ಕನ್ನಡದ ಹೆಸರಾಂತ ನಾಟಕ ಮಂಡಳಿ ಸುಬ್ಬಯ್ಯ ನಾಯ್ಡು ಸಾಮ್ರಾಜ್ಯದ ದೊರೆಯಾಗಿದ್ದ ಕನ್ನಡದ ಎಲ್ಲರ ನೆಚ್ಚಿನ ನಟ ಪರಸಂಗದ ಗೆಂಡೆತಿಮ್ಮ ಖ್ಯಾತಿಯ ಲೋಕೇಶ್ ರವರು ಕನ್ನಡ ಸಿನಿಮಾ ಇತಿಹಾಸ ಇರುವವರೆಗೂ ಕೂಡ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರುತ್ತಾರೆ. ತಮ್ಮ ನೈಜ ನಟನೆಯ ಮೂಲಕ ಬದುಕಿನ ಸಾರ ತಿಳಿಸಿದ ಪಾತ್ರೆಗಳಲ್ಲಿ ನಟಿಸಿ ಜೊತೆಗೆ ಹಾಸ್ಯದಲ್ಲೂ ಸೈ ಎನಿಸಿಕೊಂಡಿದ್ದ ಇವರ ವೈಯಕ್ತಿಕ ಬದುಕು ಅಷ್ಟೇ ಸೊಗಸಾಗಿತ್ತು.
ಗಿರಿಜಾ ಲೋಕೇಶ್ ರವರು ಲೋಕೇಶ್ ಅವರ ಪತಿ ಹಾಗೂ ಸೃಜನ್ ಲೋಕೇಶ್ ಮತ್ತು ಪೂಜಾ ಲೋಕೇಶ್ ಇಬ್ಬರು ಮಕ್ಕಳು. ಗಿರಿಜಾ ಲೋಕೇಶ್ ರವರಂತೂ ಈ ಇಳಿ ವಯಸ್ಸಿನಲ್ಲಿ ಕೂಡ ಎಳೆ ಮನಸ್ಸಿನವರು. ತಾವು ನಗುತ್ತಾ ಸುತ್ತಲಿನವರನ್ನು ನಗಿಸುತ್ತ ಲವಲವಿಕೆಯಾಗಿರುವ ಇವರು ಲೋಕೇಶ್ ರವರು ಈ ರೀತಿ ಇರುವುದನ್ನು ಕಲಿಸಿದ್ದು ಎಂದು ಇತ್ತೀಚಿನ ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದಾರೆ.
ಯೂಟ್ಯೂಬ್ ಒಂದರ ಸಂದರ್ನಶದಲ್ಲಿ ಮಾತನಾಡಿದ ಗಿರಿಜಾ ಲೋಕೇಶ್ ರವರು ಲೋಕೇಶ್ ರವರ ಗುಣಗಾನ ಮಾಡಿದ್ದಾರೆ. ಲೋಕೇಶ್ ರವರು ಜೀವನವನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡಿದ್ದರು ಮತ್ತು ಅವರು ಎಷ್ಟು ಸಾಮಾಜಿಕ ಕಳಕಳಿ ಹೊಂದಿದ್ದರು ಎನ್ನುವುದರ ಬಗ್ಗೆ ಹೇಳುತ್ತಿದ್ದ ಅವರು ಲೋಕೇಶ್ ರವರು ಸರಳ ಜೀವನ ಬಯಸುತ್ತಿದ್ದರು, ಆದರೆ ಮನೆ ತುಂಬಾ ನಗು ತುಂಬಿರಬೇಕಿತ್ತು.
ನಮಗೆ ಯಾವುದೇ ವಿಷಯದಲ್ಲೂ ಕೂಡ ಅಡ್ಡಿ ಮಾಡುತ್ತಿರಲಿಲ್ಲ ಅವರು ಕೊಟ್ಟ ಸ್ವಾತಂತ್ರ್ಯದಿಂದ ನಾವು ಇಂದಿಗೂ ಇಷ್ಟು ನಗುತ್ತಿದ್ದೇವೆ. ಈ ರೀತಿ ನಗುತ ನಗುತಾ ಬದುಕುವುದನ್ನು ಅವರೇ ನಮಗೆ ಕಲಿಸಿಕೊಟ್ಟು ಹೋದದ್ದು ನೀವು ಬದುಕಿ ಬೇರೆಯವರಿಗೂ ಬದುಕಲು ಸಹಾಯ ಮಾಡಿ ಎಂದು ಅವರು ಹೇಳುತ್ತಿದ್ದರು.
ಅವರು ಆಸ್ಪತ್ರೆಗೆ ಹೋಗುವ ದಿನ ಕೂಡ ನಗುನಗುತ್ತ ಜೋಕ್ ಮಾಡಿ ಕಳುಹಿಸಿದ್ದೇನೆ. ಅಷ್ಟು ಬೇಗ ಹಾಗಾಗುತ್ತದೆ ಎಂದು ಅಂದುಕೊಂಡಿರಲಿಲ್ಲ ಹುಷಾರಾಗುತ್ತಾರೆ ಎಂದುಕೊಂಡಿದ್ದೆವು, ಆದರೆ ಆಗಬಾರದ್ದು ಆಯ್ತು. ಅವರು ಸ’ತ್ತ ನಂತರ ತಮ್ಮ ದೇಹವನ್ನು ದಾನ ಮಾಡಬೇಕು ಎಂದು ಮಗನಿಂದ ಬರೆಸಿ ಸಹಿ ಹಾಕಿದ್ದರು, ಅವರ ನಿರ್ಧಾರ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಿತ್ತು.
ಯಾಕೆಂದರೆ, ಅವರು ಯಾವುದೋ ಒಂದು ಪತ್ರಿಕೆಯಲ್ಲಿ ಬೋಧನೆಯ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪ್ರಯೋಗಕ್ಕಾಗಿ ದೇಹಗಳು ಸಿಗದೆ ಸಮಾಧಿ ಅಗೆದು ತೆಗೆದುಕೊಂಡು ಬರುತ್ತಾರೆ ಎನ್ನುವುದನ್ನು ಓದಿದ್ದರು. ಹಾಗಾಗಿ ಸತ್ತ ಮೇಲೆ ಈ ದೇಹ ಮಣ್ಣು ಸೇರುವುದರ ಬದಲು ಉಪಯೋಗಕ್ಕೆ ಬರಬೇಕು ಎನ್ನುವುದು ಅವರ ಉದ್ದೇಶವಾಗಿತ್ತು ಆ ವಿಷಯದಲ್ಲಿ ಅವರು ಬಹಳ ಸ್ಟ್ರಿಕ್ಟ್ ಆಗಿದ್ದರು ಮತ್ತು ಅವರ ಆಸೆಯನ್ನು ನೆರವೇರಿಸುವುದು ನಮ್ಮ ಆದ್ಯತೆಯಾಗಿತ್ತು.
ಆರೋಗ್ಯ ಹದಗೆಡುತ್ತಿದ್ದಂತೆ ಅವರು ನಮ್ಮನ್ನು ತಯಾರು ಈ ವಿಷಯವಾಗಿ ತಯಾರು ಮಾಡುತ್ತಿದ್ದರು. ಅವರು ನಾನು ಸ’ತ್ತಾಗ ನೀವು ಕಣ್ಣೀರು ಹಾಕಬಾರದು ಎಂದು ಪ್ರಮಾಣ ಕೂಡ ಮಾಡಿಸಿಕೊಂಡಿದ್ದರು. ಸ’ತ್ತ ಮೇಲೆ ಹೇಗಿರಬೇಕು ಎನ್ನುವುದನ್ನು ಮಾತನಾಡುತ್ತಿದ್ದರು ಆಗೆಲ್ಲ ನಾವು ಗಲಾಟೆ ಮಾಡುತ್ತಿದ್ದೆವು, ಒಪ್ಪುತ್ತಿರಲಿಲ್ಲ ಆದರೆ ಅವರು ತೀರಿಕೊಂಡ ಕ್ಷಣ ಅವರಿಗಾಗಿ ಅವರು ಹೇಳಿದ ರೀತಿ ಇರಬೇಕು ಎನಿಸಿತು.
ಆ ಕ್ಷಣಕ್ಕೆ ನನಗೆ ಅನಿಸಿದ್ದು ಜೀವನಪೂರ್ತಿ ಎಷ್ಟು ಚೆನ್ನಾಗಿ ನೋಡಿಕೊಂಡರು, ಎಲ್ಲಾ ಹೆಣ್ಣು ಮಕ್ಕಳಿಗೂ ಇಂತಹದ್ದೇ ಗಂಡ ಸಿಕ್ಕರೆ ಎಲ್ಲರ ಜೀವನ ಎಷ್ಟು ಚೆನ್ನಾಗಿರುತ್ತೆ ಇವರು ಬಿಟ್ಟು ಹೋಗುತ್ತಿದ್ದಾರಲ್ಲ ಮತ್ತೆ ಎಲ್ಲಿ ಸಿಗುತ್ತಾರೆ ಎಂದು. ಆದರೆ ಈಗ ಮೊಮ್ಮಗನ ಮುಖದಲ್ಲಿ ಅವರನ್ನು ಕಾಣುತ್ತಿದ್ದೇನೆ. ಅವರಿಗೂ ನಮ್ಮನ್ನು ಬಿಟ್ಟು ಇರಲು ಕ’ಷ್ಟ ಹಾಗಾಗಿ ನಮಗಾಗಿ ಬಂದಿದ್ದಾರೆ ಎಂದುಕೊಂಡು ಸಮಾಧಾನ ಕೊಟ್ಟುಕೊಳ್ಳುತ್ತಿದ್ದೇನೆ ಎಂದಿದ್ದಾರೆ ಗಿರಿಜಾ ಲೋಕೇಶ್.