ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ (Challenging Star Dashan). ದರ್ಶನ್ ಸಿನಿಮಾ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಸಿನಿಮಾ ರಿಲೀಸ್ ಆದರೆ ಹಬ್ಬದಂತೆ ಸಂಭ್ರಮಿಸುತ್ತಾರೆ. ದರ್ಶನ್ ಅವರ ಮೇಲೆ ಬಂಡವಾಳ ಹೂಡಲು ನಿರ್ಮಾಪಕರ ಹಾತೊರೆಯುತ್ತಾರೆ, ದರ್ಶನ್ ಅವರಿಗಾಗಿಯೇ ಕಥೆ ಕೂಡ ತಯಾರಾಗುತ್ತಿವೆ.
ಅಷ್ಟಿದ್ದರೂ ಕೂಡ ದರ್ಶನ್ ಅವರು ಡಾಲಿ ಧನಂಜಯ್ (Darshan ask movie chance with Dolly Dhananjay) ಅವರ ಬಳಿ ತಮ್ಮ ಪ್ರೊಡಕ್ಷನ್ ಹೌಸ್ ನಲ್ಲಿ ಸಿನಿಮಾ ಚಾನ್ಸ್ ಕೊಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ಹರಿದಾಡುತ್ತಿದ್ದು ಇದು ನಮ್ಮ ಡಿ ಬಾಸ್ ಸಿಂಪ್ಲಿಸಿಟಿ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಅಷ್ಟಕ್ಕೂ ವಿಚಾರವೇನೆಂದರೆ, ಇದೆಲ್ಲ ನಡೆದಿರುವುದು ಟಗರು ಪಲ್ಯ ಸಿನಿಮಾದ ಟ್ರೈಲರ್ ರಿಲೀಸ್ (Tagaru palya trailer release) ಇವೆಂಟ್ ವೇದಿಕೆಯಲ್ಲಿ. ನಟರಾಕ್ಷಸ ಡಾಲಿ ಧನಂಜಯ್ ಈಗ ಬಹುಭಾಷಾ ನಟ. ಬಡವರ ಮಕ್ಕಳು ಬೆಳಿಬೇಕು ಕಣಯ್ಯ ಎನ್ನುವ ಡೈಲಾಗ್ ಹೇಳುವುದು ಮಾತ್ರವಲ್ಲದೇ ಅದನ್ನು ಸಾಬೀತು ಪಡಿಸಲು ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಬಡವ ರಾಸ್ಕಲ್ ಹಾಗೂ ಹೊಯ್ಸಳ ಸಿನಿಮಾ ಬಳಿಕ ಟಗರು ಪಲ್ಯ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಹಾಸ್ಯನಟ ನಾಗಭೂಷಣ್ ಅವರು ನಾಯಕನಾಗಿ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ನಾಯಕನಟಿಯಾಗಿ ಸಿನಿಮಾ ಇಂಡಸ್ಟ್ರಿ ಗೆ ಲಾಂಚ್ ಆಗುತ್ತಿದ್ದಾರೆ.
ಶೂಟಿಂಗ್ ಶುರುವಾದಾಗಿನಿಂದಲೂ 10 ಹಲವು ವಿಶೇಷತೆಗಳಿಂದ ಅಭಿಮಾನಿಗಳನ್ನು ಸೆಳೆದಿರುವ ಈ ಸಿನಿಮಾ ಸದಕ್ಕಿರುವ ಅಪ್ಡೇಟ್ ಗಳ ಮೂಲಕ ಪಕ್ಕ ಹಳ್ಳಿ ಸೊಗಡಿನ ಸಿನಿಮಾ ಎನ್ನಬಹುದಾಗಿದೆ. ಅಂತಿಮವಾಗಿ ಟೈಲರ್ ಕೂಡ ಸಿದ್ಧವಾಗಿದ್ದು ಇದರ ರಿಲೀಸ್ ಆಗಿ ಕಾರ್ಯಕ್ರಮವನ್ನು ಏರ್ಪಡಿಸಿ ಮುಖ್ಯ ಅತಿಥಿಯಾಗಿ ದರ್ಶನ್ ಅವರನ್ನು ಆಹ್ವಾನಿಸಲಾಗಿತ್ತು.
ಟ್ರೈಲರ್ ಬಗ್ಗೆ ಮಾತನಾಡಿ, ನಾಯಕನಟಿಯಾಗಿ ಚಿತ್ರರಂಗ ಸೇರುತ್ತಿರುವ ಅಮೃತ ಅವರಿಗೆ ನಮ್ಮ ಸಿನಿಮಾ ಇಂಡಸ್ಟ್ರಿ ಚಿಕ್ಕದಾದ ಚಿಕ್ಕದಾದ ನೀಡ್ ಸಿನಿಮಾ ಇಂಡಸ್ಟ್ರಿ ನಿಮಗೆ ಆತ್ಮೀಯವಾದ ಸ್ವಾಗತ ಎಂದು ಹೇಳಿದ ಅವರು ಸಿನಿಮಾ ತಂಡದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಮಾಡಿರುವವರು ಇರುವುದನ್ನು ನೋಡಿ ಇಂಜಿನಿಯರಿಂಗ್ ಮಾಡಿ ನಮ್ಮ ಹೊಟ್ಟೆ ಹೊಡಿಯುವುದಕ್ಕೆ ಇಂಡಸ್ಟ್ರೀಗೆ ಬಂದಿರುವುದಾ ಎಂದು ತಮಾಷೆ ಮಾಡಿದರು.
ಡಾಲಿ ಧನಂಜಯ್ ಅವರನ್ನು ಕುರಿತು ತುಂಬಾ ಚೆನ್ನಾಗಿ ಡೈಲಾಗ್ ಹೇಳಿದ್ದೀಯ ಚಿನ್ನು ಬಡವರ ಮಕ್ಕಳು ಬೆಳೆಯಬಾರದ ಅಂತ, ನನಗೆ ಅದು ತುಂಬಾ ಇಷ್ಟವಾಯಿತು ಬಡವರ ಮಕ್ಕಳು ಕೂಡ ಬೆಳಿಬೇಕು, ಹಠದಿಂದನಾ ಛಲದಿಂದನಾ ಎನ್ನುವುದು ಮುಖ್ಯ. ಹಠದಿಂದ ಬೆಳೆದವರು ಹಠದಿಂದ ಮಾಡಿ ಬಿಡುತ್ತಾರೆ ಆದರೆ ಛಲದಿಂದ ಮಾಡಿದಾಗ ಮಾತ್ರ ಎರಡು ಮೂರು ನಾಲ್ಕು ಐದು ಹೀಗೆ ಅದು ಮುಂದುವರಿಯುತ್ತದೆ.
ನೀನು ಇದೇ ಛಲ ಇಟ್ಟುಕೋ, ನಿನ್ನ ಪ್ರೊಡಕ್ಷನ್ ಕೂಡ ಕನ್ನಡದ ಬಹಳ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ ನಿನಗೆ ಶುಭವಾಗಲಿ ಹಾಗೆಯೇ ನಿನ್ನಂತೆ ನಾವು ಸ್ಟ್ರಗಲ್ ಮಾಡಿಕೊಂಡು ಬಂದವರು ಈಗಲೂ ಕೂಡ ಸ್ಟ್ರಗಲ್ ಮಾಡುತ್ತಲೇ ಇದ್ದೇವೆ. ದಯವಿಟ್ಟು ನಿನ್ನ ಪ್ರೊಡಕ್ಷನ್ ನಲ್ಲಿ ಒಂದು ಅವಕಾಶ ಕೊಡು ಖಂಡಿತವಾಗಿ ಬಂದು ಮಾಡಿಕೊಟ್ಟು ಹೋಗುತ್ತೇನೆ ಎಂದಾಗ ನೆರೆದಿದ್ದವರೆಲ್ಲ ಆಶ್ಚರ್ಯ ಪಟ್ಟರು.
ಧನಂಜಯ್ ಅವರು ಕೂಡ ಅಷ್ಟು ದೊಡ್ಡ ಮಾತು ಎನ್ನುವ ರೀತಿ ಅವರನ್ನು ಅಪ್ಪಿಕೊಂಡರು, ನಿರ್ಮಾಪಕರ ಬಳಿ ಚಾನ್ಸ್ ಕೇಳುವುದಕ್ಕೆ ಯಾವತ್ತೂ ಕೂಡ ಹಿಂದೇಟು ಹಾಕಬಾರದು ಎಂದು ಹೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.