ಕನ್ನಡದ ಖ್ಯಾತ ಲಕ್ಷ್ಮಿ ಅವರ ಬಗ್ಗೆ ತಿಳಿದವರಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಬಹುಭಾಷ ನಟಿ ಆಗಿರುವ ಇವರು ಎಲ್ಲಾ ಚಿತ್ರರಂಗದಲ್ಲೂ ಮೆರೆದಿದ್ದವರು. ಕನ್ನಡದಲ್ಲಿ ರಾಜಕುಮಾರ್ ಮತ್ತು ಅನಂತನಾಗ್ ಅವರೊಂದಿಗೆ ಯಶಸ್ವಿ ಜೋಡಿ ಎಂದು ಕರೆಸಿಕೊಂಡು ಹಲವು ವರ್ಷಗಳ ವರೆಗೆ ಇಂಡಸ್ಟ್ರಿ ಅಳಿದ ಈಕೆ ಬಹುತೇಕ ಆ ಸಮಯದ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ನಂತರ ಮಹಿಳಾ ಪ್ರಧಾನ ಚಿತ್ರಗಳಲ್ಲೂ ಕೂಡ ಕಾಣಿಸಿಕೊಂಡಿದ್ದ ಇವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದವರು.
ಈಗಲೂ ಸಹ ಸ್ಟಾರ್ ಹೀರೋಗಳ ತಾಯಿಯ ಪಾತ್ರದಲ್ಲಿ, ಸೀರಿಯಲ್ ಗಳ ಮುಖ್ಯಪಾತ್ರಗಳಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಪ್ರಪಂಚದಲ್ಲಿ ಇನ್ನೂ ಆಕ್ಟಿವ್ ಆಗಿದ್ದಾರೆ ಲಕ್ಷ್ಮಿ ಅವರು ಈ ರೀತಿ ಸಿನಿಮಾ ರಂಗದಲ್ಲಿ ಸಾಕಷ್ಟು ಒಳ್ಳೆಯ ಹೆಸರು ಮಾಡಿದ್ದಾರೆ. ಜೊತೆಗೆ ತಕ್ಕ ಮಟ್ಟಕ್ಕೆ ಹಣವನ್ನು ಕೂಡ ಸಂಪಾದನೆ ಮಾಡಿದ್ದಾರೆ. ಆದರೆ ವೈಯಕ್ತಿಕ ಬದುಕು ಮಾತ್ರ ಅಷ್ಟು ಹಸನಾಗಿರಲಿಲ್ಲ. ಇವರ ಮದುವೆ ವಿಚಾರವಾಗಿ ಪದೇಪದೇ ವಿವಾದವನ್ನು ಎದುರಿಸುತ್ತಿದ್ದರು. ಮೊದಲಿಗೆ ತನಗಿಂತ ಬಹಳ ಹಿರಿಯರನ್ನು ಮದುವೆ ಆಗಿ ವರ್ಷಕ್ಕೆ ದೂರವಾದರು. ಆಗ ಇವರಿಗೆ ಒಂದು ಹೆಣ್ಣು ಮಗು ಕೂಡ ಇತ್ತು.
ಅವರ ಹೆಸರೇ ಐಶ್ವರ್ಯ ಭಾಸ್ಕರನ್. ಆ ಮದ್ವೆ ಮುರಿದುಕೊಂಡ ಇವರು ಮತ್ತೆ ಎರಡು ಮದುವೆಗಳನ್ನಾದರು. ಲಕ್ಷ್ಮಿ ಅವರ ಮಗಳು ನಟಿ ಐಶ್ವರ್ಯ ಅವರಿಗೂ ಸಹ ಇದೇ ರೀತಿ ಆಗಿ ಹೋಗಿದೆ. ಜೊತೆಗೆ ಆಕೆ ಸಿನಿಮಾ ರಂಗದ ಅವಕಾಶವನ್ನು ಕಳೆದುಕೊಂಡು ಬೀದಿ ಬಳಿ ಸೋಪ್ ಮಾಡುವ ಪರಿಸ್ಥಿತಿಗೆ ಬಂದುಬಿಟ್ಟಿದ್ದಾರೆ. ಲಕ್ಷ್ಮಿ ಅವರ ಹಿರಿಯ ಮಗಳು ಐಶ್ವರ್ಯ ಭಾಸ್ಕರನ್ ಅವರು ಸಹ ಸಿನಿಮಾರಂಗಗಳಲ್ಲಿ ಹೆಸರು ಮಾಡಿದ ನಟಿ. ಕನ್ನಡ ತಮಿಳು ತೆಲುಗು ಸಿನಿಮಾಗಳಲ್ಲಿ ಇವರು ನಾಯಕ ನಟಿಯಾಗಿ, ಪೋಷಕ ಪಾತ್ರದಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಇಷ್ಟೆಲ್ಲ ಇದ್ದಮೇಲೆ ಈಕೆಗೆ ಸೋಪು ಮಾರುವ ಪರಿಸ್ಥಿತಿ ಯಾಕೆ ಬಂತು ಎಂದರೆ ಐಶ್ವರ್ಯ ತನ್ನ ತಾಯಿ ಲಕ್ಷ್ಮೀ ಅವರನ್ನು ವಿರೋಧಿಸಿ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆ ಆಗುತ್ತಾರೆ. ಅವರ ಹೆಸರು ತನ್ವೀರ್ ಮೊಹಮ್ಮದ್ ಇವರು ಮುಸ್ಲಿಂ ಆಗಿದ್ದ ಕಾಲಣ ಲಕ್ಷ್ಮಿ ಅವರು ತಮ್ಮ ಮಗಳನ್ನು ಇವರಿಗೆ ಕೊಡಲು ಒಪ್ಪುವುದಿಲ್ಲ. ಆದರೂ ಕೂಡ ತಾಯಿಯ ಮಾತು ಕೇಳದೆ ಅವರನ್ನು ಎದುರು ಹಾಕಿಕೊಂಡು ಪ್ರೀತಿಸಿದವನು ಮದುವೆಯಾಗುತ್ತೇನೆ ಎಂದು ಅವರು ಮನೆ ಬಿಟ್ಟು ಹೋಗುತ್ತಾರೆ. ನಂತರ ಮದುವೆ ಕೂಡ ಆಗ್ತಾರೆ ಒಂದು ಹೆಣ್ಣು ಮಗು ಕೂಡ ಇವರಿಗೂ ಆಗುತ್ತದೆ.
ಅಲ್ಲಿಯವರೆಗೆ ಬದುಕಲ್ಲಿ ಎಲ್ಲವೂ ಚೆನ್ನಾಗಿರುತ್ತೆ. ಇನ್ನೇನು ಸಂಸಾರ ನೋಡಿಕೊಂಡು ಚೆನ್ನಾಗಿರೋಣ ಎಂದುಕೊಂಡು ಸ್ವಲ್ಪ ಸ್ವಲ್ಪವಾಗಿ ಚಿತ್ರರಂಗದಿಂದ ದೂರ ಉಳಿಯುತ್ತಾರೆ. ಯಾವಾಗ ಐಶ್ವರ್ಯ ಭಾಸ್ಕರನ್ ಕೆಲಸ ಮಾಡದೆ ಹಣ ನಿಂತು ಹೋಗುತ್ತದೆ ಗಂಡನ ಬಣ್ಣ ಬದಲಾಗುತ್ತದೆ. ಈತನೊಬ್ಬ ಟ್ರಗ್ ಅಡಿಕ್ಟರ್ ಹಾಗೂ ದೊಡ್ಡ ಕುಡುಕ ಆಗಿರುತ್ತಾರೆ. ತನ್ನ ಹಣವನ್ನೆಲ್ಲ ಖಾಲಿ ಮಾಡಿ ಐಶ್ವರ್ಯ ಅವರನ್ನು ನಿತ್ಯ ಹಣಕ್ಕಾಗಿ ಬಿಡಿಸಲು ಶುರು ಮಾಡುತ್ತಾರೆ. ಇವರ ಕಾಟ ತಾಳಲಾರದೆ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡುತ್ತಾರೆ ಐಶ್ವರ್ಯ.
ಒಂದೆಡೆ ತಾಯಿಗೆ ಇಷ್ಟ ಇಲ್ಲದಿದ್ದರೂ ಮದುವೆ ಆಗಿದ್ದಾರೆ, ಆ ಕಾರಣಕ್ಕೆ ತಾಯಿ ದೂರ ಇಟ್ಟಿರುತ್ತಾರೆ, ಕೈಯಲ್ಲಿ ಪುಟ್ಟ ಮಗು ಇದ್ದಾಗ ಪತಿಯಿಂದ ಡಿ’ವೋ’ರ್ಸ್ ಪಡೆಯುತ್ತಾರೆ. ಧೈರ್ಯ ತುಂಬಿಕೊಂಡು ಕೆಲಸಕ್ಕೆ ಸೇರಿ ಮಗಳನ್ನು ಚೆನ್ನಾಗಿ ಓದಿಸುತ್ತಾರೆ. ಆದರೆ ಆ ಮಗಳು ಕೂಡ ಇವರಂತೆ ಹುಡುಗನೊಬ್ಬನ ಜೊತೆ ಮದುವೆ ಆಗಿಬಿಡುತ್ತಾನೆ. ಆಗ ತಾಯಿ, ಪತಿ, ಮಗಳಿಂದ ದೂರವಾಗಿ ಅಕ್ಷರಶಃ ಅನಾಥೆಯಾಗುತ್ತಾರೆ ಐಶ್ವರ್ಯ.
ಮತ್ತೆ ಬಣ್ಣದ ಪ್ರಪಂಚಕ್ಕೆ ಬರಬೇಕು ಎಂದು ಆಸೆ ಪಡುತ್ತಾರೆ ಆದರೆ ಇವರಿಗೆ ಇವರ ನಿರೀಕ್ಷೆ ಅಂತೆ ಯಾರೂ ಕೈಬಿಸಿ ಕರೆಯುವುದಿಲ್ಲ. ನಂತರ ಜೀವನೋಪಾಯಕ್ಕಾಗಿ ಸಾಕಷ್ಟು ಕೆಲಸ ಮಾಡಿ ಸುಸ್ತಾಗಿದ್ದ ಆಕೆ ಒಮ್ಮೆ ರೋಡ್ ಬಳಿ ಕೂತು ಸೋಪ್ ಮಾರುವ ಪರಿಸ್ಥಿತಿಗೂ ಬಂದು ಬಿಡುತ್ತಾರೆ. ಅಂತಹ ಸಮಯದಲ್ಲಿ ಕಲಾವಿದರೊಬ್ಬರು ಇವರನ್ನು ಗುರುತಿಸಿ ಮಾತನಾಡಿಸಿದಾಗ ಇವರ ಬದುಕಿನ ದುರಂತ ಕಥೆಯಲ್ಲಾ ಹೊರಗೆ ಬಿದ್ದಿದೆ. ಆ ವಿಡಿಯೋದಲ್ಲಿ ಅವಕಾಶ ಕೊಡುತ್ತಿಲ್ಲ ಕೊನೆಪಕ್ಷ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸಕೊಡಿ ಎಂದು ಹೇಳಿರುವ ಮಾತುಗಳನ್ನು ಕೇಳಿದರೆ ಕರುಳು ಚುರುಕ್ ಎನ್ನದಿರದು.