ಏಪ್ರಿಲ್ 12 2004 ಕನ್ನಡಿಗರ ಪಾಲಿಗೆ ಬಹಳ ಕೆಟ್ಟ ದಿನ. ಕರುನಾಡಿನ ಹೆಮ್ಮೆ, ಕುಲ ಕಂಠೀರವ, ನಟಸಾರ್ವಭೌಮ, ಕನ್ನಡದ ಜನತೆಯ ಪಾಲಿಗೆ ನೆಚ್ಚಿನ ಅಣ್ಣಾವ್ರು ಹೃದಯಾಘಾತಕ್ಕೆ ಬಲಿಯಾದ ದಿನ. ಅಂದು ಇಡೀ ಕರುನಾಡೆ ಹತ್ತಿ ಉರಿದಿತ್ತು ಅಣ್ಣಾವ್ರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಆ ನೋ’ವನ್ನು ಅರಗಿಸಿಕೊಳ್ಳಲಾಗದೆ ಮನಬಂದಂತೆ ವರ್ತಿಸಿದರು.
ಇದನ್ನು ಸಲಹಲು ಪೊಲೀಸರಿಗೆ ಕೂಡ ಕಷ್ಟವಾಗಿ ಇತಿಹಾಸದ ಪುಟದಲ್ಲಿ ಈ ಕರಾಳ ದಿನ ಅಚ್ಚಲಿಯದೆ ಉಳಿದು ಹೋಗಿದೆ. ಆ ದಿನ ಅಣ್ಣಾವ್ರ ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಹುಡುಕಿ ಬರುತ್ತಿದ್ದರು, ಅಭಿಮಾನಿಗಳಿಗೆ ದರ್ಶನ ವ್ಯವಸ್ಥೆ ಮಾಡುವ ಮುನ್ನ ರಾಜ್‌ಕುಮಾರ್ ಅವರ ನಿವಾಸಕ್ಕೆ ಗಣ್ಯ ವ್ಯಕ್ತಿಗಳು ಕೂಡ ಆಗಮಿಸಿದ್ದರು.
ಇದೇ ಸಮಯದಲ್ಲಿ ಕನ್ನಡದ ಚಿತ್ರರಂಗದ ಮತ್ತೊಂದು ಅಮೂಲ್ಯ ರತ್ನವಾದ ಡಾ. ವಿಷ್ಣುವರ್ಧನ್ ಅವರು ಕೂಡ ಸ್ನೇಹಿತ ಅಂಬರೀಶ್ ಜೊತೆ ಅಣ್ಣಾವ್ರ ಅಂತಿಮ ದರ್ಶನಕ್ಕಾಗಿ ಬಂದಿದ್ದರು. ಯಾಕೆಂದರೆ ವಿಷ್ಣುವರ್ಧನ್ ಅವರು ಸಹ ಅಣ್ಣಾವ್ರ ಅಭಿಮಾನಿ ಸಿನಿಮಾ ರಂಗಕ್ಕೆ ಬಂದ ಆರಂಭದ ವೇಳೆಯಲ್ಲಿಯೇ ಈ ವಿಚಾರವನ್ನು ಹೇಳಿಕೊಂಡಿದ್ದರು.
ಇದೇ ಕಾರಣಕ್ಕಾಗಿ ಗಂಧದ ಗುಡಿ ಸಿನಿಮಾದಲ್ಲಿ ನೆಗೆಟಿವ್ ರೋಲ್ ಇದ್ದರೂ ಕೂಡ ಅಣ್ಣಾವ್ರ ಜೊತೆ ಅಭಿನಯಿಸುವ ಇಂಗಿತದಿಂದ ಪಾತ್ರವನ್ನು ಒಪ್ಪಿಕೊಂಡಿದ್ದರು. ಆದರೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವಿನ ಸಂಬಂಧದ ಬಗ್ಗೆ ಜನತೆ ತಪ್ಪು ತಿಳಿದುಕೊಂಡು ಇಬ್ಬರ ಅಭಿಮಾನಿಗಳು ಕೂಡ ತಪ್ಪಾಗಿ ವರ್ತಿಸುತ್ತಿದ್ದರು.
ಅಣ್ಣಾವ್ರು ಹಾಗೂ ವಿಷ್ಣು ಅವರ ನಡುವೆ ಬಹಳ ಆತ್ಮೀಯ ಸಂಬಂಧವಿತ್ತು, ಪರಸ್ಪರ ಗೌರವವಿತ್ತು ,ಅಣ್ಣಾವ್ರು ಮನೆ ಮಗನಂತೆ ವಿಷ್ಣುವರ್ಧನ್ ಅವರನ್ನು ಕಾಣುತ್ತಿದ್ದರು. ವಿಷ್ಣುವರ್ಧನ್ ಅವರು ಸಹ ಅಂತಹದ್ದೇ ಒಂದು ಬಗೆಯ ನಂಟನ್ನು ದೊಡ್ಮನೆ ಯೊಂದಿಗೆ ಹೊಂದಿದ್ದರು.
ಆದರೆ ಅಭಿಮಾನಿಗಳಿಗೆ ಎದುರು ಅದನ್ನು ಇಬ್ಬರು ಬಹಿರಂಗವಾಗಿ ಒಟ್ಟಿಗೆ ಸ್ಪಷ್ಟಪಡಿಸಲು ಅವಕಾಶವೇ ಸಿಗಲಿಲ್ಲ. ಅದರಲ್ಲೂ ಡಾ.ವಿಷ್ಣುವರ್ಧನ್ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳು ಗಂಧದಗುಡಿ ಸಿನಿಮಾ ಶೂಟಿಂಗ್ ವೇಳೆ ಆದ ಅವಘಡವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮನಬಂದಂತೆ ಅವಮಾನಿಸುತ್ತಿದ್ದರು.
ಹೋದ ಬಂದ ಕಡೆಯಲ್ಲ ತೊಂದರೆ ಕೊಡುತ್ತಿದ್ದರು, ಕಡೆಗೆ ವಿಷ್ಣುವರ್ಧನ್ ಅವರು ಕರ್ನಾಟಕ ಬಿಟ್ಟು ತಮಿಳುನಾಡಿನಲ್ಲಿ ಕೆಲಕಾಲ ಇರುವಂತೆ ಮಾಡಿದ್ದರು. ಈ ಸೂಕ್ಷ್ಮತೆಯನ್ನು ಅರಿತಿದ್ದ ಪಾರ್ವತಮ್ಮ ರಾಜಕುಮಾರ್ ಅವರು ಅಂದು ಅಭಿಮಾನಿಗಳು ಇದ್ದ ಆ ಸ್ಥಿತಿಯನ್ನು ಕಂಡು ಅಂತಿಮ ದರ್ಶನಕ್ಕಾಗಿ ಬಂದ ವಿಷ್ಣುವರ್ಧನ್ ಅವರನ್ನು ಮಾತನಾಡಿಸಿ ಈ ಸಮಯದಲ್ಲಿ ಬಂದದ್ದು ತಪ್ಪು ಎಂದು ತರಾಟೆಗೆ ತೆಗೆದುಕೊಂಡರು.
ತನ್ನ ಸರ್ವಸ್ವವೂ ಆದ ಡಾಕ್ಟರ್ ರಾಜಕುಮಾರ್ ಅವರನ್ನು ಕಳೆದುಕೊಂಡು ಅಷ್ಟು ದುಃ’ಖದಲ್ಲಿದ್ದ ಪಾರ್ವತಮ್ಮ ರವರು ವಿಷ್ಣುವರ್ಧನ್ ಅವರ ಮೇಲಿದ್ದ ಕಾಳಜಿಯಿಂದ ತಕ್ಷಣವೇ ಮನೆ ಒಳಗೆ ಕರೆದುಕೊಂಡು ಹೋಗಿ ಈ ಸಂದರ್ಭ ಸರಿ ಇಲ್ಲ, ನೀನು ಬರಬಾರದಿತ್ತು, ನೀನು ಬರದೇ ಇದ್ದರೆ ನಾವು ತಪ್ಪು ತಿಳಿದುಕೊಳ್ಳುತ್ತಿರಲಿಲ್ಲ.
ಈಗ ನನಗೆ ನಿನ್ನ ಬಗ್ಗೆ ಚಿಂತೆಯಾಗಿದೆ ಮೊದಲು ನೀನು ಇಲ್ಲಿಂದ ಯಾರಿಗೂ ತಿಳಿಯದಂತೆ ಹೊರಟು ಬಿಡಬೇಕು, ನನ್ನ ಮಾತಿಗೆ ಗೌರವ ಕೊಟ್ಟು ನೀನು ಇದನ್ನು ನಡೆಸಿಕೊಡಬೇಕು ಎಂದು ಬುದ್ಧಿ ಹೇಳಿದ್ದರು. ಅವರ ಅಣತಿಯಂತೆ ಅಣ್ಣಾವ್ರಿಗೆ ಅಂತಿಮ ನಮನ ಸಲ್ಲಿಸಿದ ವಿಷ್ಣುವರ್ಧನ್ ಅವರು ಅಲ್ಲಿಂದ ಹೊರಟು ಹೋದರು. ಈ ಸಂದರ್ಭದಲ್ಲಿ ಅಲ್ಲಿ ನಡೆದ ಸಂಭಾಷಣೆಯನ್ನು ಕಣ್ಣಾರೆ ಕಂಡ ಕಿವಿಯಾರೆ ಕೇಳಿದ ಡಾ.ರಾಜಕುಮಾರ್ ಕುಟುಂಬಕ್ಕೆ ಬಹಳ ಆತ್ಮೀಯರಾದ ಹರಿಹರ ಮಂಜುನಾಥ್ ಅವರೇ ಅನೇಕ ಕಡೆ ಇದನ್ನು ಹೇಳಿದ್ದಾರೆ.