ಭಾರತದ ಹೆಮ್ಮೆಯ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ರ (A.R Rehaman) ಸಂಗೀತದ ಸಾಧನೆ ಬಗ್ಗೆ ಇಡೀ ದೇಶಕ್ಕೆ ಗೊತ್ತು. ಮೂಲತಃ ಕೇರಳದರವರಾದ ಇವರು ಇಂದು ದೇಶದ ಎಲ್ಲಾ ಸಿನಿಮಾ ಇಂಡಸ್ಟ್ರಿಗೂ ಕೂಡ ಬಹಳ ಬೇಕಾದವರು. ಸಂಗೀತ ಲೋಕದ (Music) ದಿಗ್ಗಜರಲ್ಲೊಬ್ಬರಾಗಿರುವ ರೆಹಮಾನ್ ರ ಈ ಸಾಧನೆ ಬಗ್ಗೆ ಎಲ್ಲರೂ ಬಲ್ಲರು.
ಆದರೆ ಅವರ ವೈಯಕ್ತಿಕ ಜೀವನದ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲ. ಅದರಲ್ಲೊಂದಿಷ್ಟು ವಿಚಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ, ಅದು ಕೂಡ ಅವರು ಮಹಿಳೆಯರು ಬುರ್ಖಾ (Burka) ಧರಿಸುವ ಬಗ್ಗೆ ನೀಡಿದ ಹೇಳಿಕೆ ಕಾರಣದಿಂದ.
ಕಳೆದ ವರ್ಷ ನಮ್ಮ ರಾಜ್ಯದಲ್ಲಿ ಹಿಜಾಬ್ ವಿಷಯ ಬಾರಿ ಸದ್ದಾಗಿತ್ತು, ಅದಕ್ಕೂ ಹಿಂದೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ (Writer taslima Nasreen) ಅವರು ಎ.ಆರ್ ರೆಹಮಾನ್ ಅವರ ಪುತ್ರಿ ಖತೀಜಾ (A.R Rehman daughter Burka troll) ಅವರ ಬುರ್ಖಾದಲ್ಲಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದರು.
ಖತೀಜಾ ರವರು ತಮಿಳಿನ ಖ್ಯಾತ ಗಾಯಕಿ ಆಗಿದ್ದಾರೆ ಅನೇಕ ಸಿನಿಮಾ ಹಾಡುಗಳಿಗೆ ಗಾಯಕಿಯಾಗಿದ್ದಾರೆ. ಫೆಬ್ರವರಿ 11, 2020 ರಂದು ತಸ್ಲಿಮಾ ಅವರು ಮಾಡಿದ ಟ್ವೀಟ್ ನ ವಿಷಯ ಹೀಗಿತ್ತು. ನಾನು ಎ.ಆರ್ ರೆಹಮಾನ್ ಅವರ ಸಂಗೀತವನ್ನು ಬಹಳ ಪ್ರೀತಿಸುತ್ತೇನೆ, ಅವರ ಮಗಳ ಹಾಡುಗಾರಿಕೆಯನ್ನು ಕೂಡ. ಆದರೆ ನಾನು ಅವರ ಮುದ್ದಾದ ಮಗಳನ್ನು ನೋಡಿದಾಗಲೆಲ್ಲಾ ನನಗೆ ಉಸಿರುಗಟ್ಟಿದ ಹಾಗಾಗುತ್ತದೆ.
ಸಾಂಸ್ಕೃತಿಕ ಕುಟುಂಬದಲ್ಲಿ ಇರುವ ವಿದ್ಯಾವಂತ ಮಹಿಳೆಯನ್ನೂ ಕೂಡ ಸುಲಭವಾಗಿ ಬ್ರೈನ್ ವಾಶ್ ಮಾಡಬಹುದು ಎಂದು ತಿಳಿದು ನನಗೆ ನಿರಾಶೆಯಾಯಿತು ಎಂದು ಬರೆದಿದ್ದರು. ಆದರೆ ಇದನ್ನು ಎ.ಆರ್.ರೆಹಮಾನ್ ಪುತ್ರಿ ಖತೀಜಾ ಅವರು ಸಮರ್ಥಿಸಿಕೊಂಡಿದ್ದರು. ಬುರ್ಖಾ ಧರಿಸುವುದನ್ನುನನ್ನ ಆಯ್ಕೆ, ತಾನು ಸ್ವಯಂ ಪ್ರೇರಣೆಯಿಂದ ಬುರ್ಖಾ ಧರಿಸುತ್ತಿದ್ದೇನೆ.
ಹೊರತು ಕುಟುಂಬದ ಆಥವಾ ಮತ್ತೊಬ್ಬರ ಒತ್ತಾಯದಿಂದಾಗಲಿ ಅಥವ ಬ್ರೈನ್ ವಾಶ್ ನಿಂದಾಗಿ ಅಲ್ಲ ಎಂದು ಹೇಳಿ, ಬುರ್ಖಾ ಧರಿಸಿದರೆ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುತ್ತದೆ ಎಂದಿದ್ದರು. ಮಗಳ ಬುರ್ಖಾ ಹೇಳಿಕೆಯನ್ನು ಒಪ್ಪಿದಂತೆ ಎಆರ್ ರೆಹಮಾನ್ ಕೂಡ ಇದಕ್ಕೆ ಸ್ಪಂದಿಸಿದ್ದರು. ಪುರುಷರೂ ಬುರ್ಖಾ ಧರಿಸುವಂತಿದ್ದರೆ ನಾನು ಕೂಡ ಬುರ್ಖಾ ಧರಿಸುತ್ತಿದ್ದೆ. ಇದು ಮಹಿಳೆಯರಿಗೆ ಒಳ್ಳೆಯದು ಎಂದವರು ಹೇಳಿದ್ದರು.
I absolutely love A R Rahman's music. But whenever i see his dear daughter, i feel suffocated. It is really depressing to learn that even educated women in a cultural family can get brainwashed very easily! pic.twitter.com/73WoX0Q0n9
— taslima nasreen (@taslimanasreen) February 11, 2020
ಇದರಲ್ಲಿ ಅಚ್ಚರಿ ಪಡುವ ವಿಷಯವೇನೆಂದರೆ ಇಸ್ಲಾಂ ಧರ್ಮದ ಆಚರಣೆಗಳನ್ನು ಇಷ್ಟು ಕಟ್ಟುನಿಟ್ಟಾಗಿ ಪಾಲಿಸುವ ಎ.ಆರ್ ರೆಹಮಾನ್ ಅವರು ಮೂಲತಃ ಹಿಂದೂ ಧರ್ಮದವರು.ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆಗಿರುವ ಇವರು ಅನೇಕ ಬಾರಿ ಈ ವಿಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಮಲಯಾಳಂ ಚಲನಚಿತ್ರ ಸಂಗೀತ ಸಂಯೋಜಕ ಆರ್‌ಕೆ ಶೇಖರ್ ಅವರ ಪುತ್ರ ಎಆರ್ ರೆಹಮಾನ್ ಅವರಿಗೆ ದಿಲೀಪ್ ಕುಮಾರ್ ಎಂದು ಹೆಸರಿಟ್ಟಿದ್ದರು, ಆದರೆ ಇಸ್ಲಾಂಗೆ ಮತಾಂತರವಾದ ನಂತರ ಅವರು ತಮ್ಮ ಹೆಸರನ್ನು ಅಲ್ಲಾ ರಖಾ ರೆಹಮಾನ್ ಎಂದು ಬದಲಾಯಿಸಿಕೊಂಡಿದ್ದಾರೆ.
ಅದೇನೇ ಇದ್ದರೂ ಅವರವರ ನಂಬಿಕೆ ಅವರಿಗೆ ಅವರು ಯಾವುದೇ ಧರ್ಮವನ್ನು ಸ್ವೀಕರಿಸಿದರು, ಅನುಸರಿಸಿದರೂ ಭಾರತೀಯರು. ಅವರ ಸಂಗೀತ ನಮಗೆ ಮನೋರಂಜನೆ ನೀಡುತ್ತಿದೆ ಮತ್ತು ಅವರ ಸಾಧನೆ ನಮ್ಮ ದೇಶಕ್ಕೆ ಹೆಸರು ತರುತ್ತಿದೆ ಎನ್ನುವುದಷ್ಟೇ ನಮಗೆ ಮುಖ್ಯ.