ಕನ್ನಡ ಕಿರುತೆರೆಯ ನಂಬರ್ ಒನ್ ನಿರೂಪಕಿ ಎಂದು ಹೆಸರು ಪಡೆದಿರುವ ಅನುಶ್ರೀ ಅವರು ಕನ್ನಡಿಗರಿಗೆಲ್ಲಾ ಚಿರಪಚಿತರು. ಸದ್ಯಕ್ಕೆ ಕನ್ನಡ ಕಿರುತೆರೆ ಪ್ರೇಕ್ಷಕರು ಅವರನ್ನು ಮನೆ ಮಗಳಂತೆ ಸ್ವೀಕರಿಸಿದ್ದಾರೆ, ಪ್ರೀತಿ ತೋರುತ್ತಿದ್ದಾರೆ. ಇಷ್ಟರ ಮಟ್ಟಿಗೆ ಎಲ್ಲರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿರುವ ಅನುಶ್ರೀ ಅವರು ಮದುವೆ ವಿಷಯವಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ ಅವರು ಕಿರುತೆರೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮಗಳ ಮಾತುಗಳಲ್ಲೂ ಮತ್ತು ಅವರು ಹೊರಗಡೆ ಯಾವುದೇ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಹೋದಾಗಲೂ ಮತ್ತು ಯಾವುದೇ ಸಂದರ್ಶನಕ್ಕೆ ಭಾಗಿಯಾದಾಗಲು ಅವರಿಗೆ ಎದುರಾಗುವ ಒಂದೇ ಪ್ರಶ್ನೆ ಯಾವಾಗ ಮದುವೆ ಆಗುತ್ತೀರಾ ಎಂದು.
ಇಷ್ಟು ದಿನಗಳವರೆಗೆ ಮದುವೆ ವಿಷಯವನ್ನು ಬಹಳ ಸಿಂಪಲ್ ಆಗಿ ತೆಗೆದುಕೊಳ್ಳುತ್ತಿದ್ದ ಅನುಶ್ರೀ ಈಗ ಅದಕ್ಕೆ ಗಂಭೀರವಾಗಿ ಉತ್ತರ ಕೊಟ್ಟಿದ್ದಾರೆ. ತಾವು ಇನ್ನು ಮದುವೆ ಆಗದೆ ಇರಲು ಕಾರಣ ಏನು ಎನ್ನುವುದನ್ನು ಸಹ ಅವರು ಈ ಬಾರಿ ಹೇಳಿಕೊಂಡಿದ್ದಾರೆ. ಅನುಶ್ರೀ ಅವರು ಇತ್ತೀಚೆಗೆ ಚಿಕ್ಕಬಳ್ಳಾಪುರ ಉತ್ಸವ(Chikka ballapur) ಕಾರ್ಯಕ್ರಮವನ್ನು ಕೂಡ ನಡೆಸಿಕೊಟ್ಟಿದ್ದರು. ಆ ಕಾರ್ಯಕ್ರಮಗಲ್ಲೂ ಕೂಡ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿತ್ತು ಆಗ ಇದುವರೆಗೂ ಒಳ್ಳೆ ಹುಡುಗ ಸಿಕ್ಕಿಲ್ಲ ಚಿಕ್ಕಬಳ್ಳಾಪುರದಲ್ಲಿ ಯಾರಾದರೂ ಇದ್ದಾರಾ ಹುಡುಕುತ್ತೇನೆ ಎಂದಾಗ ಅಲ್ಲಿದ್ದ ಎಲ್ಲಾ ಪುರುಷರು ಸಹ ಕೈ ಮೇಲೆ ಎತ್ತಿದ್ದರು.
ಅವರಲ್ಲಿ ಕೆಲವರನ್ನು ನೋಡಿ ಅನುಶ್ರೀ ತಮಾಷೆ ಕೂಡ ಮಾಡಿದ್ದರು. ಒಬ್ಬ ಹುಡುಗನ ಬಳಿ ಹೋಗಿ ನಿನಗೆ ತಲೆಯಲ್ಲಿ ಕೂದಲು ಇಲ್ಲ ನಾನು ನಿನ್ನನ್ನು ಒಪ್ಪುವುದಿಲ್ಲ ಕಾಡಿನಲ್ಲಿ ಸೊಪ್ಪು ಸಿಕ್ತದೆ ಹೋಗು ಎಂದು ಕಾಂತರಾ(Kanthara) ಫಿಲಂನ ಡೈಲಾಗ್ ಹೊಡೆದಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಮತ್ತು ಇನ್ನೊಬ್ಬರು ಮುದುಕರಷ್ಟು ವಯಸ್ಸಾಗಿದ್ದರೂ ಕೂಡ ಅನುಶ್ರೀ ಅವರನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದು ಕೇಳಿ ತಾತ ನಿಮಗೆ ಈ ವಯಸ್ಸಲ್ಲಿ ಇದೆಲ್ಲ ಬೇಕಾ ಎಂದು ಅವರನ್ನು ಕಾಲೆಳೆದಿದ್ದರು.
ಹೀಗೆ ಮದುವೆ ಬಗ್ಗೆ ತಮ್ಮ ಮೇಲೆ ತಾವೇ ತಮಾಷೆ ಮಾಡಿಕೊಳ್ಳುತ್ತಿದ್ದ ಅನುಶ್ರೀ ಅವರು ಈ ಬಾರಿ ಒಂದು ಸಂದರ್ಶನದಲ್ಲಿ ಮದುವೆ ಆಗದೆ ಇಷ್ಟು ದಿನ ಇರುವುದಕ್ಕೆ ಕಾರಣ ಏನು ಎನ್ನುವುದನ್ನು ಹೇಳಿದ್ದಾರೆ. ಅನುಶ್ರೀ ಅವರಿಗೆ ಮದುವೆ ಬಗ್ಗೆ ಈಗಾಗಲೇ ಸಾಕಷ್ಟು ಪ್ರಪೋಸಲ್ಗಳು ಬಂದಿದೆ. ಈ ರೀತಿ ಪಟ ಪಟನೆ ಅರಳು ಉರಿದಂತೆ ಲವಲವಿಕೆಯಿಂದ ಮಾತನಾಡುವ ಹುಡುಗಿ ಸಿಕ್ಕರೆ ಯಾರೇ ಆದರೂ ಕಣ್ಮುಚ್ಚಿಕೊಂಡು ಒಪ್ಪಿಕೊಂಡು ಮದುವೆ ಆಗುತ್ತಾರೆ. ಜೊತೆಗೆ ಅನುಶ್ರೀ ಅವರಿಗೆ ಒಳ್ಳೆ ಹೆಸರು ಕೂಡ ಇದೆ. ಆದರೂ ಮದುವೆ ಆಗುವುದಕ್ಕೆ ಹಿಂ-ದೇ-ಟು ಹಾಕುತ್ತಿರಲು ಕಾರಣ ಏನು ಎಂದರೆ ಅನುಶ್ರೀ ಅವರು ಬಹಳ ಚಿಕ್ಕ ವಯಸ್ಸಿಗೆ ತಂದೆಯಿಂದ ಬೇರೆ ಆಗಿದ್ದಾರೆ.
ತಾಯಿ ಹಾಗೂ ತಮ್ಮನ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾನೆ. ಒಂದು ಹಂತದವರೆಗೆ ಅನುಶ್ರೀ ಅವರನ್ನು ಅವರ ತಾಯಿ ಓದಿಸಿದ್ದರೂ ನಂತರ ಅವರ ಸ್ವಂತ ಖರ್ಚನ್ನು ಅವರೇ ನೋಡಿಕೊಂಡು ಕೆಲಸ ಮಾಡುತ್ತಾ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅನುಶ್ರೀ ಅವರು ದುಡಿಯಲು ಚಿಕ್ಕವಯಸ್ಸಿಗೆ ಆರಂಭಿಸಿದರು. ಅಂದಿನಿಂದ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಇವರೇ ಹೊತ್ತುಕೊಂಡಿದ್ದಾರೆ. ಈಗ ನಾನು ಮದುವೆ ಆಗಿ ಬಿಟ್ಟರೆ ನನ್ನ ಅಮ್ಮ ಹಾಗೂ ತಮ್ಮನನ್ನು ಯಾರು ನೋಡಿಕೊಳ್ಳುತ್ತಾರೆ. ಮೊದಲು ಅವರ ಲೈಫ್ ಸೆಟ್ ಆಗಬೇಕು ಆನಂತರ ಅಷ್ಟೇ ನಾನು ಮದುವೆ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಅವರಿಗೆ ಬದುಕಲ್ಲಿ ಒಳ್ಳೆ ವ್ಯವಸ್ಥೆ ಆಗಬೇಕು ಕಣ್ಮುಂದೆ ತಮ್ಮ ಚೆನ್ನಾಗಿರಬೇಕು ಅದನ್ನು ನೋಡಿಕೊಂಡು ಆಮೇಲೆ ನಾನು ಮದುವೆ ಆಗುತ್ತೇನೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಯಾವಾಗಲೂ ಅನುಶ್ರೀ ಅವರು ಅವರ ಜೊತೆ ಮದುವೆ ಆಗುತ್ತಿದ್ದಾರೆ ಇವರ ಜೊತೆ ಮದುವೆ ಆಗುತ್ತಿದ್ದಾರೆ ಎನ್ನುವ ಗಾಳಿಸುದ್ದಿಗಳು ಹಬ್ಬುತ್ತಲೇ ಇರುತ್ತದೆ ಮತ್ತು ಅನುಶ್ರೀ ಅವರಿಗೆ ಈಗಾಗಲೇ ಮದುವೆ ಕೂಡ ಆಗಿದೆ ಎನ್ನುವ ಸುದ್ದಿಯು ಕೂಡ ಒಂದು ಸಮಯದಲ್ಲಿ ಬಾರಿ ಸದ್ದು ಮಾಡಿತ್ತು.
ಮೊದಲೆಲ್ಲಾ ಅವುಗಳ ಬಗ್ಗೆ ಬಹಳ ಸೀರಿಯಸ್ ಆಗುತ್ತಿದ್ದ ಅನುಶ್ರೀ ಅವರು ಈಗ ಆ ವಿಷಯವನ್ನು ಸಹ ಬಹಳ ಲೈಟ್ ಆಗಿ ತೆಗೆದುಕೊಳ್ಳುತ್ತಿದ್ದಾರೆ. ಮತ್ತು ಅವರು ನಡೆಸಿಕೊಡುವ ಜೀ ಕನ್ನಡದ ಸರಿಗಮಪ(Saregamapa) ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್(DKD) ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುವ ಅರ್ಜುನ್ ಜನ್ಯ(Arjun janya) ಅವರ ಕಾಲೆಳೆಯುತ್ತಾ ನಾನು ನಿಮ್ಮನ್ನೇ ಮದುವೆ ಆಗುತ್ತೇನೆ ಎಂದು ತಮಾಷೆ ಸಹ ಮಾಡುತ್ತಿರುತ್ತಾರೆ. ಆದರೆ ಅದೆಲ್ಲವೂ ಕೇವಲ ಮನರಂಜನೆಗಾಗಿ ಅಷ್ಟೇ. ಆದಷ್ಟು ಬೇಗ ಈ ಕನ್ನಡದ ಹುಡುಗಿಗೆ ಕಂಕಣ ಭಾಗ್ಯ ಕೂಡಿ ಬರಲಿ ಎಂದು ನಾವೆಲ್ಲ ಹಾರೈಸೋಣ.