ನಮ್ಮ ರೈತರಿಗೆ ಸಹಾಯವಾಗುವಂತೆ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವಾರು ರೀತಿಯಾಗಿ ಸಹಾಯವನ್ನು ಮಾಡುತ್ತಿದೆ ಅದೇ ರೀತಿಯಾಗಿ ಈ ದಿನ ಪ್ರಧಾನ ಮಂತ್ರಿಯಾಗಿರುವಂತಹ ನರೇಂದ್ರ ಮೋದಿ ಅವರು ಈ ಒಂದು ವಿಚಾರವಾಗಿ ಅಂದರೆ ರೈತರಿಗೆ ಅನುಕೂಲ ಕರವಾಗುವಂತೆ ಈ ಒಂದು ಹೊಸ ಯೋಜನೆಯನ್ನು ಹೊರಡಿಸಿದ್ದರು. ಇದರಿಂದ ರೈತರಿಗೆ ಅನುಕೂಲಕರವಾಗುವಂತೆ ಅವರಿಗೆ ಸಹಾಯವಾಗುವಂತೆ ಈ ಒಂದು ಯೋಜನೆಯ ಉದ್ದೇಶವಾಗಿದೆ.
ಹಾಗಾದರೆ ಈ ದಿನ ನರೇಂದ್ರ ಮೋದಿ ಅವರು ಹೊರಡಿಸಿರುವಂತಹ ಪಿಎಂ ಕಿಸಾನ್ ಮಾಂದನ್ ಯೋಜನೆಯ ಪ್ರಯೋಜನವೇನು ಹಾಗೆಯೇ ಈ ಒಂದು ಯೋಜನೆಯನ್ನು ಯಾರು ಮಾಡಿಸಿಕೊಂಡಿಲ್ಲವೋ ಅಂತವರು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಈ ಒಂದು ಯೋಜನೆಯನ್ನು ರೈತರು ಪಡೆದುಕೊಳ್ಳ ಬೇಕು ಎಂದರೆ ಯಾವ ರೀತಿಯ ಕೆಲವೊಂದು ವಿಚಾರಗಳನ್ನು ಹೊಂದಿರಬೇಕು ಅಂದರೆ ಯಾವ ಕೆಲವೊಂದಷ್ಟು ಷರತ್ತುಗಳು ಇರುತ್ತದೆ. ಯಾವ ರೈತರಿಗೆ ಈ ಒಂದು ಯೋಜನೆಯ ಅನುಕೂಲಕರವಾಗುತ್ತದೆ ಹಾಗೆ ಈ ಯೋಜನೆಯ ಉದ್ದೇಶ ಏನು? ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
ಸರ್ಕಾರವು 12/ 9/ 2019 ರಂದು ಪ್ರಧಾನ ಮಂತ್ರಿ ಕಿಸಾನ್ ಮಾಂದನ್ ಯೋಜನೆ ಅನ್ನು ಪ್ರಾರಂಭಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ವೃದ್ಧಾಪ್ಯದಲ್ಲಿ ಅವರ ಜೀವನವನ್ನು ನಡೆಸುವುದಕ್ಕೆ ಯಾವುದೇ ರೀತಿಯ ಹಣಕಾಸಿನ ಬೆಂಬಲ ಇರದೇ ಇದ್ದಂತಹ ಸಮಯದಲ್ಲಿ ಅವರಿಗೆ ಅನುಕೂಲಕರವಾಗುವಂತೆ ಯಾರಿಗೂ ಸಹ ಹೊರೆಯಾಗದಂತೆ ಅವರ ಜೀವನವನ್ನು ನಡೆಸುವುದಕ್ಕಾಗಿ.
ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅವರಿಗೆ ಸಹಾ ಯವಾಗುವಂತೆ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದರು. ಈ ಯೋಜನೆಯ ಅಡಿಯಲ್ಲಿ ಯಾವ ರೈತರು 60 ವರ್ಷ ಮೇಲ್ಪಟ್ಟಿರು ತ್ತಾರೋ ಅಂಥವರಿಗೆ ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ ಹಣ ಬರುವಂತೆ ಮಾಡುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕೆಲವೊಂದಷ್ಟು ಜನ ಬೇರೆಯವರ ಮಾತುಗಳಿಗೆ ಕಿವಿ ಕೊಟ್ಟು ಇಂತಹ ಜನರನ್ನು ಕೊನೆಯ ತನಕ ನೋಡಿಕೊಳ್ಳುವುದಿಲ್ಲ ಬದಲಿಗೆ ಅವರನ್ನು ಆಚೆ ಹಾಕುತ್ತಾರೆ. ಅಂತಹ ಸಮಯದಲ್ಲಿ ಅವರಿಗೆ ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಈ ಒಂದು ಕನಿಷ್ಠ ಸ್ಥಿರ ಪಿಂಚಣಿ ಯೋಜನೆಯನ್ನು ಪ್ರಾರಂಭ ಮಾಡಿದ್ದಾರೆ ಎಂದು ಹೇಳಬಹುದು.
ಹಾಗಾದರೆ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊ ಳ್ಳಲು ಯಾರು ಯಾರು ಅರ್ಹರಿರುತ್ತಾರೆ. ಹಾಗೆ ಯಾವೆಲ್ಲ ಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ ಎಂದು ನೋಡುವುದಾದರೆ ಮೊದಲನೇದಾಗಿ ಅವರು ಸಣ್ಣ ಹಾಗೂ ಅತಿ ಸಣ್ಣ ರೈತರು ಆಗಿರಬೇಕು, ಎರಡು ಹೆಕ್ಟರ್ ಭೂಮಿಯನ್ನು ಹೊಂದಿರಬೇಕು ಹಾಗೂ ಕನಿಷ್ಠ 18 ವರ್ಷ ವಯಸ್ಸಾ ಗಿರಬೇಕು ಹಾಗೆಯೇ ಗರಿಷ್ಠ 40 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.
ಉದಾಹರಣೆಗೆ ಪ್ರತಿ ತಿಂಗಳು ರೈತ 55 ರೂಪಾಯಿ ಹಣವನ್ನು ಪಾವತಿಸಿದರೆ ಸರ್ಕಾರವು 55 ರೂಪಾಯಿ ಹಣವನ್ನು ಪಾವತಿಸುತ್ತದೆ ಒಟ್ಟಾರೆಯಾಗಿ 110 ರೂಪಾಯಿ ನಿಮ್ಮ ಖಾತೆಗೆ ಬರುತ್ತದೆ ಆನಂತರ ಆ ರೈತನಿಗೆ 60 ವರ್ಷ ದಾಟಿದ ಮೇಲೆ ಆ ರೈತನಿಗೆ ಪ್ರತಿ ತಿಂಗಳು 3 ಸಾವಿರದಂತೆ ಪಿಂಚಣಿ ಹಣ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.