ರಜನಿಕಾಂತ್ (Rajanikanth) ಭಾರತದ ಸಿನೆಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್. ಬೆಂಗಳೂರಿನ ಸಾಮಾನ್ಯ BTS ಬಸ್ ಕಂಡಕ್ಟರ್ ಆಗಿದ್ದ ಇವರು ಇಂದು ಮಟ್ಟಕ್ಕೆ ಬೆಳೆದು ಭಾರತದ ಖ್ಯಾತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿರುವುದು ಕನ್ನಡಿಗರಾದ ನಮಗೂ ಹೆಮ್ಮೆ. ಕನ್ನಡ, ತಮಿಳು ಸಿನಿಮಾಗಳಲ್ಲಿ ಮಾತ್ರವಲ್ಲದೆ ತೆಲುಗು, ಹಿಂದಿ ಹೀಗೆ ಭಾರತದ ಎಲ್ಲಾ ಭಾಷೆಗಳಿಗೂ ತಿಳಿದಿರುವ ಪ್ಯಾನ್ ಇಂಡಿಯಾ ಸ್ಟಾರ್ ಇವರು.
ಇವರ ನಟನೆಯನ್ನು ಮೆಚ್ಚಿ ಕೋಟಿಗಟ್ಟಲೇ ಮಂದಿ ಅಭಿಮಾನಿಗಳಾಗಿದ್ದಾರೆ, ವಿದೇಶದಲ್ಲೂ ಕೂಡ ಜನರು ರಜನಿಕಾಂತ್ ಅವರ ಹೆಸರನ್ನು ಹೇಳುತ್ತಾರೆ. ತಲೈವನನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳಲ್ಲಿ ಅವರ ನಟನೆಯಷ್ಟೇ ವ್ಯಕ್ತಿತ್ವವನ್ನು ಇಷ್ಟಪಟ್ಟು ತಾವು ರೂಢಿಸಿಕೊಂಡು ಅಭಿಮಾನಿ ಆಗಿರುವವರ ಸಂಖ್ಯೆಯು ಸೇರಿದೆ. ಯಾಕೆಂದರೆ ರಜನಿಕಾಂತ್ ತೆರೆ ಹಿಂದೆಯೂ ಕೂಡ ಇಂತಹದೇ ಗುಣ ಹೊಂದಿ ಆದರ್ಶವಾಗಿದ್ದಾರೆ.
ತಾವು ಸದ್ದಿಲ್ಲದೆ ಸಮಾಜ ಸೇವೆ ಮಾಡುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ಕಲಸವನ್ನು ಮಾಡಿದವರನ್ನು ಕೂಡ ಗುರುತಿಸಿ ಪ್ರೋತ್ಸಾಹಿಸುತ್ತಾರೆ. ಸದಾ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಇವರು ಇಂತಹ ಕಾರ್ಯಗಳನ್ನು ಮಾಡುವುದನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಅವರು ಸಮಾಜ ಸೇವಕರೊಬ್ಬರ (Rajanikanth appriciate Social Worker by gifting Ambulence) ಕೆಲಸವನ್ನು ಗುರುತಿಸಿ ಆ್ಯಂಬುಲೆನ್ಸ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಷ್ಟದಲ್ಲಿ ಇದ್ದಾಗ ನನಗೆ ಸಹಾಯ ಮಾಡಿದ್ದು ದರ್ಶನ್ ಮಾತ್ರ.! ಭಾವುಕರಾದ ನಟ ಶ್ರೀಮುರುಳಿ
ರಜನಿಕಾಂತ್ ಕೈಯಿಂದ ಉಡುಗೊರೆಯನ್ನು ಪಡೆದ ಸಮಾಜ ಸೇವಕನ ಹೆಸರು ಮಣಿಮಾರನ್ (Manimaran) . ಈತನ ಹೆಸರಿನಲ್ಲಿ ಇತ್ತೀಚೆಗಷ್ಟೇ ವಿಶಿಷ್ಟವಾದ ವಿಶ್ವ ದಾಖಲೆಯಾಗಿ ಸುದ್ದಿಯಾಗಿದೆ. ಇವರು ಸಮಾಜ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಸುಮಾರು 1008 ಕ್ಕೂ ಅಧಿಕ ಅನಾಥ ಶ’ವಗಳ ಶವ ಸಂಸ್ಕಾರವನ್ನು (funeral) ತಮ್ಮ ಕೈಯಲ್ಲಿ ನೆರವೇರಿಸಿದ್ದಾರೆ.
ಸಾಮಾನ್ಯರಿಗೆ ಇದನ್ನು ಊಹಿಸಿಕೊಳ್ಳಲು ಕ’ಷ್ಟ. ಆದರೆ ಈ ವಿಶೇಷವಾದ ವ್ಯಕ್ತಿ ಯಾವುದೇ ಭಂಗ ಬಾರದಂತೆ ಶಾಸ್ತ್ರೋಕ್ತವಾಗಿ ಶವ ಸಂಸ್ಕಾರವನ್ನು ಮಾಡಿದ್ದಾರೆ. ಇದರ ಜೊತೆಗೆ ಲೆಪ್ರೆಸಿ ಅಥವಾ ಫಿಡ್ಸ್ ಖಾಯಿಲೆಗಳುಳ್ಳ (Manimaran helps to Lepracy and pits patients) ವ್ಯಕ್ತಿಗಳಿಗೆ ತಮ್ಮ ಕೈಲಾದ ಸಹಾಯವನ್ನು ಒದಗಿಸುತ್ತಿದ್ದಾರೆ.
ಮಣಿಮಾರನ್ ಮಾಡಿರುವ ಸೇವೆಯನ್ನು ಗುರುತಿಸಿದ ರಜನಿ ಕಾಂತ್ ಅವರು ಅವರನ್ನು ಸಂಪರ್ಕಿಸಿ ಅವರ ಚೆನ್ನೈ ನಿವಾಸಕ್ಕೆ ಭೇಟಿ ನೀಡುವಂತೆ ಕೇಳಿಕೊಂಡಿದ್ದಾರೆ. ಭೇಟಿಯಾದ ಬಳಿಕ ಸುಮಾರು ಇಪ್ಪತ್ತೈದು ನಿಮಿಷಗಳ ಕಾಲ ಸಂಭಾಷಣೆ ನಡೆಸಿ ಅವರ ಸಮಾಜ ಮುಖಿ ಕಾರ್ಯಗಳು ಬಗ್ಗೆ ರಜನಿಕಾಂತ್ ಅವರು ಬಹಳ ಸಂತೋಷ ವ್ಯಕ್ತಪಡಿಸಿದರಂತೆ.
ಅಪ್ಪುಗಾಗಿ 15 ದಿನ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರು ದರ್ಶನ್.!
ಈ ಸಮಯದಲ್ಲಿ ಮಣಿಮಾರನ್ ಅವರು ತಮ್ಮ ಸಮಾಜ ಸೇವೆಗಳ ಕುರಿತಾಗಿನ ಫೋಟೋಗಳನ್ನು ಸಹ ತೋರಿಸಿದ್ದಾರೆ. ಇದರ ಜೊತೆಗೆ ವಿಶ್ವ ದಾಖಲೆ ಸಿಕ್ಕಂತ ಸರ್ಟಿಫಿಕೇಟ್ಗಳನ್ನು ಸಹ ರಜನಿ ಅವರಿಗೆ ತೋರಿಸಿದ್ದಾರೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್ ಇನ್ನಷ್ಟು ವರ್ಷಗಳ ಕಾಲ ಇಂತಹ ಪುಣ್ಯ ಕೆಲಸವನ್ನು ಮುಂದುವರೆಸುವಂತೆ ಹರಸಿ ಹಾರೈಸಿದ್ದಾರಂತೆ.
ಈ ಸಮಯದಲ್ಲಿ ಇಬ್ಬರು ಕೊಟ್ಟಿರುವ ರಜನಿಕಾಂತ್ ಅವರಿಗೆ ಮಣಿಮಾರನ್ ಸರ್ಟಿಫಿಕೇಟ್ ಗಳನ್ನು ತೋರಿಸಿರುವ ಫೋಟೋಗಳು ವೈರಲ್ ಆಗಿವೆ. 17 ವರ್ಷಗಳ ಇವರ ನಿಸ್ವಾರ್ಥ ಸೇವೆಗೆ ಗೌರವಿಸುತ್ತ ಆಂಬುಲೆನ್ಸ್ ಕೂಡ ಗಿಫ್ಟ್ ಮಾಡಿದ್ದಾರೆ ಪಡಿಯಪ್ಪ. ರಜನಿಕಾಂತ್ ಅವರು ಕೂಡ ಇನ್ನು ಹತ್ತಾರು ವರ್ಷ ಇದೇ ರೀತಿ ಬದುಕಲಿ ಅವರ ಮೂಲಕ ಇನ್ನಷ್ಟು ಮನಸುಗಳಿಗೆ ಸಮಾಜಕ್ಕಾಗಿ ಬದುಕುವ ಉತ್ಸಾಹ ಬರಲಿ ಎಂದು ನಾವು ಬಯಸೋಣ.