ಕೊಡಗಿನ ಬೆಡಗಿ ಹರ್ಷಿಕ ಪುಣಚ್ಚ ತಮ್ಮ ಮುದ್ದುಮುಖ, ಗ್ಲಾಮರಸ್ ಲುಕ್ ಮತ್ತು ಸಿನಿಮಾಗಳನ್ನ ಪಾತ್ರಗಳ ಕಾರಣದಿಂದಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ದಶಕಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹರ್ಷಿಕ ಪೂಣಚ್ಚ ಹತ್ತಾರು ಸಿನಿಮಾ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪಾತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಇತ್ತೀಚೆಗೆ ವಿಜಯ ರಾಘವೇಂದ್ರ ಅವರ ಜೊತೆಗೆ ಅಭಿನಯಿಸಿದ ಕಾಸಿನಸರ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದರು.
ರೈತ ವರ್ಗದ ಸಮಸ್ಯೆಗಳನ್ನು ಬಿತ್ತರಿಸುವ ಕುರಿತಾದ ಚಿತ್ರದಲ್ಲಿ ನಟಿ ಅಪ್ಪಟ ಹಳ್ಳಿ ಹುಡುಗಿ ಪಾತ್ರವನ್ನು ಜವಾಬ್ದಾರಿಯತವಾಗಿ ನಿಭಾಯಿಸಿದ್ದರು ಇದಾದ ಬಳಿಕ ಇವರ ಮದುವೆ ಸುದ್ದಿಯಿಂದ ಚರ್ಚೆಯಾಗುತ್ತಿದ್ದ ಹರ್ಷಿಕ ಈಗ ಮತ್ತೊಂದು ವಿಚಾರವಾಗಿ ನೆಟ್ಟಿಗರಿಂದ ಶಭಾಷ್ ಗಿರಿ ಪಡೆಯುತ್ತಿದ್ದಾರೆ.
ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸಿದ್ರೆ, ಅವರು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ.!
ಪ್ರಜ್ವಲ್ ದೇವರಾಜ್ ಅಭಿನಯದ ಮುರಳಿ ಮೀಟ್ಸ್ ಮೀರಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಇವರು ಆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ, ಅಜಯ್ ರಾವ್, ಶ್ರೀನಗರ ಕಿಟ್ಟಿ, ರವಿಚಂದ್ರನ್ ಇತ್ಯಾದಿ ಖ್ಯಾತ ನಟರ ಜೊತೆ ನಾಯಕ ನಟಿಯಾಗಿ, ತಂಗಿಯಾಗಿ, ಗೆಳತಿ ಪಾತ್ರದಾರಿಯಾಗಿ ತೆರೆ ಮೇಲೆ ಮುಂಚಿರುವ ಹರ್ಷಿಕಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭದ್ರವಾಗಿ ನೆಲೆಯೂರಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ.
ಸದಾ ಒಂದಲ್ಲ ಒಂದು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಹರ್ಷಿಕಾ ಪೂಣಚ್ಚ ತಮ್ಮ ಬಹುಕಾಲದ ಗೆಳೆಯ ರಿಯಾಲಿಟಿ ಶೋ ಖ್ಯಾತಿಯ ಭುವನ್ ಅವರ ಜೊತೆ ಆಗಸ್ಟ್ 24 ರಂದು ಕೊಡಗಿನಲ್ಲಿ ಕೊಡವ ಸಾಂಪ್ರದಾಯದ ಪ್ರಕಾರ ಸಾಂಪ್ರದಾಯಿಕವಾಗಿ ಹಸೆಮಣೆ ಏರಿದ್ದರು. ಇದೀಗ ವೆಕೇಷನ್ ಗಾಗಿ ಅಮೆರಿಕಾಗೆ ಹೋಗಿದ್ದಾರೆ.
ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಅಲ್ಲಿನ ಕಾರ್ಯಕ್ರಮ ಒಂದರಲ್ಲಿ ರ್ಯಾಂಪ್ ವಾಕ್ ಮಾಡುವ ಸಲುವಾಗಿ ಮಾಡರ್ನ್ ಬಟ್ಟೆ ತೊಟ್ಟಿದ್ದ ಹರ್ಷಿಕ ಕೆಂಪು ಬಣ್ಣದ ಗೌನ್ ನಲ್ಲಿ ಡಾಲ್ ರೀತಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದಾರೆ. ಈ ಬಾರಿ ನಟಿ ಫೋಟೋಗೆ ಪ್ರಶಂಸೆಗಳ ಸುರಿಮಳೆಯೇ ಸುರಿಯುತ್ತಿದೆ.
ಯಾಕೆಂದರೆ ನವವಧುವಾಗಿರುವ ಹರ್ಷಿಕ ಮಾಡ್ರನ್ ಬಟ್ಟೆಯಲ್ಲಿ ಇದ್ದರೂ ಕೂಡ ತಮ್ಮ ಮದುವೆಯಲ್ಲಿ ಸಾಂಪ್ರದಾಯಿಕವಾಗಿ ತೊಡಿಸಿದ್ದ ಕಪ್ಪು ಬಣ್ಣದ ಶಾಸ್ತ್ರದ ಬಳೆ ಹಾಗೂ ಕರಿಮಣಿಯನ್ನು ಹಾಕಿಕೊಂಡೇ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದನ್ನು ನೋಡಿ ಇದಪ್ಪ ನಮ್ಮ ಸಂಸ್ಕೃತಿ ಎಂದು ನೋಡುಗರು ಮೆಚ್ಚಿಕೊಳ್ಳುತ್ತಿದ್ದಾರೆ. ಹೌದು, ಇತ್ತೀಚೆಗೆ ಸೆಲೆಬ್ರಿಟಿಗಳು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ.
ಸೇವಂತಿ ಹೂವಿನ ದರ ಕುಸಿತ, ಬೆಳೆದ ಹೂವನ್ನು ಸ್ವತಃ ತಾನೇ ನಾ-ಶ ಮಾಡಿದ ರೈತ.!
ಕೆಲವೊಮ್ಮೆ ಸಿನಿಮಾ ಸಲುವಾಗಿ ಆ ಪಾತ್ರಗಳಿಗೆ ತಕ್ಕ ಕಾಸ್ಟ್ಯೂಮ್ ಬದಲಾಯಿಸಿಕೊಳ್ಳುವ ಅವಶ್ಯಕತೆ ಬರಬಹುದು ಆದರೆ ಸಾಮಾಜಿಕವಾಗಿ ಕಾಣಿಸಿಕೊಂಡಾಗ ಸಂಪ್ರದಾಯಬದ್ಧವಾಗಿ ಅದರಲ್ಲೂ ಮದುವೆ ಆದ ನಂತರ ಈ ರೀತಿ ಕಾಣಿಸಿಕೊಂಡರೆ ಅದು ಮುಂದಿನ ತರಮಾರಿಗಳಿಗೆ ಒಂದು ದೊಡ್ಡ ಮೆಸೇಜ್ ಆಗುತ್ತದೆ.
ಯಾಕೆಂದರೆ ಈಗಿನ ಕಾಲದಲ್ಲಿ ಯುವ ಜನತೆ ಸೆಲೆಬ್ರಿಟಿ ಗಳನ್ನು ಹೆಚ್ಚು ಫಾಲೋ ಮಾಡುತ್ತಾರೆ ಹಾಗಾಗಿ ಅವರಲ್ಲಿ ಇಂತಹ ಆದರ್ಶ ಗುಣಗಳು ಇದ್ದರೆ ತಾವು ಕೂಡ ತಮ್ಮ ತಪ್ಪುಗಳನ್ನು ಅರಿತುಕೊಳ್ಳುತ್ತಾರೆ. ಈ ವಿಷಯದಲ್ಲಿ ಹರ್ಷಿಕ ಅವರನ್ನು ಮೆಚ್ಚಲೇಬೇಕು. ಈ ವರ್ಷ ಮಾಲಾಶ್ರೀ ಅವರ ಜೊತೆ ಹರ್ಷಿಕ ಮಾರಕಾಸ್ತ್ರ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜೊತೆಗೆ ಭುವನ್ ಅವರ ನಟನೆ ಮತ್ತು ನಿರ್ದೇಶನ ಸಿನಿಮಾಗೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ ಎಂದು ತಿಳಿದುಬಂದಿದೆ, ಶುಭವಾಗಲಿ ಎಂದು ನಾವು ಹರಸೋಣ.