ಭಾರತಕ್ಕೆ ಆಸ್ಕರ್ ತಂದುಕೊಟ್ಟ ಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್. ಎ.ಆರ್ ರೆಹಮಾನ್ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ಎಲ್ಲಾ ಚಿತ್ರರಂಗದಲ್ಲೂ ಬೇಡಿಕೆಯಲ್ಲಿದ್ದಾರೆ. ಭಾರತದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಇವರ ಕೆರಿಯರ್ ಬಗ್ಗೆ ನಾವು ಬಲ್ಲೆವು ಆದರೆ ದಿಲೀಪ್ ಕುಮಾರ್ ಆಗಿದ್ದ ಇವರು ಅಲ್ಲಾ ರಖಾ ರೆಹಮಾನ್ ಆದ ಕಥೆ ಬಗ್ಗೆ ಅನೇಕರಿಗೆ ಗೊತ್ತಿಲ್ಲ.
ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅನೇಕ ಬಾರಿ ಎ.ಆರ್ ರೆಹಮಾನ್ ಇಸ್ಲಾಂ ಧರ್ಮದ ಪರ ಹಾಗೂ ಹಿಂದೂ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಕೆಲವು ಹೇಳಿಕೆಗಳಲ್ಲಿ ಹಿಂದೂ ಧರ್ಮದಿಂದಲೇ ತಂದೆ ಸ.ತ್ತಿದ್ದು, ಮಸೀದಿಗೆ ಹೋದ ಕಾರಣಕ್ಕೆ ಸಹೋದರಿ ಉಳಿದುಕೊಂಡಿದ್ದು ಎಂದು ಹೇಳಿರುವ ಹೇಳಿಕೆ ಕೂಡ ಒಂದು.
ಅವರ ಈ ಹೇಳಿಕೆ ಸಮೇತವಾಗಿ ಇಂದು ಅವರು ಆ ರೀತಿ ಹೇಳಲು ಕಾರಣ ಏನು ಅದರ ಬಗ್ಗೆ ವಿವರಣೆ ನೀಡುತ್ತಿದ್ದೇವೆ. ಮಲಯಾಳಂ ಚಲನಚಿತ್ರ ರಂಗದ ಸಂಗೀತ ಸಂಯೋಜಕಲಾಗಿದ್ದ ಆರ್.ಕೆ ಶೇಖರ್ ಅವರ ಪುತ್ರ ಎ.ಆರ್ ರೆಹಮಾನ್. ಇವರಿಗೆ ತಂದೆ ಪ್ರೀತಿಯಿಂದ ದಿಲೀಪ್ ಕುಮಾರ್ ಎಂದು ಹೆಸರಿಟ್ಟಿದ್ದರು, ಆದರೆ ಇಸ್ಲಾಂಗೆ ಮತಾಂತರವಾದ ಇವರು ನಂತರ ತಮ್ಮ ಹೆಸರನ್ನು ಅಲ್ಲಾ ರಖಾ ರೆಹಮಾನ್ ಎಂದು ಬದಲಾಯಿಸಿಕೊಂಡರು.
9ನೇ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡ ಇವರು ನಂತರ ಜೀವನದಲ್ಲಿ ಬಹಳ ಕ’ಷ್ಟ ಪಟ್ಟರು ಇವರ ಆರ್ಥಿಕ ಪರಿಸ್ಥಿತಿ ಎಷ್ಟು ಹಾಳಾಗಿತ್ತು ಎಂದರೆ ಇವರ ದಿನನಿತ್ಯದ ಖರ್ಚಿಗೆ ಹಣ ಇಲ್ಲದೆ ತಮ್ಮ ಬಳಿ ಇದ್ದ ಸಂಗೀತ ಸಾಧನೆಗಳನ್ನೇ ಮಾರಿಕೊಳ್ಳುವ ಹಂತಕ್ಕೆ ತಲುಪಿದ್ದರಂತೆ. ತಂದೆ ಬಗ್ಗೆ ಮಾತನಾಡುವಾಗ ಒಮ್ಮೆ ಎ.ಆರ್. ರೆಹಮಾನ್ ತಮ್ಮ ತಂದೆಯ ಸಾ.ವಿಗೆ ಹಿಂದೂ ದೇವರುಗಳೇ ಹೊಣೆ ಎಂದಿದ್ದರು.
ತಂದೆ ಯಾರನ್ನು ಪೂಜಿಸುತ್ತಿದ್ದರೋ ಅದೇ ದೇವರುಗಳಿಂದಲೇ ತಮ್ಮ ತಂದೆ ಪ್ರಾಣ ತೆತ್ತಿದ್ದಾರೆ ಎಂದಿದ್ದರು. ಎ.ಆರ್ ರೆಹಮಾನ್ ಅವರ ಕುಟುಂಬವು ಮೊದಲು ಹಿಂದೂವಾಗಿತ್ತು, ಅವರ ತಂದೆಯ ನಿಧನದ ನಂತರ ಅವರು ತಾಯಿ ಹಾಗೂ ಸಹೋದರಿಯೊಂದಿಗೆ ಎಆರ್ ರೆಹಮಾನ್ ಅವರು ಇಸ್ಲಾಂಗೆ ಮತಾಂತರವಾಗಿದ್ದರು.
ಎ.ಆರ್ ರೆಹಮಾನ್ ಸಹೋದರಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಡಾಕ್ಟರ್ ಗಳು ಕೈಚೆಲ್ಲಿದ್ದರಂತೆ. ಆಗ ರೆಹಮಾನ್ ಅವರು ಮಸೀದಿಗಳಲ್ಲಿ ದುವಾ ಓದಿದ ನಂತರ ತಮ್ಮ ಸಹೋದರಿ ಗುಣಮುಖಳಾದಳು ಎಂದೂ ಒಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಎ.ಆರ್.ರೆಹಮಾನ್ ಸಹೋದರಿಯ ಜೀವ ಉಳಿಸುವ ಹೆಸರಿನಲ್ಲಿ ಸೂಫಿಯೊಬ್ಬ ಅವರ ಕುಟುಂಬವನ್ನ ಮತಾಂತರಗೊಳಿಸಿದ ಎಂದು ಹಲವರ ಆರೋಪ.
ಆ ನಂತರ ದಿಲೀಪ್ ಕುಮಾರ್ ನಿಂದ ಶಾಶ್ವತವಾಗಿ ಅಲ್ಲಾ ರಖಾ ರೆಹಮಾನ್ ಆದರು ಈ ಕೆಲಸ ಇವರ ಕುಟುಂಬದಲ್ಲಿ ಎಷ್ಟು ಕಟ್ಟು ನೆಟ್ಟಾಗಿ ಇಸ್ಲಾಂ ಧರ್ಮ ಪಾಲಿಸಲಾಗುತ್ತದೆ ಎಂದರೆ ಮಗಳು ಖತೀಜ ಗಾಯಕಿಯಾಗಿದ್ದರು ಬುರ್ಖ ಹಾಕಿಕೊಂಡು ಓಡಾಡುತ್ತಾರೆ. ಈ ವಿಚಾರವಾಗಿ ಟ್ರೋಲ್ ಮಾಡಿದಾಗ ಅದರ ಪರ ರೆಹಮಾನ್ ಬ್ಯಾಟ್ ಬೀಸುತ್ತಾರೆ.
ತಮಿಳು ಗೀತರಚನೆಕಾರ ಪಿರೈಸೂದನ್ ರವರೊಮ್ಮೆ ಎ.ಆರ್.ರೆಹಮಾನ್ ಕುಟುಂಬದ ಮತಾಂಧತೆಯನ್ನ ಬಯಲಿಗೆಳೆದಿದ್ದರು. ಜುಲೈ 2020 ರಲ್ಲಿ ಪಿರೈಸುದನ್ ಅವರು ಸಿನಿಮಾ ಹಾಡಿನ ಸಂಬಂಧಿತವಾಗಿ ಕೆಲಸಕ್ಕಾಗಿ ಎ.ಆರ್ ರೆಹಮಾನ್ ಅವರ ಮನೆಗೆ ಹೋದಾಗ, ಎ.ಆರ್ ರೆಹಮಾನ್ ಅವರ ತಾಯಿ ಹಣೆಗೆ ವಿಭೂತಿ ಹಾಗೂ ಕುಂಕುಮ ಇಟ್ಟಿದ್ದ ಇವರನ್ನು ನೋಡಿ ಮನೆ ಒಳಗೆ ಬರಲು ಹೇಳಲು ಪರ್ಮಿಷನ್ ನೀಡಲಿಲ್ಲವಂತೆ.