು ಹಿಟ್ ಚಿತ್ರಗಳ ಒಡೆಯ. ಚಿತ್ರಮಂದಿರಗಳಿಗೆ ತೆರಳಿದಾಗ ಮಾಸ್ ಲುಕ್ ನಲ್ಲಿ ಒಮ್ಮೆ ಇವರನ್ನು ನೋಡಿದರೆ ಸಾಕು ಜನ ಕೇಕೆ ಹಾಕಿ ಕುಣಿಯುತ್ತಾರೆ.

ತೂಗುದೀಪ್ ಶ್ರೀನಿವಾಸ್ ಅವರು ಮಹಾನ್ ಕಲಾವಿದರು. ಅವರಂತೆ ಮಗ ದರ್ಶನ್ ಕೂಡ ಕಲಾ ದೇವತೆಯಿಂದ ವರ ಪಡೆದವರೆ. ಅಪ್ಪುವಿರಲಿ, ದಚ್ಚುವಿರಲಿ ಇಬ್ಬರದ್ದು ನಟನೆಯಲ್ಲಿ ಎತ್ತಿದ ಕೈ. ಪಾತ್ರ ಯಾವುದೇ ಇದ್ದರೂ ಅಚ್ಚುಕಟ್ಟಾಗಿ ಅಭಿನಯಿಸುತ್ತಾರೆ. ಐತಿಹಾಸಿಕ ಅಥವಾ ಪೌರಾಣಿಕ ಕಥೆಗಳ ಪಾತ್ರಗಳಾದರೂ ಸರಿ. ಬಣ್ಣ ಹಚ್ಚಿ ಜೀವ ತುಂಬಲು ಇವರು ರೆಡಿ. ಹೌದು. ವೈರಲ್ ಆದ ವಿಡಿಯೋದಲ್ಲಿ ದರ್ಶನ ಹಾಗೂ ಪುನೀತ್ ಅವರು, ಖಡ್ಗವನ್ನು ಹಿಡಿದು, ರಾಜರಂತೆ ಉಡುಗೆಯನ್ನು ತೊಟ್ಟು ಎದುರು ಬದುರಾಗಿ ನಿಂತು.

ಡಾಕ್ಟರ್ ರಾಜಕುಮಾರ್ ಅವರ ಬಬ್ರುವಾಹನ ಚಿತ್ರದ ಪಾತ್ರಗಳನ್ನು ಮಾಡಿ, ಚಿತ್ರದ ದೃಶ್ಯಗಳನ್ನು ರೀ ಕ್ರಿಯೇಟ್ ಮಾಡಿದ್ದಾರೆ. ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’ ಎಂದು ಪುನೀತ್ ಅವರು ನಟಿಸಿದ್ದರೆ, ‘ಅಸಹಾಯ ಶೂರ ನಾ ಅಕ್ಷೀಣ ಬಲನೋ?.. ಹೊರನೋಡನೆ ಹೋರಾಡಿ ಪಾಶುಪತವಂ ಪಡೆದವನೋ’ ಎಂದು ದರ್ಶನವರು ನಟಿಸಿದ್ದಾರೆ.

ಇಬ್ಬರನ್ನು ಒಂದೇ ವೇದಿಕೆಯಲ್ಲಿ, ಅದರಲ್ಲೂ ಬಬ್ರುವಾಹನ ಚಿತ್ರದ ಪಾತ್ರಗಳಲ್ಲಿ ನೋಡಿದ ಜನರು ಕುಣಿದಿದ್ದಾರೆ. ಪುನೀತ್ ಅವರನ್ನು ನೋಡಿದಾಗ ಡಾಕ್ಟರ್ ರಾಜಕುಮಾರ್ ಅವರ ಮತ್ತು ದರ್ಶನ್ ಅವರನ್ನು ನೋಡಿದಾಗ ತೂಗುದೀಪ್ ಶ್ರೀನಿವಾಸ್ ಅವರ ನೆನಪಾಗುತ್ತದೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಅಂತೂ ದಚ್ಚು ಹಾಗೂ ಅಪ್ಪು ಒಟ್ಟಾಗಿ ಕಾಣಿಸಿಕೊಂಡ ನಾಟಕದ ವಿಡಿಯೋ ಸಿಕ್ಕಿತಲ್ಲ ಎಂದು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

https://youtu.be/ybe74bIU7Hg

Entertainment Tags:Appu, Challenging Star Darshan, D Boss, Dacchu, Powerstar Puneeth Rajkumar, Puneeth

Post navigation

Previous Post: ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತ.? ಈ ವಿಚಾರ ತಿಳಿದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.
Next Post: ಅಪ್ಪು ಬಾಡಿಗಾರ್ಡ್ ಆಗಿದ್ದ ಚಲಪತಿ ಅವರನ್ನು ಇನ್ಮುಂದೆ ಯುವರಾಜ್ ಗೆ ಬಾಡಿಗಾರ್ಡ್ ಆಗಿ ಕೆಲ್ಸ ಮಾಡ್ತಿರಾ ಅಂತ ಕೇಳಿದಕ್ಕೆ ಚಲಪತಿ ಕೊಟ್ಟ ಶಾ-ಕಿಂಗ್ ಉತ್ತರ ಏನು ಗೊತ್ತ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme