ಕನ್ನಡದ ಜನಪ್ರಿಯ ಕಿರುತೆರೆ ನಿರೂಪಕಿ ಪಟಪಟ ಮಾತನಾಡುವ ಮಾತಿನ ಮಲ್ಲಿ ಸದಾ ಹಸನ್ಮುಖದ ಚಂದುಳ್ಳಿ ಚೆಲುವೆ ಅನುಶ್ರೀ ಅವರು ನಿರೂಪಣೆ ಮಾತ್ರವಲ್ಲದೆ ಇನ್ನು ಅನೇಕ ವಿಷಯಗಳಲ್ಲಿ ಸಕ್ರಿಯರಾಗಿದ್ದಾರೆ.
ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ಇವರು ತಮ್ಮ ಚಾನಲ್ ನಲ್ಲಿ ಹೊಸ ಚಿತ್ರಗಳ ಪ್ರೊಮೋಷನ್ ಕಾರ್ಯವನ್ನು ತಮ್ಮದೇ ಆದ ಶೈಲಿಯಲ್ಲಿ ನಡೆಸಿ ಕೊಡುವ ಮಾಡುವ ಮಿಲಿಯನ್ ಗಟ್ಟಲೆ ಸಬ್ಸ್ಕ್ರೈಬರ್ ಗಳನ್ನು ಗಳಿಸಿ ಕನ್ನಡದ ಟಾಪ್ ಯೂಟ್ಯೂಬ್ ಚಾನೆಲ್ ಗಳಲ್ಲಿ ಅನುಶ್ರೀ ಚಾನಲ್ ಕೂಡ ಒಂದು ಎನ್ನುವಂತಹ ಸಾಧನೆ ಮಾಡಿದ್ದಾರೆ.
ಇದರ ಹೊರತಾಗಿ ತಾನು ಎಷ್ಟೇ ಕೆಲಸ ಕಾರ್ಯಗಳಲ್ಲಿ ಬಿಝಿ ಇದ್ದರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟಿವ್ ಆಗಿರುತ್ತಾರೆ. ತನ್ನ ಅಭಿಮಾನಿಗಳಿಗಾಗಿ ಚಂದ ಚಂದದ ಪೋಸ್ಟ್ ಮಾಡುತ್ತಿರುತ್ತಾರೆ. ಅವರ ರೀಲ್ಸ್ ಗಳಿಗಂತೂ ಎಲ್ಲರೂ ಕಾಯುತ್ತಿರುತ್ತಾರೆ ಅದಕ್ಕೆ ತಕ್ಕಂತೆ ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಕಾಮೆಂಟ್ ಗಳಲ್ಲಿ ವ್ಯಕ್ತಪಡಿಸುತ್ತಾರೆ.
ನಿರೂಪಕಿ ಅನುಶ್ರೀ ಅವರು ಹೆಚ್ಚು ಕಡಿಮೆ ಜೀ ಕನ್ನಡದ ಎಲ್ಲಾ ತಾರೆಯರೊಂದಿಗೆ ರೀಲ್ಸ್ ಮಾಡಿದ್ದಾರೆ ಎಂದೇ ಹೇಳಬಹುದು. ಅವರು ನಿರೂಪಣೆ ಮಾಡುವ ಕಾರ್ಯಕ್ರಮಗಳಾದ ಸರಿಗಮಪ ಡಿಕೆಡಿ, ಜೀ ಕನ್ನಡ ವಾಹಿನಿಯ ಇತರೆ ಕಾರ್ಯಕ್ರಮಗಳಲ್ಲಿ ಜೊತೆ ಸೇರುವ ಕಲಾವಿದರೊಂದಿಗೆ ಸೇರಿ ಎಲ್ಲರೊಂದಿಗೆ ಒಂದಾಗಿ ಕ್ಷಣದಲ್ಲೇ ಆನ್ ಸ್ಪಾಟ್ ಏನೋ ತಯಾರಾಗಿ ಹಾಕಿರುವ ಕಾಸ್ಟ್ಯೂಮ್ ನಲ್ಲಿಯೇ ರೀಲ್ ಒಂದನ್ನು ಮಾಡಿ ಹಂಚಿಕೊಂಡು ಬಿಡುತ್ತಾರೆ. ಇದುವರೆಗೂ ನೆನಪಿರಲಿ ಪ್ರೇಮ್, ಅರ್ಜುನ್ ಜನ್ಯ ಶ್ವೇತ ಚೆಂಗಪ್ಪ, ಮಾಸ್ಟರ್ ಆನಂದ್, ರಕ್ಷಿತಾ, ಹರ್ಷ, ಸುನಿಲ್, ರಂಗದ ಕಂಬಯ್ಯ, ಪ್ರೀತಿಯ ತಮ್ಮ ಹನುಮಂತನು ಸೇರಿದಂತೆ ಬಹುತೇಕ ಜೀ ಕನ್ನಡದಲ್ಲಿರುವ ಎಲ್ಲಾ ಕಲಾವಿದರೊಡನೆ ಭಿನ್ನವಿಭಿನ್ನ ಬಗೆಯ ರೀಲ್ಸ್ ಗಳನ್ನು ಮಾಡಿ ರಂಜಿಸುತ್ತಾರೆ ಅನುಶ್ರೀ.
ಸದ್ಯಕ್ಕೆ ಅನುಶ್ರೀ ಹಾಗೂ ಅಕುಲ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮಕ್ಕಾಗಿ ಅಕುಲ್ ಅವರು ಜೋಡಿ ನಂಬರ್ ಒನ್ ಕಾರ್ಯಕ್ರಮದ ಸಲುವಾಗಿ ಝೀ ಸೆಟ್ಟಲ್ಲಿ ಒಟ್ಟಾಗಿ ಸಿಕ್ಕಿದಾಗ ಕನ್ನಡದಲ್ಲಿ ಈಗ ಟ್ರೆಂಡಿಂಗ್ ನಲ್ಲಿರುವ ಡಿ ಬಾಸ್ ಕಾಟೇರ ಸಿನಿಮಾದ ಪಸಂದಾಗವನೇ ಶ್ಯಾನೇ ಪಸಂದಾಗವನೇ ಎನ್ನುವ ಹಾಡಿಗೆ ರೀಲ್ಸ್ ಮಾಡಿ ಅಕುಲ್ ಮೇಲಿನ ಪ್ರೀತಿ ಹೇಳಿಕೊಂಡಿದ್ದಾರೆ. ಹಳದಿ ಬಣ್ಣದ ಲೆಹಂಗದಲ್ಲಿ ಮಿಂಚಿರುವ ಅನುಶ್ರೀ ಅವರು ಹಾಡಿನ ಲಿರಿಕ್ಸ್ ಗುನುಗುತ್ತಾ ಆರಾಧನಾ ಹೆಜ್ಜೆಗಳನ್ನು ಅನುಸರಿಸಿದ್ದಾರೆ. ಅದಕ್ಕೆ ತಕ್ಕಂತೆ ಅಕೂಲ್ ಕೂಡ ಪ್ರತಿಕ್ರಿಯಿಸಿದ್ದಾರೆ ಒಟ್ಟಾರೆಯಾಗಿ ನೋಡಿದವರಿಗೆ ಮತ್ತೆ ಮತ್ತೆ ನೋಡಬೇಕು ಎನ್ನುವಂತಹ ಮನೋರಂಜನೆ ಸಿಗುತ್ತಿದೆ.
ಅನುಶ್ರೀ ಅವರು ಅಪ್ಪು ಸರ್ ಅಪ್ಪಟ ಅಭಿಮಾನಿ. ಹಿಂದೊಮ್ಮೆ ಇವರ ಮೇಲೆ ದರ್ಶನ್ ಸರ್ ವಿಷಯವಾಗಿ ಆರೋಪ ಇತ್ತು. ಇವರ ಯೂಟ್ಯೂಬ್ ಚಾನಲ್ನಲ್ಲಿ ದರ್ಶನ್ ಅವರ ಇಂಟರ್ವ್ಯೂ ಕೂಡ ಆಗಿಲ್ಲ ಮತ್ತು ಇವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಬೇಕಂತಲೇ ದರ್ಶನ್ ಅವರ ಹೆಸರನ್ನು ನಿರ್ಲಕ್ಷಿಸುತ್ತಾರೆ ಎನ್ನುವ ದೂರು ದಚ್ಚು ಅಭಿಮಾನಿಗಳಿಂದ ಇತ್ತು. ಆದರೆ ಇದೆಲ್ಲ ಸುಳ್ಳು ಬಿಝಿ ಇರುವ ಕಾರಣದಿಂದಾಗಿ ಅವರ ಇಂಟರ್ವ್ಯೂ ಮಾಡಲು ಆಗುತ್ತಿಲ್ಲ ಮುಂದಿನ ದಿನಗಳಲ್ಲಿ ಖಂಡಿತ ಇದು ಕೂಡ ಆಗುತ್ತದೆ ಎನ್ನುವುದನ್ನು ಅವರೇ ಒಮ್ಮೆ ಹೇಳಿಕೊಂಡಿದ್ದಾರೆ. ಹಾಗೆ ದರ್ಶನ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ತಾವು ಕನ್ನಡದ ಎಲ್ಲಾ ಹೀರೋಗಳ ಅಭಿಮಾನಿ ಕೂಡ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ನೀವು ಕೂಡ ಅವರ ಈ ಡ್ಯಾನ್ಸ್ ನೋಡಿ ನಿಮ್ಮ ಅಭಿಪ್ರಾಯ ಏನೆಂದು ಮಾಡಿ.