ನಟಿ ಅಧಿತಿ ಪ್ರಭುದೇವ ಕನ್ನಡದ ಒಬ್ಬ ಉದಯೋನ್ಮುಖ ನಟಿ ಆಗಿದ್ದಾರೆ. ಇಂಡಸ್ಟ್ರಿಗೆ ಕಾಲಿಟ್ಟ ಬಹಳ ಕಡಿಮೆ ಸಮಯದಲ್ಲಿಯೇ ಕೈ ತುಂಬಾ ಪ್ರಾಜೆಕ್ಟ್ ಗಳನ್ನು ಗಿಟ್ಟಿಸಿಕೊಂಡಿರುವ ನಟಿ ಇವರಾಗಿದ್ದು ವರ್ಷಪೂರ್ತಿ ಇವರ ಒಂದಲ್ಲ ಒಂದು ಸಿನಿಮಾ ಬಿಡುಗಡೆ ಆಗುತ್ತಿರುತ್ತದೆ. ಕಳೆದ ವರ್ಷ ಕೂಡ ಈ ನಟಿಯ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿದ್ದವು, ಈ ವರ್ಷದ ಆರಂಭದಲ್ಲಿಯೇ ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಕನ್ನಡದ ಹಲವು ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಇವರು ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ.
ಕಳೆದ ವರ್ಷದ ವರ್ಷಾಂತ್ಯದಲ್ಲಿ ಚಿಕ್ಕಮಗಳೂರು ಮೂಲದ ಉದ್ಯಮಿ ಹಾಗೂ ಕಾಫಿ ಬೆಳೆಗಾರ ಯಶಸ್ ಅನ್ನುವವರನ್ನು ಕೈಹಿಡಿದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು ಚಿತ್ರರಂಗವನ್ನು ಕೂಡ ತೊರೆಯದೇ ಮುಂದುವರೆದಿದ್ದಾರೆ. ಇಂಡಸ್ಟ್ರಿಯಲ್ಲಿ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿದೆ. ಜೊತೆಗೆ ಕೆಲಸ ಮಾಡಿ ಬದುಕುವುದೇ ನನ್ನ ಇಚ್ಛೆ ಆಗಿರುವುದರಿಂದ, ನಾನು ಯಾರ ಮೇಲೂ ಡಿಪೆಂಡ್ ಆಗಿರುವುದಿಲ್ಲ. ನನ್ನ ಹಣದಲ್ಲಿ ನಾನು ಬದುಕಬೇಕು ಎನ್ನುವ ಹಂಬಲ ಇಟ್ಟುಕೊಂಡಿರುವ ಈಕೆ ಕುಟುಂಬಸ್ಥರ ಅನುಮತಿ ಮೇರೆಗೆ ಮದುವೆ ಆದ ಬಳಿಕವೂ ಕೂಡ ಬ್ರೇಕ್ ಇಲ್ಲದಂತೆ ಸತತ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದಾರೆ.
ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಅಧಿತಿ ಪ್ರಭುದೇವ್ ಅವರು ಹಾಗಾಗ ತಮ್ಮ ಹೊಸ ಹೊಸ ಫೋಟೋ ಶೂಟ್ಗಳು ಹಾಗೂ ಹೊಸ ಸಿನಿಮಾದ ಅಪ್ಡೇಟ್ಸ್ ಗಳ ಜೊತೆ ವಿಷಯ ಶೇರ್ ಮಾಡುತ್ತಾ ಅಭಿಮಾನಿಗಳು ಹಾಗೂ ಫಾಲೋವರ್ಸ್ ಗಳನ್ನು ಖುಷಿ ಪಡಿಸುತ್ತಿರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಧಿತಿ ಪ್ರಭುದೇವ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೆಂಪು ಬಣ್ಣದ ಸೀರೆ ಉಟ್ಟು ಕೈ ತುಂಬಾ ಕೆಂಪು ಬಳೆ ತೊಟ್ಟು ಸಹ ನೃತ್ಯಗಾರರ ಜೊತೆಗೆ ವೇದಿಕೆ ಸೆಟ್ ಮೇಲೆ ಸಖತ್ ಆಗಿ ಈಕೆ ಸ್ಟೆಪ್ಸ್ ಹಾಕುತ್ತಿದ್ದಾರೆ.
ಇದನ್ನು ಮೊದಲ ಬಾರಿಗೆ ನೋಡಿದವರು ಇದು ಇವರ ವೆಡ್ಡಿಂಗ್ ಗಾಗಿ ಮಾಡಿಸಿರುವ ವೆಡ್ಡಿಂಗ್ ಶೂಟ್ ಇರಬೇಕು ಎಂದು ಭಾವಿಸಬಹುದು. ಯಾಕೆಂದರೆ ಕೆಲ ತಿಂಗಳುಗಳ ಹಿಂದಷ್ಟೇ ಇವರ ಮದುವೆ ನಡೆದಿದೆ ಜೊತೆಗೆ ಈಕೆ ತಮ್ಮ ಮದುವೆಗೆ ಸಂಬಂಧಪಟ್ಟ ಹಲವು ವಿಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಗ ತೆಗೆದಿರುವ ವಿಡಿಯೋ ಇದಾಗಿರಬಹುದು ಎಂದು ಕೆಲವರು ಇದನ್ನು ನೋಡಿ ಊಹಿಸಿಕೊಂಡಿದ್ದಾರೆ ಮತ್ತೆ ಕೆಲವರು ಇಲ್ಲ ಇದು ಸಿನಿಮಾದ ಶೂಟಿಂಗ್ ಎಂದು ವಾದಿಸುತ್ತಿದ್ದಾರೆ.
ಅದೇನೆಂದರೆ ಅಧಿತಿ ಪ್ರಭುದೇವ್ ಅವರ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ 5ಡಿ ಎನ್ನುವ ಸಿನಿಮಾ ಕೂಡ ಒಂದು. 5ಡಿ ಚಿತ್ರದಲ್ಲಿ ಕನ್ನಡದ ಹೆಸರಾಂತ ಹೀರೋ ರೆಬೆಲ್ ಆದಿತ್ಯ ಜೊತೆ ನಾಯಕಿಯಾಗಿ ಅಧಿತಿ ಪ್ರಭುದೇವ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡದಿಂದ ಕೆಲ ವಿಡಿಯೋ ತುಣುಕುಗಳು ರಿಲೀಸ್ ಆಗಿದ್ದು ಅವುಗಳಲ್ಲಿ ಇವರಿಬ್ಬರು ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅದೇ ಸಿನಿಮಾಗೆ ಸಂಬಂಧಪಟ್ಟ ಯಾವುದು ಹಾಡಿನ ಚಿತ್ರೀಕರಣ ಇದಾಗಿರಬೇಕು ಅಥವಾ ಮತ್ಯಾವುದೋ ಫಿಲಂ ಶೂಟಿಂಗ್ ಅಲ್ಲಿ ಈ ರೀತಿ ಇವರು ಹೆಜ್ಜೆ ಹಾಕಿರಬೇಕು ಅದಕ್ಕಾಗಿ ಈ ರೀತಿ ಮಳೆ ಸೆಟ್ ಹಾಕಲಾಗಿದೆ, ಹಾಗಾಗಿಯೇ ಸಹ ನೃತ್ಯಗಾರ್ತಿಯರು ಕೂಡ ಜೊತೆಯಲ್ಲಿ ಇದ್ದಾರೆ ಎಂದು ಕೆಲವರು ಅಭಿಪ್ರಾಯ ಹೊರ ಹಾಕುತ್ತಿದ್ದಾರೆ.
ಅಧಿತಿ ಪ್ರಭುದೇವ್ ಅವರು ಸಹಜ ಸುಂದರಿ, ಸಿನಿಮಾ ಆಗಲಿ ಅಥವಾ ವೈಯಕ್ತಿಕ ಬದುಕೇ ಆಗಲಿ ಪ್ರತಿಕ್ಷಣವನ್ನು ಕೂಡ ಸಂಭ್ರಮದಿಂದ ಕಳೆಯುವ ಭಾವಜೀವಿ. ಈಕೆ ಆಡುವ ಮಾತುಗಳಲ್ಲೇ ಅವರೆಷ್ಟು ಸಹಜ ಜೀವಿ ಎಂಬುದು ತಿಳಿಯುತ್ತದೆ. ಅವರು ಸ್ವ ಇಚ್ಛೆಯಿಂದ ಮಳೆಯಲ್ಲಿ ಕುಣಿದಿದ್ದಾರೋ ಅಥವಾ ಸಿನಿಮಾ ಶೂಟಿಂಗ್ ಆಗಿ ಕುಣಿದಿದ್ದಾರೋ ಗೊತ್ತಿಲ್ಲ. ಈ ವಿಡಿಯೋ ನೋಡಿದ ಮೇಲೆ ಪಡ್ಡೆ ಐಕಳು ನಿದ್ದೆಗೆಡುವುದಲ್ಲಿ ಯಾವುದೇ ಅನುಮಾನ ಇಲ್ಲ. ಈ ವಿಡಿಯೋವನ್ನು ನೀವೊಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://youtu.be/SxKQUxCMDJw