ಅಪ್ಪು(Appu) ಈ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರ ಕಣ್ಣಂಚಲು ಕೂಡ ನೀರು ತುಂಬುವುದು ಸಹಜ ಏಕೆಂದರೆ ಅಪ್ಪು(Puneeth Rajkumar) ಎಂಬುವುದು ಹೆಸರಲ್ಲ ಬದಲಾಗಿ ಒಂದು ಶಕ್ತಿ ಅಂತಾನೆ ಹೇಳಬಹುದು. ಸರಳತೆಯನ್ನು ಸಜ್ಜನಿಕೆಯನ್ನು ಮೈಗೂಡಿಸಿಕೊಂಡ ಏಕೈಕ ನಟ ಅಂದರೆ ಅದು ಅಪ್ಪು ಅಂತಾನೆ ಹೇಳಬಹುದು. ಬಹುಶಃ ಅಪ್ಪು ಅವರನ್ನು ಇಷ್ಟ ಪಡದೇ ಇರುವಂತಹ ವ್ಯಕ್ತಿ ಯಾರು ಇಲ್ಲ ಅಂತಾನೇ ಹೇಳಬಹುದು ಏಕೆಂದರೆ ಅಪ್ಪು ಕೇವಲ ಒಬ್ಬ ನಟನಾಗಿರಲಿಲ್ಲ ಬದಲಿಗೆ ಸಮಾಜಮುಖಿ ಸೇವೆಯನ್ನು ಮಾಡುವಂತಹ ಒಬ್ಬ ಆತ್ಮೀಯ ವ್ಯಕ್ತಿಯಾಗಿದ್ದರು.
ಅದರಲ್ಲೂ ಕೂಡ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು, ಅವರ ಆದಾಯದ ಶೇಕಡ 50ರಷ್ಟು ಭಾಗವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಈ ಕಾರಣಕ್ಕಾಗಿಯೇ ಅಪ್ಪು ಅವರನ್ನು ಎಲ್ಲರೂ ಕೂಡ ಹೆಚ್ಚು ಪ್ರೀತಿಸುತ್ತಾರೆ ಗೌರವಿಸುತ್ತಾರೆ ಇನ್ನು ನೀವು ಅಪ್ಪು ಅವರ ಬಗ್ಗೆ ಎಲ್ಲಿಯೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೇಳಿರುವುದಕ್ಕೆ ಸಾಧ್ಯನೇ ಇಲ್ಲ. ಹೌದು ವೈಯಕ್ತಿಕ ಜೀವನದಲ್ಲಿ ಆಗಿರಬಹುದು ಅಥವಾ ಸಮಾಜಮುಖಿ ಕೆಲಸಗಳನ್ನು ಮಾಡುವಂತಹ ಸಂದರ್ಭದಲ್ಲಿ ಆಗಿರಬಹುದು ಎಲ್ಲಿಯೂ ಕೂಡ ಅಪ್ಪು ಅವರು ಚಿಕ್ಕದೊಂದು ಕಳಂಕವನ್ನು ಕೂಡ ತಮ್ಮ ಮೈ ಮೇಲೆ ಎಳೆದುಕೊಂಡಿರಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಒಬ್ಬ ಅಜಾತಶತ್ರು ಅಂತಾನೆ ಹೇಳಬಹುದು ಈ ಕಾರಣಕ್ಕಾಗಿ ಅಪ್ಪು ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದಾಗ ಅಷ್ಟು ಜನ ಸಾಗರವೇ ಅಪ್ಪು ಅವರನ್ನು ನೋಡಲು ಹರಿದು ಬಂದಿತು. ಇದರಿಂದಲೇ ತಿಳಿಯುತ್ತದೆ ಅಪ್ಪು ಅವರು ಎಂತಹ ಗುಣವನ್ನು ಮೈಗೂಡಿಸಿಕೊಂಡಿದ್ದರು ಅಂತ ಇದೆಲ್ಲ ಒಂದು ಕಡೆಯಾದರೆ ಅಪ್ಪು ಅವರು ಎಲ್ಲಿ ಸಿಕ್ಕರೂ ಅಥವಾ ಅಪ್ಪು ಅವರ ಮನೆಗೆ ಯಾರೇ ಬಂದರೂ ಅಥವಾ ಅಪ್ಪು ಅವರೇ ಬೇರೆ ಯಾವುದೇ ಸ್ಥಳಕ್ಕೆ ಹೋದರು ಯಾರಾದರೂ ಇವರ ಎದುರಿಗೆ ಯಾರೇ ಸಿಕ್ಕರೆ ಮೊದಲು ಅಪ್ಪು ಅವರು ಕೇಳುತ್ತಿದ್ದ ಮಾತು ಊಟ ಆಯ್ತಾ ಅಥವಾ ಊಟ ಮಾಡುದ್ರಾ?
ಇಲ್ಲವಾ ದಯವಿಟ್ಟು ಬಂದು ಊಟ ಮಾಡಿ ಅಂತ ಪ್ರೀತಿಯಿಂದ ಕರೆಯುತ್ತಿದ್ದರಂತೆ. ಈ ಮಾತನ್ನು ಇತ್ತೀಚಿಗಷ್ಟೇ ನಟಿ ಆಂಕರ್ ಅನುಶ್ರೀ ಅವರು ಸಂದರ್ಶನ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ ಹೌದು. ಒಮ್ಮೆ ಅನುಶ್ರೀ(Anushree) ಅವರು ದುಬೈಗೆ ಹೋಗಿದ್ದರಂತೆ ಒಂದು ಅವಾರ್ಡ್ ಫಂಕ್ಷನ್ ಗೆ ತೆರಳಿದಂತಹ ಸಂದರ್ಭದಲ್ಲಿ ದುಬೈನಲ್ಲಿ ಅಚಾನಕ್ಕಾಗಿ ಎಲ್ಲೋ ತಪ್ಪಿಸಿಕೊಂಡಿದ್ದರಂತೆ. ರಸ್ತೆ ಮಧ್ಯದಲ್ಲಿ ನಿಂತಿದ್ದರಂತೆ ಅನುಶ್ರೀ ಅವರು ಇದೇ ಮೊದಲ ಬಾರಿಗೆ ದುಬೈಗೆ ತೆರಳಿದ್ದು ಹಾಗಾಗಿ ಅಲ್ಲಿನ ಬಗ್ಗೆ ಇವರಿಗೆ ಸರಿಯಾದಂತಹ ಮಾಹಿತಿ ಇರಲಿಲ್ಲವಂತೆ. ಬಹಳಷ್ಟು ಭಯಗೊಂಡಿದಂತಹ ಅನುಶ್ರೀ(Anchor Anushree) ಅವರು ರಸ್ತೆ ಮಧ್ಯದಲ್ಲಿ ನಿಂತಿರುವುದನ್ನು ನೋಡಿದಂತಹ ಅಪ್ಪು ಅವರು ಕಾರನ್ನು ನಿಲ್ಲಿಸಿ ಈ ಅನುಶ್ರೀ ಇನ್ನೇನು ಮಾಡುತ್ತಿದ್ದೀಯಾ ಎಂದು ಕರೆದರಂತೆ.
ಅಪ್ಪು ಅವರನ್ನು ನೋಡುತ್ತಿದ್ದ ಹಾಗೆ ಅನುಶ್ರೀ ಅವರಿಗೆ ಅರ್ಧ ಜೀವ ಬಂದಂತಹ. ತದನಂತರ ಅನುಶ್ರೀ ಅವರನ್ನು ಅಪ್ಪು ಇಲ್ಲೆನೂ ಮಾಡುತ್ತಿದ್ದೀಯಾ ಬಾ ಕಾರ್ ಒಳಗಡೆ ಕುಳಿತುಕೋ ಅಂತ ಕರೆದರಂತೆ. ತದನಂತರ ಊಟ ಮಾಡಿದಿಯೋ ಅಥವಾ ಇಲ್ಲವೋ ಎಂದು ಕೇಳಿದರಂತೆ. ಇಲ್ಲ ಸರ್ ಇಲ್ಲೇ ಅವಾರ್ಡ್ ಫಂಕ್ಷನ್ ಗೆ ಬಂದೆ ಅದೇಗೋ ದಾರಿ ತಪ್ಪಿ ಎಲ್ಲಿ ಬಂದು ಸೇರಿದ್ದೇನೆ ಎಂದು ಹೇಳಿದಂತೆ. ಅದಕ್ಕೆ ಅನುಶ್ರೀಗೆ ಭಯ ಪಡಬೇಡ ನಾನು ಅದೇ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಅದಕ್ಕಿಂತ ಮೊದಲು ನೀನು ಮೊದಲು ಊಟ ಮಾಡು ಎಂದು ರೆಸ್ಟೋರೆಂಟ್ ಒಂದಕ್ಕೆ ಕರೆದುಕೊಂಡು ಹೋದರಂತೆ.
ಈ ವಿಚಾರವನ್ನು ಅನುಶ್ರೀ ಅವರು ಹಂಚಿಕೊಂಡಿದ್ದಾರೆ ಅಪ್ಪು ಅವರು ಎಲ್ಲೇ ಹೋದರು ಎಲ್ಲೇ ಬಂದರೂ ಮೊದಲು ಕೇಳುತ್ತಿದ್ದು ಊಟದ ವಿಚಾರ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಆಹಾರ ಪ್ರಿಯರು ಅವರಿಗೆ ವಿಭಿನ್ನ ಬಗೆಯ ವಿಶೇಷವಾದಂತಹ ಆಹಾರಗಳನ್ನು ಸೇವನೆ ಮಾಡುವುದು ಅಂದರೆ ತುಂಬಾ ಇಷ್ಟ. ಕೇವಲ ಅವರು ಒಬ್ಬರು ಮಾತ್ರ ಸೇವನೆ ಮಾಡುತ್ತಿರಲಿಲ್ಲ ತಮ್ಮ ಜೊತೆಗೆ ಯಾರೇ ಇದ್ದರೂ ಕೂಡ ಅವರನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಮನುಷ್ಯ ದುಡಿಯುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಎಂಬುದು ತಿಳಿದೆ ಇದೆ.
ಆದರೆ ಸೆಲೆಬ್ರಿಟಿಗಳು ಕೆಲವೊಮ್ಮೆ ತಾವಾಯಿತು ತಮ್ಮ ಕೆಲಸವಾಯಿತು ಅಂತ ಉಳಿದುಕೊಳ್ಳುತ್ತಾರೆ ಆದರೆ ಅಪ್ಪು ಅವರು ಮಾತ್ರ ತನ್ನ ಸುತ್ತಮುತ್ತಲು ಇರುವಂತಹ ಎಲ್ಲರನ್ನೂ ಕೂಡ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ಅಪ್ಪು ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿರುವುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ನಮಗೆ ಉತ್ತರ ನೀಡಿ.