ಇತ್ತೀಚೆಗೆ ಎಲ್ಲಾ ಭಾಷೆಗಳಲ್ಲೂ ಕೂಡ ರಿಯಾಲಿಟಿ ಶೋಗಳದ್ದೇ ಹವಾ. ಸಿನಿಮಾಗಳು ಒಂದು ಕಡೆ ಪ್ಯಾನ್ ಇಂಡಿಯಾ ಆಗಿ ತನ್ನ ಗಡಿ ಮೀರಿ ಬೆಳೆದು ಭಾರತದ ಹೆಸರನ್ನು ವಿಶ್ವದಾದ್ಯಂತ ಮೊಳಗಿಸುತ್ತಿದ್ದರೆ, ರಿಯಾಲಿಟಿ ಶೋಗಳು ಕೂಡ ಹೊಸತನವನ್ನು ಪಡೆದುಕೊಂಡಿದೆ. ಸದಾ ಒಂದಿಲ್ಲ ಒಂದು ಫಿಕ್ಷನ್(Fiction) ಅಥವಾ ನಾನ್ ಫಿಕ್ಷನ್(Non fiction) ಪ್ರೋಗ್ರಾಮ್ ಗಳನ್ನು ನಡೆಸುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಕೆಲವು ವರ್ಷಗಳ ಹಿಂದೆ ಟಿವಿ ಮುಂದೆ ಕುಳಿತು ಮಾತ್ರ ಈ ಕಾರ್ಯಕ್ರಮಗಳನ್ನು ಅದು ಬರುವ ಸಮಯವನ್ನು ಮಿಸ್ ಮಾಡಿಕೊಳ್ಳದೆ ನೋಡಬೇಕಾದ ಪರಿಸ್ಥಿತಿ ಇತ್ತು.
ಆದರೆ ಇಂದು ಕಾಲಕ್ಕೆ ತಕ್ಕ ಹಾಗೆ ಎಲ್ಲವೂ ಬದಲಾಗಿರುವ ಹಾಗೆ ಹಾಟ್ ಸ್ಟಾರ್(hotstar), ಝೀ ಫೈವ್(zee5), ವೂಟ್(voot) ಮುಂತಾದ ಪ್ಲಾಟ್ ಫಾರ್ಮ್ಗಳು ಎಲ್ಲಾ ಚಾನೆಲ್ ಗಳಿಗೂ ಇರುವುದರಿಂದ ಇವುಗಳ ಮೂಲಕ ಎಲ್ಲಿ ಯಾವಾಗ ಬೇಕಾದರೂ ನೆಚ್ಚಿನ ಕಾರ್ಯಕ್ರಮಗಳನ್ನು ಮೊಬೈಲ್ ಅಲ್ಲಿಯೇ ನೋಡುವ ಅವಕಾಶ ಇದೆ. ಟಿ ಆರ್ ಪಿ(TRP) ವಿಷಯದಲ್ಲೂ ಕೂಡ ಕಾಂಪಿಟೇಶನ್ ಇರುವುದರಿಂದ ಎಲ್ಲರ ಗಮನ ಸೆಳೆಯಲು ಕಿರುತೆರೆಯ ಕಾರ್ಯಕ್ರಮಗಳು ಕೂಡ ರಿಚ್ನೆಸ್ ಪಡೆದುಕೊಂಡಿವೆ. ಮತ್ತು ಯಾವ ಸಿನಿಮಾಗೂ ಕಡಿಮೆ ಇಲ್ಲದಂತೆ ಮನರಂಜನೆ ಕೊಟ್ಟು ಪ್ರೇಕ್ಷಕರನ್ನು ಖುಷಿ ಪಡಿಸುತ್ತಿವೆ.
ಕನ್ನಡದಲ್ಲೂ ಸಹ ಪ್ರತಿ ಚಾನೆಲ್ ನಲ್ಲೂ ಸಾಕಷ್ಟು ಕಾರ್ಯಕ್ರಮಗಳು ಇದೇ ರೀತಿ ಮೂಡಿಬಂದು ಮನರಂಜನೆ ಪಡಿಸುತ್ತಿವೆ. ಆದರೆ ನಮ್ಮಲ್ಲಿ ಈ ಟಿವಿ(Etv) ಎನ್ನುವ ಒಂದು ಚಾನೆಲ್ ಇತ್ತು ನಂತರ ಅದು ಕಲರ್ಸ್ ಕನ್ನಡ(colors kannada) ಜೊತೆ ಲೀ-ನ ಆಗಿ ಈಗ ಕಲರ್ಸ್ ಎನ್ನುವ ಹೆಸರಿನಲ್ಲಿ ಪ್ರಸಾರ ಆಗುತ್ತಿದೆ. ಆದರೆ ಈ ಈ ಟಿವಿ ತೆಲುಗಿನಲ್ಲಿ ಇನ್ನೂ ಸಹ ಅದೇ ರೂಪದಲ್ಲಿ ಇದೆ. ಈ ತೆಲುಗು ಎಂದು ತೆಲುಗಿನಲ್ಲಿ ಇರುವ ಈ ಚಾನಲ್ ಅಲ್ಲಿ ಈಗ ಹೊಸ ರೂಪದಲ್ಲಿ ಕಾರ್ಯಕ್ರಮಗಳು ಬರುತ್ತಿವೆ.
ಹೊಸ ವರ್ಷದ ಸಂಭ್ರಮ ಅಥವಾ ಸಂಕ್ರಾಂತಿ, ಯುಗಾದಿ, ಸ್ವಾತಂತ್ರ್ಯೋತ್ಸವ ಈ ವಿಶೇಷತೆಗಳಿಗಾಗಿ ಎಲ್ಲಾ ಚಾನೆಲ್ ಅಂತೆ ಈ ಚಾನಲ್ ಕೂಡ ನಾನ್ ಫಿಕ್ಷನ್ ಕಾರ್ಯಕ್ರಮವನ್ನು ನಡೆಸುತ್ತದೆ. ಅದರಲ್ಲಿ ಈ ಬಾರಿ ಸಂಕ್ರಾಂತಿ ಸಂಭ್ರಮದ ಕಾರಣದಿಂದ ನಡೆಸಿದ ಮಂಚಿ ರೋಜುಲು ವಚ್ಚಾಯಿ(manchi rojulu vachchayi)ಎನ್ನುವ ಕಾರ್ಯಕ್ರಮವು ಬಹಳ ಅದ್ಬುತವಾಗಿ ನಿರೀಕ್ಷೆಗೂ ಇರಿ ಮೂಡಿ ಬಂದಿದ್ದು ಪ್ರೇಕ್ಷಕರಿಂದ ಕೂಡ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದೆ.
ಸಂಕ್ರಾಂತಿ ವಿಶೇಷತೆಗಾಗಿ ಈ ಚಾನೆಲ್ ನ ಧಾರಾವಾಹಿಗಳು ಹಾಗೂ ಇತರ ಕಾರ್ಯಕ್ರಮದ ಕಲಾವಿದರು ಗಳನ್ನು ಒಟ್ಟುಗೂಡಿಸಿ ಮನೋರಂಜನೆಯ ವಿಶೇಷ ಕಾರ್ಯಕ್ರಮವನ್ನಾಗಿ ನಡೆಸಲಾಯಿತು. ಕಾರ್ಯಕ್ರಮದ ಪೂರ್ತಿ ಕಾಮಿಡಿ, ನೃತ್ಯ, ಹಾಡುಗಾರಿಕೆ ಮತ್ತು ಒಬ್ಬರಿಗೊಬ್ಬರು ಕಾಲು ಎಳೆದು ತಮಾಷೆ ಮಾಡುವುದು ಜೊತೆಗೆ ಕೆಲವು ಸ್ಪರ್ಧೆಗಳು ಎಲ್ಲವೂ ಸಹ ಇತ್ತು. ಇದರ ಪ್ರೋಮೊಗಳು ಮತ್ತು ಕಾರ್ಯಕ್ರಮದ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು.
ಎಲ್ಲರೂ ಈಗ ಈ ಕಾರ್ಯಕ್ರಮದಲ್ಲಿ ವಿಷ್ಣುಪ್ರಿಯ(Vishnupriya) ಹಾಗೂ ಮಾನಸ(Manasa) ಅವರು ಮಾಡಿದ ನೃತ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಮಾನಸ ಅವರು ತೆಲುಗು ಕಿರುತೆರೆಯ ಫೇಮಸ್ ನಿರೂಪಕಿ. ಈಟಿವಿಯಲ್ಲೂ ಕೂಡ ವಿಷ್ಣುಪ್ರಿಯ ಅವರ ಜೊತೆ ನಿರೂಪಣೆ ಮಾಡಿದ್ದಾರೆ. ನಂತರ ಸಿನಿಮಾ ರಂಗಕ್ಕೆ ಹೋಗಿ ಅದೃಷ್ಟ ಪರೀಕ್ಷೆ ಕೊಂಡ ಇವರು ನಿರೀಕ್ಷೆಯ ಗೆಲುವು ಸಿಗದೇ ಕಿರುತರೆಗೆ ಮರಳಿದ್ದರು.
ಈಗ ಸಂಕ್ರಾಂತಿ ಸ್ಪೆಷಲ್ ಮಂಚಿ ರೋಜಾವು ವಚ್ಚಾಯಿ ಕಾರ್ಯಕ್ರಮಕ್ಕೆ ಬಂದಿದ್ದ ಇವರು ವೇದಿಕೆ ಮೇಲೆ ವರ್ಷ ಸಾಕ್ಷಿಗ(varsha sakshiga) ಹಾಡಿಗೆ ರೋಮ್ಯಾಂಟಿಕ್ ಆಗಿ ವಿಷ್ಣುಪ್ರಿಯ ಅವರೊಂದಿಗೆ ಪರ್ಫಾರ್ಮ್ ಮಾಡಿದ್ದಾರೆ. ತುಂಬಾ ಬೋಲ್ಡ್ ಆದ ಸ್ಟೆಪ್ಗಳೊಂದಿಗೆ ಮೈ ಮರೆತು ಮಾಡಿದ ಇವರ ನೃತ್ಯಕ್ಕೆ ನೋಡುಗರು ಮನಸೋತಿದ್ದಾರೆ. ವಿಷ್ಣುಪ್ರಿಯ ಹಾಗೂ ಮಾನಸ ಅವರು ಪ್ರೀತಿಸುತ್ತಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ಗಾ-ಳಿ-ಸು-ದ್ದಿ ಕೂಡ ಇದೆ. ವೇದಿಕೆ ಮೇಲೆ ಇವರಿಬ್ಬರ ಕೆಮಿಸ್ಟ್ರಿ ನೋಡಿದ ಮೇಲೆ ಈ ಸುದ್ದಿ ನಿಜ ಎಂದು ಕೂಡ ಅನಿಸುತ್ತಿದೆ. ಇನ್ನು ನೀವು ಈ ವಿಡಿಯೋ ನೋಡಿಲ್ಲ ಅಂದರೆ ಒಮ್ಮೆ ನೋಡಿ ಜೋಡಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.