ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Superstar Rajanikanth) ಅವರ ಚಿತ್ರ ಎಂದರೆ ಇಡೀ ದೇಶವೇ ಆ ಸಿನಿಮಾ ನೋಡಲು ಎದುರು ನೋಡುತ್ತಿರುತ್ತದೆ. ತನ್ನ ಅಪಾರ ಅಭಿಮಾನಿ ಬಳಗಕ್ಕೆ ಬೇಸರ ಮಾಡಲು ಬಯಸದ ಇವರು 70ನೇ ಹರೆಯದಲ್ಲೂ ಕೂಡ ವರ್ಷಪೂರ್ತಿ ಯಾವುದಾದರೂ ಒಂದು ಸಿನಿಮಾದಲ್ಲಿ ತೊಡಗಿಕೊಂಡಿರುತ್ತಾರೆ.
ಈಗಷ್ಟೇ ಜೈಲರ್ ಸಿನಿಮಾ (Jailer movie) ಹಿಟ್ ಆಗಿದೆ. ಇದರ ಬೆನ್ನಲ್ಲೇ ಇವರ 170 ನೆ ಸಿನಿಮಾ (170th movie) ಬಗ್ಗೆ ಚರ್ಚೆ ಜೋರಾಗಿದೆ. ಈ 170 ನೆ ಸಿನಿಮಾ ಒಂದು ಐತಿಹಾಸಿಕ ಹಿಸ್ಟರಿಯನ್ನು ರಿಪೀಟ್ ಮಾಡಲಿದೆ ಎನ್ನಬಹುದು. ಯಾಕೆಂದರೆ, ರಜನಿಕಾಂತ್ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Wirh Amithab bachchan) ಬರೋಬ್ಬರಿ 33 ವರ್ಷಗಳ ಬಳಿಕ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಹಾಗಾಗಿ ಸಿನಿಮಾ ತೆರೆಗೆ ಬರುವ ಘಳಿಗೆ ನೋಡಿ ಕಣ್ತಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ಪೊನ್ನಿಯನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಸಂಸ್ಥೆಯೇ ರಜನಿಕಾಂತ್ ಹಾಗೂ ಅಮಿತಾ ಬಚ್ಚನ್ ಅವರ ಜೋಡಿಯ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಸಂಬಂಧಿತ ಒಂದು ಫೋಟೋ ಹಂಚಿಕೊಂಡಿದೆ.
ಆ ಕ್ಷಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ದುಪಟ್ಟ ಹೆಚ್ಚಿದ್ದು ಸಿನಿಮಾ ಅಪ್ಡೇಟ್ ಗಾಗಿ ಸದಾ ನೆಟ್ಟಿಗರು ಎದುರು ನೋಡುತ್ತಿದ್ದಾರೆ. ಆದರೆ ಈಗ ರಜನಿಕಾಂತ್ ಅವರ 171 ನೇ ಚಿತ್ರವು ಕೂಡ ಅನೌನ್ಸ್ ಆಗಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದೆ. ಅದರಲ್ಲೂ ಕನ್ನಡಿಗರ ಪಾಲಿಗಂತು ಈ ಸಿನಿಮಾ ಇನ್ನಷ್ಟು ವಿಶೇಷವಾಗಿರುತ್ತದೆ. ಯಾಕೆಂದರೆ ಕನ್ನಡದ ನಟನೋರ್ವ ರಜನಿಕಾಂತ್ ಅವರ 171ನೇ ಈ ಸಿನಿಮಾದಲ್ಲಿ ಅವರ ವಿರುದ್ಧ ಖಳನಾಯಕನಾಗಿ ಅಭಿನಯಿಸಲಿದ್ದಾರೆ.
ಕನ್ನಡದ ಬ್ಲಾಕ್ ಕೋಬ್ರಾ, ಕರಿ ಚಿರತೆ ಎನ್ನುವ ಟೈಟಲ್ ಗಳನ್ನು ಪಡೆದಿರುವ 20ರ ದಶಕದ ತನಕ ಸಾಹಸ ನಿರ್ದೇಶಕನಾಗಿ ಸಿನಿಮಾ ರಂಗದಲ್ಲಿ ಹೆಸರು ಮಾಡಿ ನಂತರ ನಾಯಕನಟನಾಗಿ ಬಡ್ತಿ ಪಡೆದಿರುವ ನಟ ದುನಿಯಾ ವಿಜಯ್ (Actor Duniya Vijay rule Villain role at Rajani’s 171th movie) ರವರು ರಜನಿಕಾಂತ್ ಅವರ 171ನೇ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಆರಂಭದಲ್ಲಿ ಇದನ್ನು ಗಾಳಿಸುದ್ದಿ ಎನ್ನಲಾಗುತ್ತಿತ್ತು ಆದರೆ ಇದಕ್ಕೆ ಪುಷ್ಟೀಕರಣ ನೀಡುವಂತೆ ಬಲವಾದ ಮೂಲಗಳಿಂದ ಮಾಹಿತಿ ಇತ್ತೀಚೆಗೆ ತಿಳಿದು ಬರುತ್ತಿದೆ. ನಟ ದುನಿಯಾ ವಿಜಯ್ ಅವರಿಗೂ ಕೂಡ ರಜನಿಕಾಂತ್ ಎಂದರೆ ಬಹಳ ಇಷ್ಟ ಇದನ್ನು ಅನೇಕ ಬಾರಿ ಇವರು ಓಪನ್ ಆಗಿ ಹೇಳಿಕೊಂಡಿದ್ದಾರೆ.
ಹಾಗಾಗಿ ಇಂತಹ ಒಂದು ಅವಕಾಶ ಸಿಕ್ಕರೆ ಅವರು ಖಂಡಿತ ಬಿಡುವ ಮಾತೇ ಇಲ್ಲ ಅದಲ್ಲದೆ ಈಗಷ್ಟೇ ತೆಲುಗಿನಲ್ಲೂ ಕೂಡ ಬಾಲಯ್ಯನ ಎದುರು ವೀರ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿ ಬೊಬ್ಬಿರಿದ ಇವರ ನಟನೆಗೆ ಪರಭಾಷಾ ಇಂಡಸ್ಟ್ರಿಗಳು ಫಿದಾ ಆಗಿವೆ. ಹೀಗಾಗಿ ಅವರಿಗೆ ಪರಭಾಷೆಗಳಿಂದಲೂ ಕೂಡ ದೊಡ್ಡ ದೊಡ್ಡ ಆಫರ್ ಬರುತ್ತಿರುವುದು ಸುಳ್ಳಲ್ಲ.
ಹಾಗಾಗಿ ಈ ಸಿನಿಮಾ ಅಪ್ಡೇಟ್ ನಿಜ ಎಂದು ನಂಬಲಾಗುತ್ತಿದೆ ಮತ್ತು ತಮಿಳಿನ ಜೈ ಭೀಮ್ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಕೇಶ್ ಕನಕರಾಜ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿತ್ತು ಈಗಾಗಲೇ ದುನಿಯಾ ವಿಜಯ್ ಅವರೊಂದಿಗೆ ಮೊದಲನೇ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ದುನಿಯಾ ವಿಜಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಇತರ ಪಾತ್ರಗಳ ಅಡಿಷನ್ ಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.