ನಟಿ ರಮ್ಯಕೃಷ್ಣ ಅವರು ಸಿನಿಮಾ ಇಂಡಸ್ಟ್ರಿ ಕಂಡ ಅಪ್ರತಿಮ ಸುಂದರಿ. ಅವರ ಹೈಟ್, ಲುಕ್, ಅಭಿನಯ ಎಲ್ಲವೂ ಸೇರಿ ನೋಡುಗರನ್ನು ಮೋಡಿ ಮಾಡಿದ್ದವು. ಇದೇ ಕಾರಣಕ್ಕಾಗಿ ಎಂಬತ್ತರ ದಶಕದಿಂದಲೂ ಕನ್ನಡ ತಮಿಳು ತೆಲುಗು ಚಿತ್ರರಂಗವನ್ನು ಇವರು ಆಳಿದ್ದಾರೆ ಎಂದು ಹೇಳಬಹುದು. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಾಯಕನಟಿಯಾಗಿ ಕಾಣಿಸಿಕೊಂಡಿರುವ ಇವರು ಕೆಲವು ನೆ’ಗೆ’ಟಿ’ವ್ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೆಲ ಸಿನಿಮಾಗಳಲ್ಲಿ ಈ ಭಾಗದ ಯಾವ ನಟಿಯರು ಕೂಡ ಮಾಡಲು ಅಸಾಧ್ಯವಾಗದ ಪಾತ್ರಗಳಲ್ಲಿ ತಾವು ಅಭಿನಯಿಸಿ ಗ್ರೇಟ್ ಆಗಿದ್ದಾರೆ ಎನ್ನಬಹುದು.
ಇದಕ್ಕೆ ಉದಾಹರಣೆಯಾಗಿ ತಮಿಳಿನ ಹಿರೋ ರಜನಿಕಾಂತ್ ಅವರ ಪಡಿಯಪ್ಪ ಸಿನಿಮಾದ ನೆ’ಗೆ’ಟಿ’ವ್ ರೋಲ್ ಮತ್ತು ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಕಾಣಿಸಿಕೊಂಡ ರಕ್ತ ಕಣ್ಣೀರು ಚಿತ್ರದ ಕಾಂತಾ ಪಾತ್ರವನ್ನು ಹೆಸರಿಸಬಹುದು. ಹೀಗೆ ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮತ್ತು ಎಕ್ಸ್ಪರಿಮೆಂಟಲ್ ಕ್ಯಾರೆಕ್ಟರ್ಗಳಲ್ಲಿ ಅಭಿನಯಿಸಿ ತನ್ನ ಅಭಿನಯ ಚಾತುರ್ಯತೆಯನ್ನು ಪ್ರದರ್ಶಿಸಿದ್ದ ಈಕೆ ಈಗಲೂ ಸಹ ಪೋಷಕ ಪಾತ್ರದಾರಿಯಾಗಿ ಬಹಳ ಬಿಸಿ ಆಗಿದ್ದಾರೆ. ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆ ಆದ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಸೀರೀಸ್ ಗಳು ರಮ್ಯಕೃಷ್ಣ ಅವರಿಗೂ ಕೂಡ ಪೋಷಕ ಪಾತ್ರಕ್ಕೆ ಇನ್ನಿಲ್ಲದ ಬೇಡಿಕೆ ತಂದಿದೆ.
ಇಷ್ಟು ವರ್ಷದ ವೃತ್ತಿ ಜೀವನದ ಪಾತ್ರಗಳು ಒಂದು ತೂಕದ್ದಾಗಿದ್ದರೆ ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರವೇ ಒಂದು ತೂಕ ಎನ್ನುವಂತೆ ಆ ಸಿನಿಮಾದಲ್ಲಿ ಅಷ್ಟರ ಮಟ್ಟಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ರಮ್ಯಕೃಷ್ಣ ಅವರು. ಇದಾದ ಬಳಿಕ ಸುದೀಪ್, ಪುನೀತ್, ವಿಜಯ ದೇವರಕೊಂಡ ಇನ್ನು ಮುಂತಾದ ನಟರಿಗೆ ತಾಯಿಯ ಪಾತ್ರದಲ್ಲಿ ಕೂಡ ಕಾಣಿಸಿಕೊಂಡು ಹೊಸ ರೀತಿ ಅಲೆ ಸೃಷ್ಟಿಸಿರುವ ರಮ್ಯಕೃಷ್ಣ ಅವರ ಬಗ್ಗೆ ಸುದ್ದಿ ಒಂದು ಹೊರ ಬಿದ್ದಿದೆ. ರಮ್ಯಾಕೃಷ್ಣ ಅವರು ವೃತ್ತಿ ಜೀವನದಲ್ಲಿ ಬಹಳ ಒಳ್ಳೆಯ ಹೆಸರು ಪಡೆದಿದ್ದಾರೆ, ಚಿತ್ರರಂಗದಲ್ಲಿ ಸಾಧನೆಯೇ ಮಾಡಿದ್ದಾರೆ ಅಂತಲೂ ಹೇಳಬಹುದು.
ಆದರೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ. ಯಾಕೆಂದರೆ ಮೊದಲಿಗೆ ಇವರಿಗೆ ಮದುವೆ ವಿಷಯದಲ್ಲಿ ಆ ಬಗ್ಗೆ ಆಸಕ್ತಿಯೇ ಇರಲಿಲ್ಲ ಯಾಕೆಂದರೆ ಸಿನಿರಂಗದಲ್ಲಿದ್ದ ಮಹಿಳೆಯರ ಮದುವೆಗಳು ಮುರಿದು ಬೀಳುತ್ತಿದ್ದ ಕಾರಣ ಅವರಿಗೆ ಈ ವಿಷಯದಲ್ಲಿ ನಂಬಿಕೆ ಹೊರಟು ಹೋಗಿತ್ತಂತೆ. ಆದರೆ ಯಾವಾಗ ತಮಿಳು ನಿರ್ದೇಶಕ ಕೃಷ್ಣ ವಂಶಿಯವರ ಪರಿಚಯವಾಗುತ್ತದೆಯೋ ಅಲ್ಲಿನಿಂದ ಪ್ರೀತಿ ಮದುವೆ ಅಂತ ಸಂಬಂಧಗಳ ಬೆಲೆ ತಿಳಿಯುತ್ತದೆ. ನಂತರ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಗಟ್ಟಿಕೊಳ್ಳುತ್ತದೆ. ಕೃಷ್ಣವಂಶಿ ಅವರನ್ನು 2003 ರಲ್ಲಿ ತಮ್ಮ 33ನೇ ವಯಸ್ಸಿನಲ್ಲಿ ರಮ್ಯಕೃಷ್ಣ ಅವರು ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆ ಸಹ ಆಗುತ್ತಾರೆ.
ಹಲವು ದಿನಗಳವರೆಗೆ ಇವರಿಬ್ಬರ ದಾಂಪತ್ಯ ಚೆನ್ನಾಗಿರುತ್ತದೆ. ಇವರಿಬ್ಬರಿಗೂ ಒಬ್ಬ ಗಂಡು ಮಗ ಕೂಡ ಇದ್ದಾನೆ. ಆದರೆ ಇತ್ತೀಚಿಗೆ ಇವರಿಬ್ಬರ ಸಂಬಂಧ ಮುರಿದು ಬಿದ್ದಿದೆ ಎನ್ನುವ ಗಾಳಿಸುದ್ದಿ ಪ್ರಚಾರ ಆಗುತ್ತಿದೆ. ಸದ್ಯದಲ್ಲೇ ಇವರಿಬ್ಬರ ವಿ’ಚ್ಛೇ’ದ’ನ ಕೂಡ ಅಗಲಿದ್ದಾರೆ ಎನ್ನುವ ವಿಷಯಗಳು ಹರಿದಾಡುತ್ತಿವೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕೃಷ್ಣವಂಶಿಯವರು ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡುವಾಗ ಇದೇ ರೀತಿಯಾಗಿ ಮಾತನಾಡಿದ್ದಾರೆ. ನನಗೆ ಮದುವೆ ಎನ್ನುವ ವಿಷಯದ ಮೇಲೆ ನಂಬಿಕೆ ಇರ್ಲಿಲ್ಲ ಆದರೂ ಸಹ ಮದುವೆಯಾದೆ.
ಒಂದು ಹಂತದವರೆಗೆ ಎಲ್ಲವೂ ಚೆನ್ನಾಗಿತ್ತು, ಆದರೆ ಈಗ ನಾನು ಮದುವೆ ಆಗಲೇ ಬಾರದಿತ್ತು ಎನಿಸುತ್ತಿದೆ ಎಂದು ಹೇಳಿ, ವಿ’ಚ್ಛೇ’ದ’ನ’ದ ಬಗ್ಗೆ ಸ್ಪಷ್ಟತೆ ತಿಳಿಸದೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡುವುದು ಬೇಡ ಬಿಡಿ ಎಂದು ಹೇಳಿ ಅದನ್ನು ಅಷ್ಟಕ್ಕೆ ನಿಲ್ಲಿಸಿದ್ದಾರೆ. ಈ ಮಾತಿನಿಂದ ಇವರಿಬ್ಬರ ಸಂಬಂಧದಲ್ಲಿ ಏನು ಸರಿ ಇಲ್ಲ ಎನ್ನುವ ಸುಳಿವು ಸಿಗುತ್ತಿದೆ. ಕೃಷ್ಣ ವಂಶಿಯವರು ಅದ್ಯಾಕೋ ಕಳೆದ ಆರೇಳು ವರ್ಷಗಳಿಂದ ಯಾವುದೇ ಸಿನಿಮಾವನ್ನು ನಿರ್ದೇಶನ ಮಾಡಿಲ್ಲ.
ಜೊತೆಗೆ ಚಿತ್ರರಂಗಕ್ಕೆ ಸಂಬಂಧ ಪಟ್ಟ ಯಾವುದೇ ಕೆಲಸದಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಒಂದು ರೀತಿಯಲ್ಲಿ ಅವರು ಮನೆಯಲ್ಲಿಯೇ ಉಳಿದಿದ್ದಾರೆ ಎನ್ನಬಹುದು. ಇದರಿಂದ ತಮ್ಮ ಬೇಸರವನ್ನು ಇನ್ನಷ್ಟು ಹೆಚ್ಚಿಸಿಕೊಂಡ ರಮ್ಯಕೃಷ್ಣ ಅವರು ಇದೇ ವಿಷಯವಾಗಿ ದೊಡ್ಡ ಜಗಳವಾಡಿ ದೂರವಾಗುವ ನಿರ್ಧಾರ ಮಾಡಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ರಮ್ಯಕೃಷ್ಣ ಅವರು ಬಹಳ ಪ್ರಬುದ್ಧ ಮಹಿಳೆ ಅವರು ಇಷ್ಟು ಬೇಗ ಇಂತಹ ನಿರ್ಧಾರಕ್ಕೆಲ್ಲ ಬರುತ್ತಾರೆ ಎಂದರೆ ಅದು ನಂಬಲಾಗದ ವಿಷಯ. ಆದರೆ ಇದರ ಬಗ್ಗೆ ರಮ್ಯಕೃಷ್ಣ ಅವರು ಅಥವಾ ಕೃಷ್ಣ ವಂಶೀಯವರು ಸ್ಪಷ್ಟವಾಗಿ ಹೇಳಿಕೆ ಕೊಡುವ ತನಕ ಯಾವುದನ್ನೂ ನಂಬುವಂತ್ತಿಲ್ಲ.