ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಉಪರಾಷ್ಟ್ರಪತಿ, ರಕ್ಷಣಾ ಮಂತ್ರಿ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರನಾಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ (Sheikh Mohammed bin Rashid Al Maktoum) ಜನವರಿ 29, 2023 ರಂದು ದುಬೈ ನ ಅಲ್ ಮಿನ್ಹಾದ್ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಹಿಂದ್ ಸಿಟಿ ಎಂದು ಮರುನಾಮಕರಣ ಮಾಡಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಧಿಕೃತ ಸುದ್ದಿ ಸಂಸ್ಥೆಯಾಗಿರುವ WAM ಈ ಸುದ್ದಿಯನ್ನು ನೀಡಿದ್ದು, 83.9 ಚದರ ಕಿ.ಮೀ ನ ಅಲ್ ಮಿನ್ಹಾದ್ ಪ್ರದೇಶವು ಹಿಂದ್ 1 ರಿಂದ ಹಿಂದ್ 4 ರವರೆಗೆ ಹಿಂದ್ 1, ಹಿಂದ್ 2, ಹಿಂದ್ 3, ಹಿಂದ್ 4 ಹೀಗೆ 4 zone ಗಳಾಗಿ ಘೋಷಣೆಯಾಗಿರುವುದಾಗಿ ತಿಳಿಸಿದೆ. ಹಿಂದ್ ಸಿಟಿಯು ಯೂನೈಟೆಡ್ ಅರಬ್ ಎಮಿರೇಟ್ಸ್ ಮುಖ್ಯ ರಸ್ತೆ, ದುಬೈ-ಅಲ್ ಐನ್ ನ ರಸ್ತೆ ಮತ್ತು ಜೆಬೆಲ್ ಅಲಿ-ಲೆಹಬಾಬ್ ನ ಪ್ರಮುಖ ರಸ್ತೆಗಳ ಮೂಲಕ ಸಂಪರ್ಕ ಹೊಂದಿದೆ.
ಈ ಸುದ್ದಿಯ ಬಗ್ಗೆ ಭಾರತದ ಹಲವು ಮೀಡಿಯಾಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ ಭಾರತೀಯರಿಗೆ ಕುತೂಹಲ ಹುಟ್ಟಿಸಿರುವ ಒಂದು ವಿಷಯ ಏನೆಂದರೆ, ಅರಬ್ಬರು ಭಾರತೀಯರನ್ನು ಹಿಂದ್ ಅಥವಾ ಹಿಂದಿ ಎಂದು ಕರೆಯುವುದರಿಂದ ದಿಢೀರ್ ಎಂದು ಈ ರೀತಿ ಹೆಸರು ಇಡುವುದಕ್ಕೆ ಮೊದಲಿನಿಂದಲೂ ಅರಬ್ ಭಾರತದೊಂದಿಗೆ ಹೊಂದಿರುವ ಸಂಬಂಧ ಕಾರಣ ಇರಬಹುದೇ, ಅದಕ್ಕಾಗಿ ಈ ರೀತಿ ಘೋಷಿಸಬಹುದೇ ಎಂದು ಊಹಿಸುತ್ತಿದ್ದಾರೆ.
ಭಾರತದ ಕೆಲ ಮಾಧ್ಯಮಗಳು UAE ಪ್ರಧಾನ ಮಂತ್ರಿಗಳ ಕಚೇರಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವಂತೆ ಮನವಿ ಕೂಡ ಮಾಡಿಕೊಂಡಿವೆ. ಆದರೆ ಇದಕ್ಕೆ ವಿವರಣೆ ಸಿಕ್ಕಿರುವುದರ ಬಗ್ಗೆ ವರದಿಯಾಗಿಲ್ಲ ಹಾಗಾಗಿ ಕಾರಣ ಹೇಳಿರಬಹುದು ಎನ್ನುವ ಚರ್ಚೆ ನಮ್ಮ ನಮ್ಮಲ್ಲೇ ಜೋರಾಗುತ್ತಿದೆ.
ಈ ಕಾರಣದ ಹೊರತಾಗಿಯೂ ಪ್ರಮುಖವಾಗಿ ಊಹಿಸಲಾಗಿರುವ ಕೆಲ ಕಾರಣಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಹಿಂದ್ ಎಂಬುದು ಅರೇಬಿಕ್ ಭಾಷೆಯಲ್ಲಿ ಅನೇಕ ಅರ್ಥ ಕೊಡುತ್ತದೆ. ಹಿಂದ್ ಎನ್ನುವುದು ಹಳೆಯ ಅರೇಬಿಕ್ ಹೆಸರು ಕೂಡ ಆಗಿದೆ. ಮತ್ತೊಂದು ಕಾರಣವೆಂದರೆ ಶೇಖ್ ಮೊಹಮ್ಮದ್ ಅವರ ಮೊದಲ ಹೆಂಡತಿಯ ಹೆಸರು ಕೂಡ ಹಿಂದ್ ಆಗಿದೆ.
ಶೇಖ್ ಮೊಹಮ್ಮದ್ ಅವರ ಪತ್ನಿ ಹಿಂದ್ ಬಿಂತ್ ಅಲ್ ಮಕ್ತೌಮ್ ಅವರನ್ನು ಏಪ್ರಿಲ್ 26, 1979 ರಂದು ಅದ್ಧೂರಿಯಾಗಿ ವರಿಸಿದ್ದರು. ದಂಪತಿಗೆ 12 ಮಕ್ಕಳಿದ್ದಾರೆ, ಇವರಲ್ಲಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್, ಕ್ರೌನ್ ಪ್ರಿನ್ಸ್ ಮತ್ತು ದುಬೈ ಕ್ರೌನ್ ಎರಡನೇ ಸಾಲಿನಲ್ಲಿದ್ದಾರೆ.
ಆದ್ದರಿಂದ, ಈ ಪ್ರದೇಶಗಳಿಗೆ ಅವರ ಹೆಸರನ್ನು ಇಟ್ಟಿರಬಹುದು ಎಂದು ಕೂಡ ಊಹಿಸಲಾಗಿದೆ ಮತ್ತು ಅಲ್ಲಿನ ಅನೇಕ ಹೆಣ್ಣು ಮಕ್ಕಳಿಗೆ ಹಿಂದ್ ಎಂದು ಹೆಸರಿಡಲಾಗುತ್ತದೆ, ಇದು ಕೂಡ ಕಾರಣವಿರಬಹುದು ಎನ್ನಲಾಗುತ್ತಿದೆ. ಹಿಂದ್ ಎಂಬುದು ಅರೇಬಿಕ್ ಭಾಷೆಯಲ್ಲಿ ಒಂಟೆಗಳ ದೊಡ್ಡ ಹಿಂಡಿ ಎನ್ನುವುದನ್ನು ಸೂಚಿಸುತ್ತದೆ.
100 ಅಥವಾ ಹೆಚ್ಚಿನ ಒಂಟೆಗಳ ಸಮೂಹವನ್ನು ಹಿಂದ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಹೆಣ್ಣುಮಕ್ಕಳಿಗೆ ಅರೇಬಿಕ್‌ನಲ್ಲಿ ಹಿಂದ್ ಎಂದು ಹೆಸರಿಡುವುದೆಂದರೆ ಆಕೆಗೆ 100 ಅಥವಾ ಅದಕ್ಕಿಂತ ಹೆಚ್ಚಿನ ಒಂಟೆಗಳನ್ನು ಸಿಗಬೇಕು ಎಂದು ಆಶೀರ್ವದಿಸುವುದಕ್ಕಾಗಿ. ಆದರೆ ಈ ಬಗ್ಗೆ UAE ಸ್ಪಷ್ಟವಾಗಿ ತಿಳಿಸುವವರೆಗೂ ಇದೆಲ್ಲ ಊಹೆಗಳಾಗಿರುತ್ತದೆ.
The Vice President and Prime Minister of the UAE and Ruler of Dubai, Sheikh Mohammed bin Rashid Al Maktoum, has renamed the Al Minhad district and its surrounding areas to 'Hind City'.
Follow @NewsreelsIndia for more news updates!#dubai #UAE #news #newsreels pic.twitter.com/XlwiBnM6RO
— Newsreels Trending India (@NRTrendingIndia) January 31, 2023