Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!

Posted on January 19, 2024 By Admin No Comments on ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!

 

ಇಡಿ ದೇಶ ಇನ್ನೆರಡು ದಿನಗಳಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠೆ ಆಗುವುದನ್ನು ನೋಡಿ ಕಣ್ತುಂಬಿಕೊಳ್ಳುವ ಘಳಿಗೆಗೆ ಕಾಯುತ್ತಿದೆ. ಈಗಾಗಲೇ ದೇಶದಾದ್ಯಂತ ಬಹಳ ಸಡಗರ ಸಂಭ್ರಮ ತುಂಬಿಕೊಂಡಿತ್ತು ಇಡೀ ದೇಶ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಸಜ್ಜಾಗಿದೆ. ಮನೆ ಮನೆಗಳನ್ನು ಹಬ್ಬದ ವಾತಾವರಣ ಮೂಡಿದ್ದು, ಎಲ್ಲೆ ಜೈ ಶ್ರೀ ರಾಮ್ ಘೋಷವಾಕ್ಯ ಬಲು ಜೋರಿನಿಂದ ಕೇಳಿ ಬರುತ್ತಿದೆ.

ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿದಲ್ಲಿ ಈ ವಿಶೇಷ ಸಂಗತಿಯನ್ನು ಆಚರಿಸಿ ಈ ದಿನದ ನೆನಪನ್ನು ಶಾಶ್ವತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಅನೇಕ ಕುಟುಂಬಗಳಲ್ಲಿ ಇದೇ ದಿನದಂದು ಮಕ್ಕಳ ನಾಮಕರಣ, ಮನೆ ಗೃಹಪ್ರವೇಶ ಇಂತಹ ಶುಭ ಕಾರ್ಯಗಳಿಗೂ ಮುಹೂರ್ತ ಪಡೆದುಕೊಂಡಾಗಿದೆ.

ಒಂದು ಮಗು ಆದ್ಮೇಲೆ ನಾನು ಸೂಪರ್ ಸ್ಟಾರ್ ಆಗಿದ್ದು ಎಂದು ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡ ಹಿರಿಯ ನಟಿ ಲಕ್ಷ್ಮಿ.!

ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯು ಬಹುತೇಕ ಎಲ್ಲಾ ಕುಟುಂಬಗಳನ್ನು ತಲುಪಿದ್ದು ಬಹಳ ಭಾವನಾತ್ಮಕವಾಗಿ ಎಲ್ಲರೂ ಇದನ್ನು ಕಾಣುತ್ತಿದ್ದಾರೆ. ಈ ಬಾರಿ ಯಾರು ದೇಣಿಗೆ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು ಅನೇಕರು ರಾಮನ ಭಕ್ತಿಗೆ ಅಳಿಲು ಸೇವೆಯೆಂದು ತಮ್ಮ ಕೈಲಾದಷ್ಟು ನೀಡುತ್ತಿದ್ದಾರೆ.

ದೇಶದಾದ್ಯಂತ ಇರುವ ಅನೇಕ ಮಠ ಮಂದಿರಗಳಿಂದ ಅಯೋಧ್ಯೆಗೆ ಆ ದಿನದ ಅನುಷ್ಠಾನಕ್ಕೆ ಬೇಕಾದ ಸಾಮಾನು ಸರಂಜುಗಳ ಕಾಣಿಕೆಯು ಸಾಗಿಸಲ್ಪಡುತ್ತಿವೆ. ಧರ್ಮಸ್ಥಳ ಕ್ಷೇತ್ರದಿಂದ ರಜತ ಪೂಜ ಸಾಮಗ್ರಿಗಳು ತಲುಪಿತ್ತು ಮತ್ತು ಕಾಶಿಮಠದಿಂದ ಭಕ್ತಾದಿಗಳಿಗೆ ಲಡ್ಡು ತಯಾರಿಸಿ ಕಳುಹಿಸಿ ಕೊಟ್ಟಿರುವುದು ನೆನೆಯಬಹುದು. ಏಕ ದೇಶದ ಕೆಲ ಸೆಲೆಬ್ರಿಟಿಗಳು ಕೂಡ ಈ ಹಾದಿಯಲ್ಲಿ ಮುಂದುವರೆಯಲು ನಿರ್ಧರಿಸಿದ್ದಾರೆ.

ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಸುದೀಪ್ ಸರ್ ಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್.! ಕಾರಣವೇನು ಗೊತ್ತ.?

ಅದರಲ್ಲಿ ಮುನ್ನಡೆಯಲ್ಲಿ ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ (Young Rebel Star Prabhas) ಹೆಸರು ಕೇಳಿ ಬರುತ್ತಿದೆ. ಪ್ರಭಾಸ್ ಅವರು 50 ಕೋಟಿ ದೇಣಿಗೆ ನೀಡುವುದರ ಜೊತೆಗೆ ಆ ದಿನದ ಸಂಪೂರ್ಣ ಅನ್ನದಾನದ ವ್ಯವಸ್ಥೆ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಆದರೆ ಈ ಬಗ್ಗೆ ಪ್ರಭಾಸ್ ಅವರ ಆಪ್ತ ವಲಯದ ಬಳಿ ರಾಷ್ಟ್ರೀಯ ಮಾಧ್ಯಮವೊಂದು ಪ್ರತ್ಯೇಕವಾಗಿ ವಿಚಾರಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಪ್ರಭಾಸ್ ಅವರು ಸಿನಿಮಾ ಒಂದರಲ್ಲಿ ಶ್ರೀ ರಾಮನ ಪಾತ್ರ ಮಾಡಿರುವುದು ಮಾತ್ರವಲ್ಲದೆ ಶ್ರೀರಾಮನನ್ನು ಅಪಾರವಾಗಿ ನಂಬಿ ಆರಾಧಿಸುತ್ತಾರೆ.

ತಮ್ಮ ಮತ್ತು ಪತಿ ಅವಿನಾಶ್ ಅವರ ನಡುವಿನ ಒಪ್ಪಂದದ ಬಗ್ಗೆ ಮುಕ್ತವಾಗಿ ಹೇಳಿಕೊಂಡ ಮಾಳ್ವಿಕ ಅವಿನಾಶ್.!

ಆದರೆ ಈಗ ಅವರ ತಂಡದ ಕಡೆಯಿಂದ ಸಿಕ್ಕಿರುವ ಉತ್ತರ ಹೀಗಿದೆ. ಪ್ರಭಾಸ್ ಕಡೆಯಿಂದ ಶ್ರೀ ರಾಮನ ಸೇವೆ ಗುಪ್ತವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಈಗ ಬಹಿರಂಗವಾಗಿ ಹಬ್ಬುತ್ತಿರುವ ರೀತಿಯಲ್ಲಿ ಯಾವುದೇ ರೀತಿಯ ವ್ಯವಸ್ಥೆ ಬಗ್ಗೆ ಅವರು ಘೋಷಿಸಿಲ್ಲ ಎಂದು ಆಪ್ತ ವಲಯ ತಿಳಿಸಿದೆ. ಈ ಮೂಲಕ ಪ್ರಭಾಸ್ ಅವರ ಬಗ್ಗೆ ಹರಿದಾಡುತ್ತಿದ್ದ ಫೇಕ್ ನ್ಯೂಸ್ ಗಳಿಗೆ ಕಡಿವಾಣ ಬಿದ್ದಿದೆ.

ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರ ಉದ್ಘಾಟನೆ ದಿನದಂದು ಸುಮಾರು 300 ಕಡೆಗಳಲ್ಲಿ ಬರುವ ಭಕ್ತಾದಿಗಳಿಗಾಗಿ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ರಾಮ ಮಂದಿರ ನಿರ್ಮಾಣ ಮಾಡಲು ದೇಶ-ವಿದೇಶದ ರಾಮ ಭಕ್ತರು ದೇಣಿಗೆ ರೂಪದಲ್ಲಿ ನೀಡಿರುವ ಹಣವನ್ನೇ ಖರ್ಚು ಮಾಡಲಾಗಿದೆ.

ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!

ಸರಕಾರದ ಹಣವನ್ನು ವ್ಯಯಿಸಿಲ್ಲ ಎಂಬುದನ್ನು ಕೇಂದ್ರ ಸರಕಾರವೂ ಸ್ಪಷ್ಪಪಡಿಸಿದೆ. ಈಗಾಗಲೇ ದೇಶ-ವಿದೇಶದ ಗಣ್ಯರನ್ನು ಮಂತ್ರಾಕ್ಷತೆಯೊಂದಿಗೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಚಿತ್ರ ನಟರು, ಕ್ರಿಕೆಟಿಗರು, ಉದ್ಯಮಿಗಳು ಸೇರಿ ಅನೇಕ ದಿಗ್ಗಜರು ಪಾಲ್ಗೊಳ್ಳುವ ನಿರೀಕ್ಷೆ ಇದೆ.  ರಾಮನ ಭಕ್ತರೆಲ್ಲರ ಪಾಲು ಕೂಡ ರಾಮಮಂದಿರ ನಿರ್ಮಾಣಕ್ಕೆ ಸಲ್ಲುತ್ತಿದೆ ಎಂದು ಸಂತೋಷ ಪಡೋಣ.

cinema news

Post navigation

Previous Post: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಸುದೀಪ್ ಸರ್ ಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್.! ಕಾರಣವೇನು ಗೊತ್ತ.?
Next Post: ಡಿ ಬಾಸ್ ಅಬ್ಬರಕ್ಕೆ ಬಾಕ್ಸ್ ಫೀಸಿನಲ್ಲಿ ಕಲೆಕ್ಷನ್ ಸುನಾಮಿ, ಹೊಸ ದಾಖಲೆಯತ್ತ ಕಾಟೇರ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme