ನೀವು SBI ( State bank of India) ನಲ್ಲಿ ಖಾತೆ ತೆರೆದಿದ್ದೀರ ಹಾಗಾದರೆ ಈ ಸಿಹಿ ಸುದ್ದಿ ತಿಳಿಯಲೇಬೇಕು, SBI ಗೆ ಇಂದೇ ಭೇಟಿ ನೀಡಿ.

ಭವಿಷ್ಯದ ದೃಷ್ಟಿಯಿಂದ ನಾವು ಒಂದಷ್ಟು ಹಣವನ್ನು ಕೂಡಿಡಲೇಬೇಕು ಮುಂದೆ ನಮಗೆ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ ಆದ ಕಾರಣದಿಂದಾಗಿ ನಾವು ಸ್ಥಿರ ಠೇವಣಿಯನ್ನು ಇಟ್ಟುಕೊಳ್ಳುವುದು ತುಂಬಾ ಅವಶ್ಯಕ ಇದು ನಮ್ಮ ಭವಿಷ್ಯದಲ್ಲಿ ನಮ್ಮ ಕಷ್ಟಕಾಲದಲ್ಲಿ ನೆರವೇಗೆ ಬರುತ್ತದೆ ಬೇಕು ಎಂದಾಗ ಹಣ ಹೊಂದಿಸಿಕೊಳ್ಳಲು ಆಗುವುದಿಲ್ಲ ಆದ ಕಾರಣ ನಾವು ಹಣವನ್ನು ಕೂಡಿಟ್ಟಾಗ ಅದು ನಮಗೆ ಬೇಕಾದ ಸಮಯದಲ್ಲಿ ಕೆಲಸಕ್ಕೆ ಬರುತ್ತದೆ

ಹಣವನ್ನು ಹೂಡಿಕೆ ಮಾಡಲು ಒಂದು ಉತ್ತಮ ಮಾರ್ಗ ಎಂದರೆ ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ಇಡುವುದು. ಹೌದು ಇತ್ತೀಚಿಗೆ ನಾವು ನೋಡಿರುವ ಹಾಗೆ ಎಲ್ಲಾ ಬ್ಯಾಂಕ್ ಗಳಲ್ಲೂ ಕೂಡ FD ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ ಅದರಲ್ಲಿ ಹಿರಿಯ ನಾಗರೀಕರಿಗೆ ಸ್ಥಿರ ಠೇವಣಿಯ ಮೇಲೆ ಬಡ್ಡಿ ದರವನ್ನು ಸಾಮಾನ್ಯ ನಾಗರಿಕರಿಗಿಂತಲೂ ಹೆಚ್ಚಿನದಾಗಿ ನೀಡಲಾಗುತ್ತಿದೆ ಹೀಗೆ ಬ್ಯಾಂಕ್ ಗಳು ಉತ್ತಮ ರೀತಿಯ ಆಫರ್ ಗಳಿಂದ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. SBI ನ ಯೋಜನೆಯ ಕುರಿತಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಎಸ್ ಬಿ ಐ ಅಮೃತ್ ಕಲಾಷ್ ಯೋಜನೆ

ಈ ಯೋಜನೆ ಆರಂಭವಾಗಿದ್ದು 2023 ಏಪ್ರಿಲ್ 12ರಂದು ಯೋಜನೆಯನ್ನು ಆಗಸ್ಟ್ 15 2023 ಅಂದರೆ ಸ್ವಾತಂತ್ರ್ಯೋತ್ಸವದ ದಿನದಂದು SBI ಯೋಜನೆಗೆ ಅಪ್ಲೈ ಮಾಡುವುದನ್ನು ನಿಲ್ಲಿಸುವುದಾಗಿ ಮಾಹಿತಿಯನ್ನು ನೀಡಲಾಗಿತ್ತು ಆದರೆ ಇದೀಗ ಗ್ರಾಹಕರ ಬೇಡಿಕೆಯ ಮೇಲೆಗೆ ಗಡುವನ್ನು ವಿಸ್ತರಿಸಲು ಎಸ್ ಬಿ ಐ ಬ್ಯಾಂಕ್ ನಿರ್ಧರಿಸಿದೆ.

SBI ಬ್ಯಾಂಕ್ ತನ್ನ ಗ್ರಾಹಕರನ್ನು ಸೆಳೆಯಲು ಈ ರೀತಿಯಾದಂತಹ ಯೋಜನೆಗಳನ್ನು ರೂಪಿಸುತ್ತಿರುತ್ತದೆ ಇದೀಗ ಗ್ರಾಹಕರಿಗೆ ಅನುಕೂಲವಾಗುವಂತೆ ಅಮೃತ್ ಕಲಾಷ್ ಯೋಜನೆಯನ್ನು ಪರಿಚಯಿಸಿತು ಇದರ ಅಡಿಯಲ್ಲಿ ಅಧಿಕ ಮೊತ್ತದ ಬಡ್ಡಿ ನೀಡಲಾಗುತ್ತದೆ. ಅಮೃತ್ ಕಲಾಷ್ ಯೋಜನೆಯಲ್ಲಿ ಹೂಡಿಕೆ ಮಾಡಲು ಕೆಲವು ದಿನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು

ಹೌದು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸಮಯ ಇದೆ ಅಂದರೆ ಈ ವರ್ಷ ಡಿಸೆಂಬರ್ 31ರವರೆಗೆ ಅಮೃತ ಕಲಾಷ್ ಯೋಜನೆಯ ಅಡಿಯಲ್ಲಿ ಗ್ರಾಹಕರು ಹೂಡಿಕೆ ಮಾಡಬಹುದಾಗಿದೆ. 400 ದಿನಗಳ ಹೂಡಿಕೆಯ ವಿಶೇಷ ಯೋಜನೆ ಇದಾಗಿದ್ದು TDS ಕಡಿತಗೊಳಿಸಿದ ಬಳಿಕ ಸ್ಥಿರ ಠೇವಣಿಯ ಮೇಲೆ ಮಾಸಿಕ ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಎನ್ನುವಂತೆ ಬಡ್ಡಿಯನ್ನು ನೀಡಲಾಗುತ್ತದೆ.

ಅಮೃತ್ ಕಲಾಷ್ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದವರಿಗೆ 7.10% ರಷ್ಟು ಬಡ್ಡಿ ಸಿಗುತ್ತದೆ ಅದೇ ರೀತಿ ಹಿರಿಯ ನಾಗರಿಕರು ಯೋಜನೆಯಲ್ಲಿ ಠೇವಣಿ ಇಟ್ಟರೆ 7.60% ಬಡ್ಡಿಯನ್ನು ಕೊಡಲಾಗುವುದು ಒಂದು ಲಕ್ಷ ರೂಪಾಯಿಗಳ FD ಗೆ ವಾರ್ಷಿಕವಾಗಿ 8107 ರೂಪಾಯಿ ಬಡ್ಡಿ ಸಿಗುತ್ತದೆ ಅದೇ ರೀತಿಯಲ್ಲಿ ಹಿರಿಯ ನಾಗರೀಕರಿಗೆ 8600 ಬಡ್ಡಿ ಸಿಗುತ್ತದೆ.

ಈ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದು.

* ಅಮೃತ್ ಕಲಾಷ್ ಯೋಜನೆಯ ಅಡಿಯಲ್ಲಿ ಠೇವಣಿ ಮಾಡಿದರೆ ಆದಾಯ ತೆರಿಗೆ ಕಾಯ್ದೆಯ ಅನ್ವಯ ಟಿಡಿಎಸ್ ದರವನ್ನು ವಿಧಿಸಲಾಗುತ್ತದೆ
* ಅಮೃತ ಕಲಾಷ್ ಯೋಜನೆಯಲ್ಲಿ ಎರಡು ಕೋಟಿ ಹೂಡಿಕೆ ಮಾಡಿದರೆ ಮುಂಚಿತವಾಗಿ ಸಾಲ ತೆಗೆದುಕೊಳ್ಳುವ ಅವಕಾಶ ಇರುತ್ತದೆ
* ಎಸ್‌ಬಿಐ ನಲ್ಲಿ ಅಮೃತ್ ಕಲಾಷ್ ಎಫ್ ಡಿ ಯೋಜನೆಯನ್ನು ಆರಂಭಿಸಲು ಯುನೋ ಬ್ಯಾಂಕಿಂಗ್ ಅನ್ನು ಬಳಸಿಕೊಳ್ಳಬಹುದು.
* ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಹೋಗಿ ಅಲ್ಲಿಯೂ ನಿಮ್ಮ ಖಾತೆಯನ್ನು ತೆರೆಯಬಹುದು.

Leave a Comment