Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ನಟಿ ಕರೀನಾ ಕಪೂರ್.!

Posted on January 22, 2024 By Admin No Comments on ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ನಟಿ ಕರೀನಾ ಕಪೂರ್.!

 

ರಾಕಿಂಗ್ ಸ್ಟಾರ್ ಯಶ್ (Rocking Yash) ನಟನೆಯ ಬಹು ನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾಗಾಗಿ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತವೇ ಕಾಯುತ್ತಿದೆ. ಯಶ್ ಅವರ ಈ ಸಿನಿಮಾ ಘೋಷಣೆಯಾಗುವ ಮುಂಚೆ 19ನೇ ಪ್ರಾಜೆಕ್ಟ್ ಬಗ್ಗೆ ಬಹಳ ಕುತೂಹಲ ಇತ್ತು. ಯಾಕೆಂದರೆ KGF ಸರಣಿಗಳಾದ ಬಳಿಕ ಯಶ್ ಬಹಳ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು ಅವರ ಮುಂದಿನ ಸಿನಿಮಾ ಬಗ್ಗೆ ದಿನಕ್ಕೊಂದು ಗಾಳಿ ಸುದ್ದಿ ಹಬ್ಬುತ್ತಿತ್ತು.

ಕೊನೆಗೂ ಇದಕ್ಕೆಲ್ಲಾ ತೆರೆ ಬಿದ್ದಿದ್ದು, ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ಮುಂದಿನ ಚಿತ್ರ ಟಾಕ್ಸಿಕ್ ಪ್ಯಾನ್ ಇಂಡಿಯಾ ಚಿತ್ರವನ್ನು KVN ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈಗ ಸಿನಿಮಾದ ಇತರ ತಾರಗಣದ ಬಗ್ಗೆ ಕುತೂಹಲ ಉಂಟಾಗಿದ್ದು, ಇದಕ್ಕೂ ಕಾರಣ ಇದೆ. ಯಾಕೆಂದರೆ ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ (Kareena Kapoor) ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತಿದೆ.

ಸಿನಿಮಾದಲ್ಲಿ ಮೂರು ಜನ ನಾಯಕಿಯರು, ಅದರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು ಎನ್ನುವ ಮಾತು ಜೋರಾಗಿದೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಕೆಲವೇ ದಿನಗಳ ಹಿಂದೆ ಕರೀನಾ ಕೂಡ ನನಗೆ ನನಗೆ ಯಶ್ ಅಂದರೆ ಇಷ್ಟ ಎಂದು ಹೇಳಿದ್ದರು.

ಟಾಕ್ಸಿಕ್ ಸಿನಿಮಾದಲ್ಲಿ ಇವರು ಕಾಣಿಸಿಕೊಂಡಿದ್ದಾರೆ ಹಾಗಾಗಿ ಯಶ್ ಬಗ್ಗೆ ಈ ರೀತಿ ಮಾತನಾಡಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಈ ರೀತಿ ಕರೀನಾ ಕಪೂರ್ ಟ್ಯಾಕ್ಸಿನ್ ನಾಯಕಿ ಎನ್ನುವ ಬಗ್ಗೆ ಸುದ್ದಿ ದೊಡ್ಡದಾಗುತ್ತಿದ್ದಂತೆ ನಟಿ ಕಡೆಯವರಿಂದ ಪ್ರತಿಕ್ರಿಯೆ ಬಂದಿದೆ.

ಕರೀನಾ ಕಪೂರ್ ಖಾನ್ ಅವರು ಟಾಕ್ಸಿನ್ ಸಿನಿಮಾದಲ್ಲಿ ಇರುತ್ತಾರೆ ಎನ್ನುವ ಬಗ್ಗೆ ಕರೀನಾ ರವರ ಮತ್ತೊಂದು ಚಿತ್ರತಂಡ ಪ್ರತಿಕ್ರಿಯಿಸಿದೆ. ಕರೀನಾ ಕಪೂರ್ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಅಭಿಮಾನಿಗಳ ಉತ್ಸಾಹ ಮತ್ತು ಆಸೆಗಳನ್ನು ನಾವು ಅರ್ಥಮಾಡಿಕೊಂಡಿದ್ದರೂ.

ನಟಿಯ ಮುಂದಿನ ಸಿನಿಮಾ ಮತ್ತು ಅದರ ತಾರಾ ಬಳಗದ ಮೇಲೆ ಕಾಯುವಂತೆ ಮಾಧ್ಯಮಗಳಿಗೆ ವಿನಂತಿಸುತ್ತೇವೆ, ಸುಖಾಸುಮ್ಮನೆ ಯಾವುದೇ ಊಹೆ ಊಹೆ ಮಾಡಬೇಡಿ. ಆದರೆ ನಿಮ್ಮನ್ನು ನಿರಾಸೆ ಮಾಡಿದಂತಹ ಬಹಳ ಎಕ್ಸೈಟಿಂಗ್ ವಿಚಾರ ಖಂಡಿತವಾಗಿಯೂ ಕಾದಿದೆ, ಅಧಿಕೃತ ಮಾಹಿತಿಗಾಗಿ ಕಾಯಿರಿ ಎಂದು ವಿನಂತಿಸುತ್ತೇವೆ ಎಂದಿದೆ. ಇದು ಸ್ಪಷ್ಟನೆಯಾಗದ ಬದಲು ಮತ್ತೊಂದು ರೀತಿಯ ಕುತೂಹಲ ಉಂಟಾಗುವಂತೆ ಮಾಡಿದೆ.

ಕೆಲ ದಿನಗಳ ಹಿಂದೆ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಒಟ್ಟಾಗಿ ಕಾಫಿ ವಿತ್ ಕರಣ್ ಟಾಕ್‌ ಶೋನಲ್ಲಿ (Coffee With Karan show) ಕಾಣಿಸಿಕೊಂಡಿದ್ದರು. ಇದರಲ್ಲಿ ರ್ಯಾಪಿಡ್ ಫೈಯರ್ ರೌಂಡ್‌ನಲ್ಲಿ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಕರಣ್ ಜೋಹರ್ ಕರೀನಾ ಗೆ ಕೇಳಿದ್ದರು.

ಈ ಪ್ರಶ್ನೆಗೆ ದಿಢೀರನೆ ಯಶ್ ಎಂದು ಬೆಬೋ ಹೇಳಿದ್ದ ವೀಡಿಯೋ ವೈರಲ್ ಆಗಿತ್ತು. ಇದಾಗಿ ಹಲವು ದಿನಗಳು ಕಳೆದಿತ್ತು ಆದರೆ ಈಗ ಸಿನಿ ರಸಿಕರು ಪರೋಕ್ಷವಾಗಿ ಅಂದು ನಟಿ ಇದೇ ಸುಳಿವು ಕೊಟ್ಟಿದ್ದರು ಎಂದು ಊಹಾಪೋಹಗಳಿಂದ ಚರ್ಚೆ ಹೆಚ್ಚಾಗಿತ್ತು, ಸದ್ಯಕ್ಕೆ ಇಷ್ಟು ಮಾಹಿತಿ ಕರೀನಾ ಕಡೆಯಿಂದ ಸಿಕ್ಕಿದೆ. 2025ರ ಏಪ್ರಿಲ್ 10 ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಡೇಟ್ ಅನೌನ್ಸ್ ಆಗಿದ್ದು ಡ್ರಗ್ ಮಾಫಿಯಾ ಸುತ್ತ ಸುತ್ತುವ ಕಥೆ ಇದಾಗಿದೆ ಎನ್ನುವ ಮಾಹಿತಿ ಅಷ್ಟೇ ಇಲ್ಲಿವರೆಗೂ ದಕ್ಕಿದೆ.

Useful Information

Post navigation

Previous Post: KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…
Next Post: ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme