ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿಗಳು (Comedy Kiladigalu) ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ಹಾಸ್ಯ ನಟಿ ನಯನಾರವರು (Nayana) ಜೀ ಕನ್ನಡ ವೇದಿಕೆಯ ಮೂಲಕ ತಮ್ಮ ಬದುಕನ್ನು ಬದಲಾಯಿಸಿಕೊಂಡರು. ಈಗ ಸಿನಿಮಾಗಳಲ್ಲೂ ಕೂಡ ಹಾಸನಟಿಯಾಗಿ ಜೂನಿಯರ್ ಉಮಾಶ್ರೀ (jn. Umashree) ಎಂದೇ ಖ್ಯಾತಿ ಪಡೆದಿದ್ದಾರೆ.
ಕನ್ನಡ ಕಿರುತೆರೆಯ ಬಹುತೇಕ ಎಲ್ಲಾ ಹಾಸ್ಯ ಕಾರ್ಯಕ್ರಮಗಳಲ್ಲೂ ಕೂಡ ಕಾಣಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿರುವ ನಟಿ ನಯನ ದಾರವಾಹಿಗಳಲ್ಲಿ ಹಾಸ್ಯ ಮಾತ್ರವಲ್ಲದೆ ವಿಭಿನ್ನವಾದ ಚಾಲೆಂಜಿಂಗ್ ಪಾತ್ರಗಳನ್ನು ಒಪ್ಪಿಕೊಂಡು ಸೈ ಎನಿಸಿಕೊಂಡಿದ್ದಾರೆ. ಈಗ ಯಶಸ್ಸಿನ ಉತ್ಪಂಗದಲ್ಲಿದ್ದರೂ ಕೂಡ ವೈಯಕ್ತಿಕ ಜೀವನದ ಜವಾಬ್ದಾರಿಗಳನ್ನು ಮರೆಯದೆ ನಿಭಾಯಿಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಬಹುಕಾಲದ ಗೆಳೆಯ ಉದ್ಯಮಿ ಶರತ್ ರನ್ನು ವಿವಾಹವಾಗಿದ್ದ ನಯನ ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೂಲತಃ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ಹುಡುಗಿಯಿಗಿದ್ದರೂ ಕೂಡ ತಮ್ಮ ವಾಕ್ ಚಾತುರ್ಯದ ಮೂಲಕ ಮನೆ ಮಗಳೆಂಬ ಭಾವನೆ ಮೂಡಿಸಿದ್ದ ಇವರ ಸರಳತೆ ಹಾಗೂ ಸಾದಾ ಸೀದ ಅಭಿನಯ ಎಲ್ಲಾ ಮನಸ್ಸಿನಲ್ಲೂ ಇವರಿಗೆ ಜಾಗ ಕೊಡುವಂತೆ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ಕತ್ ಆಕ್ಟಿವ್ ಆಗಿರುವ ನಯನಾರವರು ಅಲ್ಲೂ ಕೂಡ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇದೀಗ ಎಲ್ಲರೂ ನಟಿಗೆ ಶುಭವಾಗಲಿ ಎಂದು ಹರಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕುಟುಂಬದವರು ಮಾಡಿರುವ ಸೀಮಂತ ಕಾರ್ಯಕ್ರಮದ ವಿಡಿಯೋಗಳನ್ನು ಹಾಗೂ ತಮ್ಮ ಪತಿ ಜೊತೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ಕೂಡ ನಟಿ ನಯನ ಅವರು ಹಂಚಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮನಪೂರ್ವಕವಾಗಿ ಹರಸುತ್ತಿದ್ದಾರೆ.
ಗರ್ಭಿಣಿಯಾಗಿದ್ದಾಗಲೂ ಕೂಡ ತೀರ ಇತ್ತೀಚಿನ ದಿನಗಳವರೆಗೂ ಕೂಡ ನಯನ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲೂ ಕೂಡ ಕಾರ್ಯಕ್ರಮಗಳ ಮೂಲಕ ಅವರಿಗೆ ಸರಳವಾಗಿ ಸೀಮಂತವನ್ನು ಮಾಡಿ ಹರಸಿ ಕಳುಹಿಸಲಾಗುತ್ತಿತ್ತು.
ಸುವರ್ಣವಾಹಿನಿಯ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರು ಅವರು ನಯನ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ನಯನಾರಿಗೆ ಇಷ್ಟವಾದ ಅಡುಗೆ ಮಾಡಿ ಬಡಿಸಿದ್ದರು. ಹೀಗೆ ಮುಂದುವರೆದು ಈಗ ಕುಟುಂಬದವರ ಸೇರಿ ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ಸೀಮಂತ (Baby Shower) ಕಾರ್ಯಕ್ರಮ ನಡೆಸಿದ್ದಾರೆ.
ತುಂಬು ಗರ್ಭಿಣಿಯಾದ ನಯನರವರು ಹಸಿರು ಸೀರೆ ಮಲ್ಲಿಗೆ ಹೂವು ಕೈ ತುಂಬಾ ಬಳೆ ತೊಟ್ಟು ಗೌರಿಯಂತೆ ಕಾಣುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಇತರೆ ಸಹ ಕಲಾವಿದರು, ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದ ಹಾಸ್ಯ ಕಲಾವಿದರುಗಳು, ಹಿರಿತೆರೆ ಮತ್ತು ಕಿರುತೆರೆಯ ಅನೇಕ ಸೆಲೆಬ್ರೇಟಿಗಳು ಕೂಡ ಭಾಗಿಯಾಗಿದ್ದಾರೆ.
ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ನಯನ ಮಗುವಿನ ಕುರಿತು ಹರಡುತ್ತಿರುವ ಸು’ಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಬಯಸಿದ ನಯನ ಮಗುವಿನ ಸುದ್ದಿಯನ್ನು ನಾನೇ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಅಲ್ಲಿಯವರೆಗೂ ಕೂಡ ನಿಮ್ಮ ಬೇಳೆ ಬೆಳೆಸಿಕೊಳ್ಳುವ ಸಲುವಾಗಿ ಇಲ್ಲಸಲ್ಲದ ಸುದ್ದಿ ಹರಡಬೇಡಿ.
ಯೂಟ್ಯೂಬ್ ನಲ್ಲಿ ನೋಡುತ್ತಿದ್ದೇನೆ ನಿಮ್ಮ ಇಷ್ಟ ಬಂದಂತೆ ಕಂಟೆಂಟ್ ಮಾಡುತ್ತಿದ್ದೀರಿ ಇದು ಬೇಸರ ತರಿಸುತ್ತಿದೆ ದಯವಿಟ್ಟು ಇದನ್ನು ನಿಲ್ಲಿಸಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ. ತಮಗೆ ಹಾರೈಸಿದ ಎಲ್ಲರಿಗೂ ಕೂಡ ಧನ್ಯವಾದ ಅರ್ಪಿಸಿದ್ದಾರೆ, ನಾವು ಕೂಡ ನಯನರವರಿಗೆ ಶುಭವಾಗಲಿ ಎಂದು ಪ್ರಾರ್ಥಿಸೋಣ.