ದರ್ಶನ್ (Darshan) ಅವರ ಕಾಟೇರ(Katera) ಸಿನಿಮಾವು ತುಂಬಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಎರಡು ವಾರಗಳಲ್ಲಿ 150 ಕೋಟಿ ಗಳಿಕೆ ಮಾಡುವ ಮೂಲಕ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸ್ವತಃ ದರ್ಶನ್ ಗಿಂತ ಅವರ ಸೆಲೆಬ್ರಿಸ್ ಗಳಿಗೆ ಈ ಗೆಲುವು ಅಪಾರ ಸಂತೋಷವನ್ನುಂಟು ಮಾಡಿದ್ದು ಡಿ ಬಾಸ್ ಅಭಿಮಾನಿಗಳಂತೂ ಎಲ್ಲೆಡೆ ಕಾಲರ್ ಎತ್ತಿ ಓಡಾಡುತ್ತಿದ್ದಾರೆ.
ದರ್ಶನ್ ಅವರು ಇತ್ತೀಚೆಗೆ ಸಾಮಾಜಿಕ ಕಳಕಳಿ (Social awareness) ಹೊಂದಿರುವ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಯಜಮಾನ (Yajamana) ಮೂಲಕ ಎಣ್ಣೆ ಕ್ರಾಂತಿ ಈ ನೆಲದ ವೃತ್ತಿಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟ ಅವರು ಕಳೆದ ವರ್ಷ ತೆರೆಕಂಡ ಕ್ರಾಂತಿ ಸಿನಿಮಾ (Kranti Cinema) ಮೂಲಕ ಶಿಕ್ಷಣದ ಕ್ರಾಂತಿ ಮಾಡಿದ್ದರು ಈಗ ಕಾಟೇರ ಸಿನಿಮಾ ಮೂಲಕ 70ರ ದಶಕದ ಕಥೆ ಹೇಳಿ ಜಾತಿ ಸಂಘರ್ಷ ಹಾಗೂ ಬಡವ ಜನರ ಮೇಲೆ ಆಗುತ್ತಿರುವ ದೌ’ರ್ಜ’ನ್ಯದ ಬಗ್ಗೆ ಬೆಳಕು ಚೆಲ್ಲಿ ಬುದ್ಧಿ ಹೇಳಿದ್ದಾರೆ.
ರಾಮ ಮಂದಿರ ಉದ್ಘಾಟನೆ ದಿನದಂದೇ ಮಕ್ಕಳಿಗೆ ನಾಮಕರಣ ಮಾಡಲು ನಿರ್ಧರಿಸಿರುವ ನಟ ಧೃವ ಸರ್ಜಾ.! ಮಕ್ಕಳ ಹೆಸರೇನು ನೋಡಿ.!
ಕಾಟೇರ ಸಿನಿಮಾಗೆ ಈ ಮಟ್ಟದ ಸಕ್ಸಸ್ ಖಂಡಿತ ಬೇಕಿತ್ತು, ಯಾಕೆಂದರೆ ಚಿತ್ರವು ಅಂತಹ ಸೂಕ್ಷ್ಮ ಕಥೆಯನ್ನು ಹೊಂದಿದ್ದು, ಎಲ್ಲ ಪಾತ್ರಧಾರಿಗಳು ಕಥೆಗೆ ಜೀವ ತುಂಬಿದ್ದಾರೆ. ಸ್ವತಃ ದಚ್ಚು ಪಾತ್ರ ಕೂಡ ಚಾಲೆಂಜಿಂಗ್ ಆಗಿ ಇತ್ತು ಯಾಕೆಂದರೆ ದರ್ಶನ್ ಅವರು ಈ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಯಸ್ಸಾದ ಪಾತ್ರದಲ್ಲಿ ಹಾಗೂ ಯುವಕನಾಗಿ ಡಬಲ್ ರೋಲ್ ಮಾಡಿರುವ ದರ್ಶನ್ ಅವರ ಎರಡು ಪಾತ್ರಗಳು ಅವರ ಕೆರಿಯರ್ ನಲ್ಲಿಯೇ ವಿಭಿನ್ನ ಪಾತ್ರಗಳು. ಸೋಶಿಯಲ್ ಮೀಡಿಯಾ ತುಂಬೆಲ್ಲ ಅವರ ಕಾಟೇರ ಪಾತ್ರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದ್ದು ಇಷ್ಟು ವರ್ಷ ಇಂತಹ ಅದ್ಭುತ ಕಲಾವಿದನ ಕಲೆ ಹೊರತರದೆ ಬರಿ ಹೀರೋಯಿಸಂ ಗೆ ಬಳಸಿಕೊಂಡು ದುಡ್ಡು ಮಾಡಿಕೊಂಡುಬಿಟ್ಟರು ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ ಅಷ್ಟು ಮನಸಿಗೆ ಹತ್ತಿರವಾಗಿ ಕಾಟೇರ ಪಾತ್ರ.
ಆದರೆ ಈ ವಯಸ್ಸಾದ ಗೆಟಪ್ ಹಾಕಿ ಚಿತ್ರೀಕರಣ ಮಾಡಬೇಕಾದಾಗಲೆಲ್ಲಾ ದರ್ಶನ್ ಊಟ ಬಿಟ್ಟು ಚಿಂತೆ ಬಿಡುತ್ತಿದ್ದರಂತೆ. ಅದರ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಿರ್ದೇಶಕ ತರುಣ್ ಸುಧೀರ್ (Director Tharun Sudheer) ಹೇಳಿಕೊಂಡಿದ್ದಾರೆ ಆ ಪಾತ್ರ ಮಾಡುವಾಗ ಎದುರಿಸಿ ಚಾಲೆಂಜ್ ಗಳ ಬಗ್ಗೆ ಅವರು ಹೇಳುವಾಗ, ಮೊದಲಿಗೆ ನಾವು ಬೇರೆ ಬೇರೆ ಲುಕ್ ಗಳನ್ನು ಟ್ರೈ ಮಾಡಿದ್ದೆವು ಆದರೆ ಯಾವುದು ಸಮಾಧಾನ ಆಗುತ್ತಿರಲಿಲ್ಲ.
ನನ್ನ ಮಗಳನ್ನು ದುಡಿಸಿ ಹಣ ಸಂಪಾದನೆ ಮಾಡುತ್ತಿಲ್ಲ.! ಟೀಕೆಗಳಿಗೆ ಮನನೊಂದು ಕಣ್ಣೀರಿಟ್ಟ ಮಾಸ್ಟರ್ ಆನಂದ್
ಕೊನೆಗೆ ಈಗ ಸಿನಿಮಾದಲ್ಲಿ ಇರುವುದು ಲಾಕ್ ಆಯ್ತು, ಅದಕ್ಕಾಗಿ ಇದನ್ನೇ ಫೈನಲ್ ಮಾಡಿದೆ ತಂಡವು ಇದನ್ನೇ ಸೂಚಿಸತ್ತು. ಆದರೆ ಇದನ್ನು ಮೇಕಪ್ ಮಾಡಲು 2:00 ಘಂಟೆ ಸಮಯ ಆಗುತಿತ್ತು ಮತ್ತು ಮೇಕಪ್ ತೆಗೆಯಲು 45 ನಿಮಿಷ ಆಗುತ್ತಿತ್ತು ದರ್ಶನ್ ಅವರು ಊಟ ಮಾಡಲು ಬಾಯಿ ತೆರೆಯಲು ಆಗುತ್ತಿರಲಿಲ್ಲ.
ಬಹಳ ಕಷ್ಟಪಟ್ಟು ಊಟ ಮಾಡಬೇಕಿತ್ತು, ಮೇಕಪ್ ಹಾಳಾಗುತ್ತದೆ ಗಡ್ಡ ಮೀಸೆ ಎಲ್ಲ ಇಟ್ಟುಕೊಂಡು ಊಟ ಮಾಡುವುದು ಕಷ್ಟ ಎಂದು ದರ್ಶನ್ ರವರು ಪ್ರತಿ ಬಾರಿ ಈ ಮೇಕಪ್ ಹಾಕಿದಾಗಲೆಲ್ಲ ಮಧ್ಯಾಹ್ನದ ಊಟವನ್ನು ಬಿಡುತ್ತಿದ್ದರು. ಅಷ್ಟು ಡೆಡಿಕೇಟೆಡ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ ದರ್ಶನ್ ಕೂಡ ಯಂಗ್ ಪಾತ್ರದ ಚಿತ್ರೀಕರಣ ಬಹಳ ಬೇಗ ಮುಗಿದು ಹೋಗುತ್ತಿತ್ತು.
ವಯಸ್ಸಾದ ಪಾತ್ರಕ್ಕೆ ಮುಖದಲ್ಲಿ ರಿಂಕಲ್ ಸೆಟ್ ಮಾಡುವುದು ಬಹಳ ಕಷ್ಟ ಕೊಡುತ್ತಿತ್ತು ಅದಕ್ಕೂ ಕ್ರೀಮ್ ಹಾಕಿ ಮುಖವನ್ನು ಪ್ರೆಸ್ ಮಾಡಿ ಸೆಟ್ ಮಾಡಬೇಕಿತ್ತು, ಜೋರಾಗಿ ಬಾಯಿ ತೆರೆಯಲು ಆಗುತ್ತಿರಲಿಲ್ಲ ಎಂದು ಆ ಪಾತ್ರ ಎಷ್ಟು ಚಾಲೆಂಜಿಂಗ್ ಆಗಿತ್ತು ಎನ್ನುವುದನ್ನು ಹೇಳಿಕೊಂಡಿದ್ದಾರೆ.