ಕಳೆದ ಬಾರಿಯ ಬಿಗ್ ಬಾಸ್ ಸೀಸನ್ 9 (Bigboss S9) ಮತ್ತು ಬಿಗ್ ಬಾಸ್ OTT ಸೀಸನ್ ವಿನ್ನರ್ ಕೂಡ ಅದ ರೂಪೇಶ್ ಶೆಟ್ಟಿ (Rupesh Shetty) ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈಗ ಕೆಲ ದಿನಗಳ ಹಿಂದೆ ಸುದ್ದಿವಾಹಿನಿಯ ನಿರೂಪಕಿ ಜಾಹ್ನವಿ ಮತ್ತು ರೂಪೇಶ್ ಶೆಟ್ಟಿ ಜೋಡಿಯಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗುತ್ತದೆ ಎನ್ನುವ ಕಾರಣಕ್ಕಾಗಿ ಸುದ್ದಿಯಲ್ಲಿದ್ದರು ಇದರೊಂದಿಗೆ ಆಗಾಗ ಮದುವೆ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.
ತುಳುನಾಡಿನ ಮನೆಮನೆಗೂ ಪರಿಚಯ ಇರುವ ರೂಪೇಶ್ ಶೆಟ್ಟಿ ಅವರು ತುಳು ಭಾಷೆಯಲ್ಲಿ ಇದುವರೆಗೂ 9 ಸಿನಿಮಾ ಮಾಡಿದ್ದಾರೆ ಆದರೆ ಅವರ ಅದೃಷ್ಟಕ್ಕೆ ಎಂಟು ಸಿನಿಮಾಗಳು ರೀಚ್ ಆಗದೆ ಆ ಎಂಟು ಸಿನಿಮಾಗಳ ಸೋಲಿನ ನೋ’ವನ್ನು 9ನೇ ಸಿನಿಮಾ ತಿಳಿಗೊಳಿಸಿತ್ತು ಮತ್ತು ಇದೇ ಅವರಿಗೆ ಬಿಗ್ ಬಾಸ್ ಗೆ ಆಯ್ಕೆಯಾಗುವ ಅದೃಷ್ಟ ತಂದಿತ್ತು.
ಸಿನಿಮಾಗಳಲ್ಲಿ ನಾಯಕನಾಗಿ ಮಾತ್ರವಲ್ಲದೆ ನಿರೂಪಕನಾಗಿ, ರೇಡಿಯೋ ಜಾಕಿಯಾಗಿ ಹೀಗೆ ಹತ್ತಾರು ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೂಪೇಶ್ ಶೆಟ್ಟಿ ಅಭಿಮಾನಿಗಳಿಗೆ ಅವರು ಕನ್ನಡದ ಸಿನಿಮಾದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ಇದರ ಪ್ರಯುಕ್ತ ಮಾಧ್ಯಮ ಒಂದಕ್ಕೆ ಸಂದರ್ಶನ ಕೂಡ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ ಸಿನಿಮಾ ಜೊತೆಗೆ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.
ಸಾಮಾನ್ಯವಾಗಿ ಮಂಗಳೂರು ವಿಭಾಗದವರು ಬಹಳ ಲೇಟಾಗಿ ಮದುವೆ ಆಗುತ್ತಾರೆ ಅಥವಾ ಮದುವೆ ಆಗದೆ ಹಾಗೆ ಉಳಿದುಬಿಡುತ್ತಾರೆ ಮತ್ತು ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ. ಹಾಗಾಗಿ ರೂಪೇಶ್ ಶೆಟ್ಟಿ ಅವರು ಕೂಡ ಇದೇ ರೀತಿ ಪ್ಲಾನ್ ಮಾಡಿದ್ದಾರಾ ಅಥವಾ ಶೀಘ್ರದಲ್ಲೇ ಮದುವೆ ಆಗುತ್ತಾ ಎನ್ನುವ ಕುತೂಹಲದಿಂದ ಇದೇ ಪ್ರಶ್ನೆಯನ್ನು ಮೊದಲಿಗೆ ಕೇಳಲಾಗಿದೆ.
ಇದಕ್ಕೆ ನಿರೀಕ್ಷಿತ ಉತ್ತರವನ್ನು ಅವರು ನೀಡಿದ್ದು ನಾನು ಬಹಳ ಕಷ್ಟಪಟ್ಟು ಇಲ್ಲಿವರೆಗೂ ಬಂದಿದ್ದೇನೆ ನಾನು ಗಾಯಕನಾಗಿ ಆಂಕರ್ ಆಗಿ ಈಗ ನಾಯಕನಾಗಿ ಇಷ್ಟು ದೂರ ಬಂದಿರುವುದು ಕೆಲಸ ಮಾಡಬೇಕು ಎಂದು ಈಗ ಕೆಲಸ ಹೆಚ್ಚಿಸಿಕೊಳ್ಳಬೇಕು ನನ್ನ ಅದೃಷ್ಟಕ್ಕೆ ಅದೇ ರೀತಿ ಹೆಚ್ಚು ಹೆಚ್ಚು ಕೆಲಸ ಸಿಗುತ್ತಿದೆ.
ಈಗ ಕೆಲಸ ಮಾಡುವುದರ ಕಡೆ ಮಾತ್ರ ನನ್ನ ಗಮನ ಇದೆ ನಾನು ಏನು ಇಲ್ಲ ಎಂದರೂ ಬೇಕಾದರೆ ಇರುತ್ತೇನೆ ಆದರೆ ಕೆಲಸ ಬಿಟ್ಟು ಇರಲು ಆಗುವುದಿಲ್ಲ ಹಾಗಾಗಿ ಕೆಲಸದ ಕಡೆ ಗಮನ ಕೊಡುತ್ತೇನೆ, ಮನೆಯಲ್ಲಿ ಒಂದೆರಡು ಬಾರಿ ಹೇಳಿದರು ನಾನು ಅವರ ಮಾತು ಕೇಳುವುದಿಲ್ಲ ಎಂದು ಗೊತ್ತಾಗಿ ಸುಮ್ಮನಾಗಿದ್ದಾರೆ.
ನನ್ನ ಫ್ರೆಂಡ್ಸ್ ಕಡೆಯಿಂದಲು ಕೂಡ ಇದೇ ರೀತಿ ಸಜೆಶನ್ ಬರುತ್ತಿರುತ್ತದೆ. ಆದರೆ ಸದ್ಯಕ್ಕೆ ಕೆಲಸ ಮಾತ್ರ, ಮದುವೆ ಬಗ್ಗೆ ಯೋಚನೆ ಕೂಡ ಮಾಡಿಲ್ಲ ಎಂದಿದ್ದಾರೆ. ಯಾರಾದರೂ ಬಂದು ಪ್ರಪೋಸ್ ಮಾಡಿದರೆ ಎಂದು ಕೇಳಿದ ಪ್ರಶ್ನೆಗೆ ಆ ಸಂದರ್ಭದಲ್ಲಿ ಮನಸ್ಸಿನಲ್ಲಿ ಏನು ಬರುತ್ತದೆ ಅದನ್ನು ಹೇಳುತ್ತೇನೆ. ಮದುವೆ ಆಗೋದೇ ಇಲ್ಲ ಎಂದು ಏನಿಲ್ಲ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.
ನಮ್ಮ ಫೀಲ್ಡ್ ಹೇಗಿದೆ ಎಂದು ಗೊತ್ತು ಯಾವುದೇ ಟೈಮಿಂಗ್ಸ್ ಇಲ್ಲ ಅದಕ್ಕೆ ಹೊಂದಿಕೆ ಆಗುವ ರೀತಿ ಸಪೋರ್ಟ್ ಮಾಡುವವರು ಆಗಿರಬೇಕು ನಾನು ಕೂಡ ಅವರಿಗೆ ಅದೇ ರೀತಿ ಸಪೋರ್ಟಿವ್ ಆಗಿರುತ್ತೇನೆ ಇಂತಹವರು ಸಿಕ್ಕಿದಾಗ ಖಂಡಿತಾ ನೋಡೋಣ ಎನ್ನುವ ಉತ್ತರ ಕೊಟ್ಟಿದ್ದಾರೆ.