ಆರೋಗ್ಯ ಇಲಾಖೆಯಲ್ಲಿರುವ ಆಶಾ ಕಾರ್ಯಕರ್ತೆಯರು (Asha workers) ಕಾರ್ಯನಿರ್ವಹಿಸುತ್ತಿರುವ ಮಾದರಿಯಲ್ಲಿಯೇ ಪಶು ಸಂಗೋಪನ ಇಲಾಖೆಯಿಂದಲೂ ಪಶು ಸಖಿಯರನ್ನು (A-help) ನೇಮಿಸಿಕೊಳ್ಳಲಾಗಿದೆ ಎಂದು ನೂತನ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್ (Minister K.Venkatesh) ತಿಳಿಸಿದ್ದಾರೆ.
ಮೈಸೂರಿನಲ್ಲಿ (Mysore) ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ರೈತರು ಮತ್ತು ಪಶುಸಂಗೋಪನಾ ಇಲಾಖೆ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ ಅವರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಹಾಗೂ ಇಲಾಖೆಯ ಯೋಜನೆಗಳು ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಸಮರ್ಪಕವಾಗಿ ಫಲಾನುಭವಿಗಳಿಗೆ ಮಾಹಿತಿ ತಲುಪಿಸಲು.
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಕ್ಕೆ ಒಬ್ಬ ಮಹಿಳೆಯಂತೆ ರಾಜ್ಯದಲ್ಲಿ ಒಟ್ಟು 5,962 ಪಶು ಸಖಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಕನಿಷ್ಠ 8ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರುವ ಹೆಣ್ಣು ಮಕ್ಕಳನ್ನು ಪಶು ಸಖಿಯರನ್ನಾಗಿ (PashuSakhi) ಆಯ್ಕೆ ಮಾಡಲಾಗಿದೆ. ಅವರಿಗೆ ಮೊದಲು ಕನಿಷ್ಠ 18 ದಿನಗಳ ಸಾಮಾನ್ಯ ತರಬೇತಿ ನಂತರ 16 ದಿನಗಳವರೆಗೆ ಜಾನುವಾರುಗಳ ವೈಜ್ಞಾನಿಕ ಸಾಕಣೆ ಹಾಗೂ ಪೋಷಣೆ, ರೋಗ ನಿಯಂತ್ರಣ ಕ್ರಮಗಳ ಬಗ್ಗೆ ತರಬೇತಿ ನೀಡಿ ಕೆಲಸಕ್ಕೆ ನಿಯೋಜಿಸಲು ತೀರ್ಮಾನಿಸಿದ್ದೇವೆ ಎಂದರು.
ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಪಶು ಸಖಿಯರು ಪಶುಸಂಗೋಪನಾ ಇಲಾಖೆಯ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಾರೆ. ಆಯಾ ಪಶು ವೈದ್ಯರ ಮಾರ್ಗದರ್ಶನದಲ್ಲಿ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು. ಇದೇ ತಿಂಗಳ 26ರಂದು ಬೆಳಗ್ಗೆ 10.30ಕ್ಕೆ ಮೈಸೃರು ತಾಲ್ಲೂಕಿನ ಉತ್ತನಹಳ್ಳಿ (Uththanahalli) ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaih) ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಮತ್ತು ಉತ್ತನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಪಶುಚಿಕಿತ್ಸಾಲಯದ ಉದ್ಘಾಟನೆ ಅದೇ ಮಾಡಲಿದ್ದಾರೆ ಎಂದು ವಿವರಿಸಿದ ಸಚಿವರು ಈ ರೀತಿ ನೇಮಕವಾಗುವ ಪಶುಸಖಿಯರು ಕೇಂದ್ರ ಸರ್ಕಾರದಿಂದ ತಿಂಗಳಿಗೆ ರೂ.3,800 ಸಂಭಾವನೆ ಪಡೆಯುತ್ತಾರೆ, ಈ ಪಶುಸಖಿ ಯೋಜನೆಯು ಇಡೀ ದೇಶದಲ್ಲೇ ನಮ್ಮ ರಾಜ್ಯದಲ್ಲೇ ಮೊದಲು ಜಾರಿಗೆ ಬರುತ್ತಿರುವುದು ಎನ್ನುವ ಹೆಮ್ಮೆ ಇದೆ ಎಂದರು.
ಹಾಗೆ ಜಾನುವಾರುಗಳಿಗೆ ನೀಡುತ್ತಿರುವ ಲಸಿಕೆಯ ( Cattle Vaccine) ಬಗ್ಗೆ ಕೂಡ ಮಾತನಾಡಿ ಮಾಹಿತಿ ಹಂಚಿಕೊಂಡ ಸಚಿವರು ನಮ್ಮ ರಾಜ್ಯದಲ್ಲಿ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಕೂಡ ಅಂದು ಚಾಲನೆ ಸಿಗಲಿದೆ. ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಅನುಷ್ಠಾನದಲ್ಲೂ ನಮ್ಮ ರಾಜ್ಯವೇ ಮುಂದಿದೆ ಉಳಿದ ರಾಜ್ಯಗಳು ಇನ್ನೂ ಸಹ ಎರಡು, ಮೂರನೇ ಸುತ್ತಿನಲ್ಲಿದೆ ಎಂದರು.
ಹಾಗೆಯೇ ಕೇರಳದಲ್ಲಿ ಚರ್ಮಗಂಟು ರೋಗ ಉಲ್ಬಣವಾಗುತ್ತಿರುವುದರಿಂದ ಮುಂಜಾಗ್ರತೆಯಾಗಿ ಗಡಿ ರಾಜ್ಯದ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದೇವೆ ಇವುಗಳಿಗೆ ಕೇಂದ್ರ ಸರ್ಕಾರದಿಂದ ಕೂಡ ಅನುದಾನ ಲಭ್ಯವಾಗುತ್ತಿದೆ ಎಂದು ಸ್ಮರಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ಜಾನುವಾರುಗಳಿಗೆ ಬೇಕಾದ ಮೇವುಗಳ ಸಂಗ್ರಹಣೆ ಬಗ್ಗೆ ಕೂಡ ಮಾತನಾಡಿದ ಅವರು ನಮ್ಮ ಜಾನುವಾರುಗಳಿಗೆ ಮುಂದಿನ 28 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ.
ಅಲ್ಲದೇ, ರೈತರಿಗೆ ಮೇವಿನ ಬೆಳೆಯ ಬೀಜವನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದಾಗಿ, ನಮ್ಮಲ್ಲಿನ ಮೇವನ್ನು ಹೊರ ರಾಜ್ಯಗಳಿಗೆ ಸಾಗಿಸದಂತೆ ಕ್ರಮ ಕೈಗೊಳ್ಳುವಂತೆ ಗಡಿ ಭಾಗದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು” ಎಂದು ತಿಳಿಸಿದರು. ಹಾಗೆಯೇ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳ ಭರ್ತಿ ಬಗ್ಗೆ ಕೂಡ ಕೆಲ ಪ್ರಮುಖ ಅಂಶಗಳನ್ನು ತಿಳಿಸಿದರು.!
ರೈಲು ನಿಲ್ದಾಣದಲ್ಲಿ ಸೂಟ್ ಕೇಸ್ ಹೊತ್ತು, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ.!