ಡಾಲಿ ಧನಂಜಯ್ (Dolly Dhananjay) ಅವರ ಒಡೆತನದ ಡಾಲಿ ಪಿಚ್ಚರ್ (Dolly pictures) ಪ್ರೊಡಕ್ಷನ್ ನಿಂದ ಮೂರನೇ ಸಿನಿಮಾವಾಗಿ ನಿರ್ಮಾಣವಾಗಿರುವ ಟಗರು ಪಲ್ಯ ಸಿನಿಮಾ (Tagaru palya movie) ಮೊದಲ ದಿನದಿಂದಲೂ ಸಾಕಷ್ಟು ವಿಚಾರವಾಗಿ ಸುದ್ದಿಯಲ್ಲಿತ್ತು.
ಉಮೇಶ್ ಕೆ ಕಶ್ಯಪ್ ನಿರ್ದೇಶನದ ಹಾಸ್ಯನಟ ನಾಗಭೂಷಣ್ ಮತ್ತು ನಟ ಲವ್ಲೀ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ (lovely star Prem daughter Amrutha) ರವರ ಮುಖ್ಯ ಭೂಮಿಕೆಯ ಹಳ್ಳಿ ಸೊಗಡಿನ ಈ ಚಿತ್ರ ರಂಗಾಯಣ ರಘು, ತಾರಾ ಅನುರಾಧ, ವಾಸುಕಿ ವೈಭವ್, ಚಿತ್ರ ಶೆಣೈ ಸೇರಿದಂತೆ ಬಹು ತಾರಾಗಣವನ್ನೇ ಹೊಂದಿತ್ತು.
ದರ್ಶನ್ ಅವರು ಟ್ರೈಲರ್ ರಿಲೀಸ್ ಮಾಡಿದ ದಿನದಿಂದ ಪ್ರೇಕ್ಷಕರು ಸಹ ಈ ಸಿನಿಮಾದ ಲರೀಲೀಸ್ ಗಾಗಿ ಕಾಯುತ್ತಿದ್ದರು. ಅಂತಿಮವಾಗಿ ಇಂದು ಚಿತ್ರ ತೆರೆ ಕಂಡಿದೆ ಮತ್ತು ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಭ್ರಮದಲ್ಲಿ ನಡೆದ ಸುತ್ತಿಗೋಷ್ಠಿಯಲ್ಲಿ ನಟ ಪ್ರೇಮ್ ಭಾಗವಹಿಸಿ ಆನಂದ ಭಾಷ್ಪ ಕೂಡ ಸುರಿಸಿದ್ದಾರೆ. ಈ ಸಿನಿಮಾ ಮೂಲಕ ಪ್ರೇಮ್ ಪುತ್ರಿ ನಾಯಕನ ನಟಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಡುತ್ತಿದ್ದಾರೆ.
ಕಳೆದ ದಶಕದಲ್ಲಿ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ನಟ ಪ್ರೇಮ್ ರವರು ತಂದೆಯಾಗಿ ಮತ್ತು ಒಬ್ಬ ಕನ್ನಡ ಚಲನಚಿತ್ರ ರಂಗದ ಹೀರೋವಾಗಿ ತಮಗಿದ್ದ ಆತಂಕ ಕಳೆಯಿತು ಎಂದು ಕ’ಣ್ತುಂ’ಬಿ ಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಮಗಳು ಯಾವುದೇ ಪ್ರಿಪರೇಷನ್ ಇಲ್ಲದೆ ಸಿನಿಮಾ ಇಂಡಸ್ಟ್ರಿಗೆ ಬಂದಳು ಹೇಗೂ ಏನೋ ಎಂದು ತುಂಬಾ ಭಯ ಆಗುತ್ತಿತ್ತು.
ಹಲವು ಬಾರಿ ಶೂಟಿಂಗ್ ಸ್ಪಾಟ್ ಗೆ ಹೋಗಿದ್ದೆ ಮತ್ತು ಸಹನಟರನ್ನು ಕೇಳುತ್ತಿದ್ದೆ ರಘು ಸರ್ ನಿನ್ನ ಮಕ್ಕಳು ಎಕ್ಸ್ಪ್ರೆಸ್ ತರ ಎಂದು ಹೇಳುತ್ತಿದ್ದರು, ತಾರಕ್ಕ ಕೂಡ ನಿನ್ನ ಮಗಳು ಟ್ಯಾಲೆಂಟೆಡ್ ಇಂಡಸ್ಟ್ರಿಗೆ ಸೂಟ್ ಆಗುತ್ತಾಳೆ ಎನ್ನುತ್ತಿದ್ದರೂ ನಾನು ಇವತ್ತೆ ಪೂರ್ತಿ ಪ್ರಮಾಣದಲ್ಲಿ ಸಿನಿಮಾ ನೋಡಿದ್ದು. ಕುಟುಂಬದಂತಿರುವ ಫ್ಯಾನ್ಸ್ ಜೊತೆ ನೋಡಲು ಕಾಯುತ್ತಿದ್ದೆ.
ಇಂದು ಪ್ರೇಕ್ಷಕರ ಈ ರೆಸ್ಪಾನ್ಸ್ ನೋಡಿ ಖುಷಿಯಾಯಿತು ಇದುವರೆಗೆ ನಾನು ಮಗಳ ಬಗ್ಗೆ ಹಾಗೂ ಸಿನಿಮಾ ಬಗ್ಗೆ ಮಾತನಾಡುತ್ತಿದ್ದೆ ಇನ್ನು ಮುಂದೆ ನಮ್ಮ ಬಳ್ಳಿಯ ಹೂವನ್ನು ನಿಮ್ಮ ಮನೆ ಅಂಗಳದಲ್ಲಿ ಇಡುತ್ತಿದ್ದೇನೆ, ನೀವೇ ಮಾತನಾಡಬೇಕು ಈ ಅವಕಾಶ ಕೊಟ್ಟ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಹಾಗೂ ನನ್ನ ಮಗಳನ್ನು ತಮ್ಮ ಮಗಳಂತೆ ನೋಡಿಕೊಂಡ.
ಇಡೀ ಸಿನಿಮಾ ತಂಡಕ್ಕೆ ಮತ್ತು ಸಿನಿಮಾ ಶುರುವಾದ ದಿನದಿಂದ ಇವತ್ತಿನನವರೆಗೆ ಪ್ರತಿಕ್ಷಣ ನನ್ನ ಮಗಳ ಜೊತೆಗಿದ್ದು ಜೋಪಾನ ಮಾಡಿದ ನನ್ನ ಹೆಂಡತಿಗೆ ಇದರ ಬಗ್ಗೆ ಬಹಳ ಕೃತಜ್ಞನಾಗಿದ್ದೇನೆ ಎಂದು ಹೇಳಿ ಮಾತನಾಡುತ್ತಿದ್ದಂತೆ ಭಾವಪರಶರಾಗಿ ಮಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ಕ’ಣ್ಣೀ’ರಿ’ಟ್ಟ’ರು.
ಕನ್ನಡ ಸಿನಿಮಾ ಇತಿಹಾಸದಲ್ಲಿ ಜನುಮದ ಜೋಡಿ ಇಂದ ಹಿಡಿದು ಕಿರಾತಕ, ರಾಜಹುಲಿ, ಅಯೋಗ್ಯ ಇತ್ಯಾದಿಯಾಗಿ ಯಾವುದೇ ಹಳ್ಳಿ ಸೊಗಡಿನ ಚಿತ್ರ ಸೋತ ಇತಿಹಾಸವೇ ಇಲ್ಲ. ಇದೇ ಬಗೆಯ ಪ್ರಯೋಗದ ಸಿನಿಮವಾಗಿರುವ ಟಗರು ಪಲ್ಯ ಸಿನಿಮಾ ಕೂಡ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಅದೇ ರೀತಿ ಇದರ ಯಶಸ್ಸು ಮುಂದುವರೆಯಲಿ ಎಂದು ಸಿನಿಮಾ ತಂಡಕ್ಕೆ ನಾವು ಕೂಡ ಹಾರೈಸೋಣ. ಚಂದನವನ ಸೇರಿದ ಮತ್ತೊಬ್ಬ ಚೆಲುವೆ ಅಮೃತಳಿಗೂ ಅವಳ ಜರ್ನಿಗೆ ಶುಭವಾಗಲಿ ಎಂದು ಹರಸೋಣ.