ನಟ ಅಮೀರ್ ಖಾನ್ (Bolywoos star Ameer Khan) ವಿಭಿನ್ನವಾದ ಕಂಟೆಂಟ್ ಗಳಿರುವ ಸಿನಿಮಾಗಳಲ್ಲಿ ನೂತನ ಪಾತ್ರಗಳಿಗೆ ಬಣ್ಣ ಹಚ್ಚಿ ಎಲ್ಲರನ್ನೂ ಸೆಳೆಯುವ ನಟ. ನಟ ಅಮೀರ್ ಖಾನ್ ಅವರ ಟ್ಯಾಲೆಂಟ್ ಗೆ ಅವರೇ ಸಾಟಿ. ತಮ್ಮ ಸಿನಿಮಾ ಜರ್ನಿ ಉದ್ದಕ್ಕೂ ಇಂತಹ ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಈಗಿನ ವಯೋಮಾನದಲ್ಲಿ ಕೂಡ ಬಹಳ ಬೇಡಿಕೆಯ ನಟ.
ಬಾಲಿವುಡ್ ಸ್ಟಾರ್ ಗಳು ಸಾಮಾನ್ಯವಾಗಿ ಮುಂಬೈ, ದೆಹಲಿಕಂಡಂತೆ ಉತ್ತರ ಭಾರತದ ಭಾಗಗಳಲ್ಲಿ ವಾಸಿಸುವುದು ವಾಡಿಕೆ. ಆದರೆ ದಿಢೀರೆಂದು ಅಮೀರ್ ಖಾನ್ ಅವರು ದಕ್ಷಿಣಕ್ಕೆ ಶಿಫ್ಟ್ ಆಗುತ್ತಿದ್ದಾರೆ ಈ ಹಿಂದೆ ಮುಂಬೈ ಚೆನ್ನೈ ಎಂದು ಊಹಿಸಲಿದ್ದರೂ ಈಗ ಅಧಿಕೃತವಾಗಿ ಅವರು ಹೈದರಾಬಾದ್ ಗೆ ಶಿಫ್ಟ್ (Shift to Hyderabad) ಆಗುತ್ತಿದ್ದಾರೆ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಸಾಕಷ್ಟು ಕುತೂಹಲಕ್ಕೂ ಕೂಡ ಕಡೆ ಮಾಡಿಕೊಟ್ಟಿದೆ ಈ ವಿಚಾರ. ಅಮೀರ್ ಖಾನ್ ಏನಾದರೂ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಯೇ ಅಥವಾ ಯಾವ ಕಾರಣಕ್ಕಾಗಿ ಅವರು ದಕ್ಷಿಣಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಆದರೆ ಕಾರಣವೇನೆಂದರೆ ಅಮೀರ್ ಖಾನ್ ಅವರ ತಾಯಿ ಆರೋಗ್ಯ ಬಹಳ ಗಂಭೀರವಾಗಿದೆ. ತಾಯಿ ಜೀರತ್ ಹುಸೇನ್ ಅನಾರೋಗ್ಯಕ್ಕೆ ಈಡಾಗಿದ್ದಾರೆ (because of Mother health issues). ಸದ್ಯಕ್ಕೆ ಅವರಿಗೆ ಹೈದರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಹಾಗಾಗಿ ಇವರ ಚಿಕಿತ್ಸೆ ಕಾರಣಕ್ಕಾಗಿ ಜೊತೆಗೆ ಇವರನ್ನು ಜೋಪಾನ ಮಾಡುವ ಉದ್ದೇಶದಿಂದ ಈ ರೀತಿ ತಾಯಿಯ ಚಿಕಿತ್ಸೆ ಸಲುವಾಗಿ ಆ ಸ್ಥಳಕ್ಕೆ ಶಿಫ್ಟ್ ಆಗಲು ಮಿಸ್ಟರ್ ಫರ್ಫೆಕ್ಟ್ ನಿರ್ಧಾರ ಮಾಡಿದ್ದಾರೆ ಅದಕ್ಕಾಗಿ ಸ್ಥಳದ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕಿದು ತಾತ್ಕಾಲಿಕವಾದ ಶಿಫ್ಟ್ ಆಗಿದ್ದು ಎಷ್ಟು ಬೇಗ ಅಥವಾ ಎಷ್ಟು ವರ್ಷಗಳಾದ ಬಳಿಕ ಅವರು ಮತ್ತೆ ತಮ್ಮ ಮೂಲ ನೆಲಕ್ಕೆ ಹಿಂದಿರುಗಲಿದ್ದಾರೆ ಎನ್ನುವುದರ ಉಹೆ ಕೂಡ ಇಲ್ಲ.
ಹೈದರಾಬಾದ್ ನಲ್ಲಿ ನೆಲೆಸಲು ನಿರ್ಧಾರ ಮಾಡಿದ್ದರೂ ಕೈ ತುಂಬಾ ಸಿನಿಮಾಗಳಿವೆ. ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಸಿತಾರೆ ಜಮೀನ್ ಪರ್ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಲು ಹಾಗೂ ಅದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅಮೀರ್ ಖಾನ್ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತುಗಳಿವೆ.
ಹಿಂದೆಯೂ ಕೂಡ 2007ರಲ್ಲಿ ಇವರು ತಾರೆ ಜಮೀನ್ ಫಾರ್ ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಸಿನಿಮಾ ಬಗ್ಗೆ ಮಾತನಾಡುವ ತಂಡ ತಾರೆ ಜಮೀನ್ ಪರ್ ನಲ್ಲಿ ಕಣ್ಣೀರು ಇಟ್ಟಿದ್ದವರು ಈಗ ಸಿತಾರೆ ಜಮೀನ್ ಪರ್ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗಲಿದ್ದಾರೆ. ತಾರೆ ಜಮೀನ್ ಪರ್ ಗಿಂತ ಹತ್ತು ಹೆಜ್ಜೆ ಮುಂದೆ ಹೋಗಿ ಈ ಸಿನಿಮಾ ತಯಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ ಹಾಗಾದ್ದರೆ ಸಿನಿಮಾ ತಯಾರಿ ಜೋರಾಗಿ ಇರುತ್ತದೆ. ಮತ್ತೊಮ್ಮೆ ನಟ ತಮ್ಮನ್ನು ಪ್ರಯೋಗಕ್ಕೆ ಒಳಪಡಿಸಿಕೊಳ್ಳಬೇಕಾಗುತ್ತದೆ.
ಸನ್ನಿ ಡಿಯೋಲ್ ರ ಲಾಹೋರ್ 1947 ಸಿನಿಮಾದಲ್ಲಿ ಕೂಡ ಅಮೀರ್ ಖಾನ್ ಬಣ್ಣ ಹಚ್ಚಲಿದ್ದಾರೆ, ರಾಜ್ ಕುಮಾರ್ ಸಂತೋಷಿ ಅವರ ನಿರ್ದೇಶನದ ಈ ಚಿತ್ರವೂ ಕೂಡ ಅಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ತಯಾರಾಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಳಿಕ ಅಮೀರ್ ಖಾನ್ ಅವರು ಬಹಳ ಬ್ಯುಸಿಯಾಗಿದ್ದರೂ ಕುಟುಂಬಕ್ಕಾಗಿ ಈಗ ಇದರಿಂದ ಬ್ರೇಕ್ ಪಡೆದು ಹೈದ್ರಾಬಾದ್ ನಲ್ಲಿ ನಿಲ್ಲಿಸಬೇಕಾದ ನಿರ್ಧಾರಕ್ಕೆ ಬಂದಿದ್ದಾರೆ