ಕನ್ನಡದ ಫೇಮಸ್ ಸಂಗೀತ ನಿರ್ದೇಶಕರುಗಳ ಸಾಲಿನಲ್ಲಿ ರಘು ದೀಕ್ಷಿತ್ ಅವರ ಹೆಸರು ಕೂಡ ಸೇರುತ್ತದೆ. ರಘು ದೀಕ್ಷಿತ್ ಅವರು ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಗೀತೆಗಳು ಕೊಟ್ಟಿದ್ದಾರೆ. ಸ್ವತಃ ಗಾಯಕರು ಆದ ಇವರು ಅನೇಕ ಚಿತ್ರಗಳಿಗೆ ತಮ್ಮ ಸುಮಧುರ ಕಂಠದಿಂದ ಹಾಡುಗಳನ್ನು ಕೊಡಿಗೆಯಾಗಿ ಕೊಟ್ಟಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪಾತ್ರ ಕೂಡ ಮಾಡುವ ಮೂಲಕವೂ ಹೆಸರುವಾಸಿ ಆಗಿದ್ದಾರೆ. ರಘು ದೀಕ್ಷಿತ್ ಅವರು ಕನ್ನಡದ ಒಬ್ಬ ಸೆಲೆಬ್ರಿಟಿ ಆಗಿ ಬಹಳ ಫೇಮಸ್ ಆಗಿದ್ದಾರೆ.
ರಘು ದೀಕ್ಷಿತ್ ಅವರು ಬಾಲ್ಯದಿಂದಲೂ ಕೂಡ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು. ಮೂಲತಃ ಸಂಗೀತಕ್ಕೆ ಸಂಬಂಧಪಟ್ಟ ಕುಟುಂಬವೇ ಆಗಿದ್ದರಿಂದ ಬಾಲ್ಯದಿಂದ ಇವರಿಗೆ ಸಂಗೀತದ ವಿಷಯವಾಗಿ ಪೋಷಣೆ ಸಿಕ್ಕಿತು. ವಿದ್ಯಾಭ್ಯಾಸದ ಜೊತೆ ಸಂಗೀತವನ್ನು ಕಲಿತಿದ್ದ ಕಾರಣ ಅದೇ ಮಾರ್ಗದಲ್ಲಿ ತಮ್ಮ ಕೆರಿಯರ್ ಸೃಷ್ಟಿಸಿಕೊಳ್ಳಲು ಇದು ಅನುಕೂಲವು ಆಯಿತು. ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಹಾಡುವುದರಲ್ಲಿ ಹಾಗೂ ಸಂಗೀತ ವಾದ್ಯ ನುಡಿಸುವುದರಲ್ಲಿ ಕೂಡ ಪರಿಣಿತರಾಗಿದ್ದ ಇವರು ಅದರಲ್ಲಿ ಪರಿಣಿತಿ ಪಡೆದಿದ್ದಾರೆ.
ಜೊತೆಗೆ ಇವರ ಕಂಠವು ಕೂಡ ವಿಶೇಷವಾಗಿದ್ದು ಇದೇ ಕಾರಣಕ್ಕಾಗಿ ಹೆಚ್ಚಿನ ಜನರ ಫೇವರೆಟ್ ಸಿಂಗರ್ ಆಗಿದ್ದಾರೆ. ಇವರನ್ನು ಸಂಗೀತದ ಕಾರಣಕ್ಕಾಗಿ ಅನೇಕರು ಇಷ್ಟಪಡುತ್ತಾರೆ. ಅನೇಕ ಆಲ್ಬಮ್ ಗೀತೆಗಳು ರಚಿಸಿ ಹೆಸರಾಗಿರುವ ಇವರಿಗೆ ಗುಡಿಗುಡಿಯ ಸೇದಿ ನೋಡು ಹಾಡು ಹೆಚ್ಚಿನ ಖ್ಯಾತಿ ತಂದು ಕೊಟ್ಟಿತ್ತು. ನಂತರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸಿಕೊಳ್ಳಲು ಅದೇ ದಾರಿ ಮಾಡಿ ಕೊಟ್ಟಿತು. ಮೊಟ್ಟ ಮೊದಲ ಬಾರಿಗೆ ಸೈಕೋ ಎನ್ನುವ ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡಿ ಆ ಸಿನಿಮಾದಲ್ಲಿ ನಿನ್ನ ಪೂಜೆಗೆ ಬಂದೆ ಮಾದೇಶ್ವರ ಈ ಹಾಡನ್ನು ಕೂಡ ಹಾಡಿ ಭರವಸೆಯ ಗಾಯಕ ಮತ್ತು ಸಂಗೀತ ನಿರ್ದೇಶಕ ಎನಿಸಿಕೊಂಡರು.
ಇಂದಿಗೂ ಇದು ಯುವ ಜನರ ಫೇವರೇಟ್ ಹಾಡು. ಹಳೆಯ ಜನಪದ ಗೀತೆ ಹಾಗೂ ಭಕ್ತಿ ಗೀತೆಗಳಿಗೆ ಮಾರ್ಡನ್ ಟಚ್ ಕೊಟ್ಟು ಅದನ್ನು ಹೊಸ ರೀತಿಯಾಗಿ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಿ ಇವರು ಗೆದ್ದಿದ್ದಾರೆ ಇದಕ್ಕೆ ಇವರೇ ಕಟ್ಟಿಕೊಂಡಿರುವ ಅವರ ಮ್ಯೂಸಿಕ್ ಬ್ಯಾಂಡ್ ಹೆಗಲಾಗಿದೆ. ಈವರೆಗೆ ಇದೇ ರೀತಿ ಅನೇಕ ಹಾಡುಗಳನ್ನು ಅವರು ಹೊಸದಾಗಿ ಮಾರ್ಪಾಡು ಮಾಡಿದ್ದಾರೆ ಸಿನಿಮಾ ವಿಚಾರಕ್ಕೆ ಹೇಳುವುದಾದರೆ ಸೈಕೋ ಸಿನಿಮಾ ಆದ ನಂತರ ಜಸ್ಟ್ ಮಾತ್ ಮಾತಲ್ಲಿ, ಕೋಟೆ, ಸೂಪರ್ಮ್ಯಾನ್, ಲವ್ ಮಾಕ್ಟೇಲ್ ಇನ್ನು ಮುಂತಾದ ಹಲವು ಸಿನಿಮಾಗಳಿಗೆ ಇವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಜೊತೆಗೆ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುವ ಇವರು ಅನೇಕ ಸಂಗೀತ ಕಾರ್ಯಕ್ರಮಗಳನ್ನು ಕೂಡ ಕೊಟ್ಟಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ತಮ್ಮದೇ ಆದ ಮ್ಯೂಸಿಕ್ ಬ್ಯಾಂಡ್ ಜೊತೆ ಹೋಗಿ ಹಾಡುಗಳನ್ನು ಹಾಡಿದ್ದಾರೆ. ತೆಲುಗು, ಇಂಗ್ಲಿಷ್ ಮತ್ತು ಕನ್ನಡ ಆಲ್ಬಮ್ ಸಾಂಗ್ ಮಾಡುವುದರಲ್ಲಿ ಇವರು ಹೆಸರು ಮಾಡಿದ್ದಾರೆ. ಇನ್ನು ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ ನಾಟ್ಯ ಪ್ರವೀಣೆ ಮಯೂರಿ ಅವರನ್ನು ಇವರು ಪ್ರೀತಿಸಿ ಕೈ ಹಿಡಿದಿದ್ದರು. ಇವರಿಬ್ಬರದು ಪ್ರೇಮ ವಿವಾಹ ಎಂದು ಸುದ್ದಿ ಆಗಿತ್ತು.
ಹೆಸರಿಗೆ ತಕ್ಕಂತೆ ನಾಟ್ಯಮಯೂರಿ ಆಗಿರುವ ಇವರು ಕನ್ನಡಿಗರಿಗೂ ಕೂಡ ಕಿರುತೆರೆಯ ಡ್ಯಾನ್ಸಿಂಗ್ ಸ್ಟಾರ್ ಮತ್ತು ಮಾಸ್ಟರ್ ಡ್ಯಾನ್ಸರ್ ರಿಯಲಿಟಿ ಶೋ ಮೂಲಕ ತೀರ್ಪುಗಾರ್ತಿ ಆಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಇವರಿಬ್ಬರ ಮದುವೆ ಮುರುದು ಬಿದ್ದಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇವರಿಬ್ಬರ ವಿ’ಚ್ಛೇ’ದ’ನ ಆಗಿರುವುದು ಕೂಡ ಸ್ಪಷ್ಟವಾಗಿದ್ದು ವಿ’ಚ್ಚೇ’ದ,ನ ಆಗುವುದಕ್ಕಿಂತ ಮುಂಚೆಯೇ ಇವರಿಬ್ಬರು ಬೇರೆ ಬೇರೆಯಾಗಿ ಜೀವನ ಮಾಡುತ್ತಿದ್ದರು ಎಂದು ಸಹಾ ಹೇಳಲಾಗುತ್ತಿದೆ.
ಎಲ್ಲರಿಗೂ ಕಾಡುವ ಪ್ರಶ್ನೆ ಏನೆಂದರೆ ಇಬ್ಬರು ಕೂಡ ಬಹಳ ಚೆನ್ನಾಗಿದ್ದರು, ಯಾಕೆ ಇವರಿಬ್ಬರ ನಡುವೆ ಮನಸ್ತಾಪ ಆಯಿತು ಎಂದು. ಇದಕ್ಕೆ ಕಾರಣ ಮೀಟು ಅಭಿಯಾನದಲ್ಲಿ ಗಾಯಕಿ ಲಕ್ಷ್ಮಿ ಶ್ರೀ ಪಾದ ಅನರುಮಾಡಿದ ಆರೋಪ. ಆ ಸಮಯದಲ್ಲಿ ಮೀಟು ಅಭಿಯಾನ ಶುರು ಆಗಿತ್ತು, ಟ್ವಿಟರ್ ಅಲ್ಲಿ ಯಾರ್ಯಾರು ಲೈಂ.ಗಿ.ಕ ದೌ’ರ್ಜನ್ಯ ಅನುಭವಿಸಿದ್ದಾರೋ ಅವರೆಲ್ಲ ಮುಕ್ತವಾಗಿ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗೆ ಲಕ್ಷ್ಮಿ ಶ್ರೀಪಾದ ಅವರು ಅವರಿಗೆ ಮತ್ತು ಅವರ ಗೆಳತಿಗೆ ರಘು ದೀಕ್ಷಿತ್ ಇಂದ ಆದ ತೊಂದರೆ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು.
ಅದನ್ನು ಒಪ್ಪಿಕೊಂಡ ರಘು ದೀಕ್ಷಿತ್ ಅವರು ಕೂಡ ಕ್ಷಮೆಯನ್ನು ಯಾಚರಿಸಿದ್ದರು. ಆದರೆ ಮಯೂರಿ ದೀಕ್ಷಿತ್ ಅವರು ಮಾತ್ರ ಇದನ್ನು ಕ್ಷಮಿಸಿದೆ ನಾನು ಯಾವಾಗಲೂ ಲೈ.ಗಿಂ.ಕ ಕಿರುಕುಳಕ್ಕೆ ಒಳಗಾದವರ ಪರ ಇರುತ್ತೇನೆ ಎಂದಿದ್ದರು. ಅದೇ ಬೇಸರದಲ್ಲಿ ದೂರವಾಗಿದ್ದ ರಘು ದೀಕ್ಷಿತ್ ತಂಪತಿ ಈಗ ಇಬ್ಬರೂ ಸಮ್ಮತಿ ಮೇರೆಗೆ ವಿ.ಚ್ಛೇ.ದ.ನ ಪಡೆದುಕೊಂಡು ಸ್ವತಂತ್ರವಾಗಿ ಜೀವಿಸುತ್ತಿದ್ದಾರೆ. ಒಂದು ವೇಳೆ ಮೀಟೂ ಅಭಿಯಾನ ಬರೆದೆ ಹೋಗಿದ್ದರೆ ಈ ದಂಪತಿಗಳು ಜೊತೆಗೆ ಇರುತ್ತಿದ್ದರೋ ಏನೋ…