ಚಂದನವನದ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹೈಸ್ಕೂಲ್ ಹುಡುಗಿಯಂತೆ ಕಾಣುತ್ತಾರೆ ಆದರೆ ಈಕೆ ಈಗ ಮದುವೆಯಾಗಿ ಸಂಪ್ರದಾಯಸ್ತ ಗೃಹಿಣಿಯಂತೆ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಇಬ್ಬರು ಗಂಡು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಇಂದಿಗೂ ಮುಖದಲ್ಲಿ ಅದೇ ಮಗುವಿನ ಮುಗ್ಧತೆ ಇಟ್ಟುಕೊಂಡಿರುವ ಅಮೂಲ್ಯ ಅವರು ಯಾವಾಗ ಇಷ್ಟು ಬೆಳೆದರು ಎಂದು ಕನ್ಫ್ಯೂಸ್ ಆಗುವಷ್ಟು ವೇಗದಲ್ಲಿ ಅಮೂಲ್ಯ ಬದುಕು ಬದಲಾಗಿದೆ.
ಅಮೂಲ್ಯ ಅವರು ರಾಜಕಾರಣಿ ಮತ್ತು ಯುವ ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು ವಿವಾಹವಾಗಿ ವೈವಾಹಿಕ ಜೀವನದಲ್ಲಿ ಬಹಳ ಸಂತೋಷದಿಂದ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಅಮೂಲ್ಯ ಅವರು ತಮ್ಮ ಸುಖೀ ಕುಟುಂಬದ ಫೋಟೋ ಶೂಟ್ ಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.
ಕಳೆದ ವರ್ಷ ಶಿವರಾತ್ರಿ ಹಬ್ಬದ ದಿನದಂದು ಅಮೂಲ್ಯ ಕುಟುಂಬದವರು ಎರಡು ಮುದ್ದು ಗಂಡು ಮಕ್ಕಳನ್ನು ಬರಮಾಡಿಕೊಂಡಿದ್ದರು. ನಂತರ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟು ಅದ್ದೂರಿಯಾಗಿ ನಾಮಕರಣ ಕಾರ್ಯಕ್ರಮವನ್ನು ಕೂಡ ನಡೆಸಿದ್ದರು. ಈಗ ಆ ಮಕ್ಕಳಿಗೆ ವರ್ಷ ತುಂಬಿದ ಸಂಭ್ರಮ. ಈ ಕಾರಣಕ್ಕಾಗಿ ಮತ್ತೊಮ್ಮೆ ಬಂಧು-ಬಾಂಧವರು, ಸಿನಿ ತಾರೆಯರು ಎಲ್ಲರನ್ನು ಕರೆದು ಗ್ರಾಂಡ್ ಆಗಿ ಇಬ್ಬರು ಮಕ್ಕಳ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಪಿಂಕ್ ಬಣ್ಣದ ಫ್ಯಾಷನ್ ಹುಡುಗಿಯಲ್ಲಿ ಗೋಲ್ಡನ್ ಕ್ವೀನ್ ಅಕ್ಷರಶಃ ಕ್ವೀನ್ ಆಗಿಯೇ ಕಂಗೊಳಿಸುತ್ತಿದ್ದರು, ಮತ್ತು ಜಗದೀಶ್ ಆರ್ ಚಂದ್ರ ಅವರು ಮತ್ತು ಇಬ್ಬರು ಮಕ್ಕಳು ಕೂಡ ರೇಷ್ಮೆ ರಂಗಿನ ಉಡುಗೆ ತೊಟ್ಟು ರಾಜಕುಮಾರ ಹಾಗೂ ಯುವ ರಾಜಕುಮಾರರಂತೆ ಕಂಗೊಳಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯ ಅವರು ತಮ್ಮ ಇಬ್ಬರು ಮುದ್ದು ಮಕ್ಕಳ ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿರುವ ಫೋಟೋಗಳು ಹಾಗೂ ವಿಡಿಯೋಗಳು ಶೇರ್ ಆಗುತ್ತಿದ್ದು, ಎಲ್ಲರ ಚಿತ್ತ ಈಗ ಅಮೂಲ್ಯ ಕುಟುಂಬದತ್ತ ಬಿದ್ದಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಇಂಡಸ್ಟ್ರೀ ಕಂಡ ಯಶಸ್ವಿ ಜೋಡಿ. ಆದರೆ ವೈಯಕ್ತಿಕವಾಗಿ ಕೂಡ ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಯ ಮುಂದೆ ನಿಂತು ಜಗದೀಶ್ ಅವರ ಜೊತೆ ಅಮೂಲ್ಯ ಮದುವೆ ಮಾಡಿಸಿದ್ದಾರೆ. ಮದುವೆ ಆದ ಬಳಿಕ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿರುವ ಅಮೂಲ್ಯ ಅವರು ಗಣೇಶ್ ಜೊತೆ ಮುಗುಳುನಗೆ ಸಿನಿಮಾ ಮುಗಿದ ಮೇಲೆ ಮತ್ತೆ ಯಾವ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿಲ್ಲ.
ರಾಜಕೀಯ ಕುಟುಂಬವಾದ್ದರಿಂದ ರಾಜಕೀಯಕ್ಕೆ ಇಳಿಯುತ್ತಾರಾ ಎನ್ನುವ ನಿರೀಕ್ಷೆ ಕೂಡ ಇದೆ, ಆಗಾಗ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುವುದರಿಂದ ಜನರಿಗೆ ಆ ಬಗ್ಗೆ ಕುತೂಹಲ ಮನೆ ಮಾಡಿದೆ. ಆದರೆ ನಟಿ ಅಮೂಲ್ಯ ಅವರು ಪೋಸ್ಟ್ ಮಾಡುತ್ತಿರುವ ಫೋಟೋಗಳನ್ನು ನೋಡಿದರೆ ಆಕೆ ಸಂಸಾರದೊಂದಿಗೆ ಸಂತೋಷವಾಗಿದ್ದರೆ ಅದಷ್ಟೇ ಸಾಕು ಎನ್ನುವಂತೆ, ಸದಾ ಮಕ್ಕಳ ತುಂಟಾಟಗಳು ಅವರ ಜೊತೆ ಕಳೆಯುವ ಸಮಯಗಳು, ವಿಶೇಷ ಸಂದರ್ಭ ಮತ್ತು ಹಬ್ಬಗಳಲ್ಲಿ ಮಾಡಿಸುವ ಫೋಟೋ ಶೂಟ್ ಗಳು ಇವುಗಳನ್ನು ಹಂಚಿಕೊಂಡು ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ತಮ್ಮ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇವರ ಕುಟುಂಬದಲ್ಲಿ ಸದಾ ಹೀಗೇ ನಗು ತುಂಬಿರಲಿ ಎಂದು ಹರಸೋಣ.