ಬಿಗ್ ಬಾಸ್ ಸೀಸನ್ 10ರ ವೇದಿಕೆ ಹತ್ತಿ ಮನೆ ಒಳಗೆ ಹೋಗಲಾಗದೆ ಆಡಿಯನ್ಸ್ ಪೋಲ್ ನಿಂದ ರಿಜೆಕ್ಟ್ ಆದ ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ಕಲಾ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಅವಮಾನ ಮಾಡಿದರು ಎಂದು ಬಿಗ್ ಬಾಸ್ ಕಾರ್ಯಕ್ರಮ ಹಾಗೂ ಚಾನೆಲ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಎರಡು ಮೂರು ಸೀಸನ್ ಇಂದ ನಾನು ಬಿಗ್ ಬಾಸ್ ಗೆ ಹೋಗಲು ವೈಟಿಂಗ್ ನಲ್ಲಿ ಇದ್ದೆ, ಮೊದಲಿಗೆ ನಾನೇ ಅಪ್ರೋಚ್ ಮಾಡಿದ್ದೆ ಎರಡು ರೌಂಡ್ ಅಡಿಶನ್ ಆಗಿ ಸೆಲೆಕ್ಟ್ ಆಗಿದ್ದೆ ಆಗ ಅವರು ನೆಕ್ಸ್ಟ್ ಸೀಸನ್ ಗೆ ವೇಟಿಂಗ್ ನಲ್ಲಿ ಇಟ್ಟಿದ್ದೇವೆ ಎಂದರು ಕಳೆದ ಸೀಸನ್ ನಲ್ಲಿ ನವೀನರು ಹಾಗೂ ಪ್ರವೀಣರು ಎನ್ನುವ ಕಾನ್ಸೆಪ್ಟ್ ಇದ್ದಿದ್ದರಿಂದ ಸುಮ್ಮನಾದೆ.
ಈ ಬಾರಿ ಅವರೇ ಕಾಲ್ ಮಾಡಿ ಲಾಸ್ಟ್ ಕಂಟೆಸ್ಟೆಂಟ್ ಗೆ ನಿಮ್ಮನ್ನು ಇನ್ವೈಟ್ ಮಾಡುತಿದ್ದೇವೆ ಎಂದು ಹೇಳಿದರು. ನಾನು ಮಡಿಕೇರಿ ಟ್ರಿಪ್ ನಲ್ಲಿದ್ದೆ ಆದರೂ ವಾಪಸ್ ಬಂದು ಎಲ್ಲಾ ತಯಾರಿ ಮಾಡಿಕೊಂಡೆ. ನನಗೆ ಹುಷಾರಿಲ್ಲ ಎಂದರು ಕೂಡ ವಿಟಿ ಶೂಟಿಂಗ್ನಲ್ಲಿ ಪಾಲ್ಗೊಂಡೆ ಬೆಳಗಿನ ಜಾವ ನಾಲ್ಕರ ತನಕ ಶೂಟಿಂಗ್ ಆಯಿತು.
ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದು ಶಾಪಿಂಗ್ ಗಾಗಿ ಖರ್ಚು ಮಾಡಿದೆ, ನನ್ನ instagram ಅಕೌಂಟ್ ನೋಡಿಕೊಳ್ಳಲು ಬೇರೆಯವರಿಗೆ ಕೊಟ್ಟು ಮನೆ ನಿರ್ವಹಣೆಗೆ ಎಲ್ಲವನ್ನು ಮ್ಯಾನೇಜ್ ಮಾಡಿ ನನ್ನ ಪೆಟ್ ಗಳನ್ನು ಬೇರೆಯವರಿಗೆ ನೋಡಿಕೊಳ್ಳಲು ಬಿಟ್ಟು ಹೋಗಿದ್ದೆ, ಆದರೆ ವೇದಿಕೆ ಮೇಲೆ ನನಗೆ ಬಹಳ ನಿರಾಶೆ ಆಯಿತು.
ಪ್ರೋಗ್ರಾಂಗೆ ಡ್ರೆಸ್ ಕಾಸ್ಟ್ಯೂಮ್ ಕೂಡ ಕೊಡಲಿಲ್ಲ ನಿಮ್ಮದೇ ಹಾಕಿಕೊಳ್ಳಿ ಎಂದು ಹೇಳಿದ್ದರು. ಕೊನೆ ಮೂಮೆಂಟಲ್ಲಿ ಅಗ್ರಿಮೆಂಟ್ ತಂದು ಕೊಟ್ಟರು. ವೇದಿಕೆಗೆ ಹೋಗಲು ಒಪ್ಪಿಗೆ ಇದೆ ಎಂದು ನಾನು ಅದಕ್ಕೂ ಸೈನ್ ಮಾಡಿಕೊಟ್ಟೆ ಪೂರ್ತಿ ಡೀಟೇಲ್ ಓದುವಷ್ಟು ಟೈಮ್ ಇರಲಿಲ್ಲ.
ವೇದಿಕೆ ಮೇಲೆ ಹೋದಾಗ ನನ್ನ ವಿಟಿ ನೋಡಿ ಬೇಜಾರಾಯ್ತು ಉಳಿದವರೆ ವಿಟಿಗಳು ಇರಲಿಲ್ಲ ಮತ್ತು ನನ್ನ ಬಾಡಿ ಬಿಲ್ಡಿಂಗ್ ಬಗ್ಗೆ ಮತ್ತು ಬಿಕಿನಿ ವೀಡಿಯೋ ಎಲ್ಲವನ್ನು ಕೊಟ್ಟಿದ್ದೆ ಅದು ತೋರಿಸಲಿಲ್ಲ. ಯಾರು ಕೂಡ ಹೋಗದ ದಾರಿಯಲ್ಲಿ ನಾನು ಹೋಗಿದ್ದೇನೆ, ಅದರಲ್ಲೂ ಕೂಡ ಕರ್ನಾಟಕದಲ್ಲಿ ಮೊದಲ ಹೆಣ್ಣು ಮಗಳು ನಾನು ಈ ರೀತಿ ಬಾಡಿ ಬಿಲ್ಡರ್ ಆಗಿರುವುದು ಅದಕ್ಕಾದರೂ ರೆಸ್ಪೆಕ್ಟ್ ಬೇಕು.
ನಾನೇನೋ ಸಾಧಿಸಿದ್ದೇನೆ ಎಂದು ಅಲ್ಲ ಆದರೆ ರಾಜ್ಯ ಪ್ರಶಸ್ತಿ ಬಂದಿದೆ ಅಷ್ಟಾದರೂ ಗೌರವ ಇರುತ್ತದೆ ಎಂದು ಎಕ್ಸ್ಪೆಕ್ಟೇಶನ್ ಇತ್ತು ಆ ವಿಟಿ ಗಾಗಿ 13,000 ಖರ್ಚು ಮಾಡಿದ್ದೆ ಅದನ್ನು ಕೂಡ ಪ್ರಸಾರ ಮಾಡಲಿಲ್ಲ ಎಲ್ಲಾ ಕಂಟೆಸ್ಟೆಂಟ್ಗಳ ಪೇರೆಂಟ್ಸ್ ಮಾತನಾಡಿಸಿದರು ನನಗೆ ಅದನ್ನು ಮಾಡಲಿಲ್ಲ.
ಒಳಗೆ ಹೋದ ಮೇಲೆ ಏನೆಲ್ಲಾ ಆಗಬಹುದು ಎನ್ನುವುದರ ಪ್ರಶ್ನೆ ಕೇಳಿದರು ನನ್ನ ಬಳಿ ಅದನ್ನು ಕೇಳಲಿಲ್ಲ, ಉಳಿದವರಿಗೆ ಕೊಟ್ಟಷ್ಟು ಸಮಯವನ್ನು ಕೊಡಲಿಲ್ಲ. ಆಡಿಯನ್ಸ್ ಪೋಲ್ ವಿಚಾರ ನನಗೆ ಮೊದಲೇ ಹೇಳಿದ್ದರು ಆದರೆ ನಾನು ಅಂದುಕೊಂಡಿದ್ದೆ 200-300 ಜನ ಇರುತ್ತಾರೆ, ಅವರಿಗೆಲ್ಲ ನನ್ನ ಬಗ್ಗೆ ಗೊತ್ತಿರುತ್ತದೆ ಹಾಗಾಗಿ ಕಾನ್ಫಿಡೆನ್ಸ್ ಇತ್ತು.
ಅಲ್ಲಿ ನೋಡಿದರೆ 25 ಜನ ಇದ್ದರು ಅಲ್ಲಿ ಬಂದಿರುವ ರಿಸಲ್ಟ್ ಜೆನ್ಯೂನ್ ಎಂದು ಅನಿಸುವುದು ಇಲ್ಲ. ಆದರೆ ಸುದೀಪ್ ಸರ್ ಆದರೂ ಈ ಬಗ್ಗೆ ಯೋಚನೆ ಮಾಡಬೇಕಿತ್ತು. 25 ಜನರ ನಿರ್ಧಾರ ಇಡೀ ಕರ್ನಾಟಕದ ನಿರ್ಧಾರವಾಗುತ್ತದೆಯೇ ಎಂದು, ರಿಜೆಕ್ಟ್ ಆಗುವುದು ಹೊಸದೇನಲ್ಲ ಆದರೆ ಇದ್ದ 25 ಜನದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಇದ್ದು ಅವರು ರಿಜೆಕ್ಟ್ ಮಾಡಿದ್ದಾರೆ ಅದರಲ್ಲಿ ಒಂದು ಅರ್ಥ ಇರುತ್ತಿತ್ತು.
ಆದರೆ ಈಗ ಇದೆಲ್ಲ ಪ್ಲಾನ್ಡ್ ಎನಿಸಿ ಬಿಟ್ಟಿತು ಅವರು ವೇಟಿಂಗ್ ನಲ್ಲಿ ಇಟ್ಟಿದ್ದರು ಅಥವಾ ರಿಜೆಕ್ಟ್ ಮಾಡಿದರೆ ಇಷ್ಟು ಬೇಜಾರಾಗುತ್ತಿರವಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇದು ಆಡಿಶನ್ ಎಂದುಕೊಂಡಿದ್ದೆ ಟಿವಿಯಲ್ಲಿ ಪ್ರಸಾರವಾದಾಗ ಇನ್ನು ಬೇಜಾರಾಯಿತು ಇಂದು ತಮ್ಮ ಬೇಸರವನ್ನು ಹೇಳಿಕೊಂಡಿದ್ದಾರೆ.
https://youtu.be/49wyd-4Yclw?si=TopIXzY1XMppIPWi